ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಸಿಎಸ್ಐಆರ್- ಸಿಡಿಆರ್ ಐ ಸಂಸ್ಥೆಯ ವಿಜ್ಞಾನಿ, ಡಾ. ಸತೀಶ್ ಮಿಶ್ರಾ ಅವರಿಗೆ ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ (ಭಾರತ) ಸಂಸ್ಥೆಯಿಂದ "ಡಾ. ತುಳಸಿದಾಸ್ ಚುಗ್ ಪ್ರಶಸ್ತಿ - 2020"


ಮಲೇರಿಯಾದ ಪರಾವಲಂಬಿ ಜೀವನ ಚಕ್ರದಲ್ಲಿ ಅವರು ನಡೆಸಿದ ಸಂಶೋಧನಾ ಕಾರ್ಯವನ್ನು ಗುರುತಿಸಿ ಪ್ರಶಸ್ತಿ

Posted On: 28 OCT 2020 5:08PM by PIB Bengaluru

ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ (ಭಾರತ) ಓರೇಷನ್ಸ್ & ಅವಾರ್ಡ್ಸ್ ಕಮಿಟಿಯು, 2020ಡಾ. ತುಳಸಿ ದಾಸ್ ಚುಗ್ ಪ್ರಶಸ್ತಿಗಾಗಿ ಲಕ್ನೋದ ಸಿಎಸ್ಐಆರ್-ಸಿಡಿಆರ್ ,  ಆಣ್ವಿಕ ಪರಾವಲಂಬಿ ಮತ್ತು ರೋಗನಿರೋಧಕ ವಿಭಾಗದ ಪ್ರಧಾನ ವಿಜ್ಞಾನಿಯಾದ  ಡಾ.ಸತೀಶ್ ಮಿಶ್ರಾ ಅವರನ್ನು ಆಯ್ಕೆ ಮಾಡಿದೆ.  ಎರಡು ಆತಿಥೇಯರು ಮತ್ತು ಮೂರು ಅತಿಕ್ರಮಿಸುವ ಹಂತಗಳನ್ನು ಒಳಗೊಂಡ ಒಂದು ಸಂಕೀರ್ಣ ಪ್ರಕ್ರಿಯೆಯಾಗಿರುವ ಮಲೇರಿಯಾ ಪರಾವಲಂಬಿಯ ಜೀವನ ಚಕ್ರದಲ್ಲಿ ಅವರ ಸಂಶೋಧನಾ ಕಾರ್ಯವನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ.  ಸಸ್ತನಿಗಳು ಮತ್ತು ಸೊಳ್ಳೆಗಳೆರಡರಲ್ಲೂ ಅತಿಕ್ರಮವು ಯಶಸ್ವಿಯಾಗಿ ನಡೆಯುವ ಘಟನೆಗಳ ಸಂಘಟಿತ ಅನುಕ್ರಮದ ಅಗತ್ಯವಿದೆ.  ಅವರ ಗಮನಾರ್ಹ ಕಾರ್ಯವು "ಸ್ರವಿಸಿದ ಪ್ರೋಟೀನ್ ಜೊತೆಗೆ ಆಲ್ಟರ್ಟೆಡ್ ಥ್ರಂಬೋಸ್ಪಾಂಡಿನ್ ರಿಪೀಟ್ (ಎಸ್ಪಿಎಟಿಆರ್) ಅನ್ನು ಕೇಂದ್ರೀಕರಿಸಿದೆ, ಇದು ಅಸೆಕ್ಸ್ಯುಯಲ್ ರಕ್ತದ ಹಂತಗಳಿಗೆ ಅತ್ಯಗತ್ಯ ಆದರೆ ಮಲೇರಿಯಾ ಪರಾವಲಂಬಿ ಪ್ಲಾಸ್ಮೋಡಿಯಮ್ ಬರ್ಗೈಯಿಂದ ಹೆಪಟೊಸೈಟ್ ಅತಿಕ್ರಮಣಕ್ಕೆ ಅಗತ್ಯವಿಲ್ಲ". ಅಧ್ಯಯನವು ಪಿ. ಬರ್ಗೈನಲ್ಲಿನ ಎಸ್ಪಿಎಟಿಆರ್ ವಿತರಣಾ ಸಾಮರ್ಥ್ಯ, ಸ್ಪೊರೊಜೊಯಿಟ್ಗಳು ಮತ್ತು ರಕ್ತ ಹಂತದ ಸೋಂಕಿನ ಸ್ಥಾಪನೆಗೆ ಅದರ ಪ್ರಾಮುಖ್ಯತೆಯ ಮೇಲೆ ಕೇಂದ್ರೀಕೃತವಾಗಿದೆ, ಪ್ರಕ್ರಿಯೆಯಲ್ಲಿ ಅದರ ನಿಖರ ಪಾತ್ರವನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ಅಗತ್ಯವಿದೆ.

ಅಕಾಡೆಮಿ ಮತ್ತು ಪ್ರಶಸ್ತಿ

ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ (ಭಾರತ) ಒಂದು ವಿಶಿಷ್ಟ ಸಂಸ್ಥೆಯಾಗಿದ್ದು, ಇದು ವೈದ್ಯಕೀಯ ಮತ್ತು ಸಾಮಾಜಿಕ ಉದ್ದೇಶಗಳನ್ನು ಪೂರೈಸಲು ಶೈಕ್ಷಣಿಕ ಉತ್ಕೃಷ್ಟತೆಯನ್ನು ತನ್ನ ಸಂಪನ್ಮೂಲವಾಗಿ ಬೆಳೆಸುತ್ತದೆ ಮತ್ತು ಬಳಸಿಕೊಳ್ಳುತ್ತದೆ.  ಇದನ್ನು ಏಪ್ರಿಲ್ 21, 1961ರಂದು ಸಂಘಗಳ ನೋಂದಣಿ ಕಾಯ್ದೆ XXI ಅಡಿಯಲ್ಲಿ 'ಇಂಡಿಯನ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್' ಎಂದು ನೋಂದಾಯಿಸಲಾಗಿದೆ.  ಭಾರತ ಸರ್ಕಾರ ಸ್ಥಾಪಿಸಿದ ವರ್ಕಿಂಗ್ ಗ್ರೂಪಿನ ಶಿಫಾರಸಿನಂತೆ ನವೆಂಬರ್ 16, 1976ರಂದು ಅಕಾಡೆಮಿಯನ್ನು ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ (ಭಾರತ) ಎಂದು ಮರುನಾಮಕರಣ ಮಾಡಲಾಯಿತು.   ಭಾರತದ ಹಲವಾರು ಪ್ರತಿಷ್ಠಿತ ಭಾಷಣಗಳು ಮತ್ತು ಪ್ರಶಸ್ತಿಗಳನ್ನು ಅಕಾಡೆಮಿಯು ಸ್ಥಾಪಿಸಿದೆ ಮತ್ತು ಅವರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಪ್ರಖ್ಯಾತ ಜೈವಿಕ-ವೈದ್ಯಕೀಯ ವಿಜ್ಞಾನಿಗಳಿಗೆ ನೀಡಲಾಗುತ್ತದೆ.  ಅಕಾಡೆಮಿಯು ರಾಷ್ಟ್ರವ್ಯಾಪಿ ಸಿಎಮ್ಇ ಕಾರ್ಯಕ್ರಮಗಳು, ವಿಚಾರಗೋಷ್ಠಿ, ಕಾರ್ಯಾಗಾರಗಳು ಇತ್ಯಾದಿಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಪ್ರಾಯೋಜಿಸುತ್ತದೆ.  ಹಲವಾರು ವರ್ಷಗಳಿಂದ ಅಕಾಡೆಮಿಯು ಔಷಧ ಮತ್ತು ಸಂಬಂಧಿತ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ವಿಜ್ಞಾನಿಗಳ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿದೆ ಮತ್ತು ಫೆಲೋಶಿಪ್ ನೀಡಿದೆ ಮತ್ತು ಇತರರು ಪರಿಶೀಲಿಸಿದ ಪ್ರಕ್ರಿಯೆಯ ಮೂಲಕ ಮತ್ತು ಅಂತಿಮವಾಗಿ ಎಲ್ಲಾ ಫೆಲೋಗಳಿಂದ ಮತ ಚಲಾಯಿಸಿ ಆಯ್ಕೆ ಮಾಡಲ್ಪಟ್ಟ ವ್ಯಕ್ತಿಗಳಿಗೆ ಸದಸ್ಯತ್ವವನ್ನು ನೀಡಿದೆ.

ಡಾ. ತುಳಸಿ ದಾಸ್ ಚುಗ್ ಪ್ರಶಸ್ತಿಯು ಒಂದು ಪ್ರಶಸ್ತಿಪತ್ರ, ಸ್ಮರಣಾರ್ಥ ಪದಕ ಮತ್ತು ಪ್ರೋತ್ಸಾಹಕ ನಗದನ್ನು ಹೊಂದಿರುತ್ತದೆ.  ಅಕಾಡೆಮಿಯ ವಾರ್ಷಿಕ ಸಮ್ಮೇಳನದ ಸಮಯದಲ್ಲಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗುವುದು. ವಾರ್ಷಿಕ ಸಮ್ಮೇಳನದಲ್ಲಿ, ಒಂದು ಅಧಿವೇಶನ ನಡೆಯಲಿದ್ದು, ಅದರಲ್ಲಿ ಅವರು ತಮ್ಮ ಕೆಲಸದ ಬಗ್ಗೆ  ಪ್ರಸ್ತುತಿಯನ್ನು ಮಾಡುತ್ತಾರೆ ಮತ್ತು ನಂತರ ಚರ್ಚೆಯನ್ನು ನಡೆಸುತ್ತಾರೆ.

ಡಾ.ಸತೀಶ್ ಮಿಶ್ರಾ ಅವರಿಗೆ ಲಭಿಸಿದ ಇತರ ಪ್ರಶಸ್ತಿಗಳು

ಡಾಸತೀಶ್ ಮಿಶ್ರಾ ಅವರ ಪ್ರಶಸ್ತಿಗಳು:

  • 2019ರಲ್ಲಿ ಚುನಾಯಿತ ಸದಸ್ಯ, ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್, ಭಾರತ
  • 2018ರಲ್ಲಿ ಚುನಾಯಿತ ಸದಸ್ಯ, ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಭಾರತ
  • ಭಾರತ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ 2018 ರಲ್ಲಿ ಶಕುಂತಲಾ ಅಮೀರ್ ಚಂದ್ ಪ್ರಶಸ್ತಿ
  • ಭಾರತ ಸರ್ಕಾರದ ಭಾರತೀಯ ಜೈವಿಕ ತಂತ್ರಜ್ಞಾನ ಇಲಾಖೆಯಿಂದ 2013 ರಲ್ಲಿ ರಾಮಲಿಂಗಸ್ವಾಮಿ ರೀ-ಎಂಟ್ರೀ ಫೆಲೋಶಿಪ್.

***



(Release ID: 1668316) Visitor Counter : 229