ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ತಗ್ಗಿದ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಪ್ರಮಾಣ


ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತ್ಯಧಿಕ ಸೋಂಕು ಪತ್ತೆ ಪರೀಕ್ಷೆ

ನಿರಂತರ ಇಳಿಕೆಯ ಸಕ್ರಿಯ ಪ್ರಕರಣಗಳ ಸುಸ್ಥಿರ ಬೆಳವಣಿಗೆ

ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಒಂದೇ ದಿನ 7,000 ಕ್ಕೂ ಅಧಿಕ ಸೋಂಕಿತರು ಗುಣಮುಖ

Posted On: 28 OCT 2020 12:02PM by PIB Bengaluru

ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೈಗೊಂಡಿರುವ ನಿರ್ದಿಷ್ಟ ಕಾರ್ಯತಂತ್ರ ಮತ್ತು ಸಕ್ರಿಯ ಸಮನ್ವಯದ ಕ್ರಮಗಳಿಂದಾಗಿ ಭಾರತದಲ್ಲಿ ಜಾಗತಿಕವಾಗಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಸೋಂಕು ಪ್ರಕರಣ ವರದಿಯಾಗುತ್ತಿದೆ ಮತ್ತು ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಸಾವು ಪ್ರಮಾಣ ಮುಂದುವರಿದಿದೆ.

ಜಾಗತಿಕವಾಗಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 5,552 ಪ್ರಕರಣಗಳಿದ್ದು ಭಾರತದಲ್ಲಿ 5,790 ದಾಖಲಾಗಿದೆ. ಅಮೆರಿಕ, ಬ್ರೆಜಿಲ್, ಫ್ರಾನ್ಸ್, ಬ್ರಿಟನ್, ರಷ್ಯಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಸಂಖ್ಯೆ ಹೆಚ್ಚಾಗಿದೆ.

http://static.pib.gov.in/WriteReadData/userfiles/image/image001J3DL.jpg

ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಯ ಸಾವಿನ ಪ್ರಮಾಣ 87 ರಷ್ಟಿದೆ. ವಿಶ್ವದ ಸರಾಸರಿ 148 ಕ್ಕೆ ಹೋಲಿಸಿದರೆ ಅತಿ ಕಡಿಮೆಯಾಗಿದೆ. ಭಾರತ ಕೋವಿಡ್ ನಿರ್ವಹಣೆಗೆ ನಿರ್ದಿಷ್ಟ ಕಾರ್ಯತಂತ್ರ ಮತ್ತು ಸಕ್ರಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಸಾರ್ವಜನಿಕ ಆರೋಗ್ಯ ನಿರ್ವಹಣಾ ವಲಯದಲ್ಲಿ ಸಮನ್ವಯದ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಉತ್ತ ಫಲಿತಾಂಶಗಳು ದೊರಕುತ್ತಿವೆ.

http://static.pib.gov.in/WriteReadData/userfiles/image/image0024IEH.jpg

ಒಟ್ಟಾರೆ ಸೋಂಕು ಪತ್ತೆ ಪರೀಕ್ಷೆಗಳಲ್ಲಿ ಭಾರತ ಅಗ್ರ ರಾಷ್ಟ್ರಗಳ ಸಾಲಿನಲ್ಲಿದ್ದು, ಕಳೆದ 24 ಗಂಟೆಗಳಲ್ಲಿ 10,66,786 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟು ಸೋಂಕು ಪತ್ತೆ ಪರೀಕ್ಷೆಗಳ ಪ್ರಮಾಣ 10.5 ಕೋಟಿ (10,54,87,680) ದಾಟಿದೆ.

ವ್ಯಾಪಕ ಮತ್ತು ಸಮಗ್ರ ಪರೀಕ್ಷೆಗಳ ಮೂಲಕ ತ್ವರಿತವಾಗಿ ಸೋಂಕು ಪತ್ತೆ ಮಾಡಲಾಗುತ್ತಿದ್ದು ಸಕಾಲದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಗುಣಮುಖರಾಗುತ್ತಿದ್ದಾರೆ ಹಾಗೂ ಮರಣ ಪ್ರಮಾಣ ತಗ್ಗುತ್ತಿದೆ. ಭಾರತದಲ್ಲಿ ಸದ್ಯ ಮರಣ ಪ್ರಮಾಣ ಶೇ.1.50 ಇದೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿರುವ ಬೆಳವಣಿಗೆ ಮುಂದುವರಿಯುತ್ತಿರುವುದು ವರದಿಯಾಗಿದೆ. ಸದ್ಯ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಶೇ. 7.64 ಅಂದರೆ 6,10,803 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಈವರೆಗೆ ಗುಣಮುಖರಾಗಿರುವವರ ಸಂಖ್ಯೆ 72,59,509 ಆಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 43,893 ಪ್ರಕರಣಗಳು ದೃಢಪಟ್ಟಿವೆ ಮತ್ತು ಹೊಸದಾಗಿ 58,439 ಸೋಂಕಿತರು ಗುಣಮುಖರಾಗಿದ್ದಾರೆ. ಹೊಸದಾಗಿ ಗುಣಮುಖರಾಗಿರುವ ಶೇ. 77ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದವು.

ಕರ್ನಾಟಕ,ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಒಂದೇ ದಿನ 7,000 ಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ.

http://static.pib.gov.in/WriteReadData/userfiles/image/image003Y60P.jpg

ಶೇಕಡ 79ರಷ್ಟು ಹೊಸ ಸೋಂಕು ಪ್ರಕರಣಗಳು ಹತ್ತು ರಾಜ್ಯ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು. ಕೇರಳ ಹೊಸ ಪ್ರಕರಣಗಳಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕಿದೆ. ಎರಡೂ ರಾಜ್ಯಗಳಲ್ಲಿ 5,000ಕ್ಕೂ ಅಧಿಕ ಪ್ರಕರಣಗಳು ಹೊಸದಾಗಿ ದೃಢಪಟ್ಟಿವೆ. ದೆಹಲಿ, ಪಶ್ಚಿಮ ಬಂಗಾಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಸಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ.

http://static.pib.gov.in/WriteReadData/userfiles/image/image004EK2J.jpg

ಕಳೆದ 24 ಗಂಟೆಗಳಲ್ಲಿ 508 ಸೋಂಕಿತರು ಸಾವನ್ನಪ್ಪಿದ್ದಾರೆ. ಅವುಗಳಲ್ಲಿ ಶೇ. 79 ರಷ್ಟು ಪ್ರಕರಣಗಳು ಹತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವುಗಳಾಗಿವೆ.

ಮಹಾರಾಷ್ಟ್ರದಲ್ಲಿ ಹೊಸದಾಗಿ ಅತ್ಯಧಿಕ ಸಂಖ್ಯೆಯ 115 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

http://static.pib.gov.in/WriteReadData/userfiles/image/image005Q294.jpg

***



(Release ID: 1668088) Visitor Counter : 222