ಪ್ರಧಾನ ಮಂತ್ರಿಯವರ ಕಛೇರಿ
ಪ್ರಸಿದ್ಧ ಬೆಂಗಾಲಿ ನಟ ಸೌಮಿತ್ರಾ ಚಟರ್ಜಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
ಪ್ರಕಟಣಾ ದಿನಾಂಕ:
15 NOV 2020 3:25PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಂಗಾಲಿಯ ಧೀಮಂತ ನಟ ಸೌಮಿತ್ರ ಚಟರ್ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
"ಶ್ರೀ ಸೌಮಿತ್ರಾ ಚಟರ್ಜಿ ಅವರ ನಿಧನದಿಂದ ಸಿನಿಮಾ ಜಗತ್ತಿಗೆ, ಭಾರತ ಮತ್ತು ಪಶ್ಚಿಮ ಬಂಗಾಳದ ಸಾಂಸ್ಕೃತಿಕ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ತಮ್ಮ ಕೃತಿಗಳ ಮೂಲಕ ಅವರು ಬಂಗಾಳಿ ಸಂವೇದನೆಗಳು, ಭಾವನೆಗಳು ಮತ್ತು ನೀತಿಗಳನ್ನು ಸಾಕಾರಗೊಳಿಸಿದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ." ಎಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿ ತಿಳಿಸಿದ್ದಾರೆ.
***
(ಪ್ರಕಟಣೆ ಐ.ಡಿ.: 1673063)
ವಿಸಿಟರ್ ಕೌಂಟರ್ : 163
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam