ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ತಳಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ದೇಶದ 1300 ಕ್ಕೂ ಅಧಿಕ ಪ್ರತಿಭಾಶಾಲಿ ಮನಸ್ಕರರ ಒಗ್ಗೂಡಿಕೆಯ ಗೌ ಟೆಕ್-ಥಾನ್ 2020


ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್.ಐ.ಸಿ,) ಐ.ಇ.ಇ.ಇ. ಮತ್ತು ಓರೇಕಲ್ ಸಂಸ್ಥೆಯ ಸಹಯೋಗದಲ್ಲಿ ರಾಷ್ಟ್ರವ್ಯಾಪೀ ವರ್ಚುವಲ್ ಹ್ಯಾಕಥಾನ್

ವಿಜೇತರ ಘೋಷಣೆ; ವಾಹನ ಕ್ಷಮತೆ ತಪಾಸಣೆಗೆ ಸ್ವಯಂಚಾಲಿತ ನವೀನ ಮೂಲ ಮಾದರಿ ಪರಿಹಾರ ಪ್ರದರ್ಶಿಸಿದ ಫಿಟ್ ಫಾರ್ ಫ಼್ಯೂಚರ್ ತಂಡಕ್ಕೆ ಮೊದಲ ಸ್ಥಾನ.

Posted On: 06 NOV 2020 12:31PM by PIB Bengaluru

ಐ.ಇ.ಇ..ಇ. ,ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್.ಐ.ಸಿ.) ಮತ್ತು ಓರೇಕಲ್ ಗಳು ಭಾರತ ಸರಕಾರದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂ.ಇ.ಐ.ಟಿ.ವೈ.)  ಆಶ್ರಯದಲ್ಲಿ 36 ತಾಸುಗಳ ಸರಕಾರಿ –ಟೆಕ್-ಥಾನ್ 2020 ನ್ನು ಆಯೋಜಿಸಿದ್ದು, 2020 ರ ನವೆಂಬರ್ 1 ರಂದು ಇದರ ಸಮಾರೋಪ ಸಮಾರಂಭ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ವರ್ಚುವಲ್ ಹ್ಯಾಕಥಾನ್ ನಲ್ಲಿ 1300 ಮದಿ ನೊಂದಾಯಿಸಿಕೊಂಡಿದ್ದರು,ಅವರನ್ನು 390 ತಂಡಗಳಾಗಿ ವಿಭಜಿಸಲಾಗಿತ್ತು. ಹ್ಯಾಕಥಾನ್ ವೆಬ್ ಪುಟವು  2 ವಾರಗಳಲ್ಲಿ 15,000 ಸಂದರ್ಶಕರನ್ನು ಆಕರ್ಷಿಸಿತ್ತು.

ಕೇಂದ್ರ ಸರಕಾರದ ಮೂರು ಸಚಿವಾಲಯಗಳಾದ- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಮತ್ತು ಶಿಕ್ಷಣ ಸಚಿವಾಲಯಗಳು ಮುಂದಿಟ್ಟ ಐದು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಅಂತಿಮವಾಗಿ ಆಯ್ಕೆಯಾದ 100 ತಂಡಗಳ 447 ಮಂದಿ ಉತ್ಸಾಹಿಗಳು ಈ ಹ್ಯಾಕಥಾನ್ ನಲ್ಲಿ ಭಾಗವಹಿಸಿದ್ದರು.

ಕೈಗಾರಿಕೆ, ಶೈಕ್ಷಣಿಕ ವಲಯ , ಮತ್ತು ಸರಕಾರದ ವತಿಯಿಂದ 27 ಮಂದಿ ತೀರ್ಪುಗಾರರು ಪ್ರಸ್ತಾವನೆಗಳ ಮೌಲ್ಯಮಾಪನ ಮಾಡಿದರು.

ಸರಕಾರಿ-ಟೆಕ್ ಥಾನ್ 2020 ರಲ್ಲಿ ನವೀನ ಪರಿಹಾರಗಳನ್ನು ಅಪೇಕ್ಷಿಸಿದ ಐದು ಸವಾಲುಗಳೆಂದರೆ

1. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ, ಸ್ಥಳೀಯ ಸವಾಲುಗಳನ್ನು ಹಾಗು ಭೂಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಉತ್ಪಾದಕತೆಯನ್ನು ಹೆಚ್ಚಿಸಲು ವಿವಿಧ ಹಂಗಾಮುಗಳಲ್ಲಿ ರೈತರಿಗೆ ಪರ್ಯಾಯ ಬೆಳೆಗಳನ್ನು ಅಥವಾ ಬೆಳೆ ಆವರ್ತನೆಯನ್ನು ಸಲಹೆ ಮಾಡುವುದು.

2 . ಬೀಜ ಪೂರೈಕೆ ಸರಪಳಿ ವಿವಿಧ ಭಾಗೀದಾರರನ್ನು ಒಳಗೊಂಡ ಸಂಕೀರ್ಣ ಪರಿಸರ ವ್ಯವಸ್ಥೆ. ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಬೀಜಗಳನ್ನು ಪತ್ತೆ ಹಚ್ಚಿ ,  ಕಳಪೆ ಬೀಜ ಗುಣಮಟ್ಟಕ್ಕೆ ಸಂಬಂಧಿಸಿದ ವಿಷಯಗಳನ್ನು ನಿಭಾಯಿಸುವುದು.

3. ಒಂದೇ ಬಾರಿಗೆ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ, ಅವುಗಳ ಗಾತ್ರವನ್ನು ಹೊಂದಾಣಿಕೆ ಮಾಡಿ, (ಅವಶ್ಯಕತೆಗೆ ತಕ್ಕಂತೆ ) ದಾಖಲೆಗಳನ್ನು ಅಪ್ಲೋಡ್ ಮಾಡಲು ಮೊಬೈಲ್/ವೆಬ್ ಆಧಾರಿತ ಅಪ್ಲಿಕೇಶನ್.

4. ಮನೆಗಳಿಂದ/ ಸಂಸ್ಥೆಗಳಿಂದ  ಆನ್ ಲೈನ್ ಪರೀಕ್ಷೆಗಳ ಮೇಲೆ ನಿಗಾ ಇಡಲು  ದೂರಸಂವೇದಿ ಮೇಲುಸ್ತುವಾರಿ ತಂತ್ರಾಂಶ ಮತ್ತು ವೆಬ್ ಕ್ಯಾಮರಾಗಳನ್ನು ಒಳಗೊಂಡ ಸಲಕರಣೆ. ಈ ವ್ಯವಸ್ಥೆಯು ಸೂಕ್ತ ನಿಯಂತ್ರಣ, ವಂಚನೆ ಪತ್ತೆ ಮತ್ತು ನಿಯಮಾನುಸರಣೆ, ಅಥೆಂಟಿಕೇಶನ್ ಗಳನ್ನು ಸೂಕ್ತ ತಂತ್ರಜ್ಞಾನಗಳಾದಂತಹ ಎ.ಐ/ಎಂ.ಎಲ್. ಇತ್ಯಾದಿಗಳನ್ನು ಬಳಸಿ ಖಾತ್ರಿಪಡಿಸುವಂತಿರಬೇಕು.

5. ವಾಹನಗಳ ಕ್ಷಮತೆ ಪರೀಕ್ಷೆ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ನಡೆಸಲು ಸ್ವಯಂಚಾಲಿತ ವ್ಯವಸ್ಥೆಗಾಗಿ ಸ್ವ ಕಲಿಕಾ ಸಾಧನ.

ರಾಬರ್ಟ್ ಬಾಶ್ ಇಂಜಿನಿಯರಿಂಗ್ ಮತ್ತು ಉದ್ಯಮಾಡಳಿತ ಸೊಲ್ಯೂಶನ್ಸ್ ಪ್ರವೇಟ್ ಲಿಮಿಟೆಡ್ ನ ಫಿಟ್ ಫಾರ್ ಫ್ಯೂಚರ್ ತಂಡ ಪ್ರಥಮ ಸ್ಥಾನ ಪಡೆಯಿತು. ವಾಹನಗಳ ಕ್ಷಮತೆ ತಪಾಸಣೆ ಮಾಡುವ ಸ್ವಯಂಚಾಲಿತ ಮೂಲಮಾದರಿಯನ್ನು ಅದು ಪ್ರದರ್ಶಿಸಿತ್ತು. ಎರಡನೇ ಬಹುಮಾನ ವಡೋದರಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಹ್ಯಾಕ್ ಡೆಮೋನ್ಸ್ ಪಡೆಯಿತು. ಇದು ದೂರನಿಯಂತ್ರಣ ಮೂಲಕ ಮೇಲ್ವಿಚಾರಣೆ  ರಹಿತ ಪರೀಕ್ಷೆಗಳನ್ನು ನಡೆಸುವುದಕ್ಕೆ ಸುರಕ್ಷಿತ ಪರಿಹಾರವನ್ನು ಒದಗಿಸಿತ್ತು. ಬೆಂಗಳೂರಿನ ಪಿ.ಇ.ಎಸ್. ವಿಶ್ವವಿದ್ಯಾಲಯದ ಆರೆಂಜ್ ತಂಡವು ಬ್ಲಾಕ್ ಚೈನ್ ತಂತ್ರಜ್ಞಾನ ಮೂಲಕ ಬೀಜ ಪ್ರಮಾಣೀಕರಣಕ್ಕೆ ಸಂಬಂಧಿಸಿ ವಿಶಿಷ್ಟ ಪರಿಹಾರವನ್ನು ಒದಗಿಸಿದ್ದಕ್ಕಾಗಿ ಮೂರನೇ ಬಹುಮಾನ ಗಳಿಸಿತು.

2020 ರ ನವೆಂಬರ್ 1 ರಂದು ಸಮಾರೋಪ ಸಮಾರಂಭ ನಡೆಯಿತು. ಕೃಷಿ, ಶಿಕ್ಷಣ ಮತ್ತು ಸಾರಿಗೆ ಸಚಿವಾಲಯಗಳ ಹ್ರಿಯ ಅಧಿಕಾರಿಗಳು, ಎನ್.ಐ.ಸಿ.ಯ ಹಿರಿಯ ಅಧಿಕಾರಿಗಳು,  ಐ.ಇ.ಇ.ಇ. ಕಂಪ್ಯೂಟರ್ ಸೊಸೈಟಿ ಮಂಡಳಿ ಸದಸ್ಯರಾದ ಪ್ರೊ. ರಾಮಲತಾ ಮಾರಿಮುತ್ತು, ಓರೇಕಲ್ ಸಂಸ್ಥೆಯ ಅಧಿಕಾರಿಗಳು, ತೀರ್ಪುಗಾರರು ಮತ್ತು ಇತರರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸರಕಾರಿ ಟೆಕ್ ಥಾನ್ 2020 ರ ಸಮಾರೋಪದಲ್ಲಿ ,ಮಾತನಾಡಿದ ಎನ್.ಐ.ಸಿ ಮಹಾ ನಿರ್ದೇಶಕರಾದ  ಡಾ. ನೀತಾ ವರ್ಮಾ, ಈ ವರ್ಚುವಲ್ ಹ್ಯಾಕಥಾನ್ ಸಾಮಾಜಿಕ ವಲಯ ಮತ್ತು ಉದಯಿಸುತ್ತಿರುವ ತಂತ್ರಜ್ಞಾನಗಳ ವಿಶಿಷ್ಟ ಸಂಯೋಜನೆಯನ್ನು ತೋರ್ಪಡಿಸಿದೆ ಎಂದರು. ಹ್ಯಾಕಥಾನ್ ಸಾಮಾಜಿಕ ಸೇರ್ಪಡೆ, ಜನತೆಯ ಸಶಕ್ತೀಕರಣ ಮತ್ತು ರಾಷ್ಟ್ರದ ಒಟ್ಟು ಅಭಿವೃದ್ಧಿಗೆ ಹೊಸ ತಂತ್ರಜ್ಞಾನ ಬಳಕೆಯನ್ನು ಸಾಧ್ಯಮಾಡಿದೆ ಎಂದೂ ಅವರು ಹೇಳಿದರು.

ಮೆಲಿಸ್ಸಾ ರಸ್ಸೆಲ್, ಕಂಪ್ಯೂಟರ್ ಸೊಸೈಟಿಯ ಕಾರ್ಯಕಾರಿ ನಿರ್ದೇಶಕರು, ಹೇಳುತ್ತಾರೆ “ ಎನ್.ಐ.ಸಿ. ಮತ್ತು ಓರೇಕಲ್ ಜೊತೆ ಈ ಕಾರ್ಯಕ್ರಮಕ್ಕಾಗಿ ಸಹಭಾಗಿತ್ವ ವಹಿಸಿರುವುದಕ್ಕೆ  ನಮಗೆ ಸಂತೋಷವಾಗಿದೆ. ಐ.ಇ.ಇ.ಇ. ಕಂಪ್ಯೂಟರ್ ಸೊಸೈಟಿಯು ಭಾರತದಲ್ಲಿ ಬಲಿಷ್ಟವಾದ ಸದಸ್ಯ ನೆಲೆಯನ್ನು ಹೊಂದಿದೆ ಮತ್ತು ಸರಕಾರಿ-ಟೆಕ್ ಥಾನ್ ನಂತಹ ಅವಕಾಶಗಳು ವೃತ್ತಿಪರರಿಗೆ ತೊಡಗಿಸಿಕೊಳ್ಳಲು, ಜಾಲ ರೂಪಿಸಲು ಮತ್ತು ಸವಾಲೊಡ್ಡುವ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಸಹಾಯ ಮಾಡಲು ತಮ್ಮ ಕೌಶಲ್ಯಗಳನ್ನು ಬಳಸಿಕೊಳ್ಳಲು ಮೌಲ್ಯಯುತ ಹಾದಿಗಳನ್ನು ತೆರೆದುಕೊಡುತ್ತವೆ” .

ಶೈಲೇಂದ್ರ ಕುಮಾರ್, ಓರೇಕಲ್ ಇಂಡಿಯಾದ ಪ್ರಾದೇಶಿಕ ಆಡಳಿತ ನಿರ್ದೇಶಕರು, ಹೇಳುತ್ತಾರೆ –“ಇದೊಂದು ದೊಡ್ಡ ಸಹಯೋಗ ಮತ್ತು ನವೀನ ಶೋಧನೆಯ ಚಿಂತನೆಗಳನ್ನು ಬಿತ್ತಲು ದೊಡ್ಡ ವೇದಿಕೆ. ಇಲ್ಲಿ ಸಲ್ಲಿಕೆಯಾದ  ಮೂಲಮಾದರಿ ಪರಿಹಾರಗಳು  ಬಹಳ    ಆಕರ್ಷಕವಾಗಿದ್ದವು . ಉತ್ತಮ ನಾಳೆಗಾಗಿ ಪರಿಹಾರಗಳ ಕೊಡುಗೆಯನ್ನು ನೀಡುತ್ತಿರುವ  ನಮ್ಮ  ಯುವಜನತೆಯನ್ನು ನೋಡುವುದು ನನಗೆ  ಭಾರೀ ಹೆಮ್ಮೆಯ ಭಾವನೆಯನ್ನು ಮೂಡಿಸುತ್ತಿದೆ , ನಾನು ಗೆಲುವು ಸಾಧಿಸಿದವರಿಗೆ ಶುಭ ಹಾರೈಸುತ್ತೇನೆ. ಓರೇಕಲ್ ನಾವೀನ್ಯ ಶೋಧನೆ ಮತ್ತು ಹೊಸ ಚಿಂತನೆಗಳಿಗೆ ಬದ್ಧವಾಗಿರುತ್ತದೆ “. 

ರಾಷ್ಟ್ರೀಯ ಮಾಹಿತಿ ಕೇಂದ್ರ, (ಎನ್.ಐ.ಸಿ.) ಕುರಿತು

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್.ಐ.ಸಿ.) ವು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ (ಎಂ.ಇ.ಐ.ಟಿ.ವೈ.) ಅಡಿಯಲ್ಲಿ  ಕಾರ್ಯಾಚರಿಸುವ ಸಂಸ್ಥೆಯಾಗಿದೆ. ಎನ್.ಐ.ಸಿ.ಯನ್ನು 1976 ರಲ್ಲಿ ಸ್ಥಾಪಿಸಲಾಗಿದ್ದು, ಐ.ಸಿ.ಟಿ ಮತ್ತು ಕಳೆದ ನಾಲ್ಕು ದಶಕಗಳಲ್ಲಿ ಸರಕಾರಕ್ಕೆ  ಇ- ಆಡಳಿತ ಬೆಂಬಲವನ್ನು ನೀಡುತ್ತಿದೆ ಮತ್ತು ಡಿಜಿಟಲ್ ಅಂತರವನ್ನು ನಿವಾರಿಸಲು ಸಹಾಯ ಮಾಡುತ್ತಿದೆ. ಸುಸ್ಥಿರ ಅಭಿವೃದ್ಧಿಗೆ ಡಿಜಿಟಲ್ ಅವಕಾಶಗಳನ್ನು ಒದಗಿಸುವ ಪ್ರಮೋಟರ್ ಆಗಿ ಅದು ಮೂಡಿ ಬಂದಿದೆ. ಸಾಮಾಜಿಕ ಮತ್ತು ಸಾರ್ವಜನಿಕ ಆಡಳಿತದಲ್ಲಿ ಐ.ಸಿ.ಟಿ. ಅಪ್ಲಿಕೇಶನ್ ಗಳನ್ನು ಅನುಷ್ಟಾನಿಸುವ ಮೂಲಕ ಎನ್.ಐ.ಸಿ.ಯು  “ಮಾಹಿತಿ ಆಧಾರಿತ ಅಭಿವೃದ್ಧಿ” ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದೆ ಮತ್ತು ಅದು ಸರಕಾರಕ್ಕೆ ಸೇವೆಗಳನ್ನು ಪೂರೈಸುತ್ತಿದೆ (ಜಿಯಿಂದ ಜಿ) , ಎನ್.ಐ.ಸಿ.ಯು ವ್ಯಾಪಾರೋದ್ಯಮ (ಸರಕಾರದಿಂದ ವ್ಯಾಪಾರೋದ್ಯಮ) , ನಾಗರಿಕರಿಗೆ (ಸರಕಾರದಿಂದ ನಾಗರಿಕರಿಗೆ ) ಮತ್ತು ಸರಕಾರಿ ಸಿಬ್ಬಂದಿಗಳಿಗೆ (ಸರಕಾರದಿಂದ ಸಿಬ್ಬಂದಿಗಳಿಗೆ ) ಇಲೆಕ್ಟ್ರಾನಿಕ್ ಮೂಲಕ ಸೇವೆಗಳನ್ನು ನೀಡುತ್ತಿದೆ. ಎನ್.ಐ.ಸಿ.ಯು ತನ್ನ ಐ.ಸಿ.ಟಿ. ಜಾಲ “ಎನ್.ಐ.ಸಿ. ನೆಟ್ “  ಮೂಲಕ ಕೇಂದ್ರ ಸರಕಾರದ ಎಲ್ಲಾ ಸಚಿವಾಲಯಗಳು, 37 ರಾಜ್ಯ ಸರಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾರತದಲ್ಲಿರುವ 720 ಕ್ಕೂ ಅಧಿಕ ಜಿಲ್ಲಾಡಳಿತ ಕಚೇರಿಗಳಿಗೆ ಸಾಂಸ್ಥಿಕ ಸಂಪರ್ಕವನ್ನು ಒದಗಿಸುತ್ತದೆ.

ಎನ್.ಐ.ಸಿ.ಯು ರಾಷ್ಟ್ರವ್ಯಾಪೀ ಅತ್ಯಾಧುನಿಕ ಐ.ಸಿ.ಟಿ. ಮೂಲಸೌಕರ್ಯವನ್ನು ಸ್ಥಾಪಿಸಿರುವುದಲ್ಲದೆ, ವಿವಿಧ ಸ್ಥರಗಳಲ್ಲಿ ಸರಕಾರವನ್ನು ಬೆಂಬಲಿಸಲು ಡಿಜಿಟಲ್ ಪರಿಹಾರಗಳನ್ನು ನಿರ್ಮಿಸಿದೆ, ಆ ಮೂಲಕ ನಾಗರಿಕರಿಗೆ ಕೊನೆಯ ಹಂತದವರೆಗೂ ಸರಕಾರಿ ಸೇವೆಗಳ ಪೂರೈಕೆಯನ್ನು ಕಾರ್ಯ ಸಾಧ್ಯಮಾಡಿದೆ. ಅದು ಸರಕಾರದೊಂದಿಗೆ ವಿವಿಧ ಆಯಾಮಗಳಲ್ಲಿ ನಿಕಟವಾದ ಸಂಪರ್ಕ ಹೊಂದಿದೆ.

ಐ.ಇ.ಇ.ಇ. ಕಂಪ್ಯೂಟರ್ ಸೊಸೈಟಿ ಕುರಿತು

ಐ.ಇ.ಇ.ಇ.ಯು ಮಾನವ ಕುಲದ ಪ್ರಯೋಜನಕ್ಕಾಗಿ ಆಧುನಿಕ ತಂತ್ರಜ್ಞಾನ ಅವಿಷ್ಕಾರ ಮಾಡುವ ಬೃಹತ್ ತಂತ್ರಜ್ಞಾನ ವೃತ್ತಿಪರರ ಸಂಸ್ಥೆಯಾಗಿದೆ. ಐ.ಇ.ಇ.ಇ. ಮತ್ತು ಅದರ ಸದಸ್ಯರು 160 ಕ್ಕೂ ಅಧಿಕ ದೇಶಗಳಲ್ಲಿ ಹರಡಿದ್ದಾರೆ. 419,000 ಕ್ಕೂ ಅಧಿಕ  ಸದಸ್ಯರು ಉತ್ತಮ ನಾಳೆಗಾಗಿ ಅನ್ವೇಷಣೆಗಳನ್ನು ನಡೆಸಲು ಜಾಗತಿಕ ಸಮುದಾಯಕ್ಕೆ ಪ್ರೇರೇಪಣೆ ನೀಡುತ್ತಾರೆ. ಐ.ಇ.ಇ.ಇ. ಕುರಿತ ಇನ್ನಷ್ಟು ಮಾಹಿತಿಗಾಗಿ , ದಯವಿಟ್ಟು ಭೇಟಿ ನೀಡಿ www.ieee.org.

ಐ.ಇ.ಇ.ಇ. ಕಂಪ್ಯೂಟರ್ ಸೊಸೈಟಿಯು ಕಂಪ್ಯೂಟರ್ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿ, ಪ್ರೇರಣೆ ಮತ್ತು ಸಹಯೋಗ ನೀಡುವ ಪ್ರಮುಖ ಮೂಲವಾಗಿದೆ. ವಿಶ್ವಾದ್ಯಂತ ಸದಸ್ಯರನ್ನು ಸಂಪರ್ಕಿಸುವ ಮೂಲಕ ಕಂಪ್ಯೂಟರ್ ಸೊಸೈಟಿಯು ವೃತ್ತಿಪರರಿಗೆ ಅವರ ಉದ್ಯೋಗದ ಎಲ್ಲಾ ಹಂತಗಳಲ್ಲೂ ಸಲಕರಣೆಗಳನ್ನು ಒದಗಿಸುವ ಮೂಲಕ ಆಧುನಿಕ ತಂತ್ರಜ್ಞಾನವನ್ನು ನೀಡಿ ಸಶಕ್ತರನ್ನಾಗಿಸುತ್ತದೆ. ಐ.ಇ.ಇ.ಇ. ಕಂಪ್ಯೂಟರ್ ಸೊಸೈಟಿ ಕುರಿತ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: www.computer.org  .

ಓರೇಕಲ್ ಕುರಿತು

ಒರೇಕಲ್ ಕ್ಲೌಡ್ ಮಾರಾಟ, ಸೇವೆ, ಮಾರುಕಟ್ಟೆ, ಮಾನವ ಸಂಪನ್ಮೂಲಗಳು, ಹಣಕಾಸು, ಪೂರೈಕೆ ಸರಪಳಿ ಮತ್ತು ಉತ್ಪಾದನೆ, ಹಾಗು ಅತ್ಯುನ್ನತ ಮಟ್ಟದ ಸ್ವಯಂಚಾಲಿತ ಯಂತ್ರ ಹಾಗು ಜನರೇಶನ್ 2 ಮೂಲಸೌಕರ್ಯಗಳನ್ನು ಒದಗಿಸುವ ಸಮಗ್ರ ಅಪ್ಲಿಕೇಶನ್ಸ್ ಗಳನ್ನು ಒಳಗೊಂಡ ಸಂಸ್ಥೆಯಾಗಿದ್ದು,  ಓರೇಕಲ್ ಸ್ವಾಯತ್ತ ದತ್ತಾಂಶ ವ್ಯವಸ್ಥೆಯನ್ನು ಹೊಂದಿದೆ. ಓರೇಕಲ್ (ಎನ್.ವೈ.ಎಸ್.ಇ.: ಓ.ಆರ್.ಸಿ.ಎಲ್.) ಕುರಿತ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿಗೆ ಭೇಟಿ ನೀಡಿ : www.oracle.com.

****(Release ID: 1670659) Visitor Counter : 312