ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಭಾರತದ ನಗರ ಸಂಚಾರ ಕುರಿತ 13ನೇ ಸಮಾವೇಶ 2020 ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಂದ ಉದ್ಘಾಟನೆ


ಡ್ಯಾನಿಶ್ ಖ್ಯಾತ ವಾಸ್ತುಶಿಲ್ಪಿ, ಆಧುನಿಕ ನಗರ ಯೋಜನೆಯ ಸಂಸ್ಥಾಪಕ ಪ್ರೊ|| ಜಾನ್ ಗೇಹ್ಲ್ ಅವರಿಂದ ಪ್ರಾಸ್ತಾವಿಕ ಭಾಷಣ

ಕೋವಿಡ್-19 ಸಾಂಕ್ರಾಮಿಕ ಸವಾಲು; ಜನರಿಗೆ ಸುಲಭ ಮತ್ತು ಅನುಕೂಲಕರ ಸಾರಿಗೆ ವ್ಯವಸ್ಥೆಗೆ ಒತ್ತು ನೀಡುವ “ನಗರ ಸಂಚಾರದಲ್ಲಿ ಹೊಸ ಬೆಳವಣಿಗೆ ಆಯಾಮಗಳು” ಸಮ್ಮೇಳನದ ಘೋಷವಾಕ್ಯ

Posted On: 03 NOV 2020 1:55PM by PIB Bengaluru

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಇದೇ ನವೆಂಬರ್ 9 ರಂದು ಭಾರತದ ನಗರ ಸಂಚಾರ (ಯುಎಂಐ) ಕುರಿತ 13ನೇ  ಸಮಾವೇಶವನ್ನು ಆಯೋಜಿಸಿದೆ. ದಿನವಿಡೀ ವಿಡಿಯೋ ಕಾನ್ಫರೆನ್ಸ್/ವೆಬಿನಾರ್ ಮೂಲಕ ಆನ್ ಲೈನ್ ನಲ್ಲಿ ಸಮಾವೇಶ ನಡೆಯಲಿದೆ. ಈ ವರ್ಷದ ವಿಷಯನಗರ ಸಂಚಾರದಲ್ಲಿ ಹೊಸ ಬೆಳವಣಿಗೆಗಳ ಆಯಾಮಗಳು”, ಕೋವಿಡ್-19 ಸಾಂಕ್ರಾಮಿಕದ ಸವಾಲು; ಜನರಿಗೆ ಸುಲಭವಾಗಿ ಮತ್ತು ಅನುಕೂಲಕರ ಸಾರಿಗೆ ವ್ಯವಸ್ಥೆಯನ್ನು ಒದಗಿಸಲು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡಿರುವ ವಿನೂತನ ಪ್ರಯತ್ನಗಳ ಬಗ್ಗೆ ಹೆಚ್ಚಿನ ಗಮನಹರಿಸುವುದು ಸಮಾವೇಶದ ಉದ್ದೇಶವಾಗಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು, ಉದ್ಘಾಟನಾ ಭಾಷಣವನ್ನು ಮಾಡಲಿದ್ದು, ಮೆಸರ್ಸ್ ಗೇಲ್ ಆರ್ಕಿಟೆಕ್ಚರ್ಸ್ ನ ಹಿರಿಯ ಸಲಹೆಗಾರ ಮತ್ತು ಸಂಸ್ಥಾಪಕ ಪ್ರೊ|| ಜಾನ್ ಗೇಹ್ಲ್   ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಶ್ರೀ ಜೀನ್-ಬ್ಯಾಪ್ಟಿಸ್ಟ್ ಡಿಜೆಬ್ಬಾರಿ, ವೈಜ್ಞಾನಿಕ ಪರಿವರ್ತನೆ ಸಚಿವಾಲಯಕ್ಕೆ ನಿಯೋಜನೆಗೊಂಡಿರುವ ಪ್ರತಿನಿಧಿ ಮತ್ತು ಏಷ್ಯಾದ ಮಹಾಪ್ರಧಾನ ನಿರ್ದೇಶಕ ಡಾ. ಕ್ಲಾಡಿಯಾ ವಾರ್ನಿಂಗ್; ದಕ್ಷಿಣ-ಪೂರ್ವ ಮತ್ತು ಪಶ್ಚಿಮ ಯೂರೋಪ್; ಮಧ್ಯಪ್ರಾಚ್ಯ; ಲ್ಯಾಟಿನ್ ಅಮೆರಿಕ; ನಾಗರಿಕ ಸಮಾಜ; ಜರ್ಮನ್ ಫೆಡರಲ್ ಮಿನಿಸ್ಟ್ರಿ ಫಾರ್ ಎಕನಾಮಿಕ್ ಕೊ-ಆಪರೇಷನ್ ಮತ್ತು ಡೆವಲಪ್ ಮೆಂಟ್(ಬಿಎಂಝೆಡ್) ಅವರುಗಳು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಲಿದ್ದಾರೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ದುರ್ಗಾಶಂಕರ್ ಮಿಶ್ರಾ, “ನಗರ ಸಂಚಾರದಲ್ಲಿ ಬೆಳವಣಿಗೆಯ ಹೊಸ ಆಯಾಮಗಳುಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಈವರೆಗೆ 12 ಸಮಾವೇಶಗಳನ್ನು ಈ ಕೆಳಗೆ ಸೂಚಿಸಿದ ವಿಷಯಗಳನ್ನಿಟ್ಟುಕೊಂಡು ನಡೆಸಲಾಗಿದೆ. ರಾಜ್ಯ ಸರ್ಕಾರಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ಸಂಬಂಧಿಸಿದ ಸಂಸ್ಥೆಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಸಾಕಷ್ಟು ಲಾಭ ಮಾಡಿಕೊಂಡಿವೆ.

ಕ್ರ.ಸಂ

ವರ್ಷ

            ವಿಷಯ

ಸ್ಥಳ

  1.  

2008

ನಗರ ಸಂಚಾರ

ಪ್ರಗತಿ ಮೈದಾನ, ನವದೆಹಲಿ

  1.  

2009

ಸುಸ್ಥಿರ ನಗರ ಸಾರಿಗೆ

ಇಂಡಿಯಾ ಹ್ಯಾಬಿಟೇಟ್ ಸೆಂಟರ್, ನವದೆಹಲಿ

  1.  

2010

ಸುಸ್ಥಿರ ನಗರಗಳು

ಹೋಟೆಲ್ ಗ್ರ್ಯಾಂಡ್, ನವದೆಹಲಿ

  1.  

2011

ಸುಸ್ಥಿರ ಸಂಚಾರ

ಮಾಣೆಕ್ ಷಾ ಸೆಂಟರ್, ನವದೆಹಲಿ

  1.  

2012

ಸ್ಮಾರ್ಟ್ ಸಿಟಿಗಳು

ಮಾಣೆಕ್ ಷಾ ಸೆಂಟರ್, ನವದೆಹಲಿ

  1.  

2013

ಸಾರಿಗೆ ಮೂಲಕ ನಗರಗಳ ಪರಿವರ್ತನೆ

ಮಾಣೆಕ್ ಷಾ ಸೆಂಟರ್, ನವದೆಹಲಿ

  1.  

2014

ಸುಸ್ಥಿರ ನಗರಗಳಿಗೆ ಸುಸ್ಥಿರ ಸಾರಿಗೆ

ಮಾಣೆಕ್ ಷಾ ಸೆಂಟರ್, ನವದೆಹಲಿ

  1.  

2015

ವಾಸ ಯೋಗ್ಯಕ್ಕೆ ಸಾರಿಗೆ ಪರಿವರ್ತನೆ

ಮಾಣೆಕ್ ಷಾ ಸೆಂಟರ್, ನವದೆಹಲಿ

  1.  

2016

ನಗರಗಳ ಸುಸ್ಥಿರತೆಗೆ ಯೋಜಿತ ಸಂಚಾರ

ಮಹಾತ್ಮ ಮಂದಿರ, ಗುಜರಾತ್

  1.  

2017

ಬುದ್ಧಿವಂತ, ಸಮಗ್ರ ಮತ್ತು ಸುಸ್ಥಿರ ಸಾರಿಗೆ

ಹೈದ್ರಾಬಾದ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ(ಎಚ್ಐಸಿಸಿ), ತೆಲಂಗಾಣ

  1.  

2018

ಹಸಿರು ನಗರ ಸಾರಿಗೆ

ಛಿತ್ನಾವಿಸ್ ಸೆಂಟರ್, ನಾಗ್ಪುರ, ಮಹಾರಾಷ್ಟ್ರ

  1.  

2019

ಕೈಗೆಟಕುವ ಮತ್ತು ಜೀವನೋಪಾಯಕ್ಕೆ ಅನುಕೂಲಕರ ನಗರಗಳು

ಇಂದಿರಾಗಾಂಧಿ ಪ್ರತಿಷ್ಠಾನ, ಲಖನೌ

12ನೇ ಯುಎಂಐ ಸಮಾವೇಶ 2019

ಭಾರತದಲ್ಲಿ ನಗರ ಸಾರಿಗೆ (ಯುಎಂಐ) ಕುರಿತ 12ನೇ ಸಮಾವೇಶ 2019ರ ನವೆಂಬರ್ 15ರಿಂದ 17ರ ವರೆಗೆ ಲಖನೌದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ನಡೆಯಿತು. ಅದರ ವಿಷಯ ಸುಲಭ ಮತ್ತು ಜೀವನಕ್ಕೆ ಅರ್ಹವಾದ ನಗರಗಳುಎಂಬುದಾಗಿತ್ತು. ಈ ಸಮಾವೇಶ ಮತ್ತು ವಸ್ತು ಪ್ರದರ್ಶನವನ್ನು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಗೌರವಾನ್ವಿತ ಸಚಿವರು(ಸ್ವತಂತ್ರ ಹೊಣೆಗಾರಿಕೆ) ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತು ಉತ್ತರ ಪ್ರದೇಶದ ವಸತಿ ಮತ್ತು ನಗರ ಯೋಜನಾ ರಾಜ್ಯ ಸಚಿವ ಶ್ರೀ ಗಿರೀಶ್ ಚಂದ್ರ ಯಾದವ್ ಅವರ ಸಮಕ್ಷಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಉದ್ಘಾಟಿಸಿದರು. ನಗರ ಸಾರಿಗೆ ಸಂಸ್ಥೆ(ಭಾರತ) ಈ ಸಮಾವೇಶಕ್ಕೆ ತಾಂತ್ರಿಕ ಹಾಗೂ ಸಾರಿಗೆ ನೆರವನ್ನು ಒದಗಿಸಿತ್ತು. 10 ರಾಷ್ಟ್ರಗಳ ವಿದೇಶಿ ಪ್ರತಿನಿಧಿಗಳು ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು  ಮತ್ತು ಭಾರತದ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿದ್ಯಾರ್ಥಿಗಳು, ನಗರ ಸಾರಿಗೆ ತಜ್ಞರು, ವೃತ್ತಿಪರರು, ಸಂಪನ್ಮೂಲ ವ್ಯಕ್ತಿಗಳು, ಸಂಶೋಧಕರು, ವಿದ್ವಾಂಸರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

21ನೇ ಶತಮಾನದಲ್ಲಿ ಭಾರತದಲ್ಲಿ ನಗರೀಕರಣ ಸರ್ವೇ ಸಾಮಾನ್ಯವಾಗಿದ್ದು, ಅದು ವಿಶ್ವದಅತ್ಯಂತ ಪ್ರಮುಖ ಆರ್ಥಿಕ ಶಕ್ತಿಯಾಗಿ, ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಭಾರತದ ಅಭಿವೃದ್ಧಿಯ ಜೊತೆ ಅಂತರ್ಗತವಾಗಿ ಬೆರೆತಿದೆ. ನಗರ ಆರ್ಥಿಕತೆಯ ಪ್ರಮುಖ ಭಾಗವಾಗಿ ಸಾರಿಗೆ ವಲಯ ರೂಪುಗೊಂಡಿದೆ. ಆದರೆ ಕ್ಷಿಪ್ರವಾಗಿ ಬದಲಾಗುತ್ತಿರುವ ಸಾರಿಗೆ ವ್ಯವಸ್ಥೆ ಅಗತ್ಯತೆಗಳು ಮತ್ತು ತಂತ್ರಜ್ಞಾನಗಳ ಲಭ್ಯತೆಯಿಂದಾಗಿ ವಾಹನ ಮಾಲಿಕತ್ವದಿಂದ ವಾಹನ ಹಂಚಿಕೆ ವರೆಗೆ ಬದಲಾಗುತ್ತಿರುವುದು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಬಹುವಿಧದ ಅಡೆತಡೆ ರಹಿತ ಸಂಪರ್ಕ ಹಾಗೂ ಶುದ್ಧ ಇಂಧನಕ್ಕೆ ಒತ್ತು ನೀಡಲಾಗುತ್ತಿದೆ. ಈ ಬೆಳವಣಿಗೆಯ ಆಯಾಮಗಳು ಗ್ರಾಹಕರ ನಿರೀಕ್ಷೆಗಳಲ್ಲಿ ಭಾರೀ ಬದಲಾವಣೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ ಮತ್ತು ನಮ್ಮ ನಗರಗಳು ಬದಲಾಗುತ್ತಿರುವ ಸಾರಿಗೆ ಅಗತ್ಯತೆಗಳನ್ನು ಕ್ಷಿಪ್ರವಾಗಿ ಅಳವಡಿಸಿಕೊಳ್ಳಬೇಕಿದೆ. ಇವುಗಳನ್ನು ಎದುರಿಸಲು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಾಷ್ಟ್ರೀಯ ನಗರ ಸಾರಿಗೆ ನೀತಿ 2006(ಎನ್ ಯುಟಿಪಿ)ಅನ್ನು ಹೊರಡಿಸಿದೆ. ಈ ನೀತಿಯ ಉದ್ದೇಶ ಸುರಕ್ಷಿತ, ಸುಲಭ,  ತ್ವರಿತ, ಆರಾಮದಾಯಕ, ವಿಶ್ವಾಸಾರ್ಹ ಮತ್ತು ಸುಸ್ಥಿರ ರೀತಿಯಲ್ಲಿ ಹೆಚ್ಚುತ್ತಿರುವ ನಗರಗಳ ಜನಸಂಖ್ಯೆಗೆ ತಕ್ಕಂತೆ ಅವರ ಉದ್ಯೋಗ, ಶಿಕ್ಷಣ, ಮನರಂಜನೆ ಮತ್ತು ನಗರಗಳೊಳಗಿನ ಇತರೆ ಅಗತ್ಯತೆಗಳನ್ನು ಪೂರೈಸುವುದಾಗಿದೆ.

ಎನ್ ಯುಟಿಪಿಯ ಉಪಕ್ರಮದ ಭಾಗವಾಗಿ ಸಚಿವಾಲಯ, ಪ್ರತಿವರ್ಷ ಭಾರತದಲ್ಲಿ ನಗರ ಸಾರಿಗೆ ಕುರಿತ ಅಂತಾರಾಷ್ಟ್ರೀಯ  ಪ್ರದರ್ಶನ ಮತ್ತು ಸಮಾವೇಶಗಳನ್ನು ಆಯೋಜಿಸುತ್ತಿದೆ. ಈ ಸಮಾವೇಶಗಳು ಯುಎಂಐ ಎಂದೇ ಜನಪ್ರಿಯವಾಗಿವೆ. ಈ ಸಮಾವೇಶದ ಪ್ರಾಥಮಿಕ ಧ್ಯೇಯವೆಂದರೆ ನಗರಗಳಿಗೆ ಮಾಹಿತಿಯನ್ನು ಪಸರಿಸುವುದು, ಸಮಾವೇಶದಲ್ಲಿ ಪಾಲ್ಗೊಂಡ ಪ್ರತಿನಿಧಿಗಳು ಜಾಗತಿಕ ಉತ್ತಮ ಸಾರಿಗೆ ಪದ್ಧತಿಗಳನ್ನು ಮತ್ತು ಇತ್ತೀಚಿನ ಬೆಳವಣಿಗೆಗೆಳ ಬಗ್ಗೆ ತಿಳಿದುಕೊಳ್ಳಲು ನೆರವಾಗಲಿದೆ. ಅಲ್ಲದೆ ಈ ಸಮಾವೇಶ ಇತರೆ ವೃತ್ತಿಪರರು, ತಂತ್ರಜ್ಞಾನ ಮತ್ತು ಸೇವಾ ಪೂರೈಕೆದಾರರು ದೇಶೀಯ ಮತ್ತು ಅಂತಾರಾಷ್ಟ್ರೀಯ ತಜ್ಞರ ಜೊತೆ ಸಮಾಲೋಚನೆಗಳನ್ನು ನಡೆಸುವ ಅವಕಾಶ ಕಲ್ಪಿಸುತ್ತದೆ. ಜೊತೆಗೆ ಪ್ರತಿನಿಧಿಗಳು ತಮ್ಮ ನಗರ ಸಾರಿಗೆಯನ್ನು ಸುಸ್ಥಿರ ಮಾರ್ಗದಲ್ಲಿ ಕೊಂಡೊಯ್ಯಲು ಹೊಸ ಚಿಂತನೆಗಳನ್ನು ಅಭಿವೃದ್ಧಿಗೊಳಿಸಲು ನೆರವಾಗಲಿದೆ. ಈ ಸಮಾವೇಶ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತಜ್ಞರನ್ನು, ತಂತ್ರಜ್ಞಾನ ಮತ್ತು ಸೇವಾ ಪೂರೈಕೆದಾರರನ್ನು, ನೀತಿ ನಿರೂಪಕರನ್ನು, ವೃತ್ತಿಪರರನ್ನು ಮತ್ತು ನಗರ ಸಾರಿಗೆ ವಲಯದ ಅಧಿಕಾರಿಗಳನ್ನು ಒಂದೇ ವೇದಿಕೆಗೆ ತರುತ್ತದೆ.

***



(Release ID: 1669794) Visitor Counter : 280