ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವೈಭವ್ ಶೃಂಗಸಭೆ; ದೇಶೀಯ ಮತ್ತು ವಿದೇಶಿ ಭಾರತೀಯ ವಿಜ್ಞಾನಿಗಳು ಮತ್ತು ಶೈಕ್ಷಣಿಕ ತಜ್ಞರ ವಿಶಿಷ್ಟ ಸಮಾಗಮದ ಯಶಸ್ವಿ ಸಮಾರೋಪ


ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ಹಾಗೂ ಬೆಳವಣಿಗೆ ಹೊಂದುತ್ತಿರುವ ವಲಯಗಳಲ್ಲಿ ಸಹಭಾಗಿತ್ವ ಸಾಧಿಸುವ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದ ಶೃಂಗಸಭೆ

ವಿಶ್ವದ ಅಭಿವೃದ್ಧಿಗಾಗಿ ಎದುರಾಗುತ್ತಿರುವ ಸವಾಲುಗಳನ್ನು ಹತ್ತಿಕ್ಕಲು ಜಾಗತಿಕ ಭಾರತೀಯ ಸಂಶೋಧಕರ ಜ್ಞಾನ ಹಾಗು ಪರಿಣಿತಿ ಬಳಸಿ ಸಮಗ್ರ ನೀಲನಕ್ಷೆ ಪ್ರಸ್ತಾಪಿಸಿದ ವೈಭವ್

Posted On: 01 NOV 2020 3:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಉದ್ಘಾಟಿಸಿದ್ದ ದೇಶಿಯ ಹಾಗು ವಿದೇಶಿ ಭಾರತೀಯ ಸಂಶೋಧಕರು ಮತ್ತು ಶೈಕ್ಷಣಿಕ ತಜ್ಞರ ಜಾಗತಿಕ ವರ್ಚುವಲ್ ಸಮಾವೇಶ–ವೈಶ್ವಿಕ್ ಭಾರತೀಯ ವೈಜ್ಞಾನಿಕ(ವೈಭವ್) ಶೃಂಗಸಭೆ ನಿನ್ನೆ ಸಮಾಪನಗೊಂಡಿತು. ಸುಮಾರು 2600 ವಿದೇಶಿ ಭಾರತೀಯರು ಸಮಾವೇಶದಲ್ಲಿ ಪಾಲ್ಗೊಳ್ಳಲು ಆನ್ ಲೈನ್ ಮೂಲಕ ನೋಂದಣಿ ಮಾಡಿಸಿದ್ದರು. ಸುಮಾರು 3200 ಸಂವಾದಕಾರರು ಹಾಗು ಭಾರತ ಮತ್ತು ವಿದೇಶದ 22,500 ಶೈಕ್ಷಣಿಕ ತಜ್ಞರು ಹಾಗು ವಿಜ್ಞಾನಿಗಳು ತಿಂಗಳಿಡೀ ನಡೆದ ಈ ವೆಬಿನಾರ್ ಗಳಲ್ಲಿ ಭಾಗವಹಿಸಿದ್ದರು. 2020ರ ಅಕ್ಟೋಬರ್ 3ರಿಂದ ಆರಂಭವಾದ ಸಂವಾದಗಳು ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದಂದು ಸಮಾಪನಗೊಂಡವು. ಅಕ್ಟೋಬರ್ 3 ರಿಂದ 25ರ ವರೆಗೆ ಪ್ರತಿಷ್ಠಿತ ಸಂಸ್ಥೆಗಳು ಆಯೋಜಿಸಿದ್ದ ನಾನಾ ಗೋಷ್ಠಿಗಳಲ್ಲಿ ಸುಮಾರು 722 ಗಂಟೆಗಳ ಕಾಲ ಸಂವಾದಗಳು ನಡೆದವು ಮತ್ತು ಅದರಿಂದ ಹೊರಬಂದ ಫಲಿತಾಂಶಗಳ ಕುರಿತು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್ ಅಧ್ಯಕ್ಷತೆಯ ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ|| ಕೆ.ವಿಜಯ ರಾಘವನ್ ನೇತೃತ್ವದ ಸಲಹಾ ಸಮಿತಿ ಅಕ್ಟೋಬರ್ 28ರಿಂದ 31ರ ವರೆಗೆ ಪರಿಶೀಲನೆ ನಡೆಸಿತು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇತರೆ ಸಚಿವಾಲಯಗಳ ಕಾರ್ಯದರ್ಶಿಗಳು ಈ ಮಂಡಳಿಯ ಸದಸ್ಯರಾಗಿದ್ದರು. ಅಲ್ಲದೆ ಸಿಎಸ್ಐಆರ್, ಡಿಎಸ್ ಟಿ, ಡಿಆರ್ ಡಿಒ, ಐಸಿಎಆರ್, ಡಿಒಎಸ್, ಡಿಎಇ, ಡಿವಿಟಿ, ಆರೋಗ್ಯ, ಫಾರ್ಮ, ಎಂಇಎ, ಎಂಒಇಎಸ್, ಎಂಇಐಟಿವೈ, ಎಂಒಇ ಮತ್ತು ಐಸಿಎಂಆರ್ ನ ಸದಸ್ಯರಿದ್ದರು. ಈ ಪ್ರತಿಷ್ಠಿತ ಸಂಸ್ಥೆಗಳು ಶೃಂಗಸಭೆಯಲ್ಲಿ ಭಾಗವಹಿಸಿದ್ದವರಿಂದ ಮಹತ್ವದ ಪ್ರತಿಕ್ರಿಯೆಗಳನ್ನು ಸ್ವೀಕರಿಸಿವೆ.

ವೈಭವ್ ಮತ್ತು ಆತ್ಮನಿರ್ಭರ: ವೈಭವ್ ಶೃಂಗಸಭೆಯಲ್ಲಿ ಆತ್ಮನಿರ್ಭರ್ ಭಾರತ ಸಾಧನೆ ನಿಟ್ಟಿನಲ್ಲಿ ಸಂಶೋಧನೆ ಸಾಮರ್ಥ್ಯವನ್ನು ಸ್ಥಾಪಿಸುವುದು ಅತ್ಯಂತ ಪ್ರಮುಖ ಅವಕಾಶವಾಗಿದೆ ಎಂಬುದು ಮನವರಿಕೆಯಾಯಿತು. ಅಲ್ಲದೆ ಇದರಿಂದ ದೇಶದಲ್ಲಿನ ಸಮಾಕಾಲೀನ ಸಂಶೋಧನೆಗಳನ್ನು ಪರಸ್ಪರ ಕ್ಷೇತ್ರಗಳಲ್ಲಿ ಹಂಚಿಕೆಯ ಉದ್ದೇಶದ ಜೊತೆಗೆ ಸಂಯೋಜಿಸಲು ಅವಕಾಶ ಮಾಡಿಕೊಟ್ಟಿತು. ದೇಶಿ ಹಾಗು ವಿದೇಶಿ ಭಾರತೀಯರು ಸಂಶೋಧನಾ ಮತ್ತು ಶೈಕ್ಷಣಿಕ ಸಾಮರ್ಥ್ಯಗಳ ಕುರಿತಂತೆ ಸಮಗ್ರ ಮುನ್ನೋಟವನ್ನು ನೀಡಿದರು ಮತ್ತು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಾಮರ್ಥ್ಯ ಜಾಗತಿಕ ಒಳಿತಿಗಾಗಿ ಮಹತ್ವದ ಕೊಡುಗೆ ನೀಡಲಿದೆ ಎಂದರು. ವೈಭವ್ ಸೈಬರ್ ವಲಯದಲ್ಲಿ ಸಂವಾದಾತ್ಮಕ ಮತ್ತು ಸುಲಭವಾದ ಕಾರ್ಯವಿಧಾನವನ್ನು ಸೃಷ್ಟಿಸಿದೆ ಮತ್ತು ಸಹಭಾಗಿತ್ವಕ್ಕೆ ಉತ್ತೇಜನ ನೀಡಿರುವುದಲ್ಲದೆ ನಾಯಕತ್ವ ಅಭಿವೃದ್ಧಿಗೆ ಸಹಕಾರಿಯಾಗಿದೆ. ವಿಜ್ಞಾನ ಮತ್ತು ಸಂಶೋಧನಾ ವಲಯದಲ್ಲಿ ಇದೊಂದು ಅದ್ಭುತ ಹೆಜ್ಜೆಯಾಗಿದ್ದು, ಇದು ಶೈಕ್ಷಣಿಕ ಸಂಸ್ಥೆಗಳಿಗೆ ಮಾತ್ರವಲ್ಲ, ಸಾರ್ವಜನಿಕ ವಲಯದ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳು ಮತ್ತು ಉದ್ಯಮವೂ ಕೂಡ ಈ ಸಂಶೋಧನೆಯ ಫಲವನ್ನು ಬಳಸಿಕೊಳ್ಳಬಹುದಾಗಿದೆ.

ವೈಭವ್: ವಿಸ್ತೃತ ಆಯಾಮದ ಸಮಾಲೋಚನೆಗಳು: ವೈಭವ್ ಸಮಾಲೋಚನೆಗಳು ನಾನಾ ವಲಯಗಳು ಮತ್ತು ವಿಷಯಗಳು ಮತ್ತು ವ್ಯವಸ್ಥಿತ ಚೌಕಟ್ಟಿನಲ್ಲಿ ನಡೆದವು. ಶೈಕ್ಷಣಿಕ ಮತ್ತು ವೈಜ್ಞಾನಿಕ ಸಮ್ಮೇಳನಗಳ ಇತಿಹಾಸದಲ್ಲಿ ಈ ಶೃಂಗಸಭೆ ಹಲವು ಪ್ರಥಮಗಳನ್ನು ದಾಖಲಿಸಿತು.

  • 18 ಕ್ಷೇತ್ರಗಳು
  • 80 ವಿಷಯಗಳು
  • 230 ಸಂವಾದ ಸಮಾಲೋಚನಾ ಗೋಷ್ಠಿಗಳು
  • 23 ದಿನ ಸಂವಾದ ಸಮಾಲೋಚನೆ
  • 3169 ಸಂವಾದಕಾರರು
  • 22500 ಪಾಲ್ಗೊಂಡಿದ್ದವರು
  • 722 ಗಂಟೆ ಅಧಿಕೃತ ಸಮಾಲೋಚನೆ

ಸಂವಾದಕಾರರಲ್ಲಿ ಶೇ.45ರಷ್ಟು ಅನಿವಾಸಿ ಭಾರತೀಯರು ಮತ್ತು ಶೇ.55ರಷ್ಟು ಸ್ಥಳೀಯ ಭಾರತೀಯ ಶೈಕ್ಷಣಿಕ ತಜ್ಞರು ಮತ್ತು ವಿಜ್ಞಾನಿಗಳು. ಅಲ್ಲದೆ ಅಧಿಕೃತ ಚರ್ಚಾಗೋಷ್ಠಿಗಳಿಗೂ ಮುನ್ನ ಸುಮಾರು 200 ಗಂಟೆಗಳ ಕಾಲ ಪೂರ್ವಾಭ್ಯಾಸ ಮತ್ತು ಅಭ್ಯಾಸ ಗೋಷ್ಠಿಗಳು ನಡೆದವು. ಒಟ್ಟಾರೆ ಈ ಶೃಂಗಸಭೆಯಲ್ಲಿ 71 ರಾಷ್ಟ್ರಗಳ ಅನಿವಾಸಿ ಭಾರತೀಯರು ಭಾಗವಹಿಸಿದ್ದರು. ವ್ಯಾಪಕ ವಿಷಯಗಳ ಕುರಿತು ಬೃಹತ್ ಪ್ರಮಾಣದಲ್ಲಿ ಇಷ್ಟು ದೊಡ್ಡ ವೈಜ್ಞಾನಿಕ ಸಮಾಲೋಚನೆಗಳು ದೇಶದಲ್ಲಿ ನಡೆದಿರುವುದು ಇದೇ ಮೊದಲು. ಶೃಂಗಸಭೆಯಲ್ಲಿ ಪಾಲ್ಗೊಂಡಿರುವುದಕ್ಕೆ ವಲಯಗಳ ವ್ಯಾಪ್ತಿ, ಸಂವಾದದ ಗಂಭೀರತೆ, ಸಮಾಲೋಚನೆಗಳಿಗೆ ವ್ಯಯಿಸಿದ ಗಂಟೆಗಳು, ಭಾಗವಹಿಸಿದ್ದ ದೇಶಗಳು ಮತ್ತು ಭಾಗವಹಿಸಿದ್ದವರ ವ್ಯಕ್ತಿತ್ವದಿಂದಾಗಿ ಈ ಶೃಂಗಸಭೆ ಒಂದು ದೊಡ್ಡ ಹೆಗ್ಗುರುತನ್ನು ಮೂಡಿಸಿದೆ.

ಈ ಶೃಂಗಸಭೆ ಒಂದು ಮಾದರಿ ಸಂಶೋಧನಾ ಪೂರಕ ವ್ಯವಸ್ಥೆ, ಆಧುನಿಕತೆಯ ಜೊತೆಗೆ ಸಂಪ್ರದಾಯವನ್ನು ಬೆಸದು, ಸಮೃದ್ಧಿಯನ್ನು ಸೃಷ್ಟಿಸುವ ಉದ್ದೇಶ ಹೊಂದಿತ್ತು. ಕಂಪ್ಯುಟೇಶನಲ್ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಕ್ವಾಂಟಮ್ ತಂತ್ರಜ್ಞಾನ, ಫೋಟೊನಿಕ್ಸ್, ಏರೋಸ್ಪೇಸ್ ತಂತ್ರಜ್ಞಾನ, ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ, ಫಾರ್ಮ ಮತ್ತು ಜೈವಿಕ ತಂತ್ರಜ್ಞಾನ, ಕೃಷಿ ಆರ್ಥಿಕತೆ ಮತ್ತು ಆಹಾರ ಭದ್ರತೆ, ಸಾಮಗ್ರಿ ಮತ್ತು ಸಂಸ್ಕರಣಾ ತಂತ್ರಜ್ಞಾನ, ಅತ್ಯಾಧುನಿಕ ಉತ್ಪಾದನಾ ವ್ಯವಸ್ಥೆ, ಭೂವಿಜ್ಞಾನ, ಇಂಧನ, ಪರಿಸರ ವಿಜ್ಞಾನ, ನಿರ್ವಹಣೆ ಮತ್ತು ಸಾಮಾಜಿಕ ವಿಜ್ಞಾನ ವಿಷಯಗಳ ಬಗ್ಗೆ ಸಮಾಲೋಚನೆಗಳು ನಡೆದವು.

ವೈಭವ್: ಬೆಳವಣಿಗೆ ಹೊಂದುತ್ತಿರುವ ವಲಯಗಳಲ್ಲಿ ಹೊಸ ಪಾಲುದಾರಿಕೆ – ಹಿಂದೆ ಒತ್ತು ನೀಡದೆ ಇದ್ದಂತಹ ಹಲವು ಬೆಳವಣಿಗೆ ಹೊಂದುತ್ತಿರುವ ವಲಯಗಳಲ್ಲಿ ಸಹಭಾಗಿತ್ವವನ್ನು ಸಾಧಿಸಲು ಶೃಂಗಸಭೆ ನೆರವಾಯಿತು. ಅವುಗಳೆಂದರೆ ಬಯೋರೆಮಿಡಿಯೇಷನ್, ಅರ್ಬನ್ ಮರುಸಂಸ್ಕರಣೆ ಮತ್ತು ಲೋಹದ ಜೀವಿಗಳು. ಅಲ್ಲದೆ, ತಜ್ಞರು ಭವಿಷ್ಯದ ವಿದ್ಯುತ್ ಗ್ರಿಡ್, ಸಂವಾದಾತ್ಮಕ ಮತ್ತು ದ್ವೀಪ ಮೈಕ್ರೋಗ್ರಿಡ್ ಹಾಗು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳು ಭಾರತದಲ್ಲಿ ವಿದ್ಯುದೀಕರಣ ಮತ್ತು ಮರುಸ್ಥಿತಿ ಸ್ಥಾಪಕತ್ವ ಕಾಯ್ದುಕೊಳ್ಳಲು ಒಂದು ಸಮಯದಲ್ಲಿ ಸೈಬರ್ ಸ್ಪೇಸ್ ವಲಯದಲ್ಲಿ ಒಂದೇ ಚಿಪ್ ನಲ್ಲಿ ನಾನಾ ಕಾರ್ಯ ನಿರ್ವಹಣೆಯ ಪ್ಯಾಕೇಜ್ ಗಳನ್ನು ಒದಗಿಸುವ ಕುರಿತು ಚರ್ಚೆ ನಡೆಯಿತು. ಮತ್ತೊಂದು ಸಮಯದಲ್ಲಿ ಅಣು ಮತ್ತು ಸ್ವಯಂಚಾಲಿತ ಕ್ಲಾಕ್ ಗಳ ಕುರಿತು ತಾಂತ್ರಿಕ ಚಿಂತನೆಗಳು ವಿನಿಮಯವಾದವು. ಕೆಲವು ವಿಷಯಗಳನ್ನು ಹೆಸರಿಸಬೇಕೆಂದರೆ ವಾಫರ್ ಲೆವೆಲ್ ಪ್ಯಾಕೆಜಿಂಗ್, ಎಂಇಎಂಎಸ್ ಜೊತೆ 3ಡಿ ಸಂಯೋಜನೆ, ಸಿಲಿಕಾನ್ ಫ್ಲಾಟ್ ಫಾರಂನಲ್ಲಿ 2ಡಿ ಸಾಮಗ್ರಿಗಳ ಹೆಟ್ರೊಜೀನಿಯಸ್ ಇಂಟಿಗ್ರೇಷನ್, ಫುಲ್ ಮೆಷಿನ್ ಮೋಡ್ ಇಂಜಿನ್ ಸೈಕಲ್ ಅನಾಲಿಸಿಸ್, ಏರೋ ಎಲಾಸ್ಟಿಕ್ ಅನಾಲಿಸಿಸ್ ಆಫ್ ಫ್ಯಾನ್, ಹಾಟ್ ಟರ್ಬೈನ್ ಬ್ಲೇಡ್ ಕೂಲಿಂಗ್ ಟೆಕ್ನಾಲಜಿ, ಮೆಂಬ್ರೇನ್ ಸಪರೇಷನ್ ಫಾರ್ ಪ್ಯೂರಿಫಿಕೇಶನ್ ಆಫ್ ಎಲಿಮೆಂಟ್ಸ್, ಜಿಇ ಪ್ಯೂರಿಫಿಕೇಶನ್ ಫಾರ್ ಡಿಟೆಕ್ಟರ್ ಅಪ್ಲಿಕೇಶನ್, ಹೈಲಿ ಡೋಪ್ಡ್ ಜಿಇ ಫಾರ್ ಟಿಎಚ್ ಝೆಡ್ ಅಂಡ್ ಎಂಐಡಿ ಫ್ರೀಕ್ವೆನ್ಸಿ. ಇವೆ ಕೆಲವು ವಲಯಗಳನ್ನು ಗುರುತಿಸಲಾಯಿತು.

ವೈಭವ್- ಪ್ರತಿಕ್ರಿಯೆ ಮತ್ತು ಮುನ್ನಡೆಯುವ ಮಾರ್ಗ: ಸಂವಾದಕಾರರು ವೈಭವ್ ಅನ್ನು ‘ವಿಜ್ಞಾನಿಗಳು ಮತ್ತು ಶೈಕ್ಷಣಿಕ ತಜ್ಞರಿಗೆ ಉತ್ತೇಜನಕಾರಿ ವೇದಿಕೆಯಾಗಿತ್ತು’ ಎಂದು ಬಣ್ಣಿಸಿದ್ದಾರೆ. ಆಯೋಜನಾ ಸಂಸ್ಥೆ ಇದನ್ನು ಹೀಗೆ ಅಳೆಯುತ್ತದೆ, “ಐತಿಹಾಸಿಕ ಮತ್ತು ಬೃಹತ್ ಪ್ರಯತ್ನ” ಶೃಂಗಸಭೆಯ ಸಂದರ್ಭದಲ್ಲಿ ಸ್ಥಳೀಯ ಸಂಶೋಧಕರು ತಮ್ಮ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಸಂವಾದ ನಡೆಸಿ, ದೇಶೀಯ ತಂತ್ರಜ್ಞಾನಗಳನ್ನು ಹೇಗೆ ಮುಂದೆ ಕೊಂಡೊಯ್ಯಬೇಕು ಎಂಬ ಬಗ್ಗೆ ಚರ್ಚಿಸಿದರು. ಒಂದು ತಂಡ “ಸಂಶೋಧನಾ ಬೆಂಬಲಕ್ಕೆ ನೆರವು, ಭವಿಷ್ಯದ ತಾಂತ್ರಿಕ ಪಥಗಳನ್ನು ಗುರುತಿಸಲು ಕೈಗಾರಿಕಾ ಅಗತ್ಯತೆಗಳಿಗೆ ಶೈಕ್ಷಣಿಕ ತಜ್ಞರು ಉದ್ಯಮ ಸಹಭಾಗಿತ್ವ ಉತ್ತೇಜನಕ್ಕೆ ಇವು ಸಂಶೋಧನಾ ಪಾಲುದಾರಿಕೆ ಮತ್ತು ವಾಣಿಜ್ಯೀಕರಣಕ್ಕೆ ಪ್ರಮುಖ ಕಾರ್ಯತಂತ್ರಗಳಾಗಿವೆ.

ಪ್ರಪಂಚದ ಅಭಿವೃದ್ಧಿಗೆ ಎದುರಾಗುವ ಸವಾಲುಗಳನ್ನು ಹತ್ತಿಕ್ಕಲು ಜಾಗತಿಕ ಭಾರತೀಯ ಸಂಶೋಧಕರ ಜ್ಞಾನ ಹಾಗು ಅನುಭವವನ್ನು ಬಳಸಿ, ಸಮಗ್ರ ನೀಲನಕ್ಷೆ ಅಭಿವೃದ್ಧಿಪಡಿಸುವುದನ್ನು ಶೃಂಗಸಭೆ ಪ್ರಸ್ತಾಪಿಸಿದೆ. ಈ ಶೃಂಗಸಭೆಯ ದಾಖಲೆಗಳು ಹಾಗೂ ಶಿಫಾರಸ್ಸುಗಳನ್ನು ಮುಂದಿನ ನಿರ್ದೇಶನಗಳಿಗಾಗಿ ಅಧಿಕೃತವಾಗಿ ಸಲಹಾ ಮಂಡಳಿಗೆ ಸಲ್ಲಿಸಲಾಗುವುದು. ಸಂಶೋಧನೆಗೆ ಹೊಸ ಅವಕಾಶಗಳು, ಸಂಶೋಧನಾ ಪೂರಕ ವ್ಯವಸ್ಥೆಯ ಬಲವರ್ಧನೆ, ಪಾಲುದಾರಿಕೆ ಸಂಭಾವ್ಯ ಅವಕಾಶಗಳು ಮತ್ತು ಭಾರತ ಮತ್ತು ವಿದೇಶದ ಶೈಕ್ಷಣಿಕ ತಜ್ಞರು/ವಿಜ್ಞಾನಿಗಳ ನಡುವೆ ಸಹಕಾರ ವೃದ್ಧಿ ಕುರಿತ ವಿಷಯಗಳು ಶೃಂಗಸಭೆಯಲ್ಲಿ ಪ್ರತಿಫಲನಗೊಂಡವು. ವಿಶ್ವ ಮತ್ತು ಭಾರತಕ್ಕಾಗಿ ಜಾಗತಿಕ ಸಂವಾದದ ಮೂಲಕ ದೇಶದಲ್ಲಿ ನಾನಾ ಹಾಗೂ ಆವಿಷ್ಕಾರಕ್ಕೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.

****



(Release ID: 1669378) Visitor Counter : 239