ಪ್ರಧಾನ ಮಂತ್ರಿಯವರ ಕಛೇರಿ

ಐಐಟಿ ದೆಹಲಿಯ 51ನೇ ಘಟಿಕೋತ್ಸವ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ


ದೇಶದ ಅಗತ್ಯಗಳನ್ನು ಗುರುತಿಸಲು ಮತ್ತು ವಾಸ್ತವ ಬದಲಾವಣೆಗಳೊಂದಿಗೆ ಸಂಪರ್ಕಿತರಾಗಿರಲು ಪದವೀಧರರಿಗೆ ಆಗ್ರಹ

ಭಾರತ ತನ್ನ ಯುವಕರಿಗೆ 'ಸುಗಮ ವಾಣಿಜ್ಯ' ಒದಗಿಸಲು ಬದ್ಧವಾಗಿದೆ, ಅವರು ದೇಶದ ಜನರಿಗೆ 'ಸುಗಮ ಜೀವನ' ತರಲು ಗಮನ ಹರಿಸಬೇಕು: ಪ್ರಧಾನಮಂತ್ರಿ

ಐಐಟಿ ಪದವೀಧರರಿಗೆ ಗುಣಮಟ್ಟ, ಆರೋಹ್ಯತೆ, ವಿಶ್ವಾಸಾರ್ಹತೆ ಮತ್ತು ಅಳವಡಿಕೆಯ ಮಂತ್ರ ಪ್ರದಾನ

Posted On: 07 NOV 2020 2:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಅಗತ್ಯಗಳನ್ನು ಗುರುತಿಸಿ, ವಾಸ್ತವ ಬದಲಾವಣೆಗಳಿಗೆ ಸಂಪರ್ಕಿತರಾಗುವಂತೆ  ಐಐಟಿಯ ನೂತನ ಪದವೀಧರರಿಗೆ ಕರೆ ನೀಡಿದ್ದಾರೆ. ಆತ್ಮನಿರ್ಭರ ಭಾರತ ನಿಟ್ಟಿನಲ್ಲಿ ಸಾಮಾನ್ಯ ಜನರ ಆಶೋತ್ತರಗಳನ್ನೂ ಗುರುತಿಸುವಂತೆ ಅವರು ತಿಳಿಸಿದ್ದಾರೆ. ಐಐಟಿ ದೆಹಲಿಯ 51ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮುಖ್ಯ ಅತಿಥಿಗಳಾಗಿ ಪ್ರಧಾನಮಂತ್ರಿಯವರು ಮಾತನಾಡುತ್ತಿದ್ದರು. 

ಘಟಿಕೋತ್ಸವ ಸಂದರ್ಭದಲ್ಲಿ 2000 ಐಐಟಿ ಪದವೀಧರರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ ಆತ್ಮನಿರ್ಭರ ಭಾರತ ಅಭಿಯಾನ ದೇಶದ ಯುವಕರಿಗೆ, ತಂತ್ರಜ್ಞರಿಗೆ ಮತ್ತು ತಾಂತ್ರಿಕ ಉದ್ಯಮಶೀಲ ಮುಂದಾಳುಗಳಿಗೆ ಅವಕಾಶಗಳನ್ನು ನೀಡುತ್ತದೆ ಎಂದು ಹೇಳಿದರು. ಇಂದು ತಂತ್ರಜ್ಞರ ಆಲೋಚನೆಗಳು ಮತ್ತು ನಾವೀನ್ಯತೆಗಳನ್ನು ಮುಕ್ತವಾಗಿ ಅನುಷ್ಠಾನಗೊಳಿಸಲು ಮತ್ತು ಅವುಗಳನ್ನು ಅಳೆಯಲು ಮತ್ತು ಸುಲಭವಾಗಿ ಮಾರುಕಟ್ಟೆ ಮಾಡಲು ಅನುಕೂಲಕರ ವಾತಾವರಣವನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು. ಇಂದಿನ ಭಾರತವು ತನ್ನ ಯುವಕರಿಗೆ 'ವ್ಯವಹಾರವನ್ನು ಸುಲಭಗೊಳಿಸಲು' ಬದ್ಧವಾಗಿದೆ, ಇದರಿಂದಾಗಿ ಅವರು ತಮ್ಮ ನಾವೀನ್ಯತೆಯ ಮೂಲಕ ತಮ್ಮ ದೇಶದ ಕೋಟ್ಯಂತರ ಜನರ ಜೀವನದಲ್ಲಿ ಬದಲಾವಣೆಗಳನ್ನು ತರಬಹುದು ಎಂದರು. "ದೇಶವು ನಿಮಗೆ 'ಸುಗಮ ವಾಣಿಜ್ಯ' ಒದಗಿಸುತ್ತದೆ ನೀವು ದೇಶದ ಜನರ 'ಸುಗಮ ಜೀವನ'ಕ್ಕೆ ಶ್ರಮಿಸಿ ಎಂದು ಶ್ರೀ ಮೋದಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಲಯದಲ್ಲೂ ಆಗಿರುವ ಪ್ರಮುಖ ಸುಧಾರಣೆಗಳ ಹಿಂದಿನ ಆಲೋಚನಾ ಪ್ರಕ್ರಿಯೆ ಇದಾಗಿದೆ ಎಂದು ಅವರು ವಿವರಿಸಿದರು. ಸುಧಾರಣೆಗಳಿಂದಾಗಿ ಮೊದಲ ಬಾರಿಗೆ ನಾವೀನ್ಯತೆ ಮತ್ತು  ನವೋದ್ಯಮಗಳಿಗೆ ಅವಕಾಶಗಳನ್ನು ಸೃಷ್ಟಿಸಿರುವ ಕ್ಷೇತ್ರಗಳನ್ನು ಅವರು ಪಟ್ಟಿ ಮಾಡಿದರು.

ಇತರ ಸೇವಾ ಪೂರೈಕೆದಾರರ (ಓಎಸ್ಪಿ) ಮಾರ್ಗಸೂಚಿಗಳನ್ನು ಇತ್ತೀಚೆಗೆ ಸರಳೀಕರಿಸಲಾಗಿದ್ದು, ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ, ಇದು ಬಿಪಿಓ ಕೈಗಾರಿಕೆಗಳ ಅನುಸರಣೆಯ ಹೊರೆಯನ್ನು ತಗ್ಗಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಬ್ಯಾಂಕ್ ಗ್ಯಾರಂಟಿ ಸೇರಿದಂತೆ ವಿವಿಧ ಅವಶ್ಯಕತೆಗಳಿಂದ ಬಿಪಿಓ ಉದ್ಯಮಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದರು. ಮನೆಯಿಂದಲೇ ಕೆಲಸ ಅಥವಾ ಎಲ್ಲಿಂದಲಾದರೂ ಕೆಲಸ ಮಾಡುವಂತಹ ಟೆಕ್ ಕೈಗಾರಿಕೆಯ ಅವಕಾಶಗಳಿಗೆ ತಡೆ ಒಡ್ಡುವ ನಿಬಂಧನೆಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು. ಇದು ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತಿದೆ ಮತ್ತು ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ ಎಂದೂ ಹೇಳಿದರು.

ಸಾಂಸ್ಥಿಕ ತೆರಿಗೆ ಕಡಿಮೆ ಇರುವ ದೇಶಗಳ ಸಾಲಿನಲ್ಲಿ ಇಂದು ಭಾರತವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನವೋದ್ಯಮ ಭಾರತ ಅಭಿಯಾನದ ಆರಂಭದಿಂದ ಇಲ್ಲಿವರೆಗೆ ಭಾರತದಲ್ಲಿ 50 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ಪ್ರಾರಂಭವಾಗಿವೆ. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಪೇಟೆಂಟ್‌ ಗಳ ಸಂಖ್ಯೆಯಲ್ಲಿ 4 ಪಟ್ಟು ಹೆಚ್ಚಳವಾಗಿದ್ದರೆ, ಟ್ರೇಡ್‌ ಮಾರ್ಕ್ ನೋಂದಣಿಯಲ್ಲಿ 5 ಪಟ್ಟು ಹೆಚ್ಚಳವಾಗಿದೆ ಎಂದ ಅವರು, ನವೋದ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳಿಂದಾಗಿರುವ ಪ್ರಯೋಜನದ ಪಟ್ಟಿ ಮಾಡಿದರು. ವರ್ಷಗಳಲ್ಲಿ 20ಕ್ಕೂ ಹೆಚ್ಚು ಭಾರತೀಯ ಯುನಿಕಾರ್ನ್ ಗಳನ್ನು ಸ್ಥಾಪಿಸಲಾಗಿದೆ ಮತ್ತು ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಇನ್ ಕ್ಯುಬೇಷನ್ ನಿಂದ ಆರ್ಥಿಕ ನೆರವಿನವರೆಗೆ, ನವೋದ್ಯಮಗಳಿಗೆ ನೆರವಾಗಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.ನವೋದ್ಯಮಗಳಿಗೆ ಹಣ ನೀಡಲು 10 ಸಾವಿರ ಕೋಟಿ ರೂ.ಗಳ ಕಾಪುನಿಧಿಯೊಂದಿಗೆ ನಿಧಿಯ ನಿಧಿ ರಚಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಇದರ ಜೊತೆಗೆ 3 ವರ್ಷಗಳ ಅವಧಿಗೆ, ನವೋದ್ಯಮಗಳಿಗೆ ತೆರಿಗೆ ವಿನಾಯಿತಿ, ಸ್ವಯಂ ಪ್ರಮಾಣೀಕರಣ ಮತ್ತು ಸುಗಮ ನಿರ್ಗಮನ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಇಂದು ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಹೂಡಿಕೆ ಯಡಿ 1 ಲಕ್, ಕೋಟಿ ಯೋಜಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಇದು ಅತ್ಯಾಧುನಿಕ ಮೂಲಸೌಕರ್ಯವನ್ನು ದೇಶದಾದ್ಯಂತ ರೂಪಿಸಲಿದೆ ಇದು ಇಂದಿನ ಮತ್ತು ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲಿದೆ ಎಂದರು. ಇಂದು ದೇಶ ಪ್ರತಿಯೊಂದು ಕ್ಷೇತ್ರದಲ್ಲಿಯೂ ಗರಿಷ್ಠ ಸಾಮರ್ಥ್ಯದ ಬಳಕೆಗಾಗಿ ಹೊಸ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳಿಗೆ ಅವರ ಕಾರ್ಯ ಸ್ಥಳದಲ್ಲಿ ಈ ನಾಲ್ಕು ಮಂತ್ರ ಪಾಲಿಸುವಂತೆ ತಿಳಿಸಿದರು.

1. ಗುಣಮಟ್ಟಕ್ಕೆ ಗಮನ; ಎಂದಿಗೂ ರಾಜಿ ಬೇಡ.

2. ಆರೋಹ್ಯತೆಯ ಖಾತ್ರಿ; ನಿಮ್ಮ ನಾವೀನ್ಯತೆಯ ಕಾರ್ಯವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ.

3. ವಿಶ್ವಾಸಾರ್ಹತೆ ಖಾತ್ರಿಪಡಿಸಿ; ಮಾರುಕಟ್ಟೆಯಲ್ಲಿ ದೀರ್ಘಕಾಲೀನ ವಿಶ್ವಾಸ ಮೂಡಿಸಿ.

4. ಅಳವಡಿಕೆಯನ್ನು ತನ್ನಿ; ಬದಲಾವಣೆಗೆ ಮುಕ್ತವಾಗಿರಿ ಮತ್ತು ಜೀವನದಲ್ಲಿ ಅನಿಶ್ಚಿತ ಸ್ಥಿತಿ ನಿರೀಕ್ಷಿಸಿ

ಈ ಮೂಲಭೂತ ಮಂತ್ರಗಳ ಮೇಲೆ ಕೆಲಸ ಮಾಡುವುದರಿಂದ ಒಬ್ಬರ ಪರಿಚಯ ಜೊತೆಗೆ ಬ್ರಾಂಡ್ ಇಂಡಿಯಾ ಪ್ರಕಾಶಕ್ಕೆ ತರುತ್ತವೆ, ಏಕೆಂದರೆ ವಿದ್ಯಾರ್ಥಿಗಳು  ಭಾರತದ ಅತಿದೊಡ್ಡ ಬ್ರಾಂಡ್ ರಾಯಭಾರಿಗಳಾಗಿದ್ದಾರೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳ ಕಾರ್ಯವು ದೇಶದ ಉತ್ಪನ್ನಕ್ಕೆ ಜಾಗತಿಕ ಮನ್ನಣೆ ನೀಡುತ್ತದೆ ಮತ್ತು ದೇಶದ ಪ್ರಯತ್ನಗಳನ್ನು ವೇಗಗೊಳಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

ಕೋವಿಡೋತ್ತರ ಜಗತ್ತು ತುಂಬಾ ವಿಭಿನ್ನವಾಗಿರಲಿದೆ ಮತ್ತು ತಂತ್ರಜ್ಞಾನವು ಅದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ವರ್ಚುವಲ್ ವಾಸ್ತವಿಕತೆ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ ಆದರೆ ಈಗ ವರ್ಚುವಲ್ ವಾಸ್ತವಿಕತೆ ಮತ್ತು ವರ್ಧಿತ ವಾಸ್ತವತೆ ಕಾರ್ಯಸಾಧ್ಯ ವಾಸ್ತವವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. ಪ್ರಸ್ತುತ ತಂಡದ ವಿದ್ಯಾರ್ಥಿಗಳು ಕೆಲಸದ ಸ್ಥಳದಲ್ಲಿ ಹೊರಹೊಮ್ಮುತ್ತಿರುವ ಹೊಸ ನಿಯಮಗಳನ್ನು ಕಲಿಯಲು ಮತ್ತು ಅದಕ್ಕೆ ಹೊಂದಿಕೊಳ್ಳುವ ಪ್ರಥಮಾವಕಾಶದ ಲಾಭ ಪಡೆಯಲಿದ್ದಾರೆ ಮತ್ತು ಅವರು ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು  ಆಗ್ರಹಿಸಿದರು. ಕೋವಿಡ್ -19 ಜಾಗತೀಕರಣವು ಮುಖ್ಯವಾದುದು ಅದರ ಜೊತೆಗೆ ಸ್ವಾವಲಂಬನೆಯೂ ಅಷ್ಟೇ ಮುಖ್ಯ ಎಂಬುದನ್ನು ಕಲಿಸಿದೆ ಎಂದು ಅವರು ಹೇಳಿದರು.

ಆಡಳಿತವು ಬಡ ಬಡವರನ್ನು ತಲುಪಲು ತಂತ್ರಜ್ಞಾನವು ಹೇಗೆ ಅತ್ಯಂತ ಶಕ್ತಿಯುತ ಸಾಧನವಾಗಿದೆ ಎಂಬುದನ್ನು ಇತ್ತೀಚಿನ ದಿನಗಳಲ್ಲಿ ದೇಶವು ತೋರಿಸಿಕೊಟ್ಟಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರದ ಯೋಜನೆಗಳಾದ ಶೌಚಾಲಯಗಳ ನಿರ್ಮಾಣ, ಅನಿಲ ಸಂಪರ್ಕ ಇತ್ಯಾದಿಗಳು ತಂತ್ರಜ್ಞಾನದ ನೆರವಿನಿಂದ ಬಡಜನರನ್ನು ತಲುಪಿದೆ ಎಂದು ಅವರು ಪಟ್ಟಿ ಮಾಡಿದರು. ಸೇವೆಗಳ ಡಿಜಿಟಲ್ ವಿತರಣೆಯಲ್ಲಿ ದೇಶವು ತ್ವರಿತಗತಿಯಲ್ಲಿ ಸಾಗುತ್ತಿದೆ ಮತ್ತು ಸಾಮಾನ್ಯ ನಾಗರಿಕರ ಜೀವನವನ್ನು ಸುಗಮಗೊಳಿಸುತ್ತದೆ ಎಂದು ಅವರು ಹೇಳಿದರು. ತಂತ್ರಜ್ಞಾನವು ಕೊನೆಯ ಮೈಲಿಗೂ ತಲುಪುವಲ್ಲಿ ಸಮರ್ಥವಾಗಿದೆ ಮತ್ತು ಭ್ರಷ್ಟಾಚಾರದ ವ್ಯಾಪ್ತಿಯನ್ನು ತಗ್ಗಿಸಿದೆ ಎಂದು ಅವರು ತಿಳಿಸಿದರು. ಡಿಜಿಟಲ್ ವಹಿವಾಟಿನ ವಿಷಯದಲ್ಲಿ, ಭಾರತವು ವಿಶ್ವದ ಹಲವು ದೇಶಗಳಿಗಿಂತ ಬಹಳ ಮುಂದಿದೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಯುಪಿಐನಂತಹ ಭಾರತೀಯ ವೇದಿಕೆಗಳನ್ನು ಅಳವಡಿಸಿಕೊಳ್ಳಲು ಬಯಸುತ್ತಿವೆ ಎಂದರು.

ಇತ್ತೀಚೆಗೆ ಪ್ರಾರಂಭಿಸಲಾದ ಸ್ವಾಮಿತ್ವ ಯೋಜನೆಯಲ್ಲಿ ತಂತ್ರಜ್ಞಾನವು ದೊಡ್ಡ ಪಾತ್ರವನ್ನು ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದರ ಅಡಿಯಲ್ಲಿ, ಮೊದಲ ಬಾರಿಗೆ, ವಸತಿ ಮತ್ತು ಸ್ವತ್ತಿನ ನಕ್ಷೆ ಮಾಡಲಾಗುತ್ತಿದೆ. ಈ ಕೆಲಸವನ್ನು ಈ ಹಿಂದೆ ಕೈಯಾರೆ ಮಾಡಲಾಗಿತ್ತು, ಇದರಿಂದಾಗಿ ಅನುಮಾನಗಳು ಮತ್ತು ಆತಂಕಗಳು ಸಹಜವಾಗಿದ್ದವು. ಇಂದು, ಡ್ರೋನ್ ತಂತ್ರಜ್ಞಾನ ಬಳಸಿ ನಕ್ಷೆ ಮಾಡಲಾಗುತ್ತಿದ್ದು, ಗ್ರಾಮೀಣರು ಇದರಿಂದ ಸಂಪೂರ್ಣ ಸಂತೃಪ್ತರಾಗಿದ್ದಾರೆ. ಇದು ಸಾಮಾನ್ಯ ನಾಗರಿಕರಿಗೆ ತಂತ್ರಜ್ಞಾನದ ಮೇಲೆ ಎಷ್ಟು ನಂಬಿಕೆ ಇದೆ ಎಂಬುದನ್ನು ತೋರಿಸುತ್ತದೆ ಎಂದರು. ವಿಪತ್ತು ನಿರ್ವಹಣೋತ್ತರ, ಅಂತರ್ಜಲಮಟ್ಟ ನಿರ್ವಹಣೆ, ಟೆಲಿ ಮೆಡಿಸಿನ್ ನ ತಂತ್ರಜ್ಞಾನ  ಮತ್ತು ರಿಮೋಟ್ ಶಸ್ತ್ರಚಿಕಿತ್ಸೆ, ಬೃಹತ್ ದತ್ತಾಂಶ ವಿಶ್ಲೇಷಣೆಯಂತಹ ಸವಾಲುಗಳಿಗೆ ತಂತ್ರಜ್ಞಾನ ನೀಡುವ ಪರಿಹಾರದ ಪಟ್ಟಿ ಮಾಡಿದರು. 

ಚಿಕ್ಕ ವಯಸ್ಸಿನಲ್ಲಿಯೇ ಕಠಿಣ ಪರೀಕ್ಷೆಗಳಲ್ಲಿ ಒಂದರಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಅಸಾಧಾರಣ ಸಾಮರ್ಥ್ಯಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು, ಅದೇ ವೇಳೆ ಅವರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಹೊಂದಿಕೊಂಡು ಹೋಗಲು ಮತ್ತು ವಿನಮ್ರರಾಗಿರಲು ಅವರು ಸಲಹೆ ನೀಡಿದರು. ಹೊಂದಿಕೊಂಡು ಹೋಗುವುದೆಂದರೆ ಒಬ್ಬರು ತಮ್ಮ ಗುರುತನ್ನು ಯಾವುದೇ ಹಂತದಲ್ಲಿ ಬಿಡುವುದೆಂದರ್ಥವಲ್ಲ, ಆದರೆ ತಂಡಕ್ಕೆ ಹೊಂದಿಕೊಂಡು ಹೋಗಲು ಎಂದಿಗೂ ಹಿಂಜರಿಯಬಾರದು ಎಂದರು. ನಮ್ರತೆಯಿಂದ, ಒಬ್ಬರ ಯಶಸ್ಸು ಮತ್ತು ಸಾಧನೆಗಳ ಬಗ್ಗೆ ಹೆಮ್ಮೆಪಡುವಾಗ ಅವರು ವಿನಮ್ರರಾಗುವುದು ಎಂದರ್ಥ ಎಂದರು. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘಟಿಕೋತ್ಸವಕ್ಕಾಗಿ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು, ಬೋಧಕರು ಮತ್ತು ಮಾರ್ಗದರ್ಶಕರನ್ನು ಅಭಿನಂದಿಸಿದರು. ಐಐಟಿ ದೆಹಲಿಗೆ ವಜ್ರಮಹೋತ್ಸವದ ಅಂಗವಾಗಿ ಅವರು ಶುಭ ಕೋರಿ, ಈ ದಶಕದಲ್ಲಿ ಸಂಸ್ಥೆ ಕಲ್ಪಿಸಿಕೊಂಡ ಗುರಿಗಳನ್ನು ಸಾಧಿಸುವಲ್ಲಿ ಯಶಸ್ಸು ದೊರಕಲಿ ಎಂದು ಹಾರೈಸಿದರು.. 

***



(Release ID: 1671075) Visitor Counter : 231