ಪ್ರಧಾನ ಮಂತ್ರಿಯವರ ಕಛೇರಿ

ಪಂಡಿತ್ ದೀನದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ 8 ನೇ ಘಟಿಕೋತ್ಸವದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

Posted On: 21 NOV 2020 4:20PM by PIB Bengaluru

ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ ರೂಪಾನಿ ಜೀ, ಪಂಡಿತ್ ದೀನದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾದ ಶ್ರೀ ಮುಖೇಶ್ ಅಂಬಾನಿ ಜೀ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀ ಡಿ.ರಾಜಗೋಪಾಲನ್ ಜೀ, ಮಹಾ ನಿರ್ದೇಶಕ ಪ್ರೊ. ಎಸ್. ಸುಂದರ್ ಮನೋಹರನ್ ಜೀ, ಬೋಧಕ ಸದಸ್ಯರೇ, ಪೋಷಕರೇ ಮತ್ತು ನನ್ನೆಲ್ಲಾ ಕಿರಿಯ ಸ್ನೇಹಿತರೇ !

ಪಂಡಿತ್ ದೀನದಯಾಳ್ ಉಪಾಧ್ಯಾಯ ಪೆಟ್ರೋಲಿಯಂ ವಿಶ್ವವಿದ್ಯಾಲಯದ 8 ನೇ ಘಟಿಕೋತ್ಸವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಬಹಳ ಬಹಳ ಅಭಿನಂದನೆಗಳು. ಇಂದು ಪದವೀಧರರಾಗುತ್ತಿರುವ ಸ್ನೇಹಿತರಿಗೆ ಮತ್ತು ಅವರ ಪೋಷಕರಿಗೆ ಬಹಳ ಬಹಳ ಶುಭ ಹಾರೈಕೆಗಳು. ಇಂದು ದೇಶವು ಕೈಗಾರಿಕಾ ಆವಶ್ಯಕತೆಗಳಿಗೆ ಪೂರಕವಾಗುವಂತೆ ಸಿದ್ದಗೊಂಡಿರುವ ನಿಮ್ಮಂತಹ ಪದವೀಧರರನ್ನು ಪಡೆಯುತ್ತಿದೆ. ಮತ್ತು ವಿಶ್ವವಿದ್ಯಾಲಯದಿಂದ ನೀವು ಏನು ಕಲಿತಿದ್ದೀರೋ ಪ್ರಯತ್ನಗಳಿಗಾಗಿ ನಿಮಗೆ ಶುಭ ಹಾರೈಕೆಗಳು . ದೇಶ ನಿರ್ಮಾಣದ ದೊಡ್ಡ ಗುರಿಯೊಂದಿಗೆ ನೀವಿಲ್ಲಿಂದ  ಆರಂಭಿಸುತ್ತಿರುವ ಹೊಸ ಪ್ರಯಾಣಕ್ಕಾಗಿ ಶುಭ ಹಾರೈಕೆಗಳು.

ನೀವು ನಿಮ್ಮ ಕೌಶಲ್ಯಗಳೊಂದಿಗೆ , ಪ್ರತಿಭೆ ಮತ್ತು ವೃತ್ತಿಪರತೆಯೊಂದಿಗೆ ಸ್ವಾವಲಂಬಿ ಭಾರತದ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತೀರೆಂಬ ವಿಶ್ವಾಸ ನನಗಿದೆ. ಇಂದು ಪಿ.ಡಿ.ಪಿ.ಯು.ಗೆ ಸಂಬಂಧಿಸಿದಂತೆ ಉದ್ಘಾಟನೆ ಮತ್ತು ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮಗಳು ನಡೆದಿವೆ. ಸೌಲಭ್ಯಗಳು ಪಿ.ಡಿ.ಪಿ.ಯು.ವನ್ನು ವೃತ್ತಿಪರ ಶಿಕ್ಷಣದ, ಕೌಶಲ್ಯಾಭಿವೃದ್ಧಿ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯ ಹಾಗು ದೇಶದ ಇಂಧನ ವಲಯದಲ್ಲಿ ಪ್ರಮುಖ ಕೇಂದ್ರವನ್ನಾಗಿಸಲಿವೆ.

ಸ್ನೇಹಿತರೇ,

ವಿಶ್ವವಿದ್ಯಾಲಯದ ಯೋಜನೆಗಳ ಜೊತೆ ನಾನು ಆರಂಭ್ದ ದಿನಗಳಿಂದಲೂ ಸಂಪರ್ಕ ಹೊಂದಿದ್ದೇನೆ. ಮತ್ತು ಅದರಿಂದಾಗಿ ನಾನು ಪಿ.ಡಿ.ಪಿ.ಯು. ತನ್ನದೇ ಗುರುತಿಸುವಿಕೆಯನ್ನು ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವವ್ಯಾಪ್ತಿಯಲ್ಲಿ ಸೃಜಿಸಿಕೊಂಡಿರುವುದು ನನಗೆ ಸಂತೋಷವನ್ನು ತಂದಿದೆ. ನಾನು ಇಂದು ಇಲ್ಲಿಗೆ ಮುಖ್ಯ ಅತಿಥಿಯಾಗಿ ಬಂದಿಲ್ಲ, ಆದರೆ ನಿಮ್ಮ ಶ್ರೇಷ್ಟ ನಿರ್ಧಾರಕ  ಕುಟುಂಬದ ಸದಸ್ಯನಾಗಿ ಬಂದಿದ್ದೇನೆ

ವಿಶ್ವವಿದ್ಯಾಲಯವು ತನ್ನ ಕಾಲಕ್ಕಿಂತ ಬಹಳ ಮುಂದಿರುವುದನ್ನು ನೋಡಲು ನನಗೆ ಬಹಳ ಹೆಮ್ಮೆ ಇದೆ. ಮಾದರಿಯ ವಿಶ್ವವಿದ್ಯಾಲಯ ಹೇಗೆ ಮುಂದೆ ಸಾಗುತ್ತದೆ ಎಂದು ಜನತೆ ಪ್ರಶ್ನಿಸುತ್ತಿದ್ದ ಕಾಲವೊಂದಿತ್ತು.ಆದರೆ ವಿದ್ಯಾರ್ಥಿಗಳು, ಬೋಧಕ ವರ್ಗ, ಇಲ್ಲಿ ಉತ್ತೀರ್ಣರಾಗಿ ತೆರಳಿದ ವೃತ್ತಿಪರರು ಅವರ ಬದ್ಧತೆಯ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಕಳೆದ ಒಂದೂವರೆ ದಶಕದಲ್ಲಿ , ಪಿ.ಡಿ.ಪಿ.ಯು. ಹಲವು ಕ್ಷೇತ್ರಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡಿದೆ. ಇಂಧನ ವಲಯ, ಪೆಟ್ರೋಲಿಯಂ ವಲಯಗಳು ಇದರಲ್ಲಿ ಸೇರಿವೆ. ಯೋಜನೆ ಬಗ್ಗೆ ಕಾಲದಲ್ಲಿ ನಾನು ಯೋಚಿಸುತ್ತಿದ್ದಾಗ , ಗುಜರಾತ್ ಪೆಟ್ರೋಲಿಯಂ ವಲಯದಲ್ಲಿ ಮುಂದುವರಿಯಬೇಕು ಎಂಬ ಬಯಕೆಯಿಂದ ನಾನು ಪೆಟ್ರೋಲಿಯಂ ವಿಶ್ವವಿದ್ಯಾಲಯದ ಬಗ್ಗೆ ಮನಸ್ಸಿನಲ್ಲಿಟ್ಟುಕೊಂಡಿದ್ದೆ. ಇಂದು ಪಿ.ಡಿ.ಪಿ.ಯು. ಪ್ರಗತಿ ನೋಡಿ, ನಾನು ಗುಜರಾತ್ ಸರಕಾರವನ್ನು ಕಾನೂನು ತಿದ್ದುಪಡಿ ಮಾಡುವ ಮೂಲಕ ಪೆಟ್ರೋಲಿಯಂ ವಿಶ್ವವಿದ್ಯಾಲಯವನ್ನು ಇಂಧನ ವಿಶ್ವವಿದ್ಯಾಲಯವನ್ನಾಗಿ ಮರು ನಾಮಕರಣ ಮಾಡಬೇಕು ಎಂದು ಕೋರುತ್ತೇನೆ. ದೇಶದ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಜಗತ್ತಿನ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಅದರ ವ್ಯಾಪ್ತಿ ಬಹಳ ವಿಸ್ತಾರವಾಗಲಿರುವುದರಿಂದ ಮನವಿಯನ್ನು ಮಾಡುತ್ತಿದ್ದೇನೆ. ಇಷ್ಟೊಂದು ಸಣ್ಣ ಅವಧಿಯಲ್ಲಿ ನೀವು ಏನನ್ನು ಸಾಧಿಸಿದ್ದೀರೋ, ನೀವು ದೇಶಕ್ಕೆ ಏನನ್ನು ಕೊಟ್ಟಿದ್ದೀರೋ,ಬಹುಷ: ಇಂಧನ ವಿಶ್ವವಿದ್ಯಾಲಯವಾಗಿ ವಿಸ್ತರಿಸುವುದರಿಂದ ದೇಶಕ್ಕೆ ಬಹಳ ಲಾಭವಾಗಲಿದೆ. ಪೆಟ್ರೋಲಿಯಂ ವಿಶ್ವವಿದ್ಯಾಲಯದ ಕಲ್ಪನೆ ನನ್ನದಾಗಿತ್ತು, ಈಗ ನಾನು ನನ್ನ ಕಲ್ಪನೆಯನ್ನು ಇನ್ನಷ್ಟು ವಿಸ್ತರಿಸಲು ಇಚ್ಚಿಸುತ್ತೇನೆ ಮತ್ತು ಇದನ್ನು ಪೆಟ್ರೋಲಿಯಂ ಬದಲಿಗೆ ಇಡೀ ಇಂಧನ ವಲಯಕ್ಕೆ ಸಂಪರ್ಕಿಸಲು ನಾನು ನಿಮ್ಮನ್ನು ಕೋರುತ್ತೇನೆ. ನೀವು ಇದರ ಬಗ್ಗೆ ಆಲೋಚನೆ ಮಾಡಿ ಮತ್ತು ನೀವು ನನ್ನ ಸಲಹೆಯನ್ನು ಮೆಚ್ಚುವುದಾದರೆ ಏನನ್ನು ಮಾಡಬಹುದು ಎಂಬುದರ ಬಗ್ಗೆ ಯೋಚನೆ ಮಾಡಿ.

45 ಮೆಗಾವ್ಯಾಟ್ ಸೌರ ಫಲಕ ಉತ್ಪಾದನಾ ಘಟಕ ಸ್ಥಾಪನೆ, ಅಥವಾ ಜಲ ತಂತ್ರಜ್ಞಾನ ಕುರಿತ ಪ್ರಾವೀಣ್ಯತಾ ಕೇಂದ್ರ ಸ್ಥಾಪನೆಗಳು ದೇಶಕ್ಕಾಗಿ ಪಿ.ಡಿ.ಪಿ.ಯು. ವಿನ ವಿಸ್ತಾರ ಚಿಂತನೆಯನ್ನು ಪ್ರತಿಫಲಿಸುತ್ತವೆ.

ಸ್ನೇಹಿತರೇ,

ಜಾಗತಿಕ ಸಾಂಕ್ರಾಮಿಕದ ಕಾರಣದಿಂದಾಗಿ ವಿಶ್ವದಾದ್ಯಂತ ಇಂಧನ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತಿರುವ ಕಾಲಘಟ್ಟದಲ್ಲಿ ನೀವು ಉದ್ಯಮ ವಲಯವನ್ನು ಪ್ರವೇಶಿಸುತ್ತಿದ್ದೀರಿ. ಆದುದರಿಂದ ಅಲ್ಲಿ ಬೆಳವಣಿಗೆಗೆ ಬಹಳಷ್ಟು ಅವಕಾಶಗಳಿವೆ. ಉದ್ಯಮ ಸ್ಪೂರ್ತಿ ಮತ್ತು ಭಾರತದಲ್ಲಿ ಇಂಧನ ವಲಯದಲ್ಲಿ ಉದ್ಯೋಗಾವಕಾಶಗಳಿಗೆ ಸಾಕಷ್ಟು ಅವಕಾಶಗಳಿವೆ. ರೀತಿಯಲ್ಲಿ ನೀವು ಸಕಾಲದಲ್ಲಿ ಸರಿಯಾದ ವಲಯಕ್ಕೆ ಬಂದಿದ್ದೀರಿ. ದಶಕವೊಂದರಲ್ಲಿಯೇ ತೈಲ ಮತ್ತು ಅನಿಲ ವಲಯದಲ್ಲಿ ಬಿಲಿಯಾಂತರ ರೂಪಾಯಿಗಳು ಹೂಡಿಕೆಯಾಗಲಿವೆ. ಆದುದರಿಂದ , ಸಂಶೋಧನೆಯಿಂದ ಹಿಡಿದು ಉತ್ಪಾದನೆಯವರೆಗೆ ಅಲ್ಲಿ ನಿಮಗೆ  ಸಂಖ್ಯಾತೀತ ಅವಕಾಶಗಳಿವೆ.

ಸ್ನೇಹಿತರೇ,

ಇಂದು ದೇಶವು ತನ್ನ  ಕಾರ್ಬನ್ ಫೂಟ್ ಪ್ರಿಂಟನ್ನು 30-35 % ಕಡಿಮೆ ಮಾಡುವ ಗುರಿಯ ನಿಟ್ಟಿನಲ್ಲಿ ಮುಂದಡಿ ಇಡುತ್ತಿದೆ. ನಾನು ಮೊದಲು ಪ್ರಸ್ತಾಪವನ್ನು ಮಂಡಿಸಿದಾಗ ಭಾರತವು ಇದನ್ನು ಸಾಧಿಸಬಲ್ಲುದೇ ಎಂಬ ಬಗ್ಗೆ ವಿಶ್ವವು ಅಚ್ಚರಿಯನ್ನು ವ್ಯಕ್ತಪಡಿಸಿತ್ತು. ನಾವು ದಶಕದಲ್ಲಿ ನಮ್ಮ ಇಂಧನ ಆವಶ್ಯಕತೆಯಲ್ಲಿ ನೈಸರ್ಗಿಕ ಇಂಧನದ ಪಾಲನ್ನು ನಾಲ್ಕು ಪಟ್ಟು ಹೆಚ್ಚಿಸುವ ಆಶಯವನ್ನು ಹೊಂದಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ತೈಲ ಶುದ್ದೀಕರಣ ಸಾಮರ್ಥ್ಯ ಬಹುತೇಕ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಕೆಲಸ ಸಾಗುತ್ತಿದೆ. ಅಲ್ಲಿ ನಿಮಗೂ ಬಹಳಷ್ಟು ಅವಕಾಶಗಳಿವೆ. ಇಂತಹ ಭದ್ರತೆಗೆ ಸಂಬಂಧಿಸಿದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಯೋಜನೆಗಳು ಸಾಗುತ್ತಿವೆ. ನಿಮ್ಮಂತಹ ವೃತ್ತಿಪರರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ವಿಶೇಷ ನಿಧಿಯನ್ನು ಸ್ಥಾಪಿಸಲಾಗುತ್ತಿದೆ. ನಿಮ್ಮಲ್ಲಿ ಯಾವುದಾದರೂ ಯೋಜನೆ ಇದ್ದರೆ , ನೀವು ಉತ್ಪಾದನೆ ಮಾಡಲು ಅಥವಾ ನಿಮ್ಮ ಚಿಂತನೆಯನ್ನು ಅನುಷ್ಟಾನಿಸಲು ಉದ್ದೇಶಿಸಿದ್ದರೆ ನಿಧಿಯು ಬಹಳ ಉತ್ತಮ ಅವಕಾಶ ಮತ್ತು ಇದು ಸರಕಾರದಿಂದ ಉಡುಗೊರೆ ಕೂಡಾ.

ನಾನು ನಿಮ್ಮೊಂದಿಗೆ ಮಾತನಾಡುತ್ತಿರುವಾಗ , ನಿಮ್ಮಲ್ಲಿ ಕೆಲವು ಚಿಂತೆಗಳಿರಬಹುದು ಎಂಬುದರ ಬಗ್ಗೆಯೂ ನನಗೆ ಅರಿವಿದೆ. ಕೊರೊನಾ ಯಾವಾಗ ಕೊನೆಗೊಳ್ಳಬಹುದು, ಯಾವಾಗ ಸಹಜತೆ ನೆಲೆಸಬಹುದು  ಎಂಬ ಬಗ್ಗೆ ನೀವು ಚಿಂತಿಸುತ್ತಿರಬಹುದು. ಇವು ಸಹಜ ಕಳವಳಗಳು. ವಿಶ್ವವು ಇಂತಹ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಸಮಯದಲ್ಲಿ ಪದವೀಧರರಾಗುವುದು ಸಾಮಾನ್ಯ ಸಂಗತಿ ಅಲ್ಲ. ಆದರೆ ನೆನಪಿಡಿ, ನಿಮ್ಮ ಬಲ, ನಿಮ್ಮ ಸಾಮರ್ಥ್ಯಗಳು ಸವಾಲುಗಳಿಗಿಂತ ಬಹಳ ದೊಡ್ಡವು. ವಿಶ್ವಾಸ, ಭರವಸೆಯನ್ನು ಎಂದೂ ಕಳೆದುಕೊಳ್ಳಬೇಡಿ.

ಸಮಸ್ಯೆಗಳಿಗಿಂತ ಬಹಳ ಮುಖ್ಯವಾದುದು ನಿಮ್ಮ ಉದ್ದೇಶ ಏನು ಎಂಬುದು, ನಿಮ್ಮ ಆದ್ಯತೆಗಳೇನು ಎಂಬುದು ಮತ್ತು ನಿಮ್ಮ ಯೋಜನೆ ಏನು ಎಂಬುದು ?. ಆದುದರಿಂದ ನೀವು ಉದ್ದೇಶವನ್ನು ಹೊಂದಿರಬೇಕು, ನಿಮ್ಮ ಆದ್ಯತೆಗಳು ನಿರ್ಧರಿಸಲ್ಪಟ್ಟಿರಬೇಕು ಮತ್ತು ಅವುಗಳಿಗಾಗಿ ಅಲ್ಲಿ ಸ್ಪಷ್ಟವಾದ ಯೋಜನೆ ಇರಬೇಕು. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನೂ ಅಲ್ಲ. ಮತ್ತು ಇದು ನಿಮ್ಮ ಎದುರಿನ ಕೊನೆಯ ಸವಾಲೂ ಅಲ್ಲ. ಯಶಸ್ವೀ ವ್ಯಕ್ತಿಗಳು ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದಿಲ್ಲ. ಮತ್ತು ಸವಾಲುಗಳನ್ನು ಅಂಗೀಕರಿಸುವ ,ಅವುಗಳನ್ನು ಎದುರಿಸುವ, ಅವುಗಳನ್ನು ಸೋಲಿಸುವ ಮತ್ತು ಸವಾಲುಗಳಿಗೆ ಪರಿಹಾರಗಳನ್ನು ಕಂಡು ಹುಡುಕುವ ಜನರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಯಾವುದೇ ಯಶಸ್ವೀ ವ್ಯಕ್ತಿಗಳನ್ನು ನೋಡಿ, ಅವರು ಸವಾಲುಗಳನ್ನು ಎದುರಿಸಿದ ಬಳಿಕವೇ ಪ್ರಗತಿಯನ್ನು ಸಾಧಿಸಿರುತ್ತಾರೆ.

ಸ್ನೇಹಿತರೇ,

ನೀವು ನೂರು ವರ್ಷ ಹಿಂದಿನ ಅವಧಿಯನ್ನು ನೆನಪಿಸಿಕೊಂಡರೆ , ಮತ್ತು ನಾನು ನನ್ನ ದೇಶದ ಯುವ ಜನತೆ ನೂರು ವರ್ಷಗಳ ಹಿಂದಿನ ಅವಧಿಯ ಬಗ್ಗೆ ಚಿಂತಿಸಬೇಕು ಎಂದು ಇಚ್ಚಿಸುತ್ತೇನೆ. ಇಂದು ನಾವು 2020 ರಲ್ಲಿದ್ದೇವೆ. 1920 ರಲ್ಲಿ ನಿಮ್ಮ ವಯಸ್ಸಿನ ಓರ್ವ ವ್ಯಕ್ತಿಯನ್ನು ಕಲ್ಪಿಸಿಕೊಳ್ಳಿ, ಆತನ ಕನಸುಗಳೇನಿದ್ದವು ?. 1920 ರಲ್ಲಿ ನಿಮ್ಮ ವಯಸ್ಸಿನವರ ಮನೋಸ್ಥಿತಿ ಮತ್ತು ಅವರ ಹವ್ಯಾಸಗಳೇನಿದ್ದಿತು ?. 100 ವರ್ಷ ಹಿಂದಿನ ಇತಿಹಾಸವನ್ನು ನೆನಪಿಸಿಕೊಳ್ಳಿ. 1920ರಲ್ಲಿ ಆರಂಭವಾಗುವ ಅವಧಿ ದೇಶದ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಬಹಳ ಮಹತ್ವದ ಕಾಲಘಟ್ಟವಾಗಿತ್ತು.

ಗುಲಾಮಗಿರಿಯ ಅವಧಿಯಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯದ ವರ್ಷವೇ ಇರಲಿಲ್ಲ. 1857 ಸ್ವಾತಂತ್ರ್ಯ ಹೋರಾಟ ತಿರುವು ನೀಡಿದ ಘಟನೆಯಾಯಿತು. ಆದರೆ 1920 ಮತ್ತು 1947 ನಡುವಿನ ಅವಧಿ ಬಹಳ ಭಿನ್ನವಾಗಿತ್ತು. ಅವಧಿಯಲ್ಲಿ ದೇಶದ ವಿವಿಧ ಮೂಲೆಗಳಿಂದ , ಪ್ರತಿಯೊಂದು ಕ್ಷೇತ್ರಗಳಿಂದ, ವಿವಿಧ ವರ್ಗಗಳಿಂದ , ಇಡೀ ದೇಶದ ಮಕ್ಕಳು ಮತ್ತು ಗ್ರಾಮಗಳು, ಪಟ್ಟಣಗಳಿಂದ ಸಹಿತ , ಶಿಕ್ಷಿತರು, ಶ್ರೀಮಂತರು ಮತ್ತು ಬಡವರು ಸಹಿತ ಎಲ್ಲರೂ ಸ್ವಾತಂತ್ರ್ಯ ಹೋರಾಟದ ಸೈನಿಕರಾದರು. ಜನರು ಒಗ್ಗಟ್ಟಾದರು. ಅವರು ತಮ್ಮ ಕನಸುಗಳನ್ನು ತ್ಯಾಗ ಮಾಡಿ, ಸ್ವಾತಂತ್ರ್ಯದ ನಿರ್ಧಾರ ಮಾಡಿದರು. 1920 ರಿಂದ 1947 ನಡುವಿನ ಯುವ ತಲೆಮಾರು ಪ್ರತಿಯೊಂದನ್ನೂ ತ್ಯಾಗ ಮಾಡಿತು. ಇಂದು ನಾವು ಹಲವು ಸಂದರ್ಭಗಳಲ್ಲಿ ಯುವ ತಲೆಮಾರಿನ ಬಗ್ಗೆ ಅಸೂಯೆ ಪಡುತ್ತೇವೆ. ನಾವು ಕೂಡಾ ಅವಧಿಯಲ್ಲಿ ಜನಿಸಬಹುದಿತ್ತು ಎಂದುಕೊಳ್ಳುತ್ತೇವೆ. ನಾನು ದೇಶದ ಭಗತ್ ಸಿಂಗ್ ಆಗಬಹುದಿತ್ತು. ಆದರೆ ಸ್ನೇಹಿತರೇ, ನಮಗೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ. ಇಂದು ನಮಗೆ ದೇಶಕ್ಕಾಗಿ ಬದುಕುವ ಅವಕಾಶ ಲಭ್ಯವಾಗಿದೆ.

ಕಾಲದಲ್ಲಿ ಯುವಕರು , ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ ಒಂದೇ ಒಂದು ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಉದ್ದೇಶ ಏನಿತ್ತು ?. ಭಾರತದ ಸ್ವಾತಂತ್ರ್ಯವೇ ಉದ್ದೇಶವಾಗಿತ್ತು. ತಾಯಿ ಭಾರತಿಯನ್ನು ಗುಲಾಮಗಿರಿಯಿಂದ ವಿಮೋಚನೆ ಮಾಡುವುದು ಏಕೈಕ ಉದ್ದೇಶವಾಗಿತ್ತು. ಅಲ್ಲಿ ವಿವಿಧ ಚಿಂತನೆಯ ಜನರಿದ್ದರು, ಆದರೆ ಪ್ರತಿಯೊಬ್ಬರೂ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದರು. ಮತ್ತು ದಿಕ್ಕು ತಾಯಿ ಭಾರತಿಯ ಸ್ವಾತಂತ್ರ್ಯವಾಗಿತ್ತು. ಮಹಾತ್ಮಾ ಗಾಂಧಿ ಅವರ ನಾಯಕತ್ವವಿರಲಿ, ಸುಭಾಷ್ ಬಾಬು, ಭಗತ್ ಸಿಂಗ್, ಸುಖ್ ದೇವ್, , ರಾಜಗುರು, ವೀರ ಸಾವರ್ಕರ್ ನಾಯಕತ್ವವಿರಲಿ, ಭಿನ್ನ ಭಿನ್ನ ಚಿಂತನೆಯ ಪ್ರತಿಯೊಬ್ಬರೂ ವಿವಿಧ ಹಾದಿಗಳಲ್ಲಿ ತಾಯಿ ಭಾರತಿಯ ಸ್ವಾತಂತ್ರ್ಯದ ಏಕೈಕ ಉದ್ದೇಶದೊಂದಿಗೆ ಸಾಗುತ್ತಿದ್ದರು.

ಕಾಶ್ಮೀರದಿಂದ ಕಾಲಾಪಾನಿಯವರೆಗೆಜೈಲಿನ ಕೋಣೆಯಿಂದ ಹಿಡಿದು ನೇಣುಗಂಭದವರೆಗೆ ಏಕೈಕ ಧ್ವನಿ ಕೇಳಿ ಬರುತ್ತಿತ್ತು, ಗೋಡೆಗಳು ಅವುಗಳನ್ನು  ಪ್ರತಿಧ್ವನಿಸುತ್ತಿದ್ದವು. ನೇಣುಗಂಭದ ಹಗ್ಗಗಳು ಒಂದೇ ಒಂದು ಘೋಷಣೆಯನ್ನು ಅನುರಣಿಸುತ್ತಿದ್ದವು. ಮತ್ತು ನಿರ್ಧಾರ ಭಾರತ ಮಾತೆಗೆ  ಸ್ವಾತಂತ್ರ್ಯ ದೊರೆಯಬೇಕು ಎಂಬುದಾಗಿತ್ತು.

ನನ್ನ ಯುವ ಮಿತ್ರರೇ,

ನಾವು ಕಾಲದಲ್ಲಿ ಇರಲಿಲ್ಲ. ಆದರೆ ಇಂದೂ ಕೂಡಾ, ತಾಯ್ನಾಡಿನ ಸೇವೆಯ ಅವಕಾಶ ಅದೇ ಆಗಿದೆ. ಆಗಿನ ಯುವಕರು ತಮ್ಮ ಯೌವನವನ್ನು ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದರೆ, ನಾವು ಸ್ವಾವಲಂಬಿ ಭಾರತಕ್ಕಾಗಿ ಬದುಕುವುದನ್ನು ಕಲಿಯಬಹುದಾಗಿದೆ. ಮತ್ತು ನಾವಿದನ್ನು ಇನ್ನೂ ಚೆನ್ನಾಗಿ ಅಳವಡಿಸಿಕೊಂಡು ತೋರಿಸಬಹುದಾಗಿದೆ. ಇಂದು ನಾವು ಸ್ವಾವಲಂಬಿ ಭಾರತದ ಚಳವಳಿಯ ಭಾಗವಾಗಬೇಕು, ಚಳವಳಿಯ ಸೈನಿಕರಾಗಿ ಅದನ್ನು ಮುನ್ನಡೆಸಬೇಕು. ಇದು ಪ್ರತಿಯೊಬ್ಬ ಭಾರತೀಯರಿಂದಲೂ ನನ್ನ ಅಪೇಕ್ಷೆಯಾಗಿದೆ. ಮತ್ತು ನಿರ್ದಿಷ್ಟವಾಗಿ ಯುವ ಸ್ನೇಹಿತರು ಇದರಲ್ಲಿ ಕೈಜೋಡಿಸಬೇಕು , ಸ್ವಾವಲಂಬಿ ಭಾರತಕ್ಕೆ  ನಾವು ಒತ್ತಡ ಹಾಕಬೇಕು.

ಕಾಲದ ಭಾರತ ಬದಲಾವಣೆಯ ಪ್ರಮುಖ ಕಾಲಘಟ್ಟವನ್ನು ಹಾದು ಹೋಗುತ್ತಿದೆ. ನಿಮ್ಮೆದುರು ವರ್ತಮಾನದ ಭಾರತವನ್ನು ಕಟ್ಟುವ ಜವಾಬ್ದಾರಿಯ ಜೊತೆ ಭವಿಷ್ಯದ ಭಾರತವನ್ನು ಕಟ್ಟುವ ಬೃಹತ್ ಜವಾಬ್ದಾರಿಯೂ ಇದೆ. ಕಲ್ಪಿಸಿಕೊಳ್ಳಿ ನೀವು ಇಂತಹ ಸುವರ್ಣ ಸಂದರ್ಭದಲ್ಲಿದ್ದೀರಿ. ಭಾರತವು 2022 ರಲ್ಲಿ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಲಿದೆ ಮತ್ತು 2047 ರಲ್ಲಿ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸುತ್ತದೆ. ನಿಮ್ಮ ಬದುಕಿನ 25 ವರ್ಷಗಳು ಬಹಳ ಮುಖ್ಯವಾದವು ಎಂದು ನೀವು ಕಲ್ಪಿಸಿಕೊಂಡಿರಲಾರಿರಿ. ದೇಶದ ಬಹಳ ಮಹತ್ವದ 25 ವರ್ಷಗಳು ಮತ್ತು ನಿಮ್ಮ ಬದುಕಿನ ಮಹತ್ವದ 25 ವರ್ಷಗಳು ಜೊತೆ ಜೊತೆಯಲ್ಲಿವೆ. ನಿಮ್ಮಷ್ಟು ಅದೃಷ್ಟವಂತರು ಬಹಳ ಮಂದಿ ಇರಲಾರರು.

ನೀವು ನೋಡಿ, ಬದುಕಿನಲ್ಲಿ ಯಶಸ್ವಿಯಾದ ವ್ಯಕ್ತಿಗಳು ಜವಾಬ್ದಾರಿಯ ಅರಿವಿದ್ದವರು. ಜವಾಬ್ದಾರಿಯ ಸಂವೇದನೆ ಅಥವಾ ಅರಿವು ಯಶಸ್ಸಿಗೆ ಅತ್ಯಂತ ದೊಡ್ಡ ಹಾದಿ. ಮತ್ತು ನೀವು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ , ನೀವು ಕಂಡು ಕೊಳ್ಳುತ್ತೀರಿ- ನಿಮ್ಮ ಸ್ನೇಹಿತರು ಜವಾಬ್ದಾರಿಗಳನ್ನು ಹೊರೆ ಎಂದು ಭಾವಿಸಿದವರು ಮತ್ತು  ಅಂತಹ ವ್ಯಕ್ತಿಗಳು ವಿಫಲರಾಗಿರುತ್ತಾರೆ.

ನೋಡಿ ಸ್ನೇಹಿತರೇ, ಜವಾಬ್ದಾರಿಯ ಅರಿವು, ಭಾವನೆ  ವ್ಯಕ್ತಿಯ ಜೀವನದಲ್ಲಿ ಅವಕಾಶಗಳ ಅರಿವನ್ನು ಮೂಡಿಸುತ್ತದೆ. ಹಾದಿಯಲ್ಲಿ ಬರುವ, ಎದುರಾಗುವ ಅಡ್ಡಿ ಆತಂಕಗಳನ್ನು ವ್ಯಕ್ತಿ ಅಡ್ಡಿ ಎಂದು ಪರಿಗಣಿಸದೆ ಅವುಗಳನ್ನು  ಅವಕಾಶ ಎಂದು ಪರಿಗಣಿಸುತ್ತಾರೆ. ಓರ್ವ ವ್ಯಕ್ತಿಯ ಜವಾಬ್ದಾರಿಯ ಭಾವನೆಯು ಆತನ ಜೀವನದ ಉದ್ದೇಶಕ್ಕೆ ಸಂವಾದಿಯಾಗಿರುತ್ತದೆ. ಅಲ್ಲಿ ಯಾವುದೇ ವೈರುಧ್ಯತೆ ಇರಬಾರದು. ಇವೆರಡರ ನಡುವೆ ಅಲ್ಲಿ ಹೋರಾಟ ಇರಬಾರದು. ಜವಾಬ್ದಾರಿಯ ಭಾವನೆ ಮತ್ತು ಜೀವನದ ಉದ್ದೇಶಗಳು ನಿಮ್ಮ ನಿರ್ಧಾರಗಳು ತ್ವರಿತಗತಿಯಿಂದ ಸಾಗಬೇಕಾದ ಎರಡು ಹಳಿಗಳು.

ಜವಾಬ್ದಾರಿಯ ಭಾವನೆಯನ್ನು ನಿಮ್ಮೊಳಗೆ ಸದಾ ಜೀವಂತವಾಗಿ ಇಟ್ಟುಕೊಳ್ಳಬೇಕು ಎಂಬುದು ನಿಮ್ಮಲ್ಲಿ ನನ್ನ ಕೋರಿಕೆಯಾಗಿದೆ. ಜವಾಬ್ದಾರಿಯ ಭಾವನೆ ದೇಶಕ್ಕಾಗಿ ಇರಬೇಕು, ದೇಶದ ಆವಶ್ಯಕತೆಗಳಿಗಾಗಿ ಸ್ಪಂದಿಸುತ್ತಿರುವಂತಿರಬೇಕು. ಇಂದು ದೇಶವು ಹಲವು ವಲಯಗಳಲ್ಲಿ ಮುಂದುವರೆಯುತ್ತಿದೆ.

ಸ್ನೇಹಿತರೇ,

ಆಶಯದ ರಾಶಿಯಲ್ಲಿ ನಿರ್ಧಾರದ ಶಕ್ತಿ ಬಹಳ ಪ್ರಾಮುಖ್ಯತೆಯನ್ನು  ಹೊಂದಿರುತ್ತದೆ. ದೇಶಕ್ಕಾಗಿ ಮಾಡುವುದಕ್ಕೆ ಬಹಳಷ್ಟಿದೆ, ಅದೇ ರೀತಿ ಪಡೆಯುವುದಕ್ಕೂ ಬಹಳಷ್ಟಿದೆ, ಆದರೆ ನಿಮ್ಮ ನಿರ್ಧಾರ ಮತ್ತು ನಿಮ್ಮ ಗುರಿ ತುಂಡು ತುಂಡಾಗಿರಬಾರದು. ನೀವು ಬದ್ಧತೆಯಿಂದ ಮುಂದುವರೆದರೆ ನಿಮ್ಮಲ್ಲಿ ನೀವು ಶಕ್ತಿಯ ಜಲಾಶಯವನ್ನೇ ಮನಗಾಣುತ್ತೀರಿ. ನಿಮ್ಮೊಳಗಿನ ಶಕ್ತಿಯು ನಿಮಗೆ ಹೊಸ ಚಿಂತನೆಗಳನ್ನು ನೀಡಿ , ನಿಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ನೀವು ಮತ್ತೊಂದು ಸಂಗತಿಯನ್ನು ಗಮನದಲ್ಲಿಡಬೇಕುನಾವು ಎಲ್ಲೇ ಇರಲಿ; ಯಾವುದೇ ಹುದ್ದೆಯಲ್ಲಿರಲಿ ಅದಕ್ಕೆ ಗಳಿಸಿದ ಉತ್ತಮ ಅಂಕಗಳು, ಅಥವಾ ಪೋಷಕರು ಸಾಕಷ್ಟು ಹಣಕಾಸು ಹೊಂದಿರುವುದು ಅಥವಾ ನಾವು ಪ್ರತಿಭಾವಂತರಾಗಿರುವುದು ಕಾರಣ ಎಂಬುದನ್ನು ಮರೆಯಬಾರದು , ನಿಜ. ಮತ್ತು  ಎಲ್ಲಾ ಅಂಶಗಳು ತಮ್ಮ ಪಾಲನ್ನು ಹೊಂದಿರಬಹುದು ಎಂಬುದನ್ನು ಒಪ್ಪಬಹುದುಆದರೆ ಇದೇ ಮನಸ್ಥಿತಿಯುಳ್ಳವರಾದರೆ  , ಆಗ ಅದು ಅಪೂರ್ಣ. ನಾವು ಎಲ್ಲೇ ಇರಲಿ, ಮತ್ತು ನಾವು ಏನೇ ಆಗಿರಲಿ, ಇತರರ ಕಾಣಿಕೆ ನಮಗಿಂತ ಹೆಚ್ಚಿನದಿರುತ್ತದೆ. ಅಲ್ಲಿ ಸಮಾಜದ ಕಾಣಿಕೆ ಇರುತ್ತದೆ, ದೇಶದ , ಬಡವರಲ್ಲಿ ಬಡವರ ಕಾಣಿಕೆ ಇರುತ್ತದೆ. ಕಾಣಿಕೆಗಳಿಂದ ನಾವು ಇಂದು ಎಲ್ಲಿದ್ದೇವೋ ಅಲ್ಲಿಗೆ ಬಂದಿದ್ದೇವೆ. ಕೆಲವೊಮ್ಮೆ ನಾವಿದನ್ನು ಗಮನಿಸುವುದೇ ಇಲ್ಲ.

ನೀವು ಇಂದು ಕಲಿತಿರುವ ವಿಶ್ವವಿದ್ಯಾಲಯ ಹಲವು ಕಾರ್ಮಿಕ ಸಹೋದರರ  ಮತ್ತು ಸಹೋದರಿಯರ ಬೆವರಿನ ಫಲ ಮತ್ತು ಹಲವು ಮಧ್ಯಮವರ್ಗದ ಕುಟುಂಬಗಳ ತೆರಿಗೆ ಪಾವತಿಯ ಫಲ. ನಿಮ್ಮ ಬೆಳವಣಿಗೆಗೆ ಕಾಣಿಕೆ ನೀಡಿದ ಆದರೆ ನೆನಪಿಸಲೂ ಆಗದ ಹಲವು ಜನರು ಇರಬಹುದು. ನಾವಿದನ್ನು ಸದಾ ನೆನಪಿನಲ್ಲಿಡಬೇಕು ನಾವು ಜನರಿಗೆ ಕೃತಜ್ಞರಾಗಿರಬೇಕು. ಸಮಾಜ ಮತ್ತು ದೇಶ ನಾವಿಂದು ಎಲ್ಲಿದ್ದೇವೋ ಅಲ್ಲಿಗೆ ತಲುಪಲು ಸಹಾಯ ಮಾಡಿದೆ. ಆದುದರಿಂದ ನಾವು ದೇಶದ ಮತ್ತು ಸಮಾಜದ ಸಾಲವನ್ನು ಮರುಪಾವತಿ ಮಾಡುವ ನಿರ್ಧಾರ ಕೈಗೊಳ್ಳಬೇಕು.

ಸ್ನೇಹಿತರೇ, ಮಾನವ ಬದುಕಿಗೆ ಚಲನೆ ಮತ್ತು ಪ್ರಗತಿ ಅತ್ಯವಶ್ಯ. ಅದೇ ರೀತಿ, ಪ್ರಕೃತಿಯನ್ನು ಮತ್ತು ಪರಿಸರವನ್ನು ಮುಂದಿನ ಜನಾಂಗಕ್ಕಾಗಿ ರಕ್ಷಿಸುವುದು ಬಹಳ ಮುಖ್ಯ. ಉತ್ತಮ ಭವಿಷ್ಯಕ್ಕೆ ಸ್ವಚ್ಚ ಇಂಧನ ಒಂದು ಭರವಸೆಯಾಗಿರುವಾಗ , ಜೀವನದಲ್ಲಿ ಎರಡು ಸಂಗತಿಗಳು ಬಹಳ ಮುಖ್ಯ ಪಾತ್ರವಹಿಸುತ್ತವೆ. –ಒಂದು ಸ್ವಚ್ಚ ನಿಷ್ಕಳಂಕ ಚರಿತ್ರೆ  ಮತ್ತು ಎರಡನೆಯದ್ದು  ಸ್ವಚ್ಚ ಹೃದಯ. ನಾವು ಆಗಾಗ ಕೇಳುತ್ತಿರುತ್ತೇವೆ , ಮತ್ತು ನೀವು ಕೂಡಾ ಇದೇ ರೀತಿ ಹೇಳಿರಬಹುದು, ಅದೇನೆಂದರೆ-ಯಾವುದೂ ಬದಲಾಗುವುದಿಲ್ಲ ಎಂಬುದಾಗಿ, ನಮ್ಮದೇನಿದೆ ಮತ್ತು ಹೊಂದಾಣಿಕೆ ಮಾಡಿಕೊಂಡು ಹೋಗುವುದು ಇತ್ಯಾದಿಗಳನ್ನು . ಹಲವು ಸಂದರ್ಭಗಳಲ್ಲಿ ದೇಶದಲ್ಲಿ ಸಂಗತಿಗಳು ಹಿಂದಿನಂತೆಯೇ ನಡೆಯುತ್ತಿರುತ್ತವೆ, ಯಾಕೆಂದರೆ ಇದು ನಮ್ಮ ಪರಂಪರೆ ಎಂಬುದಾಗಿ ಜನತೆ ಕೂಡಾ ಹೇಳುತ್ತಿರುತ್ತಾರೆ.

ಸ್ನೇಹಿತರೇ,

ಎಲ್ಲ ಅಸ್ಪಷ್ಟ ಮಾತುಗಳು ಮನಸ್ಸಿಗೆ ತುಕ್ಕು ಹಿಡಿದವರದ್ದು ಮತ್ತು ಕಳೆದುಕೊಂಡವರ ಮಾತುಗಳು. ಕೆಲವು ಜನರ ಮನಸ್ಸುಗಳು ಸಂಗತಿಗಳೊಂದಿಗೆ ಸ್ಥಗಿತಗೊಂಡಿವೆ, ಅವರು ಎಲ್ಲವನ್ನೂ ಇದೇ ಧೋರಣೆಯೊಂದಿಗೆ ಮಾಡುತ್ತಾರೆ. ಆದರೆ ತಲೆಮಾರು ,21 ನೇ ಶತಮಾನದ ಯುವ ಜನತೆ ನಿಷ್ಕಳಂಕ ಚರಿತ್ರೆಯೊಂದಿಗೆ ಮುನ್ನಡೆಯಬೇಕಿದೆ. ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನುವ ಕೆಲವು ಏಕರೂಪೀ ಮಾದರಿಗಳನ್ನು ಅವರು ಸ್ವಚ್ಚಗೊಳಿಸಬೇಕಿದೆ. ಅದೇ ರೀತಿ ಸ್ವಚ್ಚ ಹೃದಯ ಎಂದರೆ ಸ್ಪಷ್ಟ ಉದ್ದೇಶಗಳು. ನನಗೆ  ವಿವರಣೆಯ ಅವಶ್ಯಕತೆ ಇಲ್ಲ.

ಸ್ನೇಹಿತರೇ,

ನೀವು ಪೂರ್ವ ಗ್ರಹಿಕೆಗಳೊಂದಿಗೆ ಮುಂದುವರೆದರೆ, ನೀವು ನಿಮಗಾಗಿರುವ ಹೊಸತಿನ ದಾರಿಗಳನ್ನು ಮುಚ್ಚಿಕೊಳ್ಳುತ್ತೀರಿ.

ಸ್ನೇಹಿತರೇ,

ಇದು ಇಪ್ಪತ್ತು ವರ್ಷಗಳಿಗೆ ಹಿಂದೆ, ನಾನು ಮೊದಲ ಬಾರಿಗೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಿನ ಕಾಲದ್ದು. ಅಲ್ಲಿ ಹಲವಾರು ಸವಾಲುಗಳಿದ್ದವು; ಹಲವಾರು ಸ್ಥರಗಳಲ್ಲಿ ಕೆಲಸ ಸಾಗುತ್ತಿದ್ದ ಕಾಲ. ನಾನು ಮುಖ್ಯಮಂತ್ರಿಯಾಗಿ ಹೊಸಬ.

ಮೊದಲು ನಾನು ದಿಲ್ಲಿಯಲ್ಲಿ ವಾಸಿಸುತ್ತಿದ್ದೆ. ನಾನು ಇದ್ದಕ್ಕಿದ್ದಂತೆ ಗುಜರಾತಿಗೆ ಬರಬೇಕಾಯಿತು. ನನಗೆ ಬದುಕಲು ಸ್ಥಳ ಇರಲಿಲ್ಲ. ಇದರಿಂದಾಗಿ ನಾನು ಗಾಂಧಿ ನಗರದ ಪ್ರವಾಸೀ ಬಂಗಲೆಯಲಿ ಕೊಠಡಿಯೊಂದನ್ನು ಕಾಯ್ದಿರಿಸಿದೆ. ನಾನು ಪ್ರಮಾಣ ವಚನ ಸ್ವೀಕರಿಸಬೇಕಿತ್ತಷ್ಟೇ. ಆದರೆ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬುದು ಆಗಲೇ ನಿರ್ಧಾರವಾಗಿತ್ತು. ಜನರು ಹೂ ಗುಚ್ಚಗಳೊಂದಿಗೆ ಬರುವುದು ಸಹಜವಾಗಿತ್ತು. ಆಗ ಜನರು ನನ್ನನ್ನು ಭೇಟಿಯಾಗುತ್ತಿದ್ದಾಗ , ನೀವು ಈಗ ಮುಖ್ಯಮಂತ್ರಿಯಾಗುವವರಿದ್ದೀರಿ, ನೀವೊಂದು ಕೆಲಸ ಮಾಡಬೇಕು ಎಂದು ಹೇಳುತ್ತಿದ್ದರು. ಸುಮಾರು 70-80 % ಜನರು ಒಂದೇ ಸಂಗತಿ ಹೇಳುತ್ತಿದ್ದರು. ನಿಮಗೆ ಆಶ್ಚರ್ಯವಾಗಬಹುದು , ಆಗ ಅವರೆಲ್ಲ ನನಗೆ ಹೇಳುತ್ತಿದ್ದುದೇನೆಂದರೆ ರಾತ್ರಿ ಭೋಜನದ ವೇಳೆಯಲ್ಲಾದರೂ ವಿದ್ಯುತ್ತನ್ನು ಖಾತ್ರಿಪಡಿಸಿ ಎಂಬುದಾಗಿ. ಆಗ ವಿದ್ಯುತ್ತಿನ ಪರಿಸ್ಥಿತಿ ಏನಾಗಿತ್ತೆಂಬುದನ್ನು ನೀವು ಬಹಳ ಸ್ಪಷ್ಟವಾಗಿ ಕಲ್ಪಿಸಿಕೊಳ್ಳಬಹುದು.

ಈಗ, ನಾನು ಬಂದಿರುವಂತಹ ಕುಟುಂಬದ ಹಿನ್ನೆಲೆಯಿಂದಾಗಿ ವಿದ್ಯುತ್ ಹೊಂದುವುದು ಎಷ್ಟು ಮುಖ್ಯ ಎಂಬುದು ನನಗೆ ಬಹಳ ಚೆನ್ನಾಗಿ ಗೊತ್ತಿತ್ತುಆಗ ನಾನು ಇದಕ್ಕೆ ಶಾಶ್ವತ ಪರಿಹಾರ ಏನು? ಎಂಬ ಬಗ್ಗೆ ಚಿಂತಿಸಿದೆ. ನಾನು ಅಧಿಕಾರಿಗಳ ಜೊತೆ ಮಾತನಾಡಿದೆ, ಅವರೊಂದಿಗೆ ಚರ್ಚಿಸಿದೆ. ಆದರೆ ಅವರು ಇದೇ ರೀತಿ ಮುಂದುವರೆಯುವಂತಹ ಮನಸ್ಥಿತಿಯನ್ನು ಹೊಂದಿದ್ದರು. ನಮ್ಮಲ್ಲಿರುವ ವಿದ್ಯುತ್ ಶಕ್ತಿಯಿಂದ ನಾವು ಇಷ್ಟನ್ನು ಮಾತ್ರವೇ ಮಾಡಬಹುದು ಎಂಬುದಾಗಿತ್ತು, ಮನಸ್ಥಿತಿ. ಹೆಚ್ಚು ವಿದ್ಯುತ್ ಉತ್ಪಾದನೆಯಾದಾಗ ನೋಡುವ ಎಂಬ ಪ್ರತಿಕ್ರಿಯೆ ಅಲ್ಲಿ ಸಾಮಾನ್ಯವಾಗಿತ್ತು. ಈಗಿರುವ ಸ್ಥಿತಿಯಲ್ಲಿ ಯಾವುದಾದರೂ ಪರ್ಯಾಯ ಮಾರ್ಗವಿದೆಯೇ ?. ಎಂಬುದಾಗಿ ನಾನವರನ್ನು ಕೇಳಿದೆದೇವರ ದಯೆಯಿಂದ ನನ್ನ  ತಲೆಗೆ  ಒಂದು ಯೋಚನೆ ಬಂದಿತು. ನಾನು ಅವರಿಗೆ ಒಂದು ಕೆಲಸ ಮಾಡಬಹುದೇ ಎಂದು ಕೇಳಿದೆ. ಕೃಷಿ ಮತ್ತು ಗೃಹ ಬಳಕೆ ಫೀಡರುಗಳನ್ನು ಪ್ರತ್ಯೇಕಿಸಬಹುದೇ? ಎಂದು ಕೇಳಿದೆ . ರೈತರು ವಿದ್ಯುತ್ ಕಳವು ಮಾಡುತ್ತಾರೆ ಎಂಬಿತ್ಯಾದಿ ಪೂರ್ವ ಗ್ರಹಿಕೆಗಳನ್ನು ಜನರು ಹೊಂದಿದ್ದರು. ನಾನು ಹೊಸಬನಾದುದರಿಂದ ನಾನು ಹೇಳುವುದನ್ನು ಬಾಬುಗಳು ಅರ್ಥ ಮಾಡಿಕೊಳ್ಳುತ್ತಾರೋ ಎಂದು ತಿಳಿದುಕೊಳ್ಳುವುದು ಕೂಡಾ ನನಗೆ ಕಷ್ಟವಾಗುತ್ತಿತ್ತು.

ಅಧಿಕಾರಿಗಳು ನನ್ನೊಂದಿಗೆ ಸಹಮತ ಹೊಂದಿರಲಿಲ್ಲ, ಯಾಕೆಂದರೆ ಅವರಿಗೆ ಇದೆಲ್ಲ ಆಗಲಾರದು ಎಂಬ ಪೂರ್ವ ಗ್ರಹಿಕೆಗಳಿದ್ದವು. ಕೆಲವರು ಹೇಳಿದರು ಇದು ಸಾಧ್ಯವಿಲ್ಲದ ಸಂಗತಿ ಎಂದು. ಇನ್ನು ಕೆಲವರ ಪ್ರಕಾರ ಹಣಕಾಸು ಸ್ಥಿತಿ ಸರಿ ಇಲ್, ಇತರರು ಅಲ್ಲಿ ವಿದ್ಯುತ್ ಇಲ್ಲ ಎಂದರು. ನಿಮಗೆ ಆಶ್ಚರ್ಯವಾಗಬಹುದು ಉದ್ದೇಶದಲ್ಲಿ ಸುತ್ತು ಬಂದ ಕಡತಗಳ ಭಾರ 5-7-10 ಕಿಲೋಗ್ರಾಮುಗಳಷ್ಟಿತ್ತು. ಮತ್ತು ಪ್ರತೀ ಬಾರಿಯೂ, ಅಲ್ಲಿ ನಕಾರಾತ್ಮಕ ಆಯ್ಕೆಗಳಿದ್ದವು.

ಆಗ ನಾನು ಏನಾದರೊಂದನ್ನು ಮಾಡಬೇಕು ಎಂಬುದನ್ನು ಅರಿತುಕೊಂಡೆ. ಆಗ ನಾನು ಎರಡನೆ ಆಯ್ಕೆಯ ಮೇಲೆ ಕೆಲಸ ಮಾಡಲು ಆರಂಭಿಸಿದೆ. ನಾನು ಉತ್ತರ ಗುಜರಾತಿನ 45 ಗ್ರಾಮಗಳ ಸೊಸೈಟಿಯೊಂದನ್ನು  ಸಭೆಗೆ ಕರೆದೆ. ನಾನವರಿಗೆ ಹೇಳಿದೆ, ನನಗೊಂದು ಕನಸಿದೆ, ಅದನ್ನು ಅವರು ಸಾಕ್ಷಾತ್ಕರಿಸಬಹುದೇ ಎಂದೆ. ಅವರು ಅದರ ಬಗ್ಗೆ ಯೋಚಿಸಲು ಸಮಯ ಕೇಳಿದರು. ಅವರಿಗೆ ಇಂಜಿನಿಯರುಗಳ ಸಹಾಯ ಪಡೆಯಲು ತಿಳಿಸಿದೆ. ಗ್ರಾಮಗಳಿಗೆ ತಲುಪುವ  ಗೃಹ ಬಳಕೆ ಮತ್ತು ಕೃಷಿ ಫೀಡರುಗಳನ್ನು ಪ್ರತ್ಯೇಕಿಸಲು ನಾನು ಇಚ್ಚಿಸಿದ್ದೆ. ಅವರು ನನ್ನ ಬಳಿಗೆ ಮತ್ತೆ ಬಂದರು. ಮತ್ತು ಗುಜರಾತ್ ಸರಕಾರದಿಂದ 10 ಕೋಟಿ ರೂಪಾಯಿಗಳ ಅನುಮೋದನೆಯ ಹೊರತಾಗಿ ಬೇರೇನೂ ಸಹಾಯ ಬೇಡ ಎಂದವರು ಹೇಳಿದರು. ಅದು ನನ್ನ ಜವಾಬ್ದಾರಿ ಎಂದು ಅವರಿಗೆ ಹೇಳಿದೆ ಹಾಗು ನಾವು ಅವರಿಗೆ ಅನುಮೋದನೆ ನೀಡಿದೆವು.

ಅವರು  ಕೆಲಸ ಆರಂಭಿಸಿದರು. ನಾನು ಕೂಡಾ ಇಂಜಿನಿಯರುಗಳಿಗೆ ಕೆಲಸ ಮಾಡಲು ಮನವಿ ಮಾಡಿದೆ. ಗೃಹ ಮತ್ತು ಕೃಷಿ ಫೀಡರುಗಳನ್ನು 45 ಗ್ರಾಮಗಳಲ್ಲಿ ಪ್ರತ್ಯೇಕಿಸಲಾಯಿತು. ಇದರ ಫಲಿತಾಂಶವಾಗಿ ಕೃಷಿಗಾಗಿರುವ  ವಿದ್ಯುತ್ತಿಗೆ ಪ್ರತ್ಯೇಕ ಸಮಯ ನಿಗದಿಯಾಯಿತು. ಮನೆಗಳಲ್ಲಿ 24 ಗಂಟೆಯೂ ವಿದ್ಯುತ್ ಲಭಿಸುವಂತಾಯಿತು. ಮತ್ತು , ಬಳಿಕ ನಾನು ವಿಶ್ವವಿದ್ಯಾಲಯಗಳ ಯುವ ಜನತೆಯನ್ನು ಇದನ್ನು ಮೌಲ್ಯಮಾಪನ ಮಾಡುವುದಕ್ಕಾಗಿ ಕಳುಹಿಸಿದೆನಿಮಗೆ ಆಶ್ಚರ್ಯವಾಗಬಹುದು, ಗುಜರಾತ್, ರಾತ್ರಿ ಊಟದ ಸಮಯದಲ್ಲಿ ವಿದ್ಯುತ್ ಪೂರೈಸುವುದಕ್ಕೆ ಕಷ್ಟ ಪಡುತ್ತಿದ್ದಂತಹ ಪರಿಸ್ಥಿತಿಯಲ್ಲಿದ್ದ ರಾಜ್ಯ 24 ಗಂಟೆಯೂ ವಿದ್ಯುತ್ ಲಭಿಸುವಂತೆ ಮಾಡಿತು. ಮತ್ತು ಹೊಸ ಆರ್ಥಿಕತೆ ಉದಯವಾಯಿತು. ಮಾನವ ಶ್ರಮದಿಂದ ತನ್ನ ಹೊಲಿಗೆ ಯಂತ್ರವನ್ನು ನಡೆಸುತ್ತಿದ್ದ ಟೈಲರ್ ವಿದ್ಯುತ್ ಯಂತ್ರಗಳನ್ನು ಬಳಸಲು ಆರಂಭಿಸಿದ. ಧೋಭಿ ವಿದ್ಯುತ್ ಚಾಲಿತ ಇಸ್ತ್ರಿಪೆಟ್ಟಿಗೆಗಳನ್ನು ಬಳಸಲಾರಂಭಿಸಿದ. ಅಡುಗೆ ಮನೆ ಕೂಡಾ ಹಲವು ವಿದ್ಯುತ್ ಚಾಲಿತ ಸಲಕರಣೆಗಳನ್ನು ನೋಡಲು ಆರಂಭಿಸಿತು. ಜನರು ಹವಾ ನಿಯಂತ್ರಕಗಳನ್ನು, ಫ್ಯಾನುಗಳನ್ನ್ನು ,ಟಿ.ವಿ.ಗಳನ್ನು, ಕೊಳ್ಳಲು ಆರಂಭಿಸಿದರು. ರೀತಿಯಲ್ಲಿ ಇಡೀ ಜೀವನ ಬದಲಾಗತೊಡಗಿತು. ಸರಕಾರದ ಆದಾಯ ಕೂಡಾ ಹೆಚ್ಚಿತು.

ಪ್ರಯೋಗ ಅಧಿಕಾರಿಗಳ ಮನಸ್ಥಿತಿಯನ್ನು ಬದಲು ಮಾಡಿತು. ಅಂತಿಮವಾಗಿ ಇದು ಸರಿಯಾದ ಧೋರಣೆ ಎಂಬುದಾಗಿ ನಿರ್ಧರಿಸಲಾಯಿತು. ಆಗ ನಾವು 1000 ದಿನಗಳ ಯೋಜನೆಯನ್ನು ಇಡೀ ಗುಜರಾತಿಗಾಗಿ ರೂಪಿಸಿದೆವು. ಕೃಷಿ ಮತ್ತು ಗೃಹ ಫೀಡರ್ ಗಳನ್ನು ಪ್ರತ್ಯೇಕಿಸಿದೆವು. ಮತ್ತು 1000 ದಿನಗಳ ಒಳಗಡೆ ಗುಜರಾತಿನ ಎಲ್ಲಾ ಮನೆಗಳಲ್ಲಿ 24 ಗಂಟೆ ವಿದ್ಯುತ್ತನ್ನು ಖಾತ್ರಿಪಡಿಸಲಾಯಿತು. ನಾನು ಪೂರ್ವ ಗ್ರಹಿಕೆಗಳಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದರೆ, ಇದನ್ನು ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ನಾನು ಸ್ವಚ್ಚ ಮನಸ್ಸಿನಿಂದ ಆರಂಭಿಸಿದೆ. ನಾನು ಹೊಸ ಧೋರಣೆಗಳೊಂದಿಗೆ ಚಿಂತಿಸಿದೆ ಮತ್ತು ಅದರ ಫಲಿತಾಂಶ ಇದು.

ಸ್ನೇಹಿತರೇ, ಒಂದು ವಿಷಯ ನಿಮ್ಮ ಮನಸ್ಸಿನಲ್ಲಿರಲಿ, ನಿರ್ಬಂಧಗಳು ವಿಷಯವಲ್ಲ. ನಿಮ್ಮ ಪ್ರತಿಕ್ರಿಯೆ ಇಲ್ಲಿ ಮುಖ್ಯ. ನಾನು ನಿಮಗೆ ಇನ್ನೊಂದು ಉದಾಹರಣೆ ಕೊಡುತ್ತೇನೆ. ಗುಜರಾತ್ ತನ್ನದೇ ಮಟ್ಟದಲ್ಲಿ ಸೌರ ನೀತಿಯನ್ನು ತಯಾರಿಸಿದ ಮೊದಲ ರಾಜ್ಯ. ಬಳಿಕ ನಮ್ಮ ಗಮನಕ್ಕೆ ತರಲಾಯಿತು ಸೌರ ವಿದ್ಯುತ್ತಿನ ಯೂನಿಟೊಂದಕ್ಕೆ 12-13 ರೂಪಾಯಿ ವೆಚ್ಚವಾಗುತ್ತದೆ ಎಂಬುದಾಗಿ. ಉಷ್ಣ ವಿದ್ಯುತ್ ಯೂನಿಟೊಂದಕ್ಕೆ 2-3 ರೂಪಾಯಿಗಳಿಗೆ ದೊರೆಯುತ್ತಿದ್ದ ಕಾಲದಲ್ಲಿ ವೆಚ್ಚ ತುಂಬಾ ದುಬಾರಿಯಾಗಿತ್ತು. ದೊಡ್ಡ ಗಲಾಟೆ ಮಾಡಿ ತಪ್ಪು ಹುಡುಕುವುದು ಇಂದಿನ ಫ್ಯಾಶನ್ , ನಾನು ಕೂಡಾ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದು ದೊಡ್ಡ ಬಿರುಗಾಳಿಯನ್ನೆಬ್ಬಿಸುತ್ತದೆ ಎಂಬುದನ್ನು ನನ್ನ ಗಮನಕ್ಕೆ ತರಲಾಯಿತು. ಒಂದೆಡೆ 2-3 ರೂಪಾಯಿ ದರದಲ್ಲಿ ಒಂದು ಯೂನಿಟ್ ವಿದ್ಯುತ್ ಲಭ್ಯವಾಗುತ್ತಿರುವಾಗ ಇನ್ನೊಂದೆಡೆ 12-13 ರೂಪಾಯಿ ವೆಚ್ಚದ ಇನ್ನೊಂದು ವಿದ್ಯುತ್ ಮೂಲದ ಚರ್ಚೆ ನಡೆಯುತ್ತಿತ್ತು.

ಆದರೆ, ಸ್ನೇಹಿತರೇ, ನಾನು ನನ್ನ ಪ್ರತಿಷ್ಟೆ ಮತ್ತು ಭವಿಷ್ಯದ ತಲೆಮಾರಿನ ಕಳವಳಗಳ ಬಗ್ಗೆ ಚಿಂತೆ ಮಾಡಬೇಕಾದ ಸಂದರ್ಭ ಬಂದಿತ್ತು. ಇಂತಹ ನಿರ್ಧಾರಗಳು ಮಾಧ್ಯಮಗಳಲ್ಲಿ ಖಂಡನೆ, ದೂಷಣೆಗೆ ಒಳಗಾಗಬಹುದು ಎಂಬುದೂ ನನಗೆ ತಿಳಿದಿತ್ತು. ಅಲ್ಲಿ ಭ್ರಷ್ಟಾಚಾರದ ಆರೋಪಗಳು ಮತ್ತು ಇತರ ವಿಷಯಗಳು ಬರುತ್ತಿದ್ದವು. ಆದರೆ ನನ್ನ ಹೃದಯ ಶುದ್ಧವಾಗಿತ್ತು. ನಮ್ಮ ಜೀವನ ವಿಧಾನವನ್ನು ಬದಲಾಯಿಸಲು ವಿಶಿಷ್ಟವಾದ  ಏನಾದರೊಂದನ್ನು ನಾವು ಮಾಡಬೇಕು ಎಂಬುದು ನನ್ನ ಕಾಳಜಿಯಾಗಿತ್ತು.

ಕೊನೆಗೆ , ನಾವು ಸೌರ ವಿದ್ಯುತ್ತಿಗೆ ಹೋಗಲು ನಿರ್ಧಾರ ಮಾಡಿದೆವು ಮತ್ತು ನಿರ್ಧಾರವನ್ನು ಪ್ರಾಮಾಣಿಕೆತೆಯಿಂದ ಕೈಗೊಂಡೆವು. ನಾವು ಇದನ್ನು ಉತ್ತಮ ಭವಿಷ್ಯ ಮತ್ತು ಚಿಂತನೆಯ ಮುನ್ನೋಟದೊಂದಿಗೆ ಕೈಗೊಂಡೆವು.

ಗುಜರಾತಿನಲ್ಲಿ ಬಹಳ ದೊಡ್ದ ಪ್ರಮಾಣದಲ್ಲಿ ಸೌರ ಘಟಕಗಳನ್ನು ಸ್ಥಾಪಿಸಲಾಯಿತು. ಗುಜರಾತ್ ನೀತಿಯನ್ನು ರೂಪಿಸಿದಾಗ ಭಾರತ ಸರಕಾರ ಅದನ್ನು ನಕಲು ಮಾಡಿತು. ಆದರೆ ಅವರೇನು ಮಾಡಿದರು ?.ಅವರು ದರವನ್ನು 18-19 ರೂಪಾಯಿಯೆಂದು ನಿಗದಿ ಮಾಡಿದರು. ಆಗ ನನ್ನ ಅಧಿಕಾರಿಗಳು ನನ್ನ ಬಳಿಗೆ ಬಂದು ಹೇಳಿದರು, ಅವರು  18-19 ರೂಪಾಯಿಗಳನ್ನು ನೀಡಲು ಮುಂದಾಗಿರುವಾಗ, ಯಾರಾದರೊಬ್ಬರು 12-13 ರೂ. ದರವನ್ನು ಯಾಕೆ ಒಪ್ಪುತ್ತಾರೆ? ನಾನವರಿಗೆ ಹೇಳಿದೆ, ನಾನು 12-13 ರೂ. ದರಕ್ಕೇ ಅಂಟಿಕೊಂಡಿರುತ್ತೇನೆ ಎಂಬುದಾಗಿ. ನಾನು 18-19 ರೂಪಾಯಿ ಕೊಡಲು ಸಿದ್ದನಿರಲಿಲ್ಲ. ಆದರೆ ನಾವು ಪಾರದರ್ಶಕ ಮತ್ತು ವೇಗದ ಚಲನಶೀಲ ಪರಿಸರ ವ್ಯವಸ್ಥೆಯನ್ನು ನೀಡಲು ಸಿದ್ದರಿದ್ದೆವು. ವಿಶ್ವವು ನಮ್ಮ ಜೊತೆ ಬರುತ್ತದೆ ಮತ್ತು ನಾವು ಉತ್ತಮ ಮಾದರಿಯ ಆಡಳಿತದೊಂದಿಗೆ ಮುಂದುವರಿಯುತ್ತೇವೆ. ಈಗ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಉಪಕ್ರಮ ಅನುಸರಿಸಿದ ಬಳಿಕ ಗುಜರಾತ್ ಮಾಡಿರುವ ಪ್ರಗತಿಯನ್ನು ನೀವು ನೋಡಬಹುದು. ಇದೆಲ್ಲಾ ನಿಮ್ಮ ಮುಂದಿದೆ. ಮತ್ತು ಇಂದು, ವಿಶ್ವವಿದ್ಯಾಲಯವು ಇದನ್ನುಇನ್ನಷ್ಟು ಮುಂದುವರಿಸಿಕೊಂಡು ಹೋಗಲು ಮುಂದೆ ಬಂದಿದೆ.

ನಾವು 12-13 ರೂಪಾಯಿಯಲ್ಲಿ ಆರಂಭಿಸಿದೆವು, ಅದು ದೇಶವ್ಯಾಪ್ತಿಯಲ್ಲಿ ಸೌರ ಆಂದೋಲನವನ್ನು ಸೃಷ್ಟಿಸಿತು. ಮತ್ತು ಇಲ್ಲಿಗೆ ಬಂದ ನಂತರ, ನಾನು ಅಂತಾರಾಷ್ಟ್ರೀಯ ಸೌರ ಮಿತ್ರಕೂಟವನ್ನು ಸ್ಥಾಪಿಸಿದೆ. ಇದು 80-85 ಸದಸ್ಯ ದೇಶಗಳನ್ನು ಒಳಗೊಂಡಿದೆ. ಇವು ಇಡೀ ವಿಶ್ವದಲ್ಲಿ ಆಂದೋಲನದ ಭಾಗವಾಗಿವೆ. ಇದನ್ನು ಸ್ವಚ್ಚ ಹೃದಯದಿಂದ , ಬದ್ಧತೆಯಿಂದ ಮಾಡಲಾಗಿರುವುದರಿಂದ ಭಾರತವು ಸೌರ ವಿದ್ಯುತ್ ಕ್ಷೇತ್ರದಲ್ಲಿ ದಾಪುಗಾಲನ್ನಿಟ್ಟು ಮುನ್ನಡೆಯುತ್ತಿದೆ. ಇಂದು ಯೂನಿಟೊಂದರ ದರ ರೂಪಾಯಿ 12-13 ರಿಂದ ರೂಪಾಯಿ 2 ಕ್ಕಿಂತಲೂ ಕಡಿಮೆಯಾಗಿದೆ.

ಸೌರ ವಿದ್ಯುತ್ ದೇಶದ ಪ್ರಮುಖ ಆದ್ಯತೆಯಾಗಿದೆ. 2022 ವೇಳೆಗೆ 175 ಗಿಗಾವ್ಯಾಟ್ ಮರುನವೀಕೃತ ಇಂಧನವನ್ನು ಉತ್ಪಾದಿಸಲು ಪ್ರತಿಜ್ಞೆ ಮಾಡಿದ್ದೇವೆ. ಮತ್ತು ಗುರಿಯನ್ನು 2022 ಕ್ಕೆ ಮೊದಲೇ ನಾವು ತಲುಪುವ ಬಗ್ಗೆ ನನಗೆ ವಿಶ್ವಾಸವಿದೆ. 2030 ರೊಳಗೆ 450 ಗಿಗಾವ್ಯಾಟ್ ಮರುನವೀಕೃತ ಇಂಧನ ಉತ್ಪಾದನೆಯ ಬೃಹತ್ ಗುರಿಯನ್ನು ನಿಗದಿ ಮಾಡಿಕೊಂಡಿದ್ದೇವೆ. ಇದನ್ನು ಕೂಡಾ ಅವಧಿಗೆ ಮೊದಲು ಸಾಧಿಸುವ ಬಗ್ಗೆ ನನಗೆ ವಿಶ್ವಾಸವಿದೆ.

ಅಸಾಧ್ಯ ಎನ್ನುವಂತಹ ಸಂಗತಿಗಳಾವುವೂ ಇಲ್ಲ. ಅಲ್ಲಿ –“ನಾನು ಇದನ್ನು ಸಾಧ್ಯ ಮಾಡುತ್ತೇನೆಇರಬೇಕು ಇಲ್ಲವೇನಾನು ಇದನ್ನು ಸಾಧ್ಯ ಮಾಡಲು ಬಿಡುವುದಿಲ್ಲಎಂಬುದು ಇರಬೇಕು. ನಂಬಿಕೆ ನಿಮಗೆ ಸದಾ ಸಹಾಯ ಮಾಡುತ್ತದೆ.

ಸ್ನೇಹಿತರೇ,

ಬದಲಾವಣೆ, ಇದು ಆಂತರ್ಯದಲ್ಲಿ ಅಥವಾ ಜಗತ್ತಿನಲ್ಲಿ ಆಗಬೇಕಿದ್ದರೂ, ಅದು ಒಂದು ದಿನದಲ್ಲಿ, ಅಥವಾ ಒಂದು ವಾರದಲ್ಲಿ ,ಅಥವಾ ಒಂದು ವರ್ಷದಲ್ಲಿ ಆಗುವಂತಹದಲ್ಲ. ಬದಲಾವಣೆಗಳಿಗಾಗಿ ನಾವು ದೃಢ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಸಣ್ಣ ಸಂಗತಿಗಳನ್ನು ಕೂಡಾ ನಿಯಮಿತವಾಗಿ ಮಾಡಿಕೊಂಡು ಬಂದರೆ ಭಾರೀ ಬದಲಾವಣೆಗಳು ಸಾಧ್ಯವಾಗುತ್ತವೆ. ಉದಾಹರಣೆಗೆ , ನೀವು ಯಾವುದಾದರೂ ಹೊಸದನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬಹುದು ಅಥವಾ ದಿನವೊಂದಕ್ಕೆ 20 ನಿಮಿಷ ಬರೆಯುವ  ಅಭ್ಯಾಸವನ್ನು ರೂಢಿಸಿಕೊಳ್ಳಬಹುದು. ಅದೇ ರೀತಿ, ನೀವು ದಿನ ನಿತ್ಯ ಯಾವುದಾದರೂ ಹೊಸತನ್ನು ಕಲಿಯಲು ಪ್ರತೀ ದಿನ 20 ನಿಮಿಷ ಯಾಕೆ ಮೀಸಲಿಡಬಾರದು ಎಂಬ ಬಗ್ಗೆ ಚಿಂತಿಸಬಹುದು.

ದಿನವೊಂದಕ್ಕೆ ಬರೇ 20 ನಿಮಿಷಗಳು ಸಾಕು, ಆದರೆ ಇವೇ 20 ನಿಮಿಷಗಳು ವರ್ಷದಲ್ಲಿ 120 ಗಂಟೆಗಳಿಗೆ ಸಮನಾಗುತ್ತವೆ. 120 ಗಂಟೆಗಳ ಪ್ರಯತ್ನ ನಿಮ್ಮೊಳಗೆ ಬಹಳಷ್ಟು ಬದಲಾವಣೆಗಳನ್ನು ತರುತ್ತದೆ ಎಂದಾದಾಗ ನಿಮಗೆ ಆಶ್ಚರ್ಯವಾಗಬಹುದು.

ಸ್ನೇಹಿತರೇ,

ನೀವಿದನ್ನು ಕ್ರಿಕೆಟಿನಲ್ಲಿ ನೋಡಿರಬಹುದು. ಬಹಳ ದೊಡ್ಡ ಗುರಿಯನ್ನು ಬೆಂಬತ್ತಬೇಕಾಗಿರುವಾಗ ಯಾವುದೇ ತಂಡವು ತಾನು ಎಷ್ಟು ರನ್ ಗಳನ್ನು ಗಳಿಸಬೇಕು ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಬ್ಯಾಟ್ಸ್ಮನ್ ಗಳು ಪ್ರತೀ ಓವರಿನಲ್ಲಿ ತಾವು ಎಷ್ಟು ರನ್ ಗಳನ್ನು ಗಳಿಸಬೇಕು ಎಂಬುದರ ಬಗ್ಗೆ ಚಿಂತಿಸುತ್ತಾರೆ.

ಅದೇ ಮಂತ್ರವನ್ನು ಹಣಕಾಸು ಯೋಜನೆಯಲ್ಲಿರುವ ಹಲವು ಮಂದಿ ಅನುಸರಿಸುತ್ತಾರೆ. ಅವರು ಪ್ರತೀ ತಿಂಗಳು 5,000 ರೂಪಾಯಿಗಳನ್ನು ಠೇವಣಿ ಮಾಡುತ್ತಾರೆ ಮತ್ತು ಅದು ಎರಡು ವರ್ಷಗಳಲ್ಲಿ ಒಂದು ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಾಗುತ್ತದೆ. ಇಂತಹ ಸುಸ್ಥಿರ ಪ್ರಯತ್ನಗಳು ಇಂತಹ ಸಾಮರ್ಥ್ಯಗಳನ್ನು ನಿಮ್ಮೊಳಗೆ ನಿರ್ಮಾಣ ಮಾಡುತ್ತವೆ. ಇದರ ಫಲಿತಾಂಶಗಳು ಅಲ್ಪ ಕಾಲಾವಧಿಯಲ್ಲಿ ಪ್ರಕಟಗೊಳ್ಳದಿರಬಹುದು, ಆದರೆ ಅವು ಧೀರ್ಘಾವಧಿಯಲ್ಲಿ ದೊಡ್ಡ ಭದ್ರತೆಯಾಗುತ್ತವೆ.

ಇಂತಹ ಸುಸ್ಥಿರ ಪ್ರಯತ್ನಗಳೊಂದಿಗೆ ದೇಶವು ರಾಷ್ಟ್ರ ಮಟ್ಟದಲ್ಲಿ ಮುಂದುವರೆಯುತ್ತಿರುವಾಗ , ಫಲಿತಾಂಶಗಳು ಕೂಡಾ ಇದೇ ರೀತಿಯಲ್ಲಿರುತ್ತವೆ. ಸ್ವಚ್ಚ ಭಾರತ ಆಂದೋಲನವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ನಾವುಗಾಂಧಿ ಜಯಂತಿಯಂದು ಅಥವಾ ಅಕ್ಟೋಬರ್ ತಿಂಗಳಲ್ಲಿ ಮಾತ್ರವೇ ಸ್ವಚ್ಚತೆಯ ಬಗ್ಗೆ ಚಿಂತಿಸುವುದಲ್ಲ, ಪ್ರತೀ ದಿನವೂ ನಿಟ್ಟಿನಲ್ಲಿ ದೃಢ ಪ್ರಯತ್ನಗಳನ್ನು ಮಾಡಬೇಕು. 2014 ರಿಂದ 2019 ನಡುವೆಮನ್ ಕಿ ಬಾತ್ ’   ಕಾರ್ಯಕ್ರಮದ ಬಹುತೇಕ ಎಲ್ಲಾ ಆವೃತ್ತಿಗಳಲ್ಲೂ ನಾನು ಸ್ವಚ್ಚತೆಯ ಬಗ್ಗೆ ದೇಶವಾಸಿಗಳ ಜೊತೆ ಮಾತನಾಡಿದ್ದೇನೆ, ಚರ್ಚಿಸಿದ್ದೇನೆ ಮತ್ತು ಮನವಿ ಮಾಡಿದ್ದೇನೆ. ಪ್ರತೀ ಕಾರ್ಯಕ್ರಮದಲ್ಲಿಯೂ ಸಣ್ಣ ಚರ್ಚೆಯೊಂದು ಇತರ ವಿಷಯಗಳ ಬಗ್ಗೆಯೂ ನಡೆಯುತ್ತಿತ್ತು. ಮಿಲಿಯಾಂತರ ಜನರ ಸಣ್ಣ ಪ್ರಯತ್ನಗಳ ಫಲವಾಗಿ ಸ್ವಚ್ಚ ಭಾರತ ಜನಾಂದೋಲನವಾಯಿತು. ಇದು ಸುಸ್ಥಿರ ಪ್ರಯತ್ನಗಳ ಪ್ರಯತ್ನಗಳ ಫಲ. ಇದರಿಂದಾಗಿ ಇಂತಹ ಫಲಿತಾಂಶ ಸಾಧ್ಯವಾಯಿತು.

ಸ್ನೇಹಿತರೇ,

21 ನೇ ಶತಮಾನದಲ್ಲಿ ಭಾರತದಿಂದ ವಿಶ್ವದ ನಿರೀಕ್ಷೆಗಳು ಮತ್ತು ಆಶಾವಾದಗಳು ಹಾಗು ಭಾರತದ ಭರವಸೆಗಳು ಮತ್ತು ನಿರೀಕ್ಷೆಗಳು ನಿಮ್ಮನ್ನು ಹೊಂದಿಕೊಂಡಿವೆ. ನಾವು ತ್ವರಿತಗತಿಯಿಂದ ಸಾಗಬೇಕಾಗಿದೆ, ನಾವು ಮುಂದು ಮುಂದಕ್ಕೆ ಸಾಗಬೇಕಾಗಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಜೀ ಅವರುಅಂತ್ಯೋದಯಚಿಂತನೆಯನ್ನು ನೀಡಿದ್ದಾರೆ. ನಾವು ರಾಷ್ಟ್ರ ಮೊದಲು ಎನ್ನುವ ಅವರ ಆದರ್ಶಗಳನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ನಮ್ಮ ಪ್ರತೀ ಕೆಲಸವೂ ರಾಷ್ಟ್ರಕ್ಕೆ ಮೊದಲ ಆದ್ಯತೆ ನೀಡುವಂತಿರಬೇಕು. ನಾವು ಅದೇ ಸ್ಪೂರ್ತಿಯೊಂದಿಗೆ ಮುನ್ನಡೆಯುವಂತಿರಬೇಕು.

ನಿಮ್ಮೆಲ್ಲರಿಗೂ ಮತ್ತೊಮ್ಮೆ ಬಹಳ ಬಹಳ ಅಭಿನಂದನೆಗಳು ಮತ್ತು ನಿಮ್ಮ ಭವ್ಯ ಭವಿತವ್ಯಕ್ಕಾಗಿ ನನ್ನ ಶುಭ ಹಾರ್ರೈಕೆಗಳು.

***



(Release ID: 1675039) Visitor Counter : 276