ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಗಾಂಧೀನಗರದ ಪಂಡಿತ್ ದೀನ್ ದಯಾಳ್ ಪೆಟ್ರೊಲಿಯಂ ವಿಶ್ವ ವಿದ್ಯಾಲಯದ 8 ನೇ ಘಟಿಕೋತ್ಸವದಲ್ಲಿ ಪ್ರಧಾನಮಂತ್ರಿ ಮೋದಿ


ವಿಶ್ವವಿದ್ಯಾಲಯದ ವಿವಿಧ ಸೌಲಭ್ಯಗಳ ಅನಾವರಣ

ಭಾರತದಲ್ಲಿ ಇಂಗಾಲದ ಪ್ರಮಾಣವನ್ನು 30-35% ರಷ್ಟು ತಗ್ಗಿಸುವುದು ಮತ್ತು 4 ಪಟ್ಟು ನೈಸರ್ಗಿಕ ಅನಿಲದ ಪಾಲುದಾರಿಕೆಯನ್ನು ಹೆಚ್ಚಿಸುವುದು ನಮ್ಮ ಗುರಿ: ಪ್ರಧಾನಮಂತ್ರಿ

ಸ್ವಚ್ಛ ವಾತಾವರಣದೊಂದಿಗೆ ಮುಂದುವರಿಯಲು 21 ನೇ ಶತಮಾನದ ಯುವಜನತೆಗೆ ಕರೆ

Posted On: 21 NOV 2020 12:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಗುಜರಾತ್ ಗಾಂಧೀನಗರದ ಪಂಡಿತ್ ದೀನ್ ದಯಾಳ್ ಪೆಟ್ರೊಲಿಯಂ ವಿಶ್ವ ವಿದ್ಯಾಲಯದ 8 ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅದರ ಗೌರವವನ್ನು ಹೆಚ್ಚಿಸಿದರು. 45 ಮೆಗಾವ್ಯಾಟ್ ಸಾಮರ್ಥ್ಯದ ಮೊನೊಕ್ರಿಸ್ಟಲೈನ್ ಸೋಲಾರ್ ಫೊಟೊ ವೋಲ್ಟೇಕ್ ಪ್ಯಾನೆಲ್ಮತ್ತು ಜಲತಂತ್ರಜ್ಞಾನದ ಉತ್ಕೃಷ್ಟ ಕೇಂದ್ರಕ್ಕೆಅಡಿಗಲ್ಲು ಸಮಾರಂಭ ನೆರವೇರಿಸಿದರು. ವಿಶ್ವವಿದ್ಯಾಲಯದಲ್ಲಿ  ಆವಿಷ್ಕಾರ ಮತ್ತು ವಿಕಾಸ ಕೇಂದ್ರ ತಂತ್ರಜ್ಞಾನ ವ್ಯಾಪಾರ ವಿಕಾಸ ಕೇಂದ್ರ’, ‘ತರ್ಜುಮೆ ಮಾಡಬಹುದಾದ ಸಂಶೋಧನಾ ಕೇಂದ್ರಮತ್ತು ಕ್ರೀಡಾ ಸಂಕೀರ್ಣವನ್ನುಕೂಡಾ ಉದ್ಘಾಟಿಸಿದರು.      

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು ವಿಶ್ವ ಇಂಥ ದೊಡ್ಡ ಸಂದಿಗ್ಧತೆಯನ್ನು ಎದುರಿಸುತ್ತಿರುವಾಗ ಪದವಿ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ, ಆದರೆ ಸವಾಲುಗಳಿಗಿಂತ ನಿಮ್ಮ ಸಾಮರ್ಥ್ಯ ಅತ್ಯಂತ ಬೃಹತ್ ಪ್ರನಾಣದ್ದು ಎಂದು ಹೇಳಿದರು. ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ವಿಶ್ವದೆಲ್ಲೆಡೆ ಇಂಧನ ವಲಯದಲ್ಲಿ ಪ್ರಮುಖ ಬದಲಾವಣೆಗಳಾಗುತ್ತಿರುವ ಸಮಯದಲ್ಲಿ ವಿದ್ಯಾರ್ಥಿಗಳು ಉದ್ಯಮಕ್ಕೆ ಕಾಲಿಡುತ್ತಿದ್ದಾರೆ ಎಂದೂ ಕೂಡಾ ಅವರು ಹೇಳಿದರು   

ರೀತಿ ಇಂದು ಭಾರತದ ಇಂಧನ ಕ್ಷೇತ್ರ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಉದ್ಯೋಗಕ್ಕೆ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ. ಇಂದು ದೇಶ ಇಂಗಾಲದ ಪ್ರಮಾಣವನ್ನು 30-35% ರಷ್ಟು ತಗ್ಗಿಸುವ ಗುರಿಯತ್ತ ಸಾಗಿದೆ ಮತ್ತು ದಶಕದಲ್ಲಿ ನಮ್ಮ ಇಂಧನ ಅವಶ್ಯಕತೆಯಲ್ಲಿ ನೈಸರ್ಗಿಕ ಅನಿಲದ ಪಾಲುದಾರಿಕೆಯನ್ನು 4 ಪಟ್ಟು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಘೋಷಿಸಿದರು. ಮುಂದಿನ 5 ವರ್ಷಗಳಲ್ಲಿ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಕೆಲಸ ಮುಂದುವರಿದಿದೆ, ಇಂಧನ ಭದ್ರತೆ ಸಂಬಂಧಿಸಿದ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ ಮತ್ತು ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೋಸ್ಕರ ಒಂದು ನಿಧಿಯನ್ನು ರಚಿಸಲಾಗಿದೆ ಎಂದು ಪ್ರಧಾನಮಂತ್ರಿಗಳು ಮಾಹಿತಿ ನೀಡಿದರು   

ಜೀವನಕ್ಕೆ ಒಂದು ಉದ್ದೇಶವನ್ನು ಇಟ್ಟುಕೊಳ್ಳುವಂತೆ ಪ್ರಧಾನಮಂತ್ರಿಗಳು ವಿದ್ಯಾರ್ಥಿಗಳನ್ನು ಕೇಳಿದರು. ಯಶಸ್ವಿ ಜನರಿಗೆ ಸಮಸ್ಯೆಗಳು ಇಲ್ಲ ಎಂದಲ್ಲ, ಆದರೆ ಯಾರು ಸವಾಲುಗಳನ್ನು ಸ್ವೀಕರಿಸುತ್ತಾರೋ ಅವುಗಳನ್ನು ಎದುರಿಸುತ್ತಾರೆ, ಸದೆಬಡಿಯುತ್ತಾರೆ ಮತ್ತು ಮೆಟ್ಟಿ ನಿಲ್ಲುತ್ತಾರೆ, ಪರಿಹರಿಸಿಕೊಳ್ಳುತ್ತಾರೆಯೋ ಅವರು ಯಶಸ್ಸು ಗಳಿಸುತ್ತಾರೆ. ಯಾರು ಸವಾಲುಗಳನ್ನು ಸ್ವೀಕರಿಸುತ್ತಾರೋ ಅವರೇ ಜೀವನದಲ್ಲಿ ಯಶಸ್ವಿಯಾಗುತ್ತಾರೆ. 1922-47 ಅವಧಿಯ ಯುವಜನತೆ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದರು ಎಂದು ಅವರು ಹೇಳಿದರು. ದೇಶಕ್ಕಾಗಿ ಬಾಳಿ ಎಂದು ವಿದ್ಯಾರ್ಥಿಗಳಿಗೆ ಆಗ್ರಹಿಸಿದ ಅವರು ಸ್ವಾವಲಂಬಿ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮತ್ತು ಜವಾಬ್ದಾರಿಯುತ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಂತೆ ಹೇಳಿದರು.

ಜವಾಬ್ದಾರಿಯ ಪ್ರಜ್ಞೆಯಲ್ಲಿಯೇ ಯಶಸ್ಸಿನ ಮೂಲವಡಗಿದೆ ಎಂದು ಪ್ರತಿಪಾದಿಸಿದ ಪ್ರಧಾನಮಂತ್ರಿಗಳು ಜವಾಬ್ದಾರಿಯ ಪ್ರಜ್ಞೆ ಜೀವನದ ಉದ್ದೇಶವಾಗಿ ಪರಿವರ್ತನೆಯಾಗಬೇಕು ಎಂದು ಹೇಳಿದರು. ಇಂಥ ಜನರೇ ಜೀವನದಲ್ಲಿ ಯಶಸ್ವಿಯಾಗುತ್ತಾರೆ, ಜವಾಬ್ದಾರಿಯ ಪ್ರಜ್ಞೆ ಮೂಡುವಂತೆ ಏನನ್ನಾದರೂ ಮಾಡುತ್ತಾರೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಜೀವನದಲ್ಲಿ ಒತ್ತಡದಲ್ಲಿದ್ದೇವೆ ಎಂಬ ಭಾವನೆಯಿಂದ ಜೀವಿಸುವವರು ವಿಫಲರಾಗುತ್ತಾರೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಜವಾಬ್ದಾರಿಯ ಪ್ರಜ್ಞೆ ಅವಕಾಶದ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ಕೂಡಾ ಅವರು ಹೇಳಿದರು. ಭಾರತ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ ಮತ್ತು ಯುವ ಪದವೀಧರರು ಬದ್ಧತೆಯೊಂದಿಗೆ ಮುಂದುವರಿಯಬೇಕು ಎಂದು ಅವರು ಹೇಳಿದರು. ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸುವ ಬಗ್ಗೆಯೂ ಅವರು ಒತ್ತು ನೀಡಿದರು.

ಪ್ರಸ್ತುತ ಪೀಳಿಗೆ 21 ನೇ ಶತಮಾನದ ಯುವಜನತೆಯನ್ನು ಸ್ವಚ್ಛ ವಾತಾವರಣದೊಂದಿಗೆ ಮುಂದುವರಿಯಿರಿ ಎಂದು ಪ್ರಧಾನಮಂತ್ರಿಗಳು ಆಗ್ರಹಿಸಿದರು. ಸ್ವಚ್ಛ ವಾತಾವರಣ ಮತ್ತು ಸ್ವಚ್ಛ ಹೃದಯ ಎಂದರೆ ಸ್ಪಷ್ಟ ಉದ್ದೇಶಗಳು ಎಂದರ್ಥ.21 ನೇ ಶತಮಾನದಲ್ಲಿ ಭಾರತದ ಮೇಲೆ ವಿಶ್ವದ ಆಶಯಗಳು ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ ಮತ್ತು ಭಾರತದ ಆಶಯಗಳು ಮತ್ತು ನಿರೀಕ್ಷೆಗಳು ವಿದ್ಯಾರ್ಥಿಗಳು ಹಾಗೂ ವೃತ್ತಿಪರರ ಮೇಲೆ ಆಧರಿಸಿವೆ ಎಂದು ಅವರು ಸೂಚಿಸಿದರು              

***



(Release ID: 1674770) Visitor Counter : 211