ಹಣಕಾಸು ಸಚಿವಾಲಯ

ಸುಧಾರಣೆ ಆಧಾರಿತ ಸಾಲ ಅನುಮತಿಗಳಿಂದ ವಾಣಿಜ್ಯ ಸುಧಾರಣೆಗೆ ಪೂರಕ ವಾತಾವರಣ ನಿರ್ಮಾಣ


ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ ವ್ಯಾಪಾರಕ್ಕೆ ಸುಗಮ ಸುಧಾರಣೆ ಪೂರ್ಣ

16,728 ಕೋಟಿ ಹೆಚ್ಚುವರಿ ಸಾಲ ಪಡೆಯಲು ಅನುಮತಿ

Posted On: 20 DEC 2020 10:47AM by PIB Bengaluru

ಭಾರತ ಸರ್ಕಾರ ಹೆಚ್ಚುವರಿ ಸಾಲ ಪಡೆಯುವ ಅನುಮತಿಯನ್ನು ರಾಜ್ಯಗಳು ಕೈಗೊಳ್ಳುವ ಜನಸ್ನೇಹಿ ವಲಯಗಳ ಸುಧಾರಣೆಗಳ ಜೊತೆ ಸಂಯೋಜಿಸಿರುವುದರಿಂದ ಹಲವು ರಾಜ್ಯಗಳು ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣಕ್ಕೆ ಅಗತ್ಯ ಸುಧಾರಣೆಗಳನ್ನು ಕೈಗೊಂಡಿವೆ. ಈವರೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ವ್ಯಾಪಾರಕ್ಕೆ ಪೂರಕ ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿವೆ. ಈ ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಮೂಲಕ 16,728 ಕೋಟಿ ರೂ. ಮೊತ್ತದ ಸಾಲವನ್ನು ಹೆಚ್ಚುವರಿ ಹಣಕಾಸು ಸಂಪನ್ಮೂಲಗಳ ರೂಪದಲ್ಲಿ ಕ್ರೂಢೀಕರಿಸಿಕೊಳ್ಳಲು ಅನುಮತಿಯನ್ನು ಪಡೆದುಕೊಂಡಿವೆ. ಆ ರಾಜ್ಯಗಳೆಂದರೆ ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ. ರಾಜ್ಯವಾರು ಹೆಚ್ಚುವರಿ ಸಾಲಕ್ಕೆ ನೀಡಿರುವ ಅನುಮತಿಗಳು ಕೆಳಗಿನಂತಿವೆ.  

ರಾಜ್ಯ

ಮೊತ್ತ (ಕೋಟಿ. ರೂ.ಗಳಲ್ಲಿ)

ಆಂಧ್ರಪದೇಶ

2,525

ಕರ್ನಾಟಕ

4,509

ಮಧ್ಯಪ್ರದೇಶ

2,373

ತಮಿಳುನಾಡು

4,813

ತೆಲಂಗಾಣ

2,508

ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಿಸುವುದು, ದೇಶದಲ್ಲಿ ಹೂಡಿಕೆ ಸ್ನೇಹಿ ವಾತಾವರಣ ನಿರ್ಮಾಣದ ಪ್ರಮುಖ ಮಾನದಂಡವಾಗಿದೆ. ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣದ ಸುಧಾರಣೆಗಳಿಂದಾಗಿ ರಾಜ್ಯಗಳು ಆರ್ಥಿಕವಾಗಿ ತ್ವರಿತ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಆದ್ದರಿಂದ ಭಾರತ ಸರ್ಕಾರ 2020ರ ಮೇ ತಿಂಗಳಲ್ಲಿ ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣ ನಿಟ್ಟಿನಲ್ಲಿ ಸುಧಾರಣೆಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಹೆಚ್ಚುವರಿ ಸಾಲ ಪಡೆಯಲು ಅನುಮತಿಗಳನ್ನು ನೀಡಲು ನಿರ್ಧರಿಸಿತು. ಸುಧಾರಣೆಗಳನ್ನು ಕೆಳಗಿನ ವಿಭಾಗಗಳಲ್ಲಿ ಕೈಗೊಳ್ಳಲಾಗುವುದು.

  1. ಜಿಲ್ಲಾ ಮಟ್ಟದ ವಾಣಿಜ್ಯ ಸುಧಾರಣೆ ಕ್ರಿಯಾ ಯೋಜನೆಯ ಮೊದಲ ಮೌಲ್ಯಮಾಪನ ಪೂರ್ಣಗೊಳಿಸುವುದು.
  2. ಕೆಳಗಿನ ಕಾಯ್ದೆಯಲ್ಲಿ ನಾನಾ ಬಗೆಯ ವಾಣಿಜ್ಯ ಚಟುವಟಿಕೆಗಳಿಗೆ ಕೈಗೊಳ್ಳಬೇಕಾದ ನೋಂದಣಿ ಪ್ರಮಾಣಪತ್ರ ನವೀಕರಣ/ ಅನುಮೋದನೆ/ ಪರವಾನಗಿ ಪಡೆಯುವ ಅಗತ್ಯತೆಗಳನ್ನು ತೆಗೆದು ಹಾಕುವುದು. 
  • ಅಂಗಡಿ ಮತ್ತು ಉದ್ದಿಮೆಗಳ ಕಾಯಿದೆ
  • ಗುತ್ತಿಗೆ ಕಾರ್ಮಿಕರು (ನಿಯಂತ್ರಣ ಮತ್ತು ನಿಷೇಧ) ಕಾಯಿದೆ 1970
  • ಕಾರ್ಖಾನೆಗಳ ಕಾಯಿದೆ 1948
  • ಕಾನೂನು ಮಾಪನಶಾಸ್ತ್ರ ಕಾಯಿದೆ
  • ಅಂತರ ರಾಜ್ಯ ವಲಸೆ ಕಾರ್ಮಿಕರ (ಆರ್ ಮತ್ತು ಸಿಎಸ್ ) ಕಾಯಿದೆ 1979
  • ಔಷಧ ಉತ್ಪಾದನೆ/ಮಾರಾಟ/ದಾಸ್ತಾನು ಸಂಗ್ರಹ ಪರವಾನಗಿ
  • ಮುನಿಸಿಪಲ್ ಕಾರ್ಪೋರೇಷನ್ ಗಳಿಂದ ಪಡೆಯಲಾಗಿರುವ ವ್ಯಾಪಾರ ಪರವಾನಗಿ
  1. ಕಾಯ್ದೆಯ ಅನುಸಾರ ಕಂಪ್ಯೂಟರಿಕೃತ ಕೇಂದ್ರೀಯ ತಪಾಸಣಾ ವ್ಯವಸ್ಥೆಯನ್ನು ಜಾರಿಗೊಳಿಸುವುದು. ಅದರಲ್ಲಿ ಪರಿವೀಕ್ಷಕರನ್ನು ಕೇಂದ್ರವೇ ನಿಯೋಜಿಸಲಿದೆ. ಮುಂದಿನ ವರ್ಷಗಳಲ್ಲಿ ಅದೇ ಪರಿವೀಕ್ಷಕರು ಅದೇ ಘಟಕಕ್ಕೆ ನಿಯೋಜಿಸುವಂತಿಲ್ಲ. ವಾಣಿಜ್ಯ ಸಂಸ್ಥೆಯ ಮಾಲಿಕರಿಗೆ ಮೊದಲೇ ತಪಾಸಣಾ ನೋಟಿಸ್ ನೀಡಬೇಕು ಮತ್ತು ತಪಾಸಣೆ ನಡೆಸಿದ 48 ಗಂಟೆಗಳಲ್ಲಿ ತಪಾಸಣಾ ವರದಿಯನ್ನು ಅಪ್ ಲೋಡ್ ಮಾಡಬೇಕು. ಇದರಲ್ಲಿ ಕೆಳಗಿನ ಅಂಶಗಳ ತಪಾಸಣೆ ನಡೆಸಬೇಕು.

ಎ.        ಸಮಾನ ವೇತನ ಕಾಯ್ದೆ, 1976

ಬಿ.        ಕನಿಷ್ಠ ವೇತನ ಕಾಯ್ದೆ, 1948

ಸಿ.        ಮಳಿಗೆ ಮತ್ತು ಉದ್ದಿಮೆ ಸ್ಥಾಪನೆ ಕಾಯ್ದೆ

ಡಿ.        ಬೋನಸ್ ಪಾವತಿ ಕಾಯ್ದೆ 1965

ಇ.        ವೇತನ ಪಾವತಿ ಕಾಯ್ದೆ, 1936

ಎಫ್.     ಗ್ರ್ಯಾಚುಟಿ ಪಾವತಿ ಕಾಯ್ದೆ,  1972

ಜಿ.        ಗುತ್ತಿಗೆ ಕಾರ್ಮಿಕ(ನಿಯಂತ್ರಣ ಮತ್ತು ರದ್ದತಿ) ಕಾಯ್ದೆ, 1970

ಎಚ್.     ಕಾರ್ಖಾನೆಗಳ ಕಾಯ್ದೆ, 1948

ಐ.        ಬಾಯ್ಲರ್ಸ್ ಕಾಯ್ದೆ, 1923

ಜೆ.        ಜಲ(ಮಾಲಿನ್ಯ ನಿಯಂತ್ರಣ ಮತ್ತು ತಡೆ) ಕಾಯ್ದೆ, 1974

ಕೆ.         ವಾಯು(ಮಾಲಿನ್ಯ ಮತ್ತು ನಿಯಂತ್ರಣ) ಕಾಯ್ದೆ, 1981

  1. ಕಾನೂನು ಮಾಪನ ಶಾಸ್ತ್ರ ಕಾಯ್ದೆ, 2009 ಮತ್ತು ನಿಯಮಗಳು  

ಕೋವಿಡ್-19 ಸಾಂಕ್ರಾಮಿಕ ಒಡ್ಡಿರುವ ಸವಾಲುಗಳ ಹಿನ್ನೆಲೆಯಲ್ಲಿ ಸಂಪನ್ಮೂಲ ಅಗತ್ಯತೆಗಳನ್ನು ನೀಗಿಸಲು ಭಾರತ ಸರ್ಕಾರ 2020ರ ಮೇ 17ರಂದು ರಾಜ್ಯಗಳ ಸಾಲದ ಮಿತಿಯನ್ನು ರಾಜ್ಯಗಳ ಜಿಎಸ್ ಡಿಪಿ ಶೇ.2ರಷ್ಟು ಹೆಚ್ಚಳ ಮಾಡಿತು. ಇದರಲ್ಲಿ ಅರ್ಧ ಪ್ರಮಾಣವನ್ನು ರಾಜ್ಯಗಳು ಕೈಗೊಳ್ಳುವ ಜನ ಕೇಂದ್ರಿತ ಸುಧಾರಣೆಗಳ ಜೊತೆ ಸಂಯೋಜಿಸಲಾಯಿತು. ನಾಲ್ಕು ಜನಕೇಂದ್ರಿತ ಸುಧಾರಣಾ ವಲಯಗಳನ್ನು ಗುರುತಿಸಲಾಯಿತು. ಅವುಗಳೆಂದರೆ (ಎ) ಒಂದು ರಾಜ್ಯ ಒಂಡು ಪಡಿತರ ಕಾರ್ಡ್ ವ್ಯವಸ್ಥೆ ಅನುಷ್ಠಾನ. (ಬಿ) ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣ. (ಸಿ) ನಗರ ಸ್ಥಳೀಯ ಸಂಸ್ಥೆ/ಬಳಕೆ ಸುಧಾರಣೆಗಳು ಮತ್ತು (ಡಿ) ಇಂಧನ ವಲಯದ ಸುಧಾರಣೆಗಳು

ಈವರೆಗೆ 10 ರಾಜ್ಯಗಳು ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದೆ. 5 ರಾಜ್ಯಗಳು ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣ ಸುಧಾರಣೆಗಳನ್ನು ಮತ್ತು ಎರಡು ರಾಜ್ಯಗಳು ಸ್ಥಳೀಯ ಸಂಸ್ಥೆಗಳ ಸುಧಾರಣೆಯನ್ನು ಕೈಗೊಂಡಿವೆ. 

ಅಲ್ಲದೆ ಹೆಚ್ಚುವರಿ ಸಾಲಕ್ಕೆ ಅನುಮತಿ ಪಡೆದಿರುವ ರಾಜ್ಯಗಳು ನಾಲ್ಕು ಸುಧಾರಣೆಗಳ ಪೈಕಿ ಮೂರು ಸುಧಾರಣೆಗಳನ್ನು ಪೂರ್ಣಗೊಳಿಸಿದರೆ ಅವುಗಳು “ಬಂಡವಾಳ ವೆಚ್ಚದ ಮೇಲೆ ರಾಜ್ಯಗಳು ಆರ್ಥಿಕ ನೆರವು ಪಡೆಯುವ ಯೋಜನೆ”  ಹೆಚ್ಚುವರಿ ಆರ್ಥಿಕ ಸಹಾಯವನ್ನು ಪಡೆಯಬಹುದಾಗಿದೆ. ಈ ಯೋಜನೆ ಅಡಿ ಉದ್ದೇಶಕ್ಕಾಗಿ 2,000 ಕೋಟಿ ರೂ. ಮೊತ್ತವನ್ನು ತೆಗೆದಿರಿಸಲಾಗಿದೆ.

ಹೆಚ್ಚಿನ ರಾಜ್ಯಗಳು ಸುಧಾರಣೆಗಳನ್ನು ಕೈಗೊಳ್ಳಲು ಮತ್ತು ಹೆಚ್ಚುವರಿ ಸಾಲದ ನೆರವನ್ನು ಪಡೆದುಕೊಳ್ಳಲು ಉತ್ತೇಜನ ನೀಡಲು ಹಣಕಾಸು ಸಚಿವಾಲಯ ವೆಚ್ಚ ಇಲಾಖೆ, ಇತ್ತೀಚೆಗೆ ನಾನಾ ವಲಯಗಳಲ್ಲಿ ಜನಸ್ನೇಹಿ ಸುಧಾರಣೆಗಳನ್ನು ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ವಿಸ್ತರಿಸಿದೆ. ಇದೀಗ ನೋಡಲ್ ಸಚಿವಾಲಯದ ಶಿಫಾರಸ್ಸು ಆಧರಿಸಿ 2020ರ ಫೆಬ್ರವರಿ 15ರೊಳಗೆ ಸುಧಾರಣೆಗಳ ಕುರಿತು ಶಿಫಾರಸ್ಸನ್ನು ಸ್ವೀಕರಿಸಿದರೆ ಅಂತಹ ರಾಜ್ಯಗಳು ಸುಧಾರಣೆ ಆಧಾರಿತ ಪ್ರಯೋಜನಗಳನ್ನು ಪಡೆಯಲು ಅರ್ಹವಾಗುತ್ತವೆ.

***



(Release ID: 1682166) Visitor Counter : 154