ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಫಿಟ್ ಇಂಡಿಯಾ ಸೈಕ್ಲಥಾನ್ ಗೆ ವ್ಯಾಪಕ ಸ್ಪಂದನೆ: ಆರಂಭವಾದ ಮೊದಲ ವಾರದಲ್ಲಿಯೇ 13 ಲಕ್ಷ ಜನರು ಭಾಗಿ


ಡಿಸೆಂಬರ್ 31ರವರೆಗೆ ಸೈಕ್ಲಥಾನ್ ಮುಂದುರಿವರಿಕೆ: ಫಿಟ್ ಇಂಡಿಯಾ ವೆಬ್ ಸೈಟ್ ನಲ್ಲಿ ನೋಂದಣಿ ಮೂಲಕ ಸಾರ್ವಜನಿಕರು ಭಾಗವಹಿಸಲು ಅವಕಾಶ

Posted On: 20 DEC 2020 10:59AM by PIB Bengaluru

ಎರಡನೇ ಆವೃತ್ತಿಯ ಫಿಟ್ ಇಂಡಿಯಾ ಸೈಕ್ಲಥಾನ್ ಗೆ ದೇಶಾದ್ಯಂತ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಕೇಂದ್ರ ಕ್ರೀಡಾ ಸಚಿವ ಶ್ರೀ ಕಿರಣ್ ರಿಜಿಜು ಇತ್ತೀಚೆಗೆ ಸಾಮಾಜಿಕ ಮಾಧ್ಯಮದ ಮೂಲಕ ಸೈಕ್ಲಥಾನ್ ಗೆ ಚಾಲನೆ ನೀಡಿದರು. ಈ ಬೃಹತ್ ಸೈಕ್ಲಿಂಗ್ ಕಾರ್ಯಕ್ರಮ 2020ರ ಡಿಸೆಂಬರ್ 7ರಿಂದ ಆರಂಭವಾಗಿದ್ದು, ದೇಶಾದ್ಯಂತ ಎಲ್ಲ ಭಾಗದ ಜನರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಡಿಸೆಂಬರ್ 15ರ ವರೆಗೆ ಫಿಟ್ ಇಂಡಿಯಾ ಸೈಕ್ಲಥಾನ್ ನಲ್ಲಿ 12,69,695 ಜನರು ಭಾಗವಹಿಸಿದ್ದಾರೆ ಮತ್ತು 57,51,874 ಕಿ.ಮೀ. ಸೈಕ್ಲಿಂಗ್ ಪೂರ್ಣಗೊಳಿಸಿದ್ದಾರೆ. ಇದರಲ್ಲಿ ನೆಹರು ಯುವ ಕೇಂದ್ರ ಸಂಘಟನೆ(ಎನ್ ವೈಕೆಎಸ್)ನ 3,11,458, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ(ಎನ್ಎಸ್ಎಸ್) 4,14,354 ಪ್ರತಿನಿಧಿಗಳು ಮತ್ತು ಇತರೆ 5,43,883 ಮಂದಿ ಪಾಲ್ಗೊಂಡಿದ್ದಾರೆ. ಫಿಟ್ ಇಂಡಿಯಾ ಸೈಕ್ಲಥಾನ್ ಗೆ ಸಾಮಾಜಿಕ ಮಾಧ್ಯಮದಲ್ಲೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಮಾನ್ಯ ಜನರಲ್ಲದೆ ಗಣ್ಯರೂ ಸಹ ತಮ್ಮ ಸೈಕ್ಲಿಂಗ್ ವಿಡಿಯೋ ಹಾಗೂ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಈ ಕಾರ್ಯಕ್ರಮ 2020ರ ಡಿಸೆಂಬರ್ 31 ವರೆಗೆ ಮುಂದುವರಿಯಲಿದೆ. ಸಾರ್ವಜನಿಕರು ಫಿಟ್ ಇಂಡಿಯಾ ವೆಬ್ ಸೈಟ್ (https://fitindia.gov.in/fit-india-cyclothon-2020/) ನೋಂದಣಿ ಮಾಡಿಕೊಳ್ಳುವ ಮೂಲಕ ಭಾಗವಹಿಸಬಹುದಾಗಿದೆ. ಅವರು ಪ್ರತಿ ದಿನ ತಮ್ಮ ಆಯ್ಕೆಯಷ್ಟು ದೂರ ಸೈಕಲ್ ನಲ್ಲಿ ಕ್ರಮಿಸಬಹುದು ಮತ್ತು ಮತ್ತು ಅದರ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣ @FitIndiaOff and using the hashtag - #FitIndiaCyclothon and #NewIndiaFitIndiaಗಳಲ್ಲಿ ಟ್ಯಾಗ್ ಅಥವಾ ಪೋಸ್ಟ್ ಮಾಡಬಹುದಾಗಿದೆ. 

ಸೈಕ್ಲಥಾನ್ ಸದಾ ನನ್ನ ಹೃದಯಕ್ಕೆ ಹತ್ತಿರವಾದ ವಿಚಾರ. #earlymorningbikerides #Chandigarh pic.twitter.com/E7f7PZsmMQ – ಅನಿಲ್ ಕಪೂರ್(@AnilKapoor) 

ಈ ಬೃಹತ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗಿಯಾಗುವುದನ್ನು ಉತ್ತೇಜಿಸಿ ಶ್ರೀ ಕಿರಣ್ ರಿಜಿಜು ಇತ್ತೀಚೆಗೆ ತಮ್ಮ ಟ್ವೀಟ್ ನಲ್ಲಿ ‘ಇಂಗಾಲದ ಪ್ರಮಾಣ ತಗ್ಗಿಸಲು ಮತ್ತು ದೈಹಿಕ ಸದೃಢತೆ ಕಾಯ್ದುಕೊಳ್ಳಲು ಸೈಕ್ಲಿಂಗ್ ಅತ್ಯುತ್ತಮ ವಿಧಾನವಾಗಿದೆ. ನಾನು ಎಲ್ಲರನ್ನು ತಮ್ಮ ಕುಟುಂಬ ಮತ್ತು ಗೆಳೆಯರೊಂದಿಗೆ ಡಿಸೆಂಬರ್ 7 ರಿಂದ 30ರ ವರೆಗೆ ಎರಡನೇ ಫಿಟ್ ಇಂಡಿಯಾ ಸೈಕ್ಲಥಾನ್ ನಲ್ಲಿ ಭಾಗವಹಿಸಲು ಆಹ್ವಾನಿಸುತ್ತೇನೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ‘ಫಿಟ್ ನೆಸ್ ಕಾ ಡೋಸ್ ಆಧಾ ಗಂಟಾ ರೋಜ್’ ಗೆ ಕೈಜೋಡಿಸಿ. @NarendraModi Ji 'Fitness Ka Dose Aadha Ghanta Roz' #NewIndiaFitIndia #FitIndiaMovement” ಎಂದು ಹೇಳಿದ್ದಾರೆ.

ದೈಹಿಕ ಸದೃಢತೆ ಕಾಯ್ದುಕೊಳ್ಳಲು ಮತ್ತು ಇಂಗಾಲದ ಪ್ರಮಾಣ ತಗ್ಗಿಸಲು ಸೈಕ್ಲಿಂಗ್ ಅತ್ಯುತ್ತಮ ವಿಧಾನ. ಡಿಸೆಂಬರ್ 7 ರಿಂದ 31ರ ವರೆಗೆ ನಡೆಯಲಿರುವ ಎರಡನೇ ಆವೃತಿಯ ಫಿಟ್ ಇಂಡಿಯಾ ಸೈಕ್ಲಥಾನ್ ನಲ್ಲಿ ನೀವು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಭಾಗವಹಿಸಬೇಕೆಂದು ಆಹ್ವಾನಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಫಿಟ್ ನೆಸ್ ಕಾ ಡೋಸ್ ಆಧಾ ಗಂಟಾ ರೋಜ್’ ಕರೆಗೆ ಕೈಜೋಡಿಸಿ. @NarendraModi Ji 'Fitness Ka Dose Aadha Ghanta Roz' #NewIndiaFitIndia #FitIndiaMovement pic.twitter.com/FJ355fwwSu

- ಕಿರಣ್ ರಿಜಿಜು (@KirenRijiju) 

ಫಿಟ್ ಇಂಡಿಯಾ ಸೈಕ್ಲಥಾನ್ ಅನ್ನು ಮೊದಲ ಬಾರಿಗೆ ಕ್ರೀಡಾ ಸಚಿವರು 2020ರ ಜನವರಿಯಲ್ಲಿ ಗೋವಾದ ಪಣಜಿಯಲ್ಲಿ ಚಾಲನೆ ನೀಡಿದ್ದರು. ಜನರು ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡುವುದನ್ನು ಮತ್ತು ದೇಶಾದ್ಯಂತ ಸೈಕ್ಲಿಂಗ್ ಸಂಸ್ಕೃತಿಯನ್ನು ಆರಂಭಿಸುವ ಉದ್ದೇಶದಿಂದ ಇದನ್ನು ಆಯೋಜಿಸಲಾಗಿದೆ. ದೇಶಾದ್ಯಂತ 35 ಲಕ್ಷಕ್ಕೂ ಅಧಿಕ ಸೈಕಲ್ ಪಟುಗಳು ಇದರಲ್ಲಿ ಭಾಗವಹಿಸಿದ್ದಾರೆ.

***



(Release ID: 1682167) Visitor Counter : 188