ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತೀಯ ಚಲನಚಿತ್ರಗಳಲ್ಲಿ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ ತಜ್ಞರಿಗೆ ಸದಾವಕಾಶ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಜಾವಡೇಕರ್


"2021ರ ಜಾಗತಿಕ ಮಾಧ್ಯಮ ಮತ್ತು ಚಲನಚಿತ್ರ ಶೃಂಗಸಭೆ ಭಾರತದಲ್ಲಿ ಆಯೋಜನೆ "

ಐಐಟಿ ಬಾಂಬೆ ಸಹಯೋಗದಲ್ಲಿ ಶೀಘ್ರವೇ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ ಕೇಂದ್ರ

Posted On: 16 DEC 2020 1:41PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಇಂದು ಸಿಐಐ ಬಿಗ್ ಪಿಕ್ಚರ್ ಶೃಂಗಸಭೆಯನ್ನುದ್ದೇಶಿಸಿ ಭಾಷಣದಲ್ಲಿ ಸಭಿಕರಿಗೆ ಸಂದೇಶ ನೀಡಿದ ಸಚಿವರು, ಬಿಗ್ ಪಿಕ್ಚರ್ ಶೃಂಗಸಭೆ ಆಯೋಜಿಸಿರುವುದಕ್ಕಾಗಿ ಸಿಐಐ ಅನ್ನು ಅಭಿನಂದಿಸಿದರು. " ಸಂವಹನ ತಂತ್ರಜ್ಞಾನದ ಅಸಾಧಾರಣ ಬೆಳವಣಿಗೆಯ ದೇಶ ನಮ್ಮದಾಗಿದೆ. ಇದು ಮನರಂಜನೆ ಮತ್ತು ಮಾಧ್ಯಮ ಉದ್ಯಮಕ್ಕೆ ಪ್ರಚಂಡ ವ್ಯಾಪ್ತಿಯನ್ನು ಒದಗಿಸುತ್ತದೆ”. "ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ (ಎವಿಜಿಸಿ)ಗೆ ಇದು ಉದಯದ ವಲಯವಾಗಿದೆ ಮತ್ತು ನಮ್ಮ ತಜ್ಞರು ವಿಶ್ವದ ಉನ್ನತ ಚಲನಚಿತ್ರ ನಿರ್ಮಾಪಕರಿಗೆ ಬ್ಯಾಕ್ ಎಂಡ್ ಬೆಂಬಲವನ್ನು ನೀಡುತ್ತಿದ್ದಾರೆ" ಎಂದು ಸಚಿವರು ತಿಳಿಸಿದರು. ವೃತ್ತಿಪರರು ನಮ್ಮದೇ ಚಿತ್ರಗಳಿಗಾಗಿ ಹೆಚ್ಚಿನದನ್ನು ಮಾಡುವ ಸಮಯ ಇದಾಗಿದೆ, ಇದರಿಂದಾಗಿ ಭಾರತೀಯ ಚಲನಚಿತ್ರಗಳಲ್ಲಿ ಅನಿಮೇಷನ್ ಮತ್ತು ಗ್ರಾಫಿಕ್ಸ್ ಬಳಕೆಯು ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದರು.

ಬಾಂಬೆಯ ಇಂಡಿಯನ್ ಇನ್ ಸ್ಟಿಟ್ಯೂಟ್ ಸಹಕಾರದಲ್ಲಿ ಸರ್ಕಾರ ಶೀಘ್ರವೇ ಔನ್ನತ್ಯ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಎವಿಜಿಸಿ ಕೋರ್ಸ್ ಒದಗಿಸಲಾಗುವುದು ಎಂದು ಶ್ರೀ ಜಾವಡೇಕರ್ ಪ್ರಕಟಿಸಿದರು. ಮಿಗಿಲಾಗಿ ಕೇಂದ್ರ ಉದ್ಯಮಶೀಲತೆ ಉತ್ತೇಜಿಸಲಿದ್ದು, ನವೋದ್ಯಮ ವಲಯಕ್ಕೆ ಪ್ರೋತ್ಸಾಹ ನೀಡಲು ಕೇಂದ್ರ ಉಪಕ್ರಮ ಕೈಗೊಳ್ಳಲಿದೆ ಎಂದೂ ತಿಳಿಸಿದರು.

2021 ಜನವರಿಯಲ್ಲಿ ಗೋವಾದಲ್ಲಿ ನಡೆಯಲಿರುವ 51ನೇ .ಎಫ್‌.ಎಫ್‌..ನಲ್ಲಿ ಭಾಗವಹಿಸುವಂತೆ ಸಚಿವರು ಇಲ್ಲಿ ಭಾಗಿಯಾಗಿರುವವರನ್ನು ಆಹ್ವಾನಿಸಿದರು. ಕೇನ್ಸ್ ಚಲನಚಿತ್ರೋತ್ಸವವು 75 ವರ್ಷ ಆಚರಿಸುತ್ತಿರುವುದರಿಂದ ಭಾರತವು 2022ರಲ್ಲಿ ಕೇನ್ಸ್‌ ನಲ್ಲಿ ವಿಶೇಷ ಪೆವಿಲಿಯನ್ ಸ್ಥಾಪಿಸುವುದಾಗಿಯೂ ಸಚಿವರು ಪ್ರಕಟಿಸಿದರು. ಮುಂದಿನ ವರ್ಷ ಭಾರತ ಜಾಗತಿಕ ಮಾಧ್ಯಮ ಮತ್ತು ಚಲನಚಿತ್ರ ಶೃಂಗಸಭೆಯನ್ನು ಆಯೋಜಿಸಲಾಗುತ್ತದೆ ಎಂದೂ ಅವರು ತಿಳಿಸಿದರು.

ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ನವೆಂಬರ್ ನಲ್ಲಿ ವ್ಯವಹಾರಿಕ ನಿಯಮಗಳಿಗೆ ತಿದ್ದುಪಡಿ ತಂದಿದ್ದನ್ನು ಉಲ್ಲೇಖಿಸಿ, ಬದಲಾವಣೆಯ ಕಲ್ಪನೆಯ ಹಿಂದೆ ಒಂದು ತಾಣದ ವಿಷಯವನ್ನು ಅಂದರೆ ವಾರ್ತಾ ಮತ್ತು ಪ್ರಸಾರ ಇಲಾಖೆಯ ವಿಷಯವನ್ನು ಮತ್ತೊಂದು ತಾಣದಲ್ಲಿ ಅಂದರೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ವೇದಿಕೆಯಲ್ಲಿಡುವುದಾಗಿದೆ ಎಂದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪಾತ್ರದ ಬಗ್ಗೆ ಮಾತನಾಡಿದ ಶ್ರೀ ಅಮಿತ್‌ ಖರೆ, ಕ್ಷೇತ್ರದಲ್ಲಿ ಸರ್ಕಾರದ ಪಾತ್ರ ಅವಕಾಶ ಒದಗಿಸುವುದಾಗಿದೆ ಎಂದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಎಲ್ಲಾ ಸಚಿವಾಲಯಗಳಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿದೆ ಮತ್ತು ಪ್ರಭಾವವು ಖಾಸಗಿ ವಲಯದ ಮೂಲಕವೇ ಬರುತ್ತದೆ ಎಂದು ಅವರು ತಿಳಿಸಿದರು, ದೇಶದಲ್ಲಿ ಬಹುತೇಕ ಎಲ್ಲಾ ಚಲನಚಿತ್ರ ನಿರ್ಮಾಣಗಳು ಖಾಸಗಿ ವಲಯದಿಂದ ನಿರ್ಮಾಣವಾಗುತ್ತಿವೆ. ಪ್ರಸಾರ ಭಾರತಿ ಹೊರತುಪಡಿಸಿ ಎಲ್ಲಾ ವಾಹಿನಿಗಳು ಖಾಸಗಿಯಾಗಿವೆ ಮತ್ತು ಒಟಿಟಿ ವಲಯವು ಸಂಪೂರ್ಣವಾಗಿ ಖಾಸಗಿಯಾಗಿದೆ ಎಂದರು.

ಮಾಧ್ಯಮ ಮತ್ತು ಪರಿಸರ ಕೈಗಾರಿಕೆ ಬೆಳೆದಿದ್ದು, ನಾವು ಕೈಗಾರಿಕೆಗೆ ಅನುವು ಮಾಡಿಕೊಡಬೇಕು ಎಂದು ಶ್ರೀ ಖರೆ ತಿಳಿಸಿದರು. ಸಾಂಕ್ರಾಮಿಕವು ರಫ್ತು ಸಾಮರ್ಥ್ಯವಿರುವ ಶೈಕ್ಷಣಿಕ ತಂತ್ರಜ್ಞಾನ ಮತ್ತು ಭಾರತೀಯ ಗೇಮಿಂಗ್ ನಂಥ  ಹೊಸ ಅವಕಾಶಗಳನ್ನು ತೆರೆದಿದೆ ಎಂದರು.

2022ರಲ್ಲಿ ಭಾರತ 75ನೇ ಸ್ವಾತಂತ್ರ್ಯ ದಿನ ಆಚರಣೆ ದೇಶದ ಒಳಗೆ ಮತ್ತು ಹೊರಗೆ ನಡೆಯಲಿವೆ, ಮಾಧ್ಯಮ ಮತ್ತು ಮನರಂಜನೆಯ ಮೂಲಕ ಭಾರತದ ಮೃದು ಶಕ್ತಿಯನ್ನು ಆಯೋಜಿಸಲು ಸಹಾಯ ಮಾಡಲು ಉದ್ಯಮಕ್ಕೆ ಕಾರ್ಯದರ್ಶಿ ಶ್ರೀ ಅಮಿತ್ ಖರೆ ಆಹ್ವಾನ ನೀಡಿದರು. ಶೃಂಗಸಭೆಯಲ್ಲಿ ಭಾಗವಹಿಸಿದವರನ್ನು 51 ನೇ ಐಎಫ್‌.ಎಫ್‌.ಐಗೆ ಸೌಹಾರ್ದಯುತವಾಗಿ ಆಹ್ವಾನಿಸಿ, ಇದನ್ನು ಹೈಬ್ರಿಡ್ ವಿಧಾನದಲ್ಲಿ ಆಚರಿಸಲಾಗುವುದು ಎಂದರು.

ಸಂದರ್ಭದಲ್ಲಿ ಮಾತನಾಡಿದ ಪ್ರಸಾರ ಭಾರತಿಯ ಸಿಇಓ ಶ್ರೀ ಶಶಿ ಶೇಖರ ವೆಂಪತಿ, ರಾಷ್ಟ್ರೀಯ ಪ್ರಸಾರ ಸೇವೆಯ ವಿವಿಧ ವಾಹಿನಿಗಳು, ಕೋವಿಡ್ ಸಾಂಕ್ರಾಮಿಕದ ಬಗ್ಗೆ ಸಾಮೂಹಿಕ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಿವೆ ಎಂದರು. ಅವಧಿಯಲ್ಲಿ ದೂರದರ್ಶನ ಉನ್ನತ ಸಾಮಾಜಿಕ ಜಾಹೀರಾತು ನಿಲುವಿನ ಪ್ರಯತ್ನಗಳನ್ನು ಪ್ರತಿಫಲಿಸುತ್ತವೆ. ರಾಮಾಯಣ ಮತ್ತು ಮಹಾಭಾರತದಂತಹ ಧಾರಾವಾಹಿಗಳ ಪ್ರಸಾರದ ಮೂಲಕ, ಆರೋಗ್ಯಕರ ಕೌಟುಂಬಿಕ ವಸ್ತುವಿನ ವೀಕ್ಷಣೆಗೆ ಪ್ರೇಕ್ಷಕರು ಇನ್ನೂ ಇದ್ದಾರೆ ಎಂಬುದನ್ನು ದೂರದರ್ಶನ ಎತ್ತಿ ತೋರಿಸಿದೆ ಎಂದರು. ಡಿಡಿ ಉಚಿತ ಡಿಶ್‌ ನಂತಹ ಪ್ರಯತ್ನಗಳು ವಿಶ್ವದಾದ್ಯಂತ ಟ್ರೆಂಡ್‌ ಸೆಟ್ಟಿಂಗ್ ಉಪಕ್ರಮಗಳಾಗಿವೆ ಎಂದು ಶ್ರೀ ವೆಂಪತಿ ತಿಳಿಸಿದರು. 5 ಜಿ ಯಂತಹ ಉದಯೋನ್ಮುಖ ತಂತ್ರಜ್ಞಾನಗಳು ಸ್ಮಾರ್ಟ್‌ ಫೋನ್‌ಗಳಿಗೆ ಪ್ರಸಾರವನ್ನು ಪಡೆದುಕೊಳ್ಳುವ ಅವಕಾಶವನ್ನು ಒದಗಿಸುತ್ತದೆ ಮತ್ತು ಅವಕಾಶವನ್ನು ಭಾರತದಲ್ಲಿ ಸ್ಟಾರ್ಟ್‌ ಅಪ್‌ ಗಳು ಅಳವಡಿಸಿಕೊಳ್ಳುತ್ತಿವೆ ಎಂದರು.

ಹಿನ್ನೆಲೆ:

 ಬಿಗ್ ಪಿಕ್ಚರ್ ಶೃಂಗಸಭೆ ಮಹತ್ವಾಕಾಂಕ್ಷೆಯ ಶೃಂಗಸಭೆ ಮತ್ತು ಎಂ ಮತ್ತು ಕೈಗಾರಿಕೆಯ ವಾಯಕತ್ವದ ವೇದಿಕೆಯಾಗಿದ್ದು, ಡಿಜಿಟಲ್ ಪರಿವರ್ತನೆ, ತಂತ್ರಜ್ಞಾನದ ಒಮ್ಮುಖ ಮತ್ತು ಕೃತಕ ಬುದ್ಧಿಮತ್ತೆ ಕ್ರೀಡೆಯ ನಿಯಮಗಳನ್ನು ಬದಲಾಯಿಸುತ್ತಿರುವ ಸಮಯದಲ್ಲಿ ಯಶಸ್ವಿ ಬೆಳವಣಿಗೆಯ ಹಾದಿಯಲ್ಲಿ ಸಂಚರಿಸಲು ಭಾರತೀಯ ಸರ್ಕಾರ, ಕೈಗಾರಿಕೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಪಡೆದ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತದೆ ಎಂದರು.

ಸಿಐಐ ಬಿಗ್ ಪಿಕ್ಚರ್ ಶೃಂಗಸಭೆಯನ್ನು 2020 ಡಿಸೆಂಬರ್ 16-18ರವರೆಗೆ ಸಿಐಐ ಡಿಜಿಟಲ್ ವೇದಿಕೆಯಲ್ಲಿ ಆಯೋಜಿಸುತ್ತಿದೆ. ಮಾಧ್ಯ ಮತ್ತು ಮನರಂಜನೆಯ ಭೂರಮೆಯಲ್ಲಿ ರಚನೆಕಾರರು, ಪ್ರಸಾರಕರು, ಖರೀದಿದಾರರು, ಸ್ಟುಡಿಯೋಗಳು, ಉತ್ಪಾದನಾ ಕಂಪನಿಗಳು, ಪ್ರಕಾಶಕರು, ವಿತರಕರು ಮತ್ತು ಅಭಿವರ್ಧಕರ ಭಾಗವಹಿಸುವಿಕೆ ಇರುತ್ತದೆ.

***



(Release ID: 1681071) Visitor Counter : 202