ಆಯುಷ್
ಕೇಂದ್ರ ಸರ್ಕಾರಿ ನೌಕರರಿಗೆ ಆಯುಷ್ ಡೇ ಕೇರ್ ಚಿಕಿತ್ಸಾ ಕೇಂದ್ರಗಳ ಸೇವೆ ಒದಗಿಸಲು ಅನುಮೋದನೆ
Posted On:
02 DEC 2020 2:50PM by PIB Bengaluru
ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ವ್ಯವಸ್ಥೆಯಡಿ ಚಿಕಿತ್ಸೆಗಳನ್ನು ನೀಡಲು ಉದ್ದೇಶಿತ ಡೇ ಕೇರ್ ಥೆರಪಿ ಕೇಂದ್ರಗಳ ಸೌಕರ್ಯ ಒದಗಿಸುವ ಪ್ರಸ್ತಾವಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರಿ ಆರೋಗ್ಯ ಸೇವೆಗಳು (ಸಿಜಿಎಚ್ ಎಸ್) ಅಡಿಯಲ್ಲಿ ಹೆಸರಿಸಲಾದ (ಎಂಪ್ಯಾನಲ್) ಪಡೆದ ಸಾಂಪ್ರದಾಯಿಕ (ಅಲೋಪಥಿ) ವೈದ್ಯಕೀಯ ಕೇಂದ್ರಗಳ ಮಾದರಿಯಲ್ಲಿ, ಸದ್ಯದಲ್ಲೇ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ಖಾಸಗಿ ಡೇ ಕೇರ್ ಕೇಂದ್ರಗಳ ಪಟ್ಟಿಯನ್ನು ಮಾಡಲಾಗುವುದು.
ಈ ಕೇಂದ್ರಗಳ ಪ್ರಯೋಜನ ಹಾಲಿ ಸೇವೆ ಸಲ್ಲಿಸುತ್ತಿರುವ ಮತ್ತು ಪಿಂಚಣಿ ಪಡೆಯುತ್ತಿರುವ ಎಲ್ಲ ಸಿಜಿಎಚ್ ಎಸ್ ಫಲಾನುಭವಿಗಳಿಗೆ ಲಭ್ಯವಾಗಲಿದೆ. ಸಿಜಿಎಚ್ ಎಸ್, ಫಲಾನುಭವಿಗಳು ಮತ್ತು ಒಟ್ಟಾರೆ ಸಾರ್ವಜನಿಕರಲ್ಲಿ ಆಯುಷ್ ವೈದ್ಯ ಪದ್ದತಿಗಳ ಬಗ್ಗೆ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಗಮನದಲ್ಲಿರಿಸಿಕೊಂಢು ಸಚಿವಾಲಯ ಈ ತೀರ್ಮಾನ ಕೈಗೊಂಡಿದೆ.
ಆರಂಭದಲ್ಲಿ ಪ್ರಾಯೋಗಿಕವಾಗಿ ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ಡೇ ಕೇರ್ ಥೆರಪಿ ಕೇಂದ್ರಗಳ ಪಟ್ಟಿಯನ್ನು ಒಂದು ವರ್ಷದ ಮಟ್ಟಿಗೆ ಪ್ರಕಟಿಸಲಾಗುವುದು ಮತ್ತು ಆನಂತರ ಇತರೆ ಪ್ರದೇಶಗಳಿಗೆ ಅದನ್ನು ವಿಸ್ತರಿಸಲಾಗುವುದು.
ಈ ಡೇ ಕೇರ್ ಥೆರಪಿ ಕೇಂದ್ರಗಳಲ್ಲಿ ಅಲ್ಪಾವಧಿ ಉಳಿದುಕೊಂಡು ಚಿಕಿತ್ಸೆ ಪಡೆಯುವ ಪ್ರಕ್ರಿಯೆಯ ನಿಯಮಗಳನ್ನು ಪ್ರಕಟಿಸಲಾಗಿದೆ, ಈ ಯೋಜನೆಯಡಿ ಸಿಜಿಎಚ್ ಎಸ್ ಫಲಾನುಭವಿಗಳು ಒಂದು ದಿನಕ್ಕಿಂತ ಕಡಿಮೆ ಅವಧಿ ಅಂದರೆ ಕೆಲವು ಗಂಟೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಇದರ ಉದ್ದೇಶ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವುದಲ್ಲದೆ, ಆರೋಗ್ಯ ರಕ್ಷಣಾ ವೆಚ್ಚವನ್ನು ತಗ್ಗಿಸುವುದು ಮತ್ತು ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಸುಲಭವಾಗಿ ಪರಿಣಾಮಕಾರಿ ಆರೋಗ್ಯ ಸೇವೆಗಳನ್ನು ಒದಗಿಸುವುದಾಗಿದೆ. ಈ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಪರಿಚಯವಲ್ಲದ ಪರಿಸರದಲ್ಲಿ ರಾತ್ರಿ ವಾಸ್ತವ್ಯಕ್ಕೆ ಅವಕಾಶವಿರುವುದಿಲ್ಲ ಮತ್ತು ಅದು ಮಕ್ಕಳು ಮತ್ತು ವೃದ್ಧ ರೋಗಿಗಳಿಗೆ ಅದು ತುಂಬಾ ಅಸಮಪರ್ಕವಾಗಿರಲಿದೆ. ಆಯುಷ್ ವೈದ್ಯ ಪದ್ದತಿ ಪ್ರಯೋಜನ ದೊರಕಿಸಿಕೊಡುವಲ್ಲಿ ಇದು ಭಾರತ ಸರ್ಕಾರದ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.
ಪ್ರಸ್ತುತ ಅನುಮೋದಿಸಲ್ಪಟ್ಟಿರುವ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಪಂಚಕರ್ಮ ಮತ್ತು ಅಭ್ಯಂಗ ಮತ್ತಿತರ ಚಿಕಿತ್ಸೆಗಳು ಸಿಜಿಎಚ್ ಎಸ್ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ದಾಖಲಾದಾಗ ಮಾತ್ರ ನೀಡಲಾಗುವುದು. ಇದರಲ್ಲಿ ಸಿಜಿಎಚ್ ಎಸ್ ಗೆ ಹೆಚ್ಚುವರಿ ಶುಲ್ಕವಾಗಿ ಒಳಾಂಗಣ ಕೊಠಡಿ ಶುಲ್ಕ ಒಳಗೊಂಡಿದ್ದು, ಅದನ್ನು ಕಾರ್ಯವಿಧಾನ ವೆಚ್ಚ ಮಾತ್ರವಲ್ಲದೆ ಸಿಜಿಎಚ್ಎಸ್ ಪ್ರತ್ಯೇಕವಾಗಿ ಪಾವತಿಸಲಿದೆ. ಡೇ ಕೇರ್ ಕೇಂದ್ರಗಳಿಂದಾಗಿ ಆಸ್ಪತ್ರೆಗಳ ವೆಚ್ಚ ತಗ್ಗುವುದಲ್ಲದೆ, ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
ಆಯುಷ್ ಡೇ ಕೇರ್ ಕೇಂದ್ರಗಳೆಂದರೆ, ಅವುಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್ ಸಿ), ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ ಸಿ) ಡಿಸ್ಪೆನ್ಸರಿ, ಕ್ಲಿನಿಕ್, ಪಾಲಿಕ್ಲಿನಿಕ್ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ನೋಂದಾಯಿಸಲ್ಪಟ್ಟ ಯಾವುದೇ ಕೇಂದ್ರಗಳು ಸೇರಿವೆ. ವೈದ್ಯಕೀಯ ಅಥವಾ ಶಸ್ತ್ರಚಕಿತ್ಸೆ/ಪ್ಯಾರಾ ಶಸ್ತ್ರಚಿಕಿತ್ಸೆಗಳು ಅಥವಾ ಎರಡೂ ಸೇವೆಗಳನ್ನು ನೀಡುವ ಚಿಕಿತ್ಸಾ ಪದ್ದತಿಗಳನ್ನು ನೀಡುವ ಕೇಂದ್ರಗಳಿಗೆ ಅನ್ವಯವಾಗಲಿದ್ದು, ಅವುಗಳ ಮೇಲೆ ನೋಂದಾಯಿತ ಆಯುಷ್ ವೈದ್ಯಕೀಯ ವೃತ್ತಿಪರರ ಮೇಲ್ವಿಚಾರಣೆಯಲ್ಲಿ ನಡೆಯಲಿದ್ದು, ಒಳ ರೋಗಿಯನ್ನು ಸೇವೆಯನ್ನು ಹೊರತುಪಡಿಸಿ ಉಳಿದ ಸೇವೆ ಪಡೆಯಬಹುದು ಮತ್ತು ಅದಕ್ಕಾಗಿ ಈ ಕೆಳಗಿನ ಅಗತ್ಯತೆಗಳನ್ನು ಪೂರೈಸಬೇಕಾಗುತ್ತದೆ.
- ನಿಗದಿತ ವಿದ್ಯಾರ್ಹತೆ ಹೊಂದಿದ ನೋಂದಾಯಿತ ಆಯುಷ್ ವೈದ್ಯ ವೃತ್ತಿಪರರು;
- ನಿರ್ದಿಷ್ಟ ಆಯುಷ್ ಥೆರಪಿ ವಿಭಾಗ ಹೊಂದಿರುವುದು ಅಗತ್ಯ;
- ರೋಗಿಗಳ ಪ್ರತಿದಿನ ವಿವರಗಳನ್ನು ದಾಖಲಿಸಬೇಕು ಮತ್ತು ವಿಮಾ ಕಂಪನಿಯ ಅಧಿಕೃತ ಪ್ರತಿನಿಧಿಗಳಿಗೆ ಆ ದಾಖಲೆಗಳು ಲಭ್ಯವಾಗುವಂತಿರಬೇಕು.
- ಖಾಸಗಿ ಕೇಂದ್ರಗಳಿಗೆ ಎನ್ ಎ ಬಿಎಚ್ ಮಾನ್ಯತೆ ಅಥವಾ ಆರಂಭಿಕ ಹಂತದ ಪ್ರಮಾಣಪತ್ರಗಳನ್ನು ಒಳಗೊಂಡಿರಬೇಕು.
***
(Release ID: 1677687)
Visitor Counter : 293
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Odia
,
Tamil
,
Telugu
,
Malayalam