ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೊರೊನಾ ಹೊಸ ಪ್ರಕರಣಗಳನ್ನು ಹಿಂದಿಕ್ಕುತ್ತಿರುವ ದೈನಂದಿನ ಚೇತರಿಕೆ ಪ್ರವೃತ್ತಿ; ನಿರಂತರ ಇಳಿಮುಖ ಹಾದಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ


ಒಟ್ಟು ಕೊರೊನಾ ಪ್ರಕರಣಗಳ 5%ಗೆ ತಗ್ಗಿದ ಸಕ್ರಿಯ ಪ್ರಕರಣಗಳು

Posted On: 19 NOV 2020 11:30AM by PIB Bengaluru

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 45,576 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾದರೆ, ಒಂದೇ ದಿನದಲ್ಲಿ 48,493 ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದ ದೈನಂದಿನ ಸಕ್ರಿಯ ಸೋಂಕಿತರ ಪ್ರಮಾಣ 2,917ರಷ್ಟು ಇಳಿಕೆ ಆದಂತಾಗಿದೆ.

ಹೊಸ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದು, ಕಳೆದ 47 ದಿನಗಳಿಂದ ಚೇತರಿಕೆ ದರ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಸಕ್ರಿಯ ಪ್ರಕರಣಗಳನ್ನು ಹಿಂದಿಕ್ಕುತ್ತಿದೆ.

ದೇಶಾದ್ಯಂತ ತನಕ ಕಾಣಿಸಿಕೊಂಡಿರುವ ಒಟ್ಟು ಕೊರೊನಾ ಪ್ರಕರಣಗಳ ಶೇಕಡ 5 ಮಟ್ಟಕ್ಕಿಂತ ಕೆಳಕ್ಕೆ ಸಕ್ರಿಯ ಪ್ರಕರಣಗಳ ಪ್ರಮಾಣ ತಗ್ಗಿದೆ.

ದಿನನಿತ್ಯ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಪ್ರವೃತ್ತಿಯು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣಲು ಕಾರಣವಾಗುತ್ತಿದೆ. ಭಾರತದಲ್ಲಿ ಪ್ರಸ್ತುತ 4,43,303 ಸಕ್ರಿಯ ಪ್ರಕರಗಳು ವರದಿಯಾಗಿವೆ. ಇವು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆಯ ಶೇಕಡ 4.95ಕ್ಕೆ ತಗ್ಗಿರುವುದು ಆಶಾದಾಯಕ ಬೆಳವಣಿಗೆ.

ಪ್ರತಿ 24 ತಾಸುಗಳ ಬೆಳವಣಿಗೆಯಲ್ಲಿ ಹೊಸ ಚೇತರಿಕೆ ದರವು ಹೊಸ ಕೊರಾನಾ ಪ್ರಕರಣಗಳನ್ನು ಹಿಂದಿಕ್ಕುತ್ತಿದೆ. ಇದರ ಫಲವಾಗಿ, ಚೇತರಿಕೆ ದರ ಇದೀಗ 93.58%ಗೆ ಸುಧಾರಣೆ ಕಂಡಿದೆ. ದೇಶದಲಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ತನಕ ಒಟ್ಟು 83,83,602 ಸೋಂಕಿತರು ಗುಣಮುಖರಾಗಿದ್ದಾರೆ. ಗುಣಮುಖ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ದಿನೇದಿನೆ ಸ್ಥಿರವಾಗಿ ಏರಿಕೆ ಕಾಣುತ್ತಿದ್ದು, ಪ್ರಸ್ತುತ ಅದು 79,40,299ರಷ್ಟಿದೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 77.27% ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ತಾಸುಗಳಲ್ಲಿ ಕೇರಳ ರಾಜ್ಯದಲ್ಲೇ 7,066 ಹೊಸ ಪ್ರಕರಣಗಳು ಪತ್ತೆಯಾಗಿ, ಆಗ್ರ ಸ್ಥಾನದಲ್ಲಿದೆ. ದೆಹಲಿಯಲ್ಲಿ 6,901, ಮಹಾರಾಷ್ಟ್ರದಲ್ಲಿ 6,608 ಪ್ರಕರಣಗಳ ದೃಢಪಟ್ಟಿವೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 77.28% ಹೊಸ ಪ್ರಕರಣಗಳು ದೃಢಪಟ್ಟಿವೆ.

ಕಳೆದ 24 ತಾಸುಗಳಲ್ಲಿ ದೆಹಲಿ ಮಹಾನಗರಿಯಲ್ಲಿ 7,486, ಕೇರಳದಲ್ಲಿ 6,419 ಮತ್ತು ಮಹಾರಾಷ್ಟ್ರದಲ್ಲಿ 5,011 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ದೇಶಾದ್ಯಂತ ನಿನ್ನೆ ಒಂದೇ ದಿನ ಒಟ್ಟು 585 ಕೊರೊನಾ ಸಾವುಗಳು ಸಂಭವಿಸಿವೆ. ಅದರಲ್ಲಿ 79.49% ಮರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿದೆ.

ದೆಹಲಿಯಲ್ಲಿ 131 ಅಂದರೆ 22.39%., ಮಹಾರಾಷ್ಟ್ರದಲ್ಲಿ 100 ಮತ್ತು ಪಶ್ಚಿಮ ಬಂಗಾಳದಲ್ಲಿ 54 ಹೊಸ ಸಾವುಗಳು ಸಂಭವಿಸಿವೆ.

***


(Release ID: 1674003) Visitor Counter : 205