ಪ್ರಧಾನ ಮಂತ್ರಿಯವರ ಕಛೇರಿ

ಡಿಯಾಗೋ ಮರಡೋನಾ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 26 NOV 2020 9:50AM by PIB Bengaluru

ಡಿಯಾಗೋ ಮರಡೋನಾ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಪ್ರಧಾನಮಂತ್ರಿ ಅವರು ಟ್ವೀಟ್ ಸಂದೇಶದಲ್ಲಿ "ಡಿಯಾಗೋ ಮರಡೋನಾ ಫುಟ್ಬಾಲ್ ಪರಿಣಿತರಾಗಿದ್ದರು, ಜಾಗತಿಕ ಜನಪ್ರಿಯತೆಯನ್ನು ಪಡೆದಿದ್ದರು. ಅವರ ವೃತ್ತಿಜೀವನದುದ್ದಕ್ಕೂ ಅವರು ಫುಟ್ಬಾಲ್ ಮೈದಾನದಲ್ಲಿ ಕೆಲವು ಅತ್ಯಮೂಲ್ಯ ಕ್ರೀಡಾ ಕ್ಷಣಗಳನ್ನು ನಮಗೆ ನೀಡಿದ್ದರು. ಅವರ ಅಕಾಲಿಕ ನಿಧನ ನಮ್ಮೆಲ್ಲರಿಗೂ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ." ಎಂದು ತಿಳಿಸಿದ್ದಾರೆ.

***


(रिलीज़ आईडी: 1675996) आगंतुक पटल : 203
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam