ಸಂಪುಟ

ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿನ ಸಹಕಾರ ಕುರಿತಂತೆ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅಂಗೀಕಾರ

Posted On: 04 NOV 2020 3:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್.ಸಿ.ಓ) ಮತ್ತು ಯುನೈಟೆಡ್ ಕಿಂಗ್ಡಮ್ ನ ಔಷಧ ಮತ್ತು ಆರೋಗ್ಯ ಆರೈಕೆ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಯು.ಕೆ. ಎಂ.ಎಚ್.ಆರ್.ಎ) ನಡುವೆ ಔಷಧೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿನ ಸಹಕಾರ ಕುರಿತಂತೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು ಫಲಪ್ರದವಾದ ಸಹಕಾರದ ಚೌಕಟ್ಟು ಸ್ಥಾಪಿಸಲು ಮತ್ತು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್.ಸಿ.ಓ) ಮತ್ತು ಯುನೈಟೆಡ್ ಕಿಂಗ್ಡಮ್ ನ ಔಷಧ ಮತ್ತು ಆರೋಗ್ಯ ಆರೈಕೆ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಯು.ಕೆ. ಎಂ.ಎಚ್.ಆರ್.ಎ) ನಡುವೆ ಅವರ ಅಂತಾರಾಷ್ಟ್ರೀಯ ಜವಾಬ್ದಾರಿಗಳ ನಿಟ್ಟಿನಲ್ಲಿ  ವೈದ್ಯಕೀಯ ಉತ್ಪನ್ನಗಳ ನಿಯಂತ್ರಣಕ್ಕೆ ಸಂಬಂಧಿಸಿದ ವಿಚಾರಗಳ ಮಾಹಿತಿ ವಿನಿಮಯಕ್ಕೆ ನೆರವಾಗಲಿದೆ.  ಎರಡು ನಿಯಂತ್ರಣ ಪ್ರಾಧಿಕಾರಗಳ ನಡುವಿನ ಸಹಕಾರದ ಪ್ರಮುಖ ಕ್ಷೇತ್ರಗಳಲ್ಲಿ ಈ ಕೆಳಕಂಡವುಗಳು ಸೇರಿವೆ:

a) ಇತರ ಪಕ್ಷಕಾರರಿಗೆ ಸಂಬಂಧಿಸಿದ ನಿರ್ದಿಷ್ಟ ಸುರಕ್ಷತಾ ಕಾಳಜಿ ಇರುವ ಔಷಧ ಸಹ-ಜಾಗರೂಕತೆ ಸೇರಿದಂತೆ ಸುರಕ್ಷತಾ ಮಾಹಿತಿಯ ವಿನಿಮಯ. ಇದು ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳಿಗೆ ಸಂಬಂಧಿಸಿದ ಸುರಕ್ಷತಾ ಕಾಳಜಿಗಳನ್ನು ಒಳಗೊಂಡಿದೆ.

  1. ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಆಯೋಜಿಸಿದ ವೈಜ್ಞಾನಿಕ ಮತ್ತು ಪ್ರಾಯೋಗಿಕ ಸಮ್ಮೇಳನಗಳು, ವಿಚಾರಗೋಷ್ಠಿ, ವಿಚಾರ ಸಂಕಿರಣಗಳು ಮತ್ತಿತರ ವೇದಿಕೆಗಳಲ್ಲಿ ಭಾಗವಹಿಸುವುದು.

 c) ಉತ್ತಮ ಪ್ರಯೋಗಾಲಯ ರೂಢಿಗಳು (ಜಿಎಲ್.ಪಿ), ಉತ್ತಮ ಚಿಕಿತ್ಸಾಲಯ ರೂಢಿಗಳು (ಜಿಸಿಪಿ), ಉತ್ತಮ ಉತ್ಪಾದನಾ ರೂಢಿಗಳು (ಜಿಎಂಪಿ), ಉತ್ತಮ ಪೂರೈಕೆ ರೂಢಿಗಳು (ಜಿಡಿಪಿ) ಮತ್ತು ಉತ್ತಮ ಔಷಧ ಜಾಗೃತಿ ರೂಢಿಗಳ (ಜಿಪಿವಿಪಿ) ಕುರಿತ ಮಾಹಿತಿ ವಿನಿಮಯ ಮತ್ತು ಸಹಕಾರ.

d)  ಪರಸ್ಪರ ಒಪ್ಪುವ ಕ್ಷೇತ್ರಗಳಲ್ಲಿನ ಸಾಮರ್ಥ್ಯವರ್ಧನೆ.

     e) ಪರಸ್ಪರರ ನಿಯಂತ್ರಕ ಚೌಕಟ್ಟು, ಅವಶ್ಯಕತೆಗಳು ಮತ್ತು ಪ್ರಕ್ರಿಯೆಗಳ ಪಕ್ಷಕಾರರ ನಡುವೆ ತಿಳಿವಳಿಕೆಯನ್ನು ಉತ್ತೇಜಿಸಲು; ಮತ್ತು ಎರಡೂ    ಪಕ್ಷಕಾರರಿಗೆ ಭವಿಷ್ಯದ ನಿಯಂತ್ರಣ ಬಲಪಡಿಸುವ ಉಪಕ್ರಮಗಳಿಗೆ ಅನುಕೂಲಕಲ್ಪಿಸಲು.

f) ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳಿಗೆ ಸಂಬಂಧಿಸಿದ ಕಾನೂನು ಮತ್ತು ನಿಬಂಧನೆಗಳ ಮಾಹಿತಿಯ ವಿನಿಮಯ.

 g) ಪರವಾನಗಿ ರಹಿತ ಆಮದು ಮತ್ತು ರಫ್ತು ನಿಯಂತ್ರಿಸುವ ಪ್ರಯತ್ನಕ್ಕೆ ಬೆಂಬಲವಾಗಿ ಮಾಹಿತಿಯ ವಿನಿಮಯ

h) ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಹಯೋಗ.

ಇದು ಎರಡು ಕಡೆಯವರ ನಡುವಿನ ನಿಯಂತ್ರಕ ಅಂಶಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗಲಿದೆ ಮತ್ತು ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉತ್ತಮ ಸಮನ್ವಯಕ್ಕೆ ಸಹಾಯ ಮಾಡುತ್ತದೆ.

******



(Release ID: 1670246) Visitor Counter : 173