ರಕ್ಷಣಾ ಸಚಿವಾಲಯ
ಏರೋ ಇಂಡಿಯಾ - 21 ಯೋಜನೆಗಳನ್ನು ಪರಿಶೀಲಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
ವೈಮಾನಿಕ ಪ್ರದರ್ಶನಕ್ಕೆ ಏರೋಸ್ಪೇಸ್ ಮತ್ತು ಡಿಫೆನ್ಸ್ ಬಿಸಿನೆಸ್ ವರ್ಲ್ಡ್ಗೆ ಭಾರತಕ್ಕೆ ಆಹ್ವಾನ
Posted On:
23 DEC 2020 2:53PM by PIB Bengaluru
ಏರೋ ಇಂಡಿಯಾ-21 ಯೋಜನೆಗಳನ್ನು ಇಂದು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಪರಿಶೀಲಿಸಿದರು. ಕಾರ್ಯಕ್ರಮ ಪ್ರಸ್ತುತ ಅಂತಾರಾಷ್ಟ್ರೀಯ ಪ್ರದರ್ಶನಗಳ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ ಮತ್ತು ಈ ಕಾರ್ಯಕ್ರಮವನ್ನು ವ್ಯಾಪಾರ ಉದ್ದೇಶಿತ ಪ್ರದರ್ಶನದ ರೂಪದಲ್ಲಿ ಆಯೋಜಿಸಲಾಗಿದೆ ಎಂದು ರಕ್ಷಣಾ ಇಲಾಖೆ ಮತ್ತು ರಕ್ಷಣಾ ಸಚಿವಾಲಯ ಸಚಿವರಿಗೆ ತಿಳಿಸಿದೆ. ಸಾಮಾನ್ಯವಾಗಿ, ಪ್ರತ್ಯಕ್ಷವಾಗಿ ಈ ವೈಮಾನಿಕ ಕಾರ್ಯಕ್ರಮವನ್ನು ವೀಕ್ಷಿಸಿ ಹರ್ಷಿಸುತ್ತಿದ್ದ ಸಾರ್ವಜನಿಕರು, ಹೊಸ ವರ್ಷಕ್ಕೆ ಪಾಲುದಾರಿಕೆಗಳನ್ನು ಹೆಚ್ಚಿಸಲು, ಜಾಗತಿಕ ಎ&ಡಿ ವ್ಯಾಪಾರಗಳ ನಡುವೆ ಸುರಕ್ಷಿತ ಸಂವಾದಗಳನ್ನು ಕಲ್ಪಿಸುವ ನಿಟ್ಟಿನಿಂದ ಈ ವರ್ಷದ ಕಾರ್ಯಕ್ರಮವನ್ನು ವರ್ಚುವಲ್ ಆಗಿ ವೀಕ್ಷಿಸಲಿದ್ದಾರೆ.
500 ಕ್ಕೂ ಹೆಚ್ಚು ನೋಂದಾಯಿತ ಪ್ರದರ್ಶಕರು ಮತ್ತು ಸಂಪೂರ್ಣ ಮಾರಾಟವಾಗಿರುವ ಸ್ಥಳದೊಂದಿಗೆ ಈಕಾರ್ಯಕ್ರಮ ಅದ್ಭುತ ಆಸಕ್ತಿಯನ್ನು ಹುಟ್ಟಿಸಿದೆ. ಕೋವಿಡ್ - 19 ರಿಂದ ಎದುರಾಗಬಹುದಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಕೇವಲ ವ್ಯವಹಾರಿಕ ದಿನಗಳಾದ ಅಂದರೆ 03-05 ಫೆಬ್ರವರಿ 2021 ರವರೆಗೆ ಈ ಕಾರ್ಯಕ್ರಮವನ್ನು ಆಯೋಜಿಸುವಂತೆ ರಕ್ಷಣಾ ಸಚಿವರು ನಿರ್ದೇಶಿಸಿದ್ದಾರೆ. ಏರೋ ಸ್ಪೇಸ್ ಮತ್ತು ರಕ್ಷಣ ವಲಯದಲ್ಲಿ ಯಶಸ್ವಿ ಸಂವಾದಗಳನ್ನು ಸಾಧಿಸುವ ನಿಟ್ಟಿನಲ್ಲಿ ಈ ನಿರ್ಣಯವನ್ನು ಕೈಗೊಳ್ಳಬೇಕಾಯಿತು. ಏಕೆಂದರೆ ಲಾಕ್ ಡೌನ್ ಮತ್ತು ಪ್ರಯಾಣದ ಮೇಲೆ ಹಲವಾರು ನಿರ್ಭಂಧಗಳಿಂದಾಗಿ 2020 ರ ವರ್ಷ ಹಲವಾರು ಸವಾಲುಗಳನ್ನು ಎದುರಿಸಿದೆ.
ಏರೋ ಇಂಡಿಯಾ - 21 ರ ಕುರಿತು ಅಕ್ಟೋಬರ್ 2020 ರ ಆರಂಭದಲ್ಲೇ ವಿದೇಶಿ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳಿಗೆ ದೆಹಲಿಯಲ್ಲಿ ಈ ಕುರಿತು ವಿವರಿಸಲಾಗಿತ್ತು ಹಾಗೂ ತದನಂತರ ಅವರ ಸಂಸ್ಥೆ ನಾಯಕರು ಮತ್ತು ನಿರ್ಧಾರ ಕೈಗೊಳ್ಳುವ ಹಿರಿಯರ ಪ್ರಸ್ತುತತೆಯನ್ನು ಪ್ರೋತ್ಸಾಹಿಸಲು ಔಪಚಾರಿಕ ಆಹ್ವಾನ ಪತ್ರಿಕೆ ನೀಡಲಾಗಿತ್ತು. ಭಾರತದ ಏರೋ ಸ್ಪೇಸ್ ಮತ್ತು ರಕ್ಷಣ ಉತ್ಪನ್ನಗಳ ತಯಾರಿಕಾ ಸಾಮರ್ಥ್ಯವನ್ನು ಪ್ರದರ್ಶಿಸುವ ಭರವಸೆಯನ್ನು ಏರೋ ಇಂಡಿಯಾ - 21 ಮೂಡಿಸಲಿದೆ. ಎಫ್ ಡಿ ಐ ನ್ನು 74% ಸ್ವಯಂಚಾಲಿತ ಮಾರ್ಗದಲ್ಲಿ ಒಳಹರಿವಿನಲ್ಲಿ ವೃದ್ಧಿ, ಡಿಫೆನ್ಸ್ ಅಕ್ವಿಸಿಶನ್ ಪ್ರೊಸಿಜರ್-2020, ಭಾರತದಲ್ಲಿ ಸಹ ಅಭಿವೃದ್ಧಿ ಮತ್ತು ಸಹ ಉತ್ಪಾದನೆಗೆ ಹೂಡಿಕೆ ಮಾಡಲು ಉತ್ತೇಜಿಸಲಾದ ನೂತನ ಆಫ್ ಸೆಟ್ ಮಾರ್ಗಸೂಚಿಗಳು 2020 ರ ಸಾಂಕ್ರಾಮಿಕ ಬಿಕ್ಕಟ್ಟಿನ ಅವಧಿಯಲ್ಲಿ ರಕ್ಷಣಾ ಉತ್ಪಾದನೆ ಮತ್ತು ರಫ್ತು ಪ್ರೋತ್ಸಾಹ ನೀತಿ – 2020 (ಡಿಪಿಇಪಿಪಿ 2020) ರ ಕರಡನ್ನು ರೂಪಿಸುವುದು ಮುಂತಾದ ಸರಣಿ ನೀತಿ ನಿರೂಪಣೆಯ ಉಪಕ್ರಮಗಳನ್ನು ರಕ್ಷಣಾ ವಲಯ ಕೈಗೊಂಡಿರುವುದರಿಂದ ಬಾರತದಲ್ಲಿ ಹೂಡಿಕೆಗಳನ್ನು ಅಪೇಕ್ಷಿಸಲಾಗುತ್ತಿದೆ.
ಏರೋ ಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ವಿಶ್ವದ 5 ಅಗ್ರ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಲಿದೆ ಎಂದು ರಕ್ಷಣಾ ಸಚಿವರು ಒತ್ತಿ ಹೇಳಿದ್ದಾರೆ ಮತ್ತು ನಾಯಕರ ಮಧ್ಯೆ ನಾಯಕರಾಗುವ ಭಾರತದ ಇಚ್ಛಾಶಕ್ತಿಯನ್ನು ಏರೋ ಇಂಡಿಯಾ-21 ಅಭಿವ್ಯಕ್ತಗೊಳಿಸಲಿದೆ. “ಸ್ವಾವಲಂಬಿ ಭಾರತ” ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕನಸಿನ ಕೂಸಾಗಿದೆ ಮತ್ತು ಭಾರತದ ಏರೋ ಸ್ಪೇಸ್ ಹಾಗೂ ರಕ್ಷಣಾ ವಲಯ ಅಭಿವೃದ್ಧಿ ಹೊಂದಿದ್ದು ಪರಸ್ಪರ ಲಾಭದಾಯಕ ಪಾಲುದಾರಿಕೆಗೆ ಸ್ನೇಹಮಯಿ ರಾಷ್ಟ್ರಗಳೊಂದಿಗೆ ನಿರಂತರ ಶೋಧದಲ್ಲಿದೆ ಇದರಿಂದ ವಿಶ್ವಕ್ಕೆ ಹಾಗೂ ಭಾರತಕ್ಕಾಗಿ ಭಾರತದಲ್ಲಿಯೇ ಸಿದ್ಧಗೊಳಿಸಲಾಗುವ ರಕ್ಷಣಾ ಉತ್ಪನ್ನಗಳ ಉದ್ಯಮಗಳನ್ನು ಭಾರತದಲ್ಲಿ ಸ್ಥಾಪಿಸಲು ಉದ್ದೇಸಿಸಲಾಗಿದೆ” ಎಂದು ಶ್ರೀ ರಾಜ್ ನಾಥ್ ಸಿಂಗ್ ಅವರು ಹೇಳಿದ್ದಾರೆ.
ಭಾರತದಲ್ಲಿ ಲಭ್ಯವಿರುವ ಕಾರ್ಯತಂತ್ರದ ಮತ್ತು ವ್ಯಾಪಾರದ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಭಾರತೀಯ ವಿದೇಶಿ ಸಂಸ್ಥೆಗಳು ಈ ಕಾರ್ಯಕ್ರಮದ ಕುರಿತು ಪ್ರಚಾರ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಮತ್ತು ಅವರ ನಾಯಕರು ಹಾಗೂ ಸಂಸ್ಥೆಯ ಮುಖ್ಯಸ್ಥರು ಹಾಗೂ ಇದೇ ವಲಯದ ಹೊರ ರಾಷ್ಟ್ರಗಳ ನಾಯಕರನ್ನು ಆಕರ್ಷಿಸಿ ಏರೋ ಇಂಡಿಯಾ – 21 ರಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಲು ರಕ್ಷಣಾ ಸಚಿವರು ಆಗ್ರಹಿಸಿದ್ದಾರೆ
ಕೋವಿಡ್ ನಂತರದ ವಿಶ್ವದಲ್ಲಿ ನಾಯಕತ್ವ ವಹಿಸಲು ಮತ್ತು ನಮ್ಮ ಶಕ್ತಿಯನ್ನು ಮತ್ತಷ್ಟು ವೃದ್ಧಿಸಲು ಭಾರತ ಏರೋ ಇಂಡಿಯಾ - 21 ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಎಂಬ ಧೃಡ ವಿಶ್ವಾಸವನ್ನು ರಕ್ಷಣಾ ಸಚಿವರು ವ್ಯಕ್ತಪಡಿಸಿದ್ದಾರೆ.
***
(Release ID: 1683323)
Visitor Counter : 317
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Tamil
,
Telugu
,
Malayalam