ಪ್ರಧಾನ ಮಂತ್ರಿಯವರ ಕಛೇರಿ

ಪಿಎಂ-ಸ್ವನಿಧಿ ಯೋಜನೆ: ಉತ್ತರ ಪ್ರದೇಶ ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 27 OCT 2020 1:29PM by PIB Bengaluru

ಈಗ ಪ್ರಧಾನ ಮಂತ್ರಿ ಸ್ವನಿಧಿಯ ಎಲ್ಲಾ ಫಲಾನುಭವಿಗಳ ಜೊತೆ ನಾನು ಮಾತನಾಡುವಾಗ, ನಾನು ಪ್ರತಿಯೊಬ್ಬರೂ ಸಂತೋಷದಿಂದಿರುವುದನ್ನು ಮತ್ತು ಆಶರ್ಯಚಕಿತರಾಗಿರುವುದನ್ನು ಗಮನಿಸಿದ್ದೇನೆ. ಮೊದಲು ವೇತನ ಪಡೆಯುವವರು ಸಾಲಕ್ಕಾಗಿ ಬ್ಯಾಂಕುಗಳಿಗೆ ಹೋಗುತ್ತಿದ್ದರು. ಬಡವರು, ಬೀದಿ ವ್ಯಾಪಾರಿಗಳು ಬ್ಯಾಂಕಿನ ಒಳಗೆ ಹೋಗುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.ಆದರೆ ಇಂದು ಬ್ಯಾಂಕುಗಳೇ ನಿಮ್ಮ ಮನೆ ಬಾಗಿಲಿಗೆ ಬರುತ್ತಿವೆ. ವ್ಯಾಪಾರ ಆರಂಭಿಸಲು ಯಾವುದೇ ಅಡೆ ತಡೆ ಇಲ್ಲದೆ ಸಾಲ ಸಿಗುತ್ತಿದೆ. ನಿಮ್ಮೆಲ್ಲರ ಮುಖದಲ್ಲಿ ನಾನು ಸಂತೋಷವನ್ನು ಕಾಣುತ್ತಿರುವುದಕ್ಕೆ ಬಹಳ ತೃಪ್ತಿ ಅನುಭವಿಸುತ್ತಿದ್ದೇನೆ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ. ಸ್ವಾವಲಂಬನೆಯೊಂದಿಗೆ ನೀವು ಮುನ್ನಡೆದು, ಉತ್ತರ ಪ್ರದೇಶವನ್ನು ಮತ್ತು ದೇಶವನ್ನು ಮುಂದೆ ಕೊಂಡೊಯ್ಯಬೇಕು ಎಂದು ಆಶಿಸುತ್ತೇನೆ.

ನಾನು ನಿಮ್ಮೆಲ್ಲರ ಜೊತೆ ಮಾತನಾಡುವಾಗ , ಬಹಳ ಶಿಕ್ಷಣ ಪಡೆಯದೇ ಇರುವ ಮತ್ತು ಬಡತನದಲ್ಲಿ ಬದುಕುತ್ತಿರುವ ನಮ್ಮ ಸಹೋದರಿ ಪ್ರೀತಿ ಬಹಳ ಆತ್ಮ ವಿಶ್ವಾಸದಿಂದ ಆಧುನಿಕ ತಂತ್ರಜ್ಞಾನವನ್ನು ಕಲಿಯುತ್ತಿರುವುದನ್ನು ನೋಡಿದೆ. ಅವರು ತಮ್ಮ ವ್ಯಾಪಾರವನ್ನು ನೋಡಿಕೊಳ್ಳುತ್ತಿರುವ ಜೊತೆಯಲ್ಲಿಯೇ ತಮ್ಮ ಇಡೀ ಕುಟುಂಬದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ. ಅದೇ ರೀತಿ ನಾನು ಬನಾರಸ್ ಅರವಿಂದ ಜೀ ಅವರ ಜೊತೆ ಮಾತನಾಡುವಾಗಲೂ , ಅವರು ಒಂದು ಸಂಗತಿ ಹೇಳಿದರು, ಅದೆಂದರೆ ಕಲಿಕಾ ಅನುಭವ. ಮತ್ತು ದೇಶದ ಎಲ್ಲಾ ಶಿಕ್ಷಿತರು ಇದನ್ನು ಕಲಿಯಬಹುದಾದಂತಹದ್ದು ಎಂದು ನನ್ನ ನಂಬಿಕೆ. ಅವರು ಯಾವುದೇ ವಸ್ತುಗಳನ್ನು ತಯಾರಿಸಲಿ, ಅವರು ಅದರಲ್ಲಿ ಒಂದನ್ನು ಸಾಮಾಜಿಕ ಅಂತರ ಕಾಪಾಡುವ ಓರ್ವ ವ್ಯಕ್ತಿಗೆ ಉಡುಗೊರೆಯಾಗಿ ನೀಡುತ್ತಾರೆ. ನೋಡಿ ಓರ್ವ ಸಣ್ಣ ವ್ಯಕ್ತಿ ಏನನ್ನು, ಹೇಗೆ ಮಾಡುತ್ತಾರೆ ಎಂಬುದನ್ನು. ಇದಕ್ಕಿಂತ ದೊಡ್ಡ ಪ್ರೇರಣೆ ಬೇರೆ ಯಾವುದಿರುತ್ತದೆ ?. ನಾವು ಲಕ್ನೋದ ಬೀದಿ ಬದಿ ವ್ಯಾಪಾರಿ ವಿಜಯ ಭಾರದ್ವಾಜ್ ಜೀ ಅವರ ಜೊತೆ ಮಾತನಾಡುವಾಗ , ಅವರ ಉದ್ಯಮಾಡಳಿತ ಮಾದರಿ ಎಂತಹದ್ದಿತ್ತೆಂದರೆ , ಅವರು ತಮ್ಮ ಉದ್ಯಮವನ್ನು ಸಮಯ ಉಳಿತಾಯ ಮಾಡುತ್ತಲೇ ನಡೆಸುತ್ತಿದ್ದಾರೆ. ನೋಡಿ, ಇದು ನಮ್ಮ ದೇಶದ ಶಕ್ತಿ. ಜನರೊಂದಿಗೆ, ಜನರ ಪ್ರಯತ್ನದೊಂದಿಗೆ ದೇಶ ಮುನ್ನಡೆಯುತ್ತಿದೆ.

ನಮ್ಮ ಬೀದಿ ವ್ಯಾಪಾರಿ ಸ್ನೇಹಿತರು ಇದಕ್ಕಾಗಿ ಸರಕಾರಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಮತ್ತು ಅವರು ನನಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಾನು ಇದರ ಕೀರ್ತಿಯನ್ನು ಬ್ಯಾಂಕುಗಳು ಮತ್ತು ಎಲ್ಲಾ ಬ್ಯಾಂಕುಗಳ ಸಿಬ್ಬಂದಿಗಳ ಪ್ರಯತ್ನಗಳಿಗೆ ನೀಡುತ್ತೇನೆ. ಬ್ಯಾಂಕ್ ಸಿಬ್ಬಂದಿಗಳ ಸೇವಾ ಮನೋಭಾವ ಇಲ್ಲದಿದ್ದರೆ , ಇಂತಹ ದೊಡ್ಡ ಕೆಲಸವೊಂದು ಇಷ್ಟೊಂದು ಅಲ್ಪ ಕಾಲದ ಅವಧಿಯಲ್ಲಿ ಕೈಗೂಡಲು ಸಾಧ್ಯ ಇರಲಿಲ್ಲ. ನಾನು ಎಲ್ಲಾ ಬ್ಯಾಂಕುಗಳ ಸಿಬ್ಬಂದಿಗಳಿಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕೆಲಸದಲ್ಲಿ ಅವರ ಉತ್ಸಾಹ, ಬಡವರ ಭಾವನೆಗಳಿಗೆ ಸಂಬಂಧಪಟ್ಟಂತೆ ಹಲವು ಪಟ್ಟು ಅಧಿಕವಾಗುತ್ತದೆ. ಎಲ್ಲಾ ಬಡ ಜನರ ಆಶೀರ್ವಾದಗಳನ್ನು ನಿಮ್ಮ ಬದುಕನ್ನು ಪುನಃ ಕಟ್ಟಲು ಕಠಿಣ ಪ್ರಯತ್ನಗಳನ್ನು ಮಾಡಿದವರಿಗೆ ಮೀಸಲಿಡಬೇಕು. ನಿಮ್ಮೆಲ್ಲಾ ಆಶೀರ್ವಾದಗಳು ಮತ್ತು ಶುಭ ಹಾರೈಕೆಗಳು ಬ್ಯಾಂಕ್ ಸಿಬ್ಬಂದಿಗಳಿಗಿರಬೇಕು ಎಂಬುದು ನನ್ನ ಬಯಕೆಯಾಗಿದೆ. ಪ್ರಯತ್ನಗಳೊಂದಿಗೆ , ಹಬ್ಬಗಳು ಕೂಡಾ ಬಡವರ ಬದುಕನ್ನು ಬೆಳಗುತ್ತಿವೆ. ಇದು ಬಹಳ ದೊಡ್ಡ ಪ್ರಯತ್ನ. ಕಾರ್ಯಕ್ರಮದಲ್ಲಿ ನನ್ನೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ಉತ್ತರ ಪ್ರದೇಶ ಸರಕಾರದ ಇತರ ಸಚಿವರು ,ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಿಂದ ಸ್ವನಿಧಿ ಯೋಜನಾದ ಸಾವಿರಾರು ಫಲಾನುಭವಿಗಳು, ಎಲ್ಲಾ ಬ್ಯಾಂಕುಗಳ ಅಧಿಕಾರಿಗಳು ಮತ್ತು ನನ್ನ ಪ್ರೀತಿಯ ಸಹೋದರರು ಮತ್ತು ಸಹೋದರಿಯರು ಇದ್ದಾರೆ. ಸ್ವಾವಲಂಬಿ ಭಾರತಕ್ಕೆ ಇದು ಬಹಳ ಮಹತ್ವದ ದಿನ.

ದಿನವು ದೇಶವು ಹೇಗೆ ಸವಾಲಿನ ಸ್ಥಿತಿಗಳಲ್ಲಿ ಸ್ಪರ್ಧಿಸುತ್ತದೆ ಎಂಬ ವಸ್ತುಸ್ಥಿತಿಗೆ ಒಂದು ಸಾಕ್ಷಿ, ಉತ್ತರ ಪ್ರದೇಶದ ಜನತೆ ಬಿಕ್ಕಟ್ಟನ್ನು ಎದುರಿಸಲು ಹೇಗೆ ಶಕ್ತರಾಗಿದ್ದಾರೆ ಎಂಬುದಕ್ಕೆ ಸಾಕ್ಷಿ. ವಿಶ್ವದಲ್ಲಿ ಕೊರೊನಾ ಜಾಗತಿಕ ಸಾಂಕ್ರಾಮಿಕ ಸ್ಪೋಟಗೊಂಡಾಗ , ಭಾರತದ ಬಡ ಜನರ ಬಗ್ಗೆ ಆತಂಕ, ಕಳವಳಗಳಿದ್ದವು. ಕೇಂದ್ರವು ತನ್ನೆಲ್ಲಾ ಪ್ರಯತ್ನಗಳ ಹೊರತಾಗಿಯೂ ಹೇಗೆ ನನ್ನ ಬಡ ಸಹೋದರರು ಮತ್ತು ಸಹೋದರಿಯರು ಕನಿಷ್ಟ ಪ್ರಮಾಣದ ತೊಂದರೆ ಅನುಭವಿಸಬಹುದು, ಅವರು ಬಿಕ್ಕಟ್ಟನ್ನು ಹೇಗೆ ನಿಭಾಯಿಸಿಕೊಳ್ಳುವರು ಎಂಬುದರ ಬಗ್ಗೆ ಕಳವಳವನ್ನು ಹೊಂದಿತ್ತು. ಕಳವಳವನ್ನು ಮನಸ್ಸಿನಲ್ಲಿಟ್ಟುಕೊಂಡು ಗರೀಬ್ ಕಲ್ಯಾಣ ಯೋಜನಾವನ್ನು 1.70 ಲಕ್ಷ ಕೋ.ರೂ.ಗಳ ಪ್ಯಾಕೇಜಿನೊಂದಿಗೆ , ಬಡವರು ಹಸಿವಿನಿಂದ ಕಂಗೆಡಬಾರದು ಎಂಬ ಕಾರಣಕ್ಕಾಗಿ ದೇಶದಲ್ಲಿ ಆರಂಭಿಸಲಾಯಿತು. 20 ಲಕ್ಷ ಕೋ.ರೂ.ಗಳ ಆರ್ಥಿಕ ಉತ್ತೇಜನ ಘೋಷಿಸುವಾಗ , ಬಡವರ ಕಲ್ಯಾಣ ಮತ್ತು ಅವರ ಜೀವನೋಪಾಯದ ಬಗ್ಗೆ ಗರಿಷ್ಟ ಆದ್ಯತೆ ನೀಡಲಾಗಿದೆ. ಇಂದು ದೇಶದ ಜನ ಸಾಮಾನ್ಯರು ತಾವು ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ತಿರುವು ಮುರುವು ಮಾಡಲು ಶಕ್ತರು ಎಂಬುದನ್ನು ಸಾಬೀತು ಮಾಡಿದ್ದಾರೆ. ಪಿ.ಎಂ. ಸ್ವನಿಧಿ ಯೋಜನಾವು ಬಡವರ ಪ್ರಯತ್ನಗಳಿಗೆ ಬೆಂಬಲ ನೀಡಿದೆ. ಮತ್ತು ಇಂದು ನಮ್ಮ ಬೀದಿ ಬದಿ ವ್ಯಾಪಾರಿಗಳು ತಮ್ಮ ಕೆಲಸವನ್ನು ಪುನರಾರಂಭಿಸಲು ಶಕ್ತರಾಗಿದ್ದಾರೆ ಮತ್ತು ಸ್ವಾವಲಂಬನೆಯೊಂದಿಗೆ ಮುಂದುವರಿಯಲು ಸಮರ್ಥರಾಗಿದ್ದಾರೆ.

ಸ್ನೇಹಿತರೇ, ಪ್ರಧಾನ ಮಂತ್ರಿ ಸ್ವನಿಧಿ ಯೋಜನಾವನ್ನು ದೇಶದಲ್ಲಿ ಜೂನ್ 1 ರಂದು ಆರಂಭಿಸಲಾಯಿತು ಮತ್ತು ಜುಲೈ 2 ರಿಂದ ಅಂದರೆ ಒಂದು ತಿಂಗಳೊಳಗೆ ಆನ್ ಲೈನ್ ಪೋರ್ಟಲಿಗೆ ಅರ್ಜಿಗಳು ಬರಲಾರಂಭಿಸಿದವು. ದೇಶವು ಇದೇ ಮೊದಲ ಬಾರಿಗೆ ಯಾರೊಬ್ಬರೂ ನಿರೀಕ್ಷಿಸದ ರೀತಿಯಲ್ಲಿ ಯೋಜನೆಗಳನ್ನು ತ್ವರಿತಗತಿಯಿಂದ ಅನುಷ್ಟಾನಿಸಿತು. ಬಡವರಿಗೆ ಸಂಬಂಧಿಸಿದ ಯೋಜನೆಗಳು ರೀತಿಯಲ್ಲಿ ತ್ವರಿತ ವೇಗದಿಂದ ಅನುಷ್ಟಾನಗೊಂಡ ಬಗ್ಗೆ ಪೂರ್ವ ಅನುಭವ ಇರಲಿಲ್ಲ.ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಬೀದಿ ಬದಿ ವ್ಯಾಪಾರಿಗಳಿಗಾಗಿ ಯಾವುದೇ ಗ್ಯಾರಂಟಿ/ ಭದ್ರತೆ ಇಲ್ಲದೆ ಕೈಗೆಟಕುವ ರೀತಿಯಲ್ಲಿ ಸಾಲ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇಂದು ದೇಶವು ನಿಮ್ಮೊಂದಿಗೆ ನಿಂತಿದೆ ಮತ್ತು ನಿಮ್ಮ ಪ್ರಯತ್ನಗಳನ್ನು ಗೌರವಿಸುತ್ತಿದೆ. ಇಂದು ದೇಶವು ಸ್ವಾವಲಂಬಿ ಭಾರತ ಪ್ರಚಾರಾಂದೋಲನಕ್ಕೆ ನಿಮ್ಮ ಕೊಡುಗೆಯನ್ನೂ ಪರಿಗಣಿಸುತ್ತಿದೆ.

ಸ್ನೇಹಿತರೇ, ಯೋಜನೆಯು ಆರಂಭದಿಂದಲೇ ನಮ್ಮ ಬೀದಿ ಬದಿ ವ್ಯಾಪಾರಿ ಸಹೋದರರು ಮತ್ತು ಸಹೋದರಿಯರ ಬಗ್ಗೆ ಕಾಳಜಿ ವಹಿಸಿತ್ತು. ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿತ್ತು. ಆರಂಭದಲ್ಲಿ ಜನರು ಸಾಲಕ್ಕೆ ಅರ್ಜಿ ಸಲ್ಲಿಸುವಾಗ ದಾಖಲೆಗಳು ಮತ್ತು ಗ್ಯಾರಂಟಿಯ ಬಗ್ಗೆ ಆತಂಕ ಅನುಭವಿಸಿದ್ದರು. ಆದುದರಿಂದ ಯೋಜನೆಯಲ್ಲಿ ತಂತ್ರಜ್ಞಾನವನ್ನು, ಬಡವರಿಗೆ ಸಂಬಂಧಿಸಿದ ಇತರ ಯೋಜನೆಗಳಲ್ಲಿ ಬಳಸಿದಂತೆ ಗರಿಷ್ಟ ಪ್ರಮಾಣದಲ್ಲಿ ಬಳಸಲಾಯಿತು. ದಾಖಲೆಗಳು ಮತ್ತು ಗ್ಯಾರಂಟರ್ ಅವಶ್ಯ ಇರಲಿಲ್ಲ. ಅಲ್ಲಿ ಮಧ್ಯವರ್ತಿಯೂ ಇರಲಿಲ್ಲ. ಮತ್ತು ಯಾರೊಬ್ಬರೂ ಸರಕಾರಿ ಕಚೇರಿಗಳಿಗೆ ಸುತ್ತಾಡಬೇಕಾದ ಅವಶ್ಯಕತೆಯೂ ಇರಲಿಲ್ಲ. ನೀವು ನಿಮ್ಮ ಅರ್ಜಿಯನ್ನು ಆನ್ ಲೈನಿನಲ್ಲಿ ಅಪ್ ಲೋಡ್ ಮಾಡಬಹುದಾಗಿತ್ತು. ಅಥವಾ ಯಾವುದಾದರೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ , ಮುನ್ಸಿಪಲ್ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ತೆರಳಿ ಅದನ್ನು ಅಪ್ ಲೋಡ್ ಮಾಡಬಹುದಿತ್ತು. ಮತ್ತು ಇದರ ಫಲಿತಾಂಶ ಎಂದರೆ ಇಂದು ಬೀದಿ ಬದಿ ವ್ಯಾಪಾರಿ ಆತ ತನ್ನ ವ್ಯಾಪಾರವನ್ನು ಪುನರಾರಂಭ ಮಾಡಲು ಯಾರನ್ನೂ ಭೇಟಿಯಾಗಬೇಕಾದ ಆವಶ್ಯಕತೆ ಉದ್ಭವಿಸಲಿಲ್ಲ. ಬ್ಯಾಂಕುಗಳು ತಾವಾಗಿಯೇ ಮುಂದೆ ಬಂದು ಸಾಲಗಳನ್ನು ನೀಡಿದವು.

ಸ್ನೇಹಿತರೇ, ಉತ್ತರ ಪ್ರದೇಶದ ಆರ್ಥಿಕತೆಯಲ್ಲಿ ಬೀದಿ ವ್ಯಾಪಾರಿಗಳ ಪಾತ್ರ ಬಹಳ ದೊಡ್ಡದು. ಉತ್ತರ ಪ್ರದೇಶ ದೊಡ್ಡ ರಾಜ್ಯ. ಬೃಹತ್ ಜನಸಂಖ್ಯೆಯ ರಾಜ್ಯ, ಆದರೆ ಬೀದಿ ವ್ಯಾಪಾರಿಗಳು ಹಳ್ಳಿಗಳ ಮತ್ತು ಪಟ್ಟಣಗಳ ಜನತೆಯ ಆವಶ್ಯಕತೆಯನ್ನು ಈಡೇರಿಸುತ್ತಿರುವುದು ಮಾತ್ರವಲ್ಲ, ಅವರಿಗಾಗಿ ಒಂದಷ್ಟನ್ನು ಸಂಪಾದನೆ ಮಾಡುತ್ತಿರುತ್ತಾರೆ. ಬೀದಿ ಬದಿ ವ್ಯಾಪಾರವು ಉತ್ತರ ಪ್ರದೇಶದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಜನರು ವಲಸೆ ಹೋಗುವುದನ್ನು ಕಡಿಮೆ ಮಾಡಿದೆ. ಆದುದರಿಂದ ಉತ್ತರ ಪ್ರದೇಶವು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಲಾಭಗಳನ್ನು ಪಡೆದುಕೊಳ್ಳುವಲ್ಲಿ ದೇಶದಲ್ಲಿಯೇ ಉನ್ನತ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ನಗರ ಬೀದಿ ಬದಿ ವ್ಯಾಪಾರಿಗಳಿಂದ ಗರಿಷ್ಟ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗಿವೆ. ದೇಶಾದ್ಯಂತದಿಂದ ಸುಮಾರು 25 ಲಕ್ಷ ಸ್ವನಿಧಿ ಸಾಲ ಅರ್ಜಿಗಳು ಸ್ವೀಕಾರವಾಗಿವೆ ಮತ್ತು 12 ಲಕ್ಷಕ್ಕೂ ಅಧಿಕ ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. ಇದರಲ್ಲಿ 6.5 ಲಕ್ಷಕ್ಕೂ ಅಧಿಕ ಅರ್ಜಿಗಳು ಉತ್ತರ ಪ್ರದೇಶವೊಂದರಿಂದಲೇ ಬಂದಿವೆ ಮತ್ತು ಸುಮಾರು 3.45 ಲಕ್ಷ ಅರ್ಜಿಗಳನ್ನು ಅಂಗೀಕರಿಸಲಾಗಿದೆ. ನಾನು ಉತ್ತರ ಪ್ರದೇಶ ಸರಕಾರವನ್ನು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ ಅವರನ್ನು ಮತ್ತು ಅವರ ತಂಡವನ್ನು ಬೀದಿ ಬದಿ ವ್ಯಾಪಾರಿಗಳ ಕಳವಳಗಳ ಬಗ್ಗೆ ಸೂಕ್ತವಾಗಿ ಸ್ಪಂದಿಸುವಲ್ಲಿ ವಹಿಸಿದ ವಿಶೇಷ ಕಾಳಜಿಗಾಗಿ ಅಭಿನಂದಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಸ್ವನಿಧಿ ಯೋಜನಾ ಸಾಲ ಒಪ್ಪಂದಕ್ಕೆ ಸ್ಟ್ಯಾಂಪ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಕೊರೊನಾ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಆರು ಲಕ್ಷ ಬೀದಿ ವ್ಯಾಪಾರಿಗಳಿಗೆ ಸಾವಿರಾರು ರೂಪಾಯಿಗಳ ಹಣಕಾಸು ನೆರವನ್ನು ಒದಗಿಸಲಾಗಿದೆ. ನಾನು ಇದಕ್ಕಾಗಿ ಉತ್ತರ ಪ್ರದೇಶ ಸರಕಾರವನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ, ಬಡತನವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದವರು ದೇಶದಲ್ಲಿ ಬಡವರಿಗೆ ಸಾಲ ಕೊಟ್ಟರೆ ಅದು ಮರಳಿ ವಸೂಲಾಗುವುದಿಲ್ಲ ಎಂಬಂತಹ ಕಳವಳದ ವಾತಾವರಣವನ್ನು ಉಂಟು ಮಾಡಿದ್ದರು. ಅಂತಹ ಎಲ್ಲಾ ಭ್ರಷ್ಟರು, ಬಡವರನ್ನು ಅಪ್ರಾಮಾಣಿಕರು ಎಂದು ದೂರಲು ಪ್ರಯತ್ನಗಳನ್ನು ಸದಾ ಮಾಡಿದ್ದರು. ನಾನು ಇದನ್ನೆಲ್ಲಾ ಮೊದಲೇ ಹೇಳಿದ್ದೆ. ಮತ್ತು ಅದನ್ನು ನಾನು ಇಂದೂ ಪುನರುಚ್ಚರಿಸುತ್ತೇನೆ, ಅದೆಂದರೆ ದೇಶದ ಬಡವರು ಪ್ರಾಮಾಣಿಕತೆಯ ಜೊತೆ ಮತ್ತು ಸ್ವಾಭಿಮಾನದ ಜೊತೆ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ಬಡವರು ವಾಸ್ತವಿಕತೆಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಮತ್ತು ಅವರ ಪ್ರಾಮಾಣಿಕತೆಗೆ ಪಿ.ಎಂ. ಸ್ವನಿಧಿ ಯೋಜನಾ ಮೂಲಕ ಉದಾಹರಣೆಯನ್ನು ಸೃಷ್ಟಿ ಮಾಡಿದ್ದಾರೆ. ಸ್ವನಿಧಿ ಯೋಜನೆಯ ಮೂಲಕ ಸಾಲ ಪಡೆದ ಬಹುತೇಕ ಬೀದಿ ವ್ಯಾಪಾರಿಗಳು ಸಕಾಲದಲ್ಲಿ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿಯ ನಮ್ಮ ಬೀದಿ ವ್ಯಾಪಾರಿಗಳು ಕಠಿಣ ದುಡಿಮೆಯಿಂದ ಸಂಪಾದನೆ ಮಾಡುತ್ತಿದ್ದಾರೆ ಮತ್ತು ಸಾಲದ ಕಂತುಗಳನ್ನು ಪಾವತಿ ಮಾಡುತ್ತಿದ್ದಾರೆ. ಇದು ಬಡವರ ಇಚ್ಚಾಶಕ್ತಿ, ಮಾನವ ಶಕ್ತಿ ಮತ್ತು ಪ್ರಾಮಾಣಿಕತೆಗೆ ನಿದರ್ಶನ.

ಸ್ನೇಹಿತರೇ, ನಿಮಗೆ ಪಿ.ಎಂ. ಸ್ವನಿಧಿ ಯೋಜನಾ ಬಗ್ಗೆ ಬ್ಯಾಂಕುಗಳ ಮೂಲಕ ಮತ್ತು ಇತರ ಸಂಘಟನೆಗಳ ಮೂಲಕ ವಿವರಿಸಲಾಗಿದೆ. ಇಲ್ಲಿ ಕೂಡಾ ನಿಮಗೆ ಮಾಹಿತಿ ನೀಡಲಾಗಿದೆ. ಯೋಜನೆಯ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ತಿಳಿಯಪಡಿಸುವುದು ಅಗತ್ಯ. ಯೋಜನೆ ಅಡಿಯಲ್ಲಿ ಸುಲಭವಾಗಿ ಸಾಲ ಲಭ್ಯವಾಗುತ್ತದೆ ಮತ್ತು ಅಲ್ಲಿ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದಲ್ಲಿ 7 ಶೇಕಡಾ ಬಡ್ಡಿ ರಿಯಾಯತಿ ಲಭ್ಯವಿದೆ. ಮತ್ತು ನೀವು ಡಿಜಿಟಲ್ ಹಣ ವರ್ಗಾವಣೆ ನಡೆಸಿದಲ್ಲಿ ತಿಂಗಳೊಂದಕ್ಕೆ ನೂರು ರೂಪಾಯಿಗಳವರೆಗೆ ಕ್ಯಾಶ್ ಬ್ಯಾಕ್ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ನೀವು ಎರಡು ಕೆಲಸಗಳನ್ನು ಮಾಡಿದರೆ , ಆಗ ನಿಮ್ಮ ಸಾಲ ಬಡ್ಡಿ ರಹಿತ ಸಾಲವಾಗಲಿದೆ. ಮತ್ತು ಮುಂದಿನ ಬಾರಿ ಇನ್ನೂ ದೊಡ್ಡ ಸಾಲವನ್ನು ಪಡೆಯಬಹುದು. ಹಣವು ನಿಮ್ಮ ವ್ಯವಹಾರವನ್ನು ವಿಸ್ತರಿಸಲು ನೆರವಾಗಲಿದೆ. ಸ್ನೇಹಿತರೇ, ಇಂದು ನಿಮಗಾಗಿ ಬ್ಯಾಂಕುಗಳ ಬಾಗಿಲುಗಳು ತೆರೆದಿರುತ್ತವೆಯಾದರೆ ಮತ್ತು ಬ್ಯಾಂಕುಗಳು ತಾವೇ ನಿಮ್ಮಲ್ಲಿಗೆ ಬರುತ್ತಿವೆ ಎಂದಾದರೆ ; ಇದು ಒಂದು ದಿನದಲ್ಲಿ ಸಾಧ್ಯವಾದ ಕೆಲಸ ಅಲ್ಲ. ಇದು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ನೀತಿ ಅಡಿಯಲ್ಲಿ ಹಲವಾರು ವರ್ಷಗಳ ಕಾಲ ನಡೆದ ಪ್ರಯತ್ನಗಳ ಫಲ. ಇದು ಬಡವರನ್ನು ಬ್ಯಾಂಕಿಂಗ್ ವ್ಯವಸ್ಥೆಯ ಜೊತೆ ಬೆಸೆಯುವುದರಿಂದ ಏನೂ ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಿದ್ದವರಿಗೆ ಉತ್ತರ ಕೂಡಾ

ಸ್ನೇಹಿತರೇ, ಬಡವರ ಜನ ಧನ ಖಾತೆಗಳನ್ನು ತೆರೆದಾಗ ಹಲವರು ಪ್ರಶ್ನೆಗಳನ್ನೆತ್ತಿದರು, ತಮಾಶೆ ಮಾಡಿದರು. ಆದರೆ ಇಂದು, ಅದೇ ಜನ ಧನ ಖಾತೆಗಳು ಬಿಕ್ಕಟ್ಟಿನ ಸಮಯದಲ್ಲಿ ಜನರಿಗೆ, ಬಡವರಿಗೆ ಸಹಾಯ ಮಾಡುತ್ತಿವೆ ಮತ್ತು ಅವರಿಗೆ ಪ್ರಗತಿ ಸಾಧಿಸಲು ನೆರವಾಗುತ್ತಿವೆ. ಇಂದು ಬಡವರು ಬ್ಯಾಂಕುಗಳ ಜೊತೆ ಸಂಪರ್ಕಿಸಲ್ಪಟ್ಟಿದ್ದಾರೆ ಮತ್ತು ಆರ್ಥಿಕತೆಯ ಮುಖ್ಯ ವಾಹಿನಿಯ ಜೊತೆ ಜೋಡಿಸಲ್ಪಟ್ಟಿದ್ದಾರೆ. ವಿಶ್ವದ ಪ್ರಮುಖ ದೇಶಗಳು ಶರಣಾಗುವಂತಹ ಸ್ಥಿತಿಯನ್ನು ತಂದಿಟ್ಟಿರುವ ಆರ್ಥಿಕ ಬಿಕ್ಕಟ್ಟನ್ನು ಇಂದು ನಮ್ಮ ಜನಸಾಮಾನ್ಯರು ಎದುರಿಸುವಂತಹ ಉತ್ತಮ ಸ್ಥಿತಿಯಲ್ಲಿದ್ದಾರೆ. ಬಿಕ್ಕಟ್ಟಿನಲ್ಲ್ಲಿಯೂ ಇಂದು ನಮ್ಮ ತಾಯಂದಿರು ಮತ್ತು ಸಹೋದರಿಯರು ಊಟವನ್ನು ಅನಿಲ ಸ್ಟೌವ್ ಗಳನ್ನು ಬಳಸಿ ತಯಾರಿಸುತ್ತಿದ್ದಾರೆ.ಲಾಕ್ ಡೌನ್ ಅವಧಿಯಲ್ಲಿಯೂ ಕೂಡಾ ಅವರು ಹೊಗೆ ಒಲೆಗಳಲ್ಲಿ ಅಡುಗೆ ಮಾಡಬೇಕಾದ ಸ್ಥಿತಿ ಬರಲಿಲ್ಲ. ಬಡವರು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಪಡೆಯುತ್ತಿದ್ದಾರೆ. ಸೌಭಾಗ್ಯ ಯೋಜನೆ ಅಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದಾರೆ. ಆಯುಷ್ಮಾನ್ ಯೋಜನೆ ಅಡಿಯಲ್ಲಿ 5 ಲಕ್ಷ ರೂ. ಗಳವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬಡವರಿಗೆ ವಿಮಾ ಯೋಜನೆಗಳ ಭದ್ರತೆ ಇದೆ. ಬಡವರ ಜೀವನದ ಒಟ್ಟಾರೆ ಅಭಿವೃದ್ಧಿ ಆಗಬೇಕು ಎನ್ನುವುದು ದೇಶದ ಪ್ರತಿಜ್ಞೆಯಾಗಿದೆ. ಸಂದರ್ಭದಲ್ಲಿ , ನಾನು ಎಲ್ಲಾ ಬೀದಿ ವ್ಯಾಪಾರಿಗಳಿಗೆ , ಕಾರ್ಮಿಕರಿಗೆ, ರೈತರಿಗೆ, ಭರವಸೆ ಕೊಡುತ್ತೇನೆ, ನಿಮ್ಮ ವ್ಯಾಪಾರದ ಪ್ರಗತಿಗೆ ಮತ್ತು ನಿಮ್ಮ ಜೀವನದ ಸುಧಾರಣೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದಾಗಿ.

ಸ್ನೇಹಿತರೇ, ಕೊರೊನಾ ತಂದಿಟ್ಟ ಎಲ್ಲಾ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿದ ಮತ್ತು ಮುಂಜಾಗರೂಕತಾ ಕ್ರಮಗಳನ್ನು ಜಾಗ್ರತೆಯಿಂದ ಪಾಲಿಸಿದ ನಿಮಗೆಲ್ಲರಿಗೂ ಮತ್ತೊಮ್ಮೆ ನನ್ನ ಧನ್ಯವಾದಗಳು. ನಿಮ್ಮ ಜಾಗೃತಿ ಮತ್ತು ಎಚ್ಚರಿಕೆಯಿಂದಾಗಿ ದೇಶವು ಜಾಗತಿಕ ಸಾಂಕ್ರಾಮಿಕವನ್ನು ಶೀಘ್ರದಲ್ಲಿಯೇ ಸೋಲಿಸಲು ಸಮರ್ಥವಾಗಲಿದೆ. ಅತಿ ಶೀಘ್ರದಲ್ಲಿಯೇ ನಾವು ಸ್ವಾವಲಂಬಿ ಭಾರತದ ಕನಸನ್ನು ನನಸು ಮಾಡುತ್ತೇವೆ ಎಂಬ ಭರವಸೆ ನನಗಿದೆ. ಮತ್ತು, ಹೌದು, ನಾವು ಎರಡು ಯಾರ್ಡ್ ದೂರ, ಅಂತರ ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹಬ್ಬಗಳ ಅವಧಿಯಲ್ಲೂ ಮುಖಗವಸುಗಳನ್ನು ಧರಿಸಿರಬೇಕು. ಅಲ್ಲಿ ಯಾವುದೇ ಕೊರತೆ ಇರಬಾರದು. ಶುಭ ಹಾರೈಕೆಗಳೊಂದಿಗೆ , ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನೂ ಹಬ್ಬಗಳಿಗಾಗಿ ಅಭಿನಂದಿಸುತ್ತೇನೆ ಮತ್ತು ನಿಮ್ಮ ಬದುಕಿನ ಪ್ರಗತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.

ಬಹಳ ಬಹಳ ಧನ್ಯವಾದಗಳು !

***



(Release ID: 1669723) Visitor Counter : 176