ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಪಾಸಿಟಿವ್ ಪ್ರಕರಣಗಳ ಶೇ. 3%ಗೆ ತಗ್ಗಿದ ಸಕ್ರಿಯ ಪ್ರಕರಣಗಳ ಸಂಖ್ಯೆ; 2.89 ಲಕ್ಷಕ್ಕೆ ಇಳಿಕೆ


26 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 10 ಸಾವಿರಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಲು

23 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ಲಕ್ಷ ಮಂದಿಗೆ ಗಂಟಲು ದ್ರವ ಪರೀಕ್ಷೆ ರಾಷ್ಟ್ರೀಯ ಸರಾಸರಿಗಿಂತ ಉತ್ತಮ

16 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾಸಿಟಿವ್ ಪ್ರಕರಣಗಳ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ

Posted On: 23 DEC 2020 10:45AM by PIB Bengaluru

ಭಾರತದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಕುಸಿತ ಪ್ರವೃತ್ತಿ ಮುಂದುವರಿದಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,89,240ಕ್ಕೆ ಇಳಿಕೆ ಕಂಡಿದೆ. ಇದುವರೆಗೆ ದೇಶದಲ್ಲಿ ಕಾಣಿಸಿಕೊಂಡಿರುವ ಒಟ್ಟು ಪಾಸಿಟಿವ್ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪಾಲು 2.86%ಗೆ ಇಳಿಕೆ ಕಂಡಿದೆ.

ರಾಷ್ಟ್ರವ್ಯಾಪಿ ಆಗುತ್ತಿರುವ ಕೊರೊನಾ ನಿಯಂತ್ರಣ ಪ್ರವೃತ್ತಿ ಅನುಸರಿಸಿದರೆ, 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10,000ಕ್ಕಿಂತ ಕಡಿಮೆ.

http://static.pib.gov.in/WriteReadData/userfiles/image/image0015GF1.jpg

ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರಕರಣಗಳಿಗಿಂತ ಚೇತರಿಕೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತಿದೆ. ಕಳೆದ 24 ತಾಸುಗಳಲ್ಲಿ 23,950 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 26,895 ಹೊಸ ಚೇತರಿಕೆಗಳು ದಾಖಲಾಗಿವೆ. ಇದರಿಂದ ಒಂದೇ ದಿನದಲ್ಲಿ ಹೊಸ ಸೋಂಕಿತರ ಸಂಖ್ಯೆಯಲ್ಲಿ ನಿವ್ವಳ 3,278 ಪ್ರಕರಣಗಳು ಕಡಿಮೆ ಆಗಿವೆ.

http://static.pib.gov.in/WriteReadData/userfiles/image/image002FVAU.jpg

ದೇಶಾದ್ಯಂತ ತನಕ ಒಟ್ಟು 16.5 ಕೋಟಿ(16,42,68,721) ಜನರಿಗೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಪ್ರತಿನಿತ್ಯ 10 ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಗಂಟಲು ದ್ರವ ಪರೀಕ್ಷೆ ನಡೆಸುವ ಬದ್ಧತೆಗೆ ಪ್ರತಿಯಾಗಿ, ನಿನ್ನೆ ಒಂದೇ ದಿನ 10,98,164 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ದೇಶದ ಪರೀಕ್ಷಾ ಸಾಮರ್ಥ್ಯ ಇದೀಗ ಪ್ರತಿನಿತ್ಯ 15 ಲಕ್ಷಕ್ಕೆ ಬೆಳವಣಿಗೆ ಕಂಡಿದೆ.

ಭಾರತದ ಪರೀಕ್ಷಾ ಮೂಲಸೌಕರ್ಯ ಗಣನೀಯವಾಗಿ ಹೆಚ್ಚಳ ಕಂಡಿದ್ದು, ದೇಶಾದ್ಯಂತ 2,276 ಪ್ರಯೋಗಾಲಯಗಳಲ್ಲಿ ದಿನನಿತ್ಯ ಗಂಟಲು ದ್ರವ ಸೇರಿದಂತೆ ಕೋವಿಡ್-19 ಪತ್ತೆ ಮತ್ತು ನಿಯಂತ್ರಣ ಸಂಬಂಧಿತ ಪರೀಕ್ಷೆಗಳು ಜರುಗುತ್ತಿವೆ.

ದಿನನಿತ್ಯ ಸರಾಸರಿ 10 ಲಕ್ಷಕ್ಕಿಂತ ಹೆಚ್ಚಿನ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ, ಒಟ್ಟಾರೆ ಪಾಸಿಟಿವ್ ಪ್ರಕರಣಗಳ ಪ್ರಮಾಣ ಸುಸ್ಥಿರವಾಗಿ ಕೆಳ ಮಟ್ಟಕ್ಕೆ ತಗ್ಗುತ್ತಿರುವುದನ್ನು ಖಾತ್ರಿಪಡಿಸುತ್ತಿದೆ. ಪ್ರಸ್ತುತ ಅದು ಇಳಿಕೆ ಹಾದಿ ಹಿಡಿದಿದೆ.

ಭಾರತದಲ್ಲಿ ಪ್ರತಿ 10 ಲಕ್ಷ ಜನರ ಪೈಕಿ ಪ್ರತಿದಿನ 1,19,035 ಜನರ ಪರೀಕ್ಷೆ ನಡೆಸಲಾಗುತ್ತಿದೆ. 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ ರಾಷ್ಟ್ರೀಯ ಸರಾಸರಿಗಿಂತ ಮೇಲ್ಪಟ್ಟು ಉತ್ತಮ ಪರೀಕ್ಷೆ ನಡೆಸಲಾಗುತ್ತಿದೆ.

http://static.pib.gov.in/WriteReadData/userfiles/image/image003GRE3.jpg

16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ವಾರ ಕಾಲದ ಪಾಸಿಟಿವ್ ಪ್ರಕರಣಗಳ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಕೆಳ ಮಟ್ಟದಲ್ಲಿದೆ.

http://static.pib.gov.in/WriteReadData/userfiles/image/image004ACU4.jpg

15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ.

http://static.pib.gov.in/WriteReadData/userfiles/image/image005LICE.jpg

ಪರೀಕ್ಷಾ ಮೂಲಸೌಕರ್ಯ ವಿಸ್ತರಣೆ ಮಾಡಿದ ನಂತರ, ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಂಖ್ಯೆಯ ಪಾಸಿಟಿವ್ ಪ್ರಕರಣಗಳನ್ನು ದಾಖಲಿಸುತ್ತಿದ್ದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಳಿಕೆ ಪ್ರವೃತ್ತಿ ದಾಖಲಾಗುತ್ತಿರುವುದು ಆಶಾದಾಯಕ ಬೆಳವಣಿಗೆ.

http://static.pib.gov.in/WriteReadData/userfiles/image/image0069LGU.jpg

ದೇಶಾದ್ಯಂತ ಒಟ್ಟು ಚೇತರಿಕೆ ಪ್ರಮಾಣ ಇದೀಗ 96,63,382ಕ್ಕೆ ಏರಿಕೆ ಆಗಿದೆ. ಇದರಿಂದ ಚೇತರಿಕೆ ದರ 95.69%ಗೆ ಸುಧಾರಣೆ ಕಂಡಿದೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ 75.87% ಹೊಸ ಚೇತರಿಕೆ ಪ್ರಕರಣಗಳು ದಾಖಲಾಗಿವೆ.

ಕೇರಳ ರಾಜ್ಯದಲ್ಲಿ ನಿನ್ನೆ ಒಂದೇ ದಿನ ಗರಿಷ್ಠ 5,057 ಸೋಂಖಿತರು ಗಣಮುಖರಾದರೆ, ಮಹಾರಾಷ್ಟ್ರದಲ್ಲಿ 4,122 ಮತ್ತು ಪಶ್ಚಿಮ ಬಂಗಾಳದಲ್ಲಿ 2,270 ಮಂದಿ ಗುಣಮುಖರಾಗಿದ್ದಾರೆ.

http://static.pib.gov.in/WriteReadData/userfiles/image/image007JJAX.jpg

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 77.34% ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಕೇರಳದಲ್ಲಿ ದಿನದ ಗರಿಷ್ಠ 6,049, ಮಹಾರಾಷ್ಟ್ರದಲ್ಲಿ 3,106 ಹೊಸ ಪ್ರಕರಣಗಳು ದೃಢಪಟ್ಟಿವೆ.

http://static.pib.gov.in/WriteReadData/userfiles/image/image008SM80.jpg

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ ಒಟ್ಟು 333 ಸಾವುಗಳು ಸಂಭವಿಸಿವೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 75.38% ಹೊಸ ಸಾವುಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ದಿನದ ಗರಿಷ್ಠ 75, ಪಶ್ಚಿಮ ಬಂಗಾಳದಲ್ಲಿ 38 ಮತ್ತು ಕೇರಳದಲ್ಲಿ 27 ಸಾವುಗಳು ವರದಿಯಾಗಿವೆ.

http://static.pib.gov.in/WriteReadData/userfiles/image/image0091QZL.jpg

***


(Release ID: 1683316) Visitor Counter : 171