ಪ್ರಧಾನ ಮಂತ್ರಿಯವರ ಕಛೇರಿ

ಹೊಸ ಸಂಸತ್ ಭವನಕ್ಕೆ ಪ್ರಧಾನಿ ಶಂಕುಸ್ಥಾಪನೆ


ಹೊಸ ಸಂಸತ್ತು ದೇಶದ ಆಕಾಂಕ್ಷೆಗಳನ್ನು ಈಡೇರಿಸುತ್ತದೆ

ಪ್ರಜಾಪ್ರಭುತ್ವ ನಮ್ಮ ಸಂಸ್ಕೃತಿ

ಹೊಸ ಸಂಸತ್ ಭವನ ಸ್ವಾವಲಂಬಿ ಭಾರತಕ್ಕೆ ಸಾಕ್ಷಿಯಾಗಲಿದೆ: ಪ್ರಧಾನಮಂತ್ರಿ ನರೇಂದ್ರ ಮೋದಿ

Posted On: 10 DEC 2020 4:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸ ಸಂಸತ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಹೊಸ ಸಂಸತ್ ಭವನಸ್ವಾವಲಂಬಿ ಭಾರತದಒಂದು ಆಂತರಿಕ ಭಾಗವಾಗಿದೆ ಮತ್ತು ಸ್ವಾತಂತ್ರ್ಯದ ನಂತರ ಪ್ರಥಮ ಬಾರಿಗೆ ಜನರನ್ನು ಸಂಕೇತಿಸುವ ಸಂಸತ್ತನ್ನು ನಿರ್ಮಿಸಲು ದೊರೆತ ಸದಾವಕಾಶವಾಗಿದೆ ಹಾಗೂ 2022ರಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನುನವ ಭಾರತದಅಗತ್ಯತೆಗಳು ಮತ್ತು ಆಕಾಂಕ್ಷೆಗಳೊಂದಿಗೆ ಸಮರೂಪಿಸುವಂಥದ್ದಾಗಿದೆ.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಗಳು, ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ, ಭಾರತೀಯತೆಯ ಕಲ್ಪನೆಯನ್ನು ತುಂಬಿದ ಇಂದು ಒಂದು ಮೈಲಿಗಲ್ಲಾಗಿದೆಎಂದು ಹೇಳಿದರು. ಭಾರತದ ಸಂಸತ್ ಭವನದ ನಿರ್ಮಾಣದ ಪ್ರಾರಂಭ ನಮ್ಮ ಪ್ರಜಾಪ್ರಭುತ್ವದ ಸಂಪ್ರದಾಯಗಳಲ್ಲಿ ಅತಿ ಪ್ರಮುಖ ಹಂತಗಳಲ್ಲಿ ಒಂದಾಗಿದೆ ಎಂದೂ ಅವರು ಹೇಳಿದರು, ಹೊಸ ಸಂಸತ್ ಭವನವನ್ನು ಜೊತೆಗೂಡಿ ನಿರ್ಮಿಸಲು ಅವರು ಭಾರತದ ಜನರಿಗೆ ಕರೆ ನೀಡಿದ್ದಾರೆ. ಭಾರತ ತನ್ನ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದನ್ನು ಹೊಸ ಸಂಸತ್ ಭವನದಿಂದ ನೋಡುವುದಕ್ಕಿಂತ ಅತಿ ಸುಂದರವಾದದ್ದು ಮತ್ತು ಅತಿ ಶುದ್ಧವಾದದ್ದು ಮತ್ತೊಂದಿಲ್ಲ ಎಂದು ಅವರು ಹೇಳಿದರು

ಸಂಸದರಾಗಿ ಮೊದಲ ಬಾರಿಗೆ 2014ರಲ್ಲಿ ತಾವು ಸಂಸತ್ ಭವನವನ್ನು ಪ್ರವೇಶಿಸಿದ ಕ್ಷಣವನ್ನು ಪ್ರಧಾನಮಂತ್ರಿಗಳು ನೆನಪಿಸಿಕೊಂಡರು. ತಾವು ಮೊದಲ ಬಾರಿಗೆ ಸಂಸತ್ ಭವನವನ್ನು ಪ್ರವೇಶಿಸಲು ಬಂದಾಗ, ಒಳಗೆ ಕಾಲಿಡುವ ಮೊದಲು, ತಲೆ ಬಾಗಿ ಪ್ರಜಾಪ್ರಭುತ್ವದ ದೇಗುಲಕ್ಕೆ ನಮಸ್ಕರಿದ್ದಾಗಿ ಅವರು ಹೇಳಿದರು. ಸಂಸದರ ದಕ್ಷತೆಯನ್ನು ಹೆಚ್ಚಿಸುವ ಮತ್ತು ಅವರ ಕೆಲಸದ ಸಂಸ್ಕೃತಿಯನ್ನು ನವೀಕರಿಸುವಂತಹ ಹಲವಾರು ಹೊಸ ಕೆಲಸಗಳನ್ನು ಸಂಸತ್ ಭವನದಲ್ಲಿ ಮಾಡಲಾಗುವುದೆಂದು ಅವರು ಒತ್ತಿ ಹೇಳಿದರು. ಸ್ವಾತಂತ್ರ್ಯ ನಂತರದ ಭಾರತಕ್ಕೆ ಹಳೆಯ ಸಂಸತ್ ಭವನ ನಿರ್ದೇಶನ ನೀಡಿದರೆ, ಹೊಸ ಭವನಸ್ವಾವಲಂಬಿ ಭಾರತದನಿರ್ಮಾಣಕ್ಕೆ ಸಾಕ್ಷಿಯಾಗಲಿದೆ. ಹಳೆಯ ಸಂಸತ್ ಭವನದಲ್ಲಿ ದೇಶದ ಅಗತ್ಯಗಳನ್ನು ಪೂರೈಸುವ ಕಾರ್ಯ ಮಾಡಲಾಗಿದ್ದರೆ, ಹೊಸ ಭವನದಲ್ಲಿ 21ನೇ ಶತಮಾನದ ಭಾರತ ಆಕಾಂಕ್ಷೆಗಳು ಈಡೇರಲಿವೆ ಎಂದು ಅವರು ಹೇಳಿದರು

ಬೇರೆಡೆ ಎಲ್ಲಾ ಪ್ರಜಾಪ್ರಭುತ್ವ ಎಂಬುದು ಚುನಾವಣಾ ಕಾರ್ಯವಿಧಾನ, ಆಡಳಿತ ಮತ್ತು ಅಧಿಕಾರದ ಕುರಿತಾಗಿದೆ ಎಂದು ಪ್ರಧಾನಮಂತ್ರಿಗಳು ಟೀಕಿಸಿದರು.  ಆದರೆ, ಭಾರತದಲ್ಲಿ ಪ್ರಜಾಪ್ರಭುತ್ವ ಎಂಬುದು ಜೀವನ ಮೌಲ್ಯಗಳಾಗಿದೆ, ಜೀವನ ವಿಧಾನವಾಗಿದೆ ಮತ್ತು ರಾಷ್ಟ್ರದ ಜೀವಾಳವಾಗಿದೆ. ಶತಮಾನಗಳ ಅನುಭವದ ಮೇರೆಗೆ, ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದೂ ಅವರು ಹೇಳಿದರು. ಭಾರತದ ಪ್ರಜಾಪ್ರಭುತ್ವದಲ್ಲಿ ಒಂದು ಜೀವನದ ಮಂತ್ರ, ಒಂದು ಜೀವನದ ಅಂಶ ಮತ್ತು ವ್ಯವಸ್ಥೆಯ ಒಂದು ಪದ್ಧತಿಯೂ ಇದೆ ಎಂದು ಅವರು ಹೇಳಿದರು. ಭಾರತದ ಪ್ರಜಾಪ್ರಭುತ್ವದ ಶಕ್ತಿಯೇ, ದೇಶದ ಅಭಿವೃದ್ಧಿಗೆ ಹೊಸ ಉತ್ತೇಜನ ಮತ್ತು ದೇಶದಜನತೆಗೆ ಹೊಸ ಭರವಸೆಗೆ ಹೊಸ ಪುಷ್ಠಿ ನೀಡುತ್ತಿದೆ ಎಂದರು. ಭಾರತದಲ್ಲಿ ಪ್ರಜಾಪ್ರಭುತ್ವ ಪ್ರತಿ ವರ್ಷ ನಿರಂತರವಾಗಿ ನವೀಕರಿಸಲ್ಪಡುತ್ತಿದೆ ಮತ್ತು ಪ್ರತಿ ಚುನಾವಣೆಯಲ್ಲೂ ಮತದಾನದ ಪ್ರಮಾಣ ಹೆಚ್ಚುತ್ತಲೇ ಇರುವದನ್ನು ಕಾಣಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ಎಂಬುದು ಆಡಳಿತದ ಜೊತೆಗೆ ಭಿನ್ನಾಭಿಪ್ರಾಯಗಳನ್ನು ನಿರಂತರವಾಗಿ ಪರಿಹರಿಸುವ ಸಾಧನವಾಗಿದೆ ಎಂದು ಪ್ರಧಾನಮಂತ್ರಿಗಳು ಟೀಕಿಸಿದರು. ವಿಭಿನ್ನ ಅಭಿಪ್ರಾಯಗಳು, ವಿಭಿನ್ನ ದೃಷ್ಟಿಕೋನಗಳು ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸುತ್ತವೆ. ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಳ್ಳದಿರುವವರೆಗೂ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ ಎಂಬ ಗುರಿಯೊಂದಿಗೆ ನಮ್ಮ ಪ್ರಜಾಪ್ರಭುತ್ವ ಮುಂದೆ ಸಾಗಿದೆ ಎಂದು ಅವರು ಹೇಳಿದರು. ನೀತಿಗಳು ಮತ್ತು ರಾಜಕೀಯ ಬದಲಾಗಬಹುದು ಆದರೆ, ನಾವಿರುವುದು ಸಾರ್ವಜನಿಕರ ಸೇವೆಗಾಗಿ ಹಾಗೂ ನಮ್ಮ ಅಂತಿಮ ಗುರಿಯಲ್ಲಿ ಯಾವುದೇ ವ್ಯತ್ಯಾಸಗಳಿರಬಾರದು ಎಂದು ಅವರು ಒತ್ತಿ ಹೇಳಿದರು. ಸಂಸತ್ತಿನ ಒಳಗೆ ಅಥವಾ ಹೊರಗೆ ಚರ್ಚೆಗಳು ನಡೆಯಬಹುದು ಆದರೆ, ರಾಷ್ಟ್ರೀಯ ಸೇವೆಯ ಬಗೆಗಿನ ದೃಢ ನಿಶ್ಚಯ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಬಗೆಗಿನ ಸಮರ್ಪಣಾಭಾವ ಅವುಗಳಲ್ಲಿ ನಿರಂತರವಾಗಿ ಬಿಂಬಿಸಬೇಕು ಎಂದೂ ಅವರು ಹೇಳಿದರು.

ಸಂಸತ್ ಭವನದ ಅಸ್ತಿತ್ವದ ಆಧಾರವಾಗಿರುವ ಪ್ರಜಾಪ್ರಭುತ್ವದ ಬಗ್ಗೆ ಆಶಾವಾದವನ್ನು ಜಾಗೃತಗೊಳಿಸುವುದು ಜನತೆಯ ಜವಾಬ್ದಾರಿ ಎಂಬುದನ್ನು ನೆನಪಿಡಬೇಕೆಂದು ಪ್ರಧಾನಮಂತ್ರಿ ಜನರನ್ನು ಕೋರಿದರು. ಸಂಸತ್ತನ್ನು ಪ್ರವೇಶಿಸುವ ಪ್ರತಿ ಸದಸ್ಯನೂ ಸಾರ್ವಜನಿಕರು ಮತ್ತು ಸಂವಿಧಾನಕ್ಕೆ ಜವಾಬ್ದಾರಯುತನಾಗಿರುತ್ತಾನೆ ಎಂದು ನೆನಪಿಸಿದರು. ಪ್ರಜಾಪ್ರಭುತ್ವದ ದೇಗುಲವನ್ನು ಪವಿತ್ರಗೊಳಿಸುವಂತಹ ಯಾವುದೇ ಆಚರಣೆಯಿಲ್ಲ ಎಂದು ಅವರು ಹೇಳಿದರು. ದೇಗುಲಕ್ಕೆ ಬರುವ ಜನಪ್ರತಿನಿಧಿಗಳು ಇದನ್ನು ಪವಿತ್ರಗೊಳಿಸುತ್ತಾರೆ. ಅವರ ಸಮರ್ಪಣೆ, ಅವರ ಸೇವೆ,, ನಡವಳಿಕೆ, ಆಲೋಚನೆಗಳು ಮತ್ತು ನಡೆಯೇ ದೇವಾಲಯದ ಜೀವಾಳವಾಗಲಿದೆ ಎಂದು ಅವರು ಹೇಳಿದರು. ಭಾರತದ ಏಕತೆ ಮತ್ತು ಸಮಗ್ರತೆಯತ್ತ ಅವರ ಪ್ರಯತ್ನಗಳು ದೇವಾಲಯಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಶಕ್ತಿಯಾಗಲಿವೆ. ಪ್ರತಿಯೊಬ್ಬ ಜನಪ್ರತಿನಿಧಿ ತನ್ನ ಜ್ಞಾನ, ಬುದ್ಧಿವಂತಿಕೆ, ಶಿಕ್ಷಣ ಮತ್ತು ಅನುಭವವನ್ನು ಸಂಪೂರ್ಣವಾಗಿ ಧಾರೆಯೆರೆದಾಗ ನೂತನ ಸಂಸತ್ ಭವನ ಪವಿತ್ರತೆಯನ್ನು ಪಡೆಯುತ್ತದೆ ಎಂದು ಅವರು ಹೇಳಿದರು.     

ಭಾರತಕ್ಕೆ ಪ್ರಥಮ ಆದ್ಯತೆ ನೀಡಲು, ಕೇವಲ ಭಾರತದ ಪ್ರಗತಿ ಮತ್ತು ಭಾರತದ ಅಭಿವೃದ್ಧಗಾಗಿ ಪೂಜಿಸಲು, ಕೈಗೊಳ್ಳುವ ಪ್ರತಿ ನಿರ್ಧಾರವೂ ದೇಶಕ್ಕೆ ಶಕ್ತಿ ನೀಡಬೇಕು ಮತ್ತು ದೇಶದ ಹಿತಾಸಕ್ತಿಗೇ ಪ್ರಮುಖ ಆದ್ಯತೆ ನೀಡಲು ಪ್ರತಿಜ್ಞೆ ಮಾಡುವಂತೆ ಪ್ರಧಾನಮಂತ್ರಿಗಳು ಜನರನ್ನು ಆಗ್ರಹಿಸಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚಿನ ಬೇರಾವುದೇ ಹಿತಾಸಕ್ತಿ ಇಲ್ಲ. ದೇಶದ ಬಗೆಗಿನ ಅವರ ಕಾಳಜಿ ತಮ್ಮ ವೈಯಕ್ತಿಕ ಕಾಳಜಿಗಿಂತ ಹೆಚ್ಚಾಗಿರುತ್ತದೆ. ದೇಶದ ಏಕತೆ ಮತ್ತು ಸಮಗ್ರತೆಗಿಂತ ಮಗತ್ವವಾದದ್ದು ಮತ್ತಾವುದೂ ಇಲ್ಲ. ದೇಶದ ಸಂವಿಧಾನದ ಘನತೆ ಮತ್ತು ಗೌರವವನ್ನು ಕಾಪಾಡುವುದೇ ಅವರ ಜೀವನದ ಅತ್ಯಂತ ದೊಡ್ಡ ಗುರಿಯಾಗಿದೆ ಎಂದು  ಪ್ರತಿಜ್ಞೆ ಮಾಡುವಂತೆ ಅವರು ಎಲ್ಲರಿಗೂ ಹೇಳಿದ್ದಾರೆ.

***(Release ID: 1679911) Visitor Counter : 459