ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ(ಎಬಿವಿಕೆವೈ); ಕಾರ್ಮಿಕರ ವಿಮೆ ಕ್ಲೈಮ್ ಸಲ್ಲಿಕೆಗೆ ಪ್ರಮಾಣಪತ್ರ ಅಗತ್ಯವಿಲ್ಲ
ಸ್ಕ್ಯಾನ್ ಮಾಡಿದ ಪ್ರತಿಗಳೊಂದಿಗೆ ಆನ್ ಲೈನ್ ಮೂಲಕ ಕ್ಲೈಮ್ ಸಲ್ಲಿಕೆಗೆ ಅವಕಾಶ
Posted On:
08 NOV 2020 2:07PM by PIB Bengaluru
ಕಾರ್ಮಿಕರ ರಾಜ್ಯ ವಿಮಾ ನಿಗಮ(ಇಎಸ್ಐ) ಆಗಸ್ಟ್ ರ 20 ಸಭೆಯಲ್ಲಿ ‘ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ’ಯನ್ನು 2020ರ ಜುಲೈ 1 ರಿಂದ 2021ರ ಜೂನ್ 30ರ ವರೆಗೆ ವಿಸ್ತರಿಸಲು ನಿರ್ಧಾರ ಕೈಗೊಂಡಿತ್ತು. ಅಲ್ಲದೆ ಪರಿಹಾರದ ಪ್ರಮಾಣವನ್ನೂ ಪ್ರತಿ ದಿನದ ಗಳಿಕೆಯ ಸರಾಸರಿ ಶೇ.25ರಿಂದ ಶೇ.50ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿತ್ತು. ಜೊತೆಗೆ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಿರುದ್ಯೋಗಿಗಳಾಗಿರುವ ಕಾರ್ಮಿಕರಿಗೆ ಪರಿಹಾರ ನೀಡಲು ಮಾರ್ಚ್ ನಿಂದ ಡಿಸೆಂಬರ್ ಅಂತ್ಯದವರೆಗೆ ಅರ್ಹತಾ ಷರತ್ತುಗಳನ್ನು ಸಡಿಲಗೊಳಿಸಲಾಗಿತ್ತು.
ಯೋಜನೆಗೆ ನೀಡಲಾದ ಷರತ್ತಿನ ವಿನಾಯ್ತಿಯಿಂದ ಫಲಾನುಭವಿಗಳಿಗೆ ಲಾಭವಾಗಿದೆಯೇ ಎಂಬ ಪ್ರತಿಕ್ರಿಯೆಯನ್ನು ವಿಶ್ಲೇಷಿಸಿ, ಕ್ಲೈಮ್ ಸಲ್ಲಿಕೆಗೆ ಪ್ರಮಾಣಪತ್ರ ನಮೂನೆ ಸಲ್ಲಿಸುವುದು ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂಬ ಅಂಶವನ್ನು ಗಮನಿಸಿ, ಕಾರ್ಮಿಕರಿಗೆ ಸಮಸ್ಯೆಗಳನ್ನು ಸಮಸ್ಯೆಗಳನ್ನು ಪರಿಗಣಿಸಿ, ಇದೀಗ ‘ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ’ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ವ್ಯಕ್ತಿ ಮತ್ತು ಆಧಾರ್ ಪ್ರತಿ ಹಾಗೂ ಬ್ಯಾಂಕ್ ವಿವರದ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ ಲೋಡ್ ಮಾಡಿದ ನಂತರ ಭೌತಿಕವಾಗಿ ಯಾವುದೇ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ನಿರ್ಧರಿಸಲಾಗಿದೆ.
ಕ್ಲೈಮ್ ದಾರರು ಆನ್ ಲೈನ್ ಮೂಲಕ ಸಕಾಲದಲ್ಲಿ ದಾಖಲೆಗಳನ್ನು ಅಪ್ ಲೋಡ್ ಮಾಡದೆ ಇದ್ದರೆ, ಅಗತ್ಯ ದಾಖಲೆಗಳೊಂದಿಗೆ ಸಹಿ ಮಾಡಿದ ಕ್ಲೈಮ್ ಅರ್ಜಿಯ ಪ್ರತಿಗಳನ್ನು ಸಲ್ಲಿಸಬಹುದು. ಪ್ರಮಾಣಪತ್ರದ ರೂಪದಲ್ಲಿ ಕ್ಲೇಮ್ ಸಲ್ಲಿಸಬೇಕೆಂಬ ಷರತ್ತಿಗೆ ವಿನಾಯಿತಿ ನೀಡಲಾಗಿದೆ.
ಭಾರತದಲ್ಲಿ ಇಎಸ್ಐ ಯೋಜನೆ
ಕಾರ್ಮಿಕರ ರಾಜ್ಯ ವಿಮಾ ನಿಗಮ ಇದು, ಸಾಮಾಜಿಕ ಭದ್ರತಾ ಸಂಸ್ಥೆಯಾಗಿದ್ದು, ಕಾರ್ಮಿಕರ ಮರಣ, ಅಪಘಾತ ಮತ್ತು ಅನಾರೋಗ್ಯಕ್ಕೆ ಒಳಗಾದ ಸಂದರ್ಭಗಳಲ್ಲಿ ರಿಯಾಯಿತಿ ದರದಲ್ಲಿ ವೈದ್ಯಕೀಯ ಆರೈಕೆ ಮತ್ತು ನಗದು ಸೇರಿ ಸಮಗ್ರ ಸಾಮಾಜಿಕ ಭದ್ರತಾ ಸೌಕರ್ಯಗಳನ್ನು ಒದಗಿಸುತ್ತಿದೆ. ಇದರಡಿ 3.49 ಕೋಟಿ ಕುಟುಂಬಗಳ ಕಾರ್ಮಿಕರು ಒಳಪಡಲಿದ್ದು, ಅದು ಹೊಂದಾಣಿಕೆಯಾಗದ ನಗದು ಪ್ರಯೋಜನಗಳು ಮತ್ತು 13.56 ಕೋಟಿ ಫಲಾನುಭವಿಗಳಿಗೆ ಸೂಕ್ತ ವೈದ್ಯಕೀಯ ರಕ್ಷಣೆಯನ್ನು ಒದಗಿಸುತ್ತವೆ.
ನಿಗಮದ ಮೂಲಸೌಕರ್ಯ ಹಲವು ಪಟ್ಟು ಹೆಚ್ಚಾಗಿದ್ದು, 1520 ಡಿಸ್ಪೆನ್ಸರಿಗಳು(ಮೊಬೈಲ್ ಡಿಸ್ಪೆನ್ಸರಿಗಳು ಸೇರಿ) 307 ಐಎಸ್ಎಂ ಘಟಕಗಳು ಮತ್ತು 159 ಇಎಸ್ಐ ಆಸ್ಪತ್ರೆಗಳು, 793 ಶಾಖೆ ಮತ್ತು ಪಾವತಿ ಕೇಂದ್ರಗಳು ಹಾಗೂ 64 ಪ್ರಾದೇಶಿಕ ಮತ್ತು ಉಪ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ.. ಇಎಸ್ಐ ಯೋಜನೆ ಸದ್ಯ ದೇಶದ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 566 ಜಿಲ್ಲೆಗಳಲ್ಲಿ ಜಾರಿಯಲ್ಲಿವೆ.
*****
(Release ID: 1671325)
Visitor Counter : 302