ಹಣಕಾಸು ಸಚಿವಾಲಯ

2020 ರ ಅಕ್ಟೋಬರ್ ತಿಂಗಳಲ್ಲಿ 1,05,155 ಕೋಟಿ ರೂ. ಒಟ್ಟು ಜಿಎಸ್ಟಿ ಸಂಗ್ರಹ

Posted On: 01 NOV 2020 11:09AM by PIB Bengaluru

2020 ರ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆಯಾಗಿ 1,05,155 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ 19,193 ಕೋಟಿ ರೂ., ರಾಜ್ಯ ಜಿಎಸ್‌ಟಿ 25,411 ಕೋಟಿ ರೂ., ಐಜಿಎಸ್‌ಟಿ  52,540 ಕೋಟಿ ರೂ. (ಸರಕುಗಳ ಆಮದಿನಿಂದ ಸಂಗ್ರಹಿಸಿದ 23375 ಕೋಟಿ ರೂ.ಸೇರಿದಂತೆ) ಮತ್ತು ಸೆಸ್ 8,011 ಕೋಟಿ ರೂ. (ಸರಕುಗಳ ಆಮದಿನಿಂದ ಸಂಗ್ರಹಿಸಿದ 932 ಕೋಟಿ ರೂ. ಸೇರಿದಂತೆ) ಗಳಾಗಿದೆ. 2020 ರ ಅಕ್ಟೋಬರ್ 31 ರವರೆಗೆ ಅಕ್ಟೋಬರ್ ತಿಂಗಳಿಗಾಗಿ ಸಲ್ಲಿಸಲಾದ ಒಟ್ಟು ಜಿ ಎಸ್ ಟಿ ಆರ್ -3 ಬಿ ರಿಟರ್ನ್ಸ್ ಸಂಖ್ಯೆ 80 ಲಕ್ಷವಾಗಿದೆ.

ಕೇಂದ್ರ ಜಿಎಸ್‌ಟಿಗೆ 25,091 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 19,427 ಕೋಟಿ ರೂ.ಗಳನ್ನು ಐಜಿಎಸ್‌ಟಿಯಿಂದ ನಿಯಮಿತ ಇತ್ಯರ್ಥವಾಗಿ ಸರ್ಕಾರ ಇತ್ಯರ್ಥಪಡಿಸಿದೆ. 2020 ರ ಅಕ್ಟೋಬರ್ ತಿಂಗಳಲ್ಲಿ ನಿಯಮಿತ ಇತ್ಯರ್ಥದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಕೇಂದ್ರ ಜಿಎಸ್‌ಟಿಗೆ 44,285 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 44,839 ಕೋಟಿ ರೂ. ಗಳಾಗಿದೆ.

ಕಳೆದ ವರ್ಷದ ಇದೇ ತಿಂಗಳಲ್ಲಿ ಇದ್ದ ಜಿಎಸ್‌ಟಿ ಆದಾಯಕ್ಕಿಂತ ಈ ವರ್ಷದ ಆದಾಯ ಶೇ.10 ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಬಂದ ಆದಾಯಕ್ಕೆ ಹೋಲಿಸಿದರೆ ಈ ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು ಶೇ.9 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಶೇ.11 ರಷ್ಟು ಹೆಚ್ಚಾಗಿದೆ. 2020 ರ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಿಗೆ ಹೋಲಿಸಿದರೆ ಜಿಎಸ್ಟಿ ಆದಾಯದ ಬೆಳವಣಿಗೆಯು ಕ್ರಮವಾಗಿ -14%, -8% ಮತ್ತು 5% ನಷ್ಟಾಗಿದ್ದು, ಇದು ಆರ್ಥಿಕತೆಯ ಚೇತರಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಮತ್ತು ಅದಕ್ಕೆ ಅನುಗುಣವಾಗಿ ಆದಾಯ ಹೆಚ್ಚಳವನ್ನೂ ತೋರಿಸುತ್ತಿದೆ.

ಅಂಕಿಅಂಶಗಳು ಪ್ರಸಕ್ತ ವರ್ಷದ ಮಾಸಿಕ ಒಟ್ಟು ಜಿಎಸ್‌ಟಿ ಆದಾಯದ ಪ್ರವೃತ್ತಿಯನ್ನು ತೋರಿಸುತ್ತವೆ. ಅಕ್ಟೋಬರ್, 2019 ಕ್ಕೆ ಹೋಲಿಸಿದರೆ 2020 ರ ಅಕ್ಟೋಬರ್ ತಿಂಗಳಲ್ಲಿ ಮತ್ತು ಸಂಪೂರ್ಣ ವರ್ಷಕ್ಕೆ ಸಂಬಂಧಿಸಿದಂತೆ ಪ್ರತಿ ರಾಜ್ಯದಲ್ಲಿ ಸಂಗ್ರಹಿಸಲಾದ ಜಿಎಸ್‌ಟಿಯ ರಾಜ್ಯವಾರು ಅಂಕಿಅಂಶಗಳನ್ನು ಕೆಳಗಿನ ಪಟ್ಟಿಯಲ್ಲಿ ತೋರಿಸಲಾಗಿದೆ.

https://static.pib.gov.in/WriteReadData/userfiles/image/image00104VT.png

ಏಪ್ರಿಲ್ 2020 ರ ರಾಜ್ಯವಾರು ಜಿಎಸ್‌ಟಿ ಸಂಗ್ರಹ [1]

ರಾಜ್ಯ

ಅಕ್ಟೋಬರ್-2019

ಅಕ್ಟೋಬರ್-2020

ಬೆಳವಣಿಗೆ

ಜಮ್ಮು ಮತ್ತು ಕಾಶ್ಮೀರ

313

377

21%

ಹಿಮಾಚಲ ಪ್ರದೇಶ 

669

691

3%

ಪಂಜಾಬ್

1,189

1,376

16%

ಚಂಡೀಗಢ

157

152

-3%

ಉತ್ತರಾಖಂಡ

1,153

1,272

10%

ಹರಿಯಾಣ

4,578

5,433

19%

ದೆಹಲಿ

3,484

3,211

-8%

ರಾಜಸ್ಥಾನ

2,425

2,966

22%

ಉತ್ತರ ಪ್ರದೇಶ 

5,103

5,471

7%

ಬಿಹಾರ 

940

1,010

7%

ಸಿಕ್ಕಿಂ 

186

177

-5%

ಅರುಣಾಚಲ ಪ್ರದೇಶ  

41

98

138%

ನಾಗಾಲ್ಯಾಂಡ್ 

25

30

20%

ಮಣಿಪುರ

43

43

0%

ಮಿಜೋರಾಂ 

18

32

72%

ತ್ರಿಪುರ  

54

57

5%

ಮೇಘಾಲಯ

113

117

4%

ಅಸ್ಸಾಂ 

888

1,017

14%

ಪಶ್ಚಿಮ ಬಂಗಾಳ

3,263

3,738

15%

ಜಾರ್ಖಂಡ್

1,437

1,771

23%

ಒಡಿಶಾ

1,994

2,419

21%

ಛತ್ತೀಸ್‌ಗಢ

1,570

1,974

26%

ಮಧ್ಯಪ್ರದೇಶ

2,053

2,403

17%

ಗುಜರಾತ್

5,888

6,787

15%

ದಮನ್ ಮತ್ತು ದಿಯು

83

7

-91%

ದಾದ್ರಾ ಮತ್ತು ನಗರ ಹವೇಲಿ 

130

283

118%

ಮಹಾರಾಷ್ಟ್ರ

15,109

15,799

5%

ಕರ್ನಾಟಕ

6,675

6,998

5%

ಗೋವಾ

311

310

0%

ಲಕ್ಷದ್ವೀಪ  

2

1

-55%

ಕೇರಳ

1,549

1,665

7%

ತಮಿಳುನಾಡು

6,109

6,901

13%

ಪುದುಚೇರಿ  

146

161

10%

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 

32

19

-42%

ತೆಲಂಗಾಣ

3,230

3,383

5%

ಆಂಧ್ರಪ್ರದೇಶ

1,975

2,480

26%

ಲಡಾಖ್ 

0

15

 

ಇತರೆ ಪ್ರದೇಶ  

127

91

-28%

ಕೇಂದ್ರ ವ್ಯಾಪ್ತಿ  

97

114

17%

ಒಟ್ಟು

73,159

80,848

11%

 

****(Release ID: 1669337) Visitor Counter : 280