ಸಂಪುಟ

ದೂರಸಂಪರ್ಕ/ಐಸಿಟಿಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಯುನೈಟೆಡ್ ಕಿಂಗ್ಡಮ್ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದದ ಅಂಕಿತಕ್ಕೆ ಸಂಪುಟದ ಸಮ್ಮತಿ

Posted On: 04 NOV 2020 3:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಗಣರಾಜ್ಯದ ಸಂವಹನ ಸಚಿವಾಲಯ ಮತ್ತು ಯುನೈಟೆಡ್ ಕಿಂಗ್ಡಮ್ ಸರ್ಕಾರದ ಡಿಜಿಟಲ್, ಸಾಂಸ್ಕೃತಿಕ, ಮಾಧ್ಯಮ ಮತ್ತು ಕ್ರೀಡಾ ಇಲಾಖೆ (ಡಿಸಿಎಂಎಸ್) ನಡುವೆ ದೂರಸಂಪರ್ಕ/ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿಗಳ) ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು ದೂರಸಂಪರ್ಕ/ಐಸಿಟಿಗಳ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರ ಮತ್ತು ಪರಸ್ಪರ ತಿಲಿವಳಿಕೆಯ ಬಲವರ್ಧನೆಗೆ ಕೊಡುಗೆ ನೀಡಲಿದೆ. ಬ್ರಿಕ್ಸಿಟ್ ನಂತರದಲ್ಲಿ, ಈ ತಿಳಿವಳಿಕೆ ಒಪ್ಪಂದ   ಭಾರತಕ್ಕೆ ವರ್ಧಿತ ಸಹಕಾರ ಸ್ವರೂಪ ಮತ್ತು ಅವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪಕ್ಷಕಾರರು ಸಹಕಾರಕ್ಕಾಗಿ ಸಮಾನ ಹಿತಾಸಕ್ತಿಯ ಈ ಕೆಳಕಂಡ ಕ್ಷೇತ್ರಗಳನ್ನು ಗುರುತಿಸಿದ್ದಾರೆ:-
 
a.ದೂರಸಂಪರ್ಕ/ಐಸಿಟಿ ನೀತಿ ಮತ್ತು ನಿಯಂತ್ರಣಗಳು;
b.ತರಂಗಾಂತರ ನಿರ್ವಹಣೆ;
c.ಮೊಬೈಲ್ ರೋಮಿಂಗ್ ಸೇರಿದಂತೆ ದೂರಸಂವಹನ ಸಂಪರ್ಕ;
d.ದೂರಸಂಪರ್ಕ/ಐಸಿಟಿ ತಾಂತ್ರಿಕ ಗುಣಮಟ್ಟೀಕರಣ ಮತ್ತು ಪರೀಕ್ಷೆ ಹಾಗೂ ಪ್ರಮಾಣೀಕರಣ;
e. ನಿಸ್ತಂತು ಸಂವಹನ;
f. 5 ಜಿ, ವಸ್ತು / ಮೆಷಿನ್ ಟು ಮೆಷಿನ್ ಗಳ ಇಂಟರ್ನೆಟ್, ಕ್ಲೌಡ್ ಕಂಪ್ಯೂಟಿಂಗ್, ಬೃಹತ್ ದತ್ತಾಂಶ ಇತ್ಯಾದಿಗಳನ್ನು ಒಳಗೊಂಡ ದೂರಸಂಪರ್ಕ / ಐಸಿಟಿಯಲ್ಲಿ ತಾಂತ್ರಿಕ ಅಭಿವೃದ್ಧಿ;
g.ದೂರಸಂಪರ್ಕ ಮೂಲಸೌಕರ್ಯದ ಭದ್ರತೆ, ದೂರಸಂಪರ್ಕ ಸೇವೆಗಳ ಬಳಕೆ ಮತ್ತು ಅವಕಾಶದಲ್ಲಿನ ಭದ್ರತೆ;
h.ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಾಮರ್ಥ್ಯವರ್ಧನೆ ಮತ್ತು ಸಾಧ್ಯವಾದಾಗ ಪರಿಣತಿಯ ವಿನಿಮಯ;
i.ಹೊರಹೊಮ್ಮುತ್ತಿರುವ ತಂತ್ರಜ್ಞಾನ ಕುರಿತ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತ ಮಾಹಿತಿಯ ವಿನಿಮಯ ಮತ್ತು ಸೂಕ್ತವಾದ ಕಡೆಗಳಲ್ಲಿ ಸಹಯೋಗ ಮತ್ತು ನಾವಿನ್ಯತೆ;
j.ಅಂಕಿತ ಹಾಕುವ ದೇಶಗಳು ಮತ್ತು ಮೂರನೇ ದೇಶಗು ದೂರಸಂಪರ್ಕ/ಐಸಿಟಿಯಲ್ಲಿ ಜಂಟಿ ಕಾರ್ಯಕ್ಕಾಗಿ ಅವಕಾಶಗಳ ಶೋಧನೆ;
k.ದೂರಸಂಪರ್ಕ / ಐಸಿಟಿ ಉದ್ಯಮದ ನಿಯೋಗಗಳು ಮತ್ತು ಭೇಟಿ, ಕಾರ್ಯಕ್ರಮಗಳು, ಪ್ರದರ್ಶನಗಳು ಇತ್ಯಾದಿಗಳ ಮೂಲಕ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಚಟುವಟಿಕೆಗಳನ್ನು ಪರಸ್ಪರ ಒಪ್ಪಿದಂತೆ; ಮತ್ತು
l.ಎಂ.ಓ.ಯು. ಸ್ವರೂಪದೊಳಗೆ ಪಕ್ಷಕಾರರು ಪರಸ್ಪರ ಒಪ್ಪಿದ ರೀತಿ ದೂರಸಂಪರ್ಕ/ಐಸಿಟಿ ಇತರ ಸ್ವರೂಪದ ಸಹಕಾರ.  
 

******

 


(Release ID: 1670214) Visitor Counter : 239