ಪ್ರಧಾನ ಮಂತ್ರಿಯವರ ಕಛೇರಿ

ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ 2020ರಲ್ಲಿ ಉದ್ಘಾಟನಾ ಭಾಷಣ ಮಾಡಲಿರುವ ಪ್ರಧಾನಿ

Posted On: 20 DEC 2020 6:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ (ಐಐಎಸ್ಎಫ್) 2020ರಲ್ಲಿ 2020 ಡಿಸೆಂಬರ್ 22ರಂದು ಸಂಜೆ 4.30ಕ್ಕೆ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಕೇಂದ್ರ ಸಚಿವ ಡಾ. ಹರ್ಷವರ್ಧನ್ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಐಐಎಸ್ಎಫ್ ಬಗ್ಗೆ

ಸಮಾಜದಲ್ಲಿ ಸಾಮಾಜಿಕ ಸ್ಫೂರ್ತಿ ಉತ್ತೇಜಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಭೂ ವಿಜ್ಞಾನಗಳ ಸಚಿವಾಲಯಗಳು ವಿಜ್ಞಾನ ಭಾರತಿಯ ಸಹಯೋಗದೊಂದಿಗೆ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವವನ್ನು ರೂಪಿಸಿವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಉತ್ತೇಜನಕ್ಕಾಗಿ 2015ರಲ್ಲಿ ಐಐಎಸ್ಎಫ್ ಆರಂಭಿಸಲಾಯಿತು. ಸಾರ್ವಜನಿಕರನ್ನು ವಿಜ್ಞಾನದೊಂದಿಗೆ ತೊಡಗಿಸಿಕೊಳ್ಳುವುದು, ವಿಜ್ಞಾನದ ಆನಂದವನ್ನು ಆಚರಿಸುವುದು ಮತ್ತು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್‌.ಟಿ..ಎಂ) ಜೀವನವನ್ನು ಸುಧಾರಿಸಲು ಹೇಗೆ ಪರಿಹಾರಗಳನ್ನು ಒದಗಿಸುತ್ತದೆ ಎಂಬುದನ್ನು ತೋರಿಸುವುದು ಇದರ ಉದ್ದೇಶವಾಗಿದೆ. ..ಎಸ್.ಎಫ್. 2020 ಗುರಿ ವೈಜ್ಞಾನಿಕ ಜ್ಞಾನ, ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆಗಳಿಗೆ ಪರಿಹಾರ ಮತ್ತು ತಂಡದ ಕೆಲಸಗಳನ್ನು ಕೇಂದ್ರೀಕರಿಸಿ, ಯುವಜನರಿಗೆ 21ನೇ ಶತಮಾನದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ನೆರವಾಗುವುದಾಗಿದೆ. ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಲು ಮತ್ತು ಕೆಲಸ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಇದರ ದೀರ್ಘಕಾಲೀನ ಉದ್ದೇಶವಾಗಿದೆ.

***



(Release ID: 1682324) Visitor Counter : 216