ಪ್ರಧಾನ ಮಂತ್ರಿಯವರ ಕಛೇರಿ

ನವೆಂಬರ್ 30ರಂದು ವಾರಾಣಸಿಗೆ ಪ್ರಧಾನಿ ಭೇಟಿ


ರಾಷ್ಟ್ರೀಯ ಹೆದ್ದಾರಿ-19 ವಿಭಾಗದ ವಾರಾಣಸಿ - ಪ್ರಯಾಗ್ ರಾಜ್ ಷಟ್ಪಥ ಮಾರ್ಗ ಅಗಲೀಕರಣ ಯೋಜನೆ ಉದ್ಘಾಟನೆ

ದೇವ್ ದೀಪಾವಳಿಯಲ್ಲಿ ಭಾಗಿಯಾಗಲಿರುವ ಪ್ರಧಾನಮಂತ್ರಿ, ಶ್ರೀ ಕಾಶಿ ವಿಶ್ವನಾಥ ದೇವಾಲಯ ಸಮುಚ್ಛಯ ಯೋಜನಾ ಸ್ಥಳಕ್ಕೆ ಭೇಟಿ

Posted On: 28 NOV 2020 8:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020 ನವೆಂಬರ್ 30ರಂದು ವಾರಾಣಸಿಗೆ ಭೇಟಿ ನೀಡಲಿದ್ದು, ರಾಷ್ಟ್ರೀಯ ಹೆದ್ದಾರಿ 19 ವಿಭಾಗದ ಹಾಂಡಿಯಾ (ಪ್ರಯಾಗ್ ರಾಜ್) –ರಜಾ ತಲಾಬ್ (ವಾರಾಣಸಿ) ಷಷ್ಪಥ ರಸ್ತೆ ಅಗಲೀಕರಣ ಯೋಜನೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಪ್ರವಾಸದ ವೇಳೆ ಪ್ರಧಾನಮಂತ್ರಿಯವರು ದೇವ ದೀಪಾವಳಿಯಲ್ಲಿ ಭಾಗಿಯಾಗಲಿದ್ದು, ಕಾಶಿ ವಿಶ್ವನಾಥ ದೇವಾಲಯ ಸಮುಚ್ಛಯದ ಯೋಜನಾ ಸ್ಥಳಕ್ಕೆ ಹಾಗೂ ಸಾರಾನಾಥ್ ಪುರಾತತ್ವ ತಾಣಕ್ಕೂ ಭೇಟಿ ನೀಡಲಿದ್ದಾರೆ

2447 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಅಗಲೀಕರಣ ಮಾಡಲಾಗಿರುವ ರಾ.ಹೆ. 19 ಷಷ್ಪಥ 73 ಕಿ.ಮೀ. ಉದ್ದದ ಮಾರ್ಗವು ಪ್ರಯಾಗ್ ಮತ್ತು ವಾರಾಣಸಿ ನಡುವಿನ ಪ್ರಯಾಣದ ಅವಧಿಯನ್ನು ಒಂದು ಗಂಟೆ ಇಳಿಸಲಿದೆ.

ದೇವ ದೀಪಾವಳಿ ವಿಶ್ವ ವಿಖ್ಯಾತ ಬೆಳಕಿನ ಹಬ್ಬವಾಗಿದ್ದುಕಾರ್ತಿಕ ಮಾಸದ ಪೌರ್ಣಿಮೆಯಂದು ಆಚರಿಸಲಾಗುತ್ತದೆ. ವಾರಣಾಸಿಯ ರಾಜ್ ಘಾಟ್ನಲ್ಲಿ ದೀಪವನ್ನು ಬೆಳಗಿಸುವ ಮೂಲಕ ಪ್ರಧಾನಮಂತ್ರಿ ಉತ್ಸವಕ್ಕೆ ಚಾಲನೆ ನೀಡಲಿದ್ದು, ನಂತರ ಗಂಗಾ ನದಿಯ ಎರಡೂ ತಟಗಳಲ್ಲಿ 11 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು.

ಪ್ರವಾಸದ ವೇಳೆ ಪ್ರಧಾನಮಂತ್ರಿಯವರು ಕಾಶಿ ವಿಶ್ವನಾಥ ದೇವಾಲಯ ಸಮುಚ್ಛಯದ ಯೋಜನಾ ತಾಣಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಪುರಾತತ್ವ ತಾಣ  ಸಾರಾನಾಥದಲ್ಲಿ ಅವರು ಧ್ವನಿ ಬೆಳಕಿನ ಪ್ರದರ್ಶನ ವೀಕ್ಷಿಸಲಿದ್ದಾರೆ. ಇದನ್ನು ತಿಂಗಳ ಆದಿಯಲ್ಲಿ ಅವರು ಉದ್ಘಾಟಿಸಿದ್ದರು.

***


(Release ID: 1676923) Visitor Counter : 188