ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಳ: ಪರೀಕ್ಷೆಗಳ ಸಂಖ್ಯೆ 13.5 ಕೋಟಿಯತ್ತ


ಪರೀಕ್ಷಾ ಹೆಚ್ಚಳದಿಂದ ಪಾಸಿಟಿವಿಟಿ ನಿರಂತರ ಇಳಿಕೆ

Posted On: 25 NOV 2020 10:58AM by PIB Bengaluru

ಭಾರತದಲ್ಲಿ 2020 ಜನವರಿಯಿಂದೀಚೆಗೆ ಕೋವಿಡ್-19 ಸೋಂಕು ಪರೀಕ್ಷಾ ಮೂಲಸೌಕರ್ಯ ಗಣನೀಯ ಏರಿಕೆಯಾಗುತ್ತಿರುವ ಪರಿಣಾಮ, ಪರೀಕ್ಷೆಗಳ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡು ಬಂದಿದೆ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,59,032 ಸೋಂಕು ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಒಟ್ಟು ಪರೀಕ್ಷೆಗಳ ಪ್ರಮಾಣ 13.5 ಕೋಟಿ ಸನಿಹಕ್ಕೆ (13,48,41,307) ತಲುಪಿದೆ.

ಸಮಗ್ರ ಮತ್ತು ವ್ಯಾಪಕ ಪರೀಕ್ಷೆಗಳನ್ನು ಸುಸ್ಥಿರ ಆಧಾರದಲ್ಲಿ ನಡೆಸುತ್ತಿರುವ ಕಾರಣ ಪಾಸಿಟಿವಿಟಿ ದರ ಇಳಿಕೆಯಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಪಾಸಿಟಿವಿಟಿ ದರ ಇಳಿಕೆಯಾಗುತ್ತಿದ್ದು, ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗಿದೆ. ಒಟ್ಟು ಪಾಸಿಟಿವಿಟಿ ದರ ಕ್ರಮೇಣ ಇಳಿಕೆಯಾಗುತ್ತಿದೆ ಮತ್ತು ಅದು ಇಂದು ಶೇ.6.84 ತಲುಪಿದೆ.

http://static.pib.gov.in/WriteReadData/userfiles/image/image001QAXJ.jpg

ನಿರಂತರವಾಗಿ ಒಟ್ಟು ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವುದು ದೇಶದಲ್ಲಿ ಪರೀಕ್ಷಾ ಸೌಕರ್ಯವನ್ನು ವ್ಯಾಪಕವಾಗಿ ವೃದ್ಧಿಸಿರುವುಕ್ಕೆ ನಿದರ್ಶನವಾಗಿದೆ.

ಪ್ರತಿದಿನದ ಪಾಸಿಟಿವಿಟಿ ದರ ಇಂದು ಶೇ.3.83ಕ್ಕೆ ತಲುಪಿದೆ.

http://static.pib.gov.in/WriteReadData/userfiles/image/image002WL2U.jpg

ಸುಸ್ಥಿರ ರೀತಿಯಲ್ಲಿ ಮತ್ತು ಪ್ರಗತಿದಾಯಕವಾಗಿ ಕೋವಿಡ್ ಪರೀಕ್ಷಾ ಮೂಲಸೌಕರ್ಯ ವೃದ್ಧಿ ಪರೀಕ್ಷೆಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳದಲ್ಲಿ ಮಹತ್ವದ ಪಾತ್ರ ವಹಿಸಿದೆ. ದೇಶದಲ್ಲಿ ಒಟ್ಟು 2,138 ಪರೀಕ್ಷಾ ಪ್ರಯೋಗಾಲಯಗಳಿದ್ದು, ಅವುಗಳಲ್ಲಿ 1167 ಸರ್ಕಾರಿ ಪ್ರಯೋಗಾಲಯಗಳು ಮತ್ತು 971 ಖಾಸಗಿ ಪ್ರಯೋಗಾಲಯಗಳು ಸೇರಿದ್ದು, ಅವುಗಳಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಉತ್ತೇಜಿಸಲಾಗಿದೆ.

ಅದರ ಪರಿಣಾಮ, ಪ್ರತಿ ಮಿಲಿಯನ್ ಜನಸಂಖ್ಯೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ ) ನಿಗದಿಪಡಿಸಿರುವುದಕ್ಕಿಂತ ಐದು ಪಟ್ಟು ಹೆಚ್ಚು ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

http://static.pib.gov.in/WriteReadData/userfiles/image/image003PIU6.jpg

ಭಾರತದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ (4,44,746), ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಶೇ.4.82ರಷ್ಟು ಇದೆ ಮತ್ತು ನಿರಂತರವಾಗಿ ಪ್ರಮಾಣ ಶೇ.5ಕ್ಕಿಂತ ಕಡಿಮೆ ಇದೆ.

ಚೇತರಿಕೆ ಪ್ರಮಾಣ ಶೇ.93ಕ್ಕೂ ಅಧಿಕ ಮುಂದುವರಿದಿದೆ, ಸದ್ಯ ಅದು ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಶೇ.93.72ರಷ್ಟಿದೆ. ಕಳೆದ 24 ಗಂಟೆಗಳಲ್ಲಿ, ದೇಶದಲ್ಲಿ ಹೊಸದಾಗಿ 37,816 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 86,42,771ಕ್ಕೆ ಏರಿಕೆಯಾಗಿದೆ.

ಗುಣಮುಖವಾಗುತ್ತಿರುವ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ದಿನೇ ದಿನೇ ಹೆಚ್ಚಾಗುತ್ತಿದೆ ಮತ್ತು ಸದ್ಯ ಅದು 81,98,025ರಷ್ಟಿದೆ.

ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಶೇ.77.53ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ಕೇರಳದಲ್ಲಿ ಹೊಸದಾಗಿ ಒಟ್ಟು 5,149 ಸೋಂಕಿತರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೆಹಲಿಯಲ್ಲಿ 4,943 ಸೋಂಕಿತರು ಗುಣಮುಖರಾಗಿದ್ದರೆ, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 4,086 ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದಾರೆ.

http://static.pib.gov.in/WriteReadData/userfiles/image/image0049ZO6.jpg

ಕಳೆದ 24 ಗಂಟೆಗಳಲ್ಲಿ 44,376 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಹೊಸ ಪ್ರಕರಣಗಳಲ್ಲಿ ಶೇ.76.51ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ ಸಂಬಂಧಿಸಿದವು. ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ 6,224 ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರದಲ್ಲಿ  5,439 ಹೊಸ ಪ್ರಕರಣಗಳು ಮತ್ತು ಕೇರಳದಲ್ಲಿ 5,420 ಪ್ರಕರಣಗಳು ನಿನ್ನೆ ದಾಖಲಾಗಿವೆ.

http://static.pib.gov.in/WriteReadData/userfiles/image/image005JQFK.jpg

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 481 ಸೋಂಕಿತರು ಮೃತಪಟ್ಟಿದ್ದು, ಪೈಕಿ ಶೇ.74.22ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ದೆಹಲಿಯಲ್ಲಿ ಅಧಿಕ ಸಂಖ್ಯೆಯ ಸೋಂಕಿತರ ಸಾವು 109 ಸಂಭವಿಸಿವೆ. ಪಶ್ಚಿಮ ಬಂಗಾಳದಲ್ಲಿ 49 ಮತ್ತು ಆನಂತರ ಉತ್ತರ ಪ್ರದೇಶದಲ್ಲಿ 33 ಸೋಂಕಿತರು ಸಾವನಪ್ಪಿದ್ದಾರೆ.

http://static.pib.gov.in/WriteReadData/userfiles/image/image0062PLN.jpg

***


(Release ID: 1675642) Visitor Counter : 222