ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಿಂದ ಮಹತ್ವದ ಮೈಲಿಗಲ್ಲು


2 ತಿಂಗಳ ನಂತರ ಮೊದಲ ಬಾರಿಗೆ 7 ಲಕ್ಷಕ್ಕಿಂತ ಕಡಿಮೆ ಕೋವಿಡ್-19 ಸಕ್ರಿಯ ಪ್ರಕರಣಗಳು

24 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 20,000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣ

Posted On: 23 OCT 2020 11:35AM by PIB Bengaluru

ಕೋವಿಡ್-19 ಸೋಂಕು ನಿಯಂತ್ರಣ ಹೋರಾಟದಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಎರಡು ತಿಂಗಳ ನಂತರ ಇದೇ ಮೊದಲ ಬಾರಿಗೆ ದೇಶಾದ್ಯಂತ ಸಕ್ರಿಯ ಸೋಂಕಿತರ ಸಂಖ್ಯೆ 7 ಲಕ್ಷದ ಮಟ್ಟಕ್ಕಿಂತ ಕೆಳಕ್ಕೆ ತಗ್ಗಿದೆ. ಆಗಸ್ಟ್ 22ರಂದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,97,330 ದಾಖಲಾಗಿತ್ತು.

ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 6,95,509 ದಾಖಲಾಗಿದ್ದು, ಇದು ಒಟ್ಟು ಪ್ರಕರಣಗಳ ಶೇಕಡ 8.96 ರಷ್ಟಿದೆ.

ಪ್ರತಿನಿತ್ಯ ಅಧಿಕ ಸಂಖ್ಯೆಯ ಕೊರೊನಾ ರೋಗಿಗಳು ಗುಣಮುಖರಾಗುವ ಜತೆಗೆ, ಮರಣ ಪ್ರಮಾಣ ಸ್ಥಿರವಾಗಿ ಕಡಿಮೆ ಆಗುತ್ತಿರುವುದರಿಂದ, ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ ಆಗುತ್ತಿರುವ ಪ್ರವೃತ್ತಿ ಮುಂದುವರಿದಿದೆ.

http://static.pib.gov.in/WriteReadData/userfiles/image/image0015BSZ.jpg

ಭಾರತದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ದಿನಂದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈವರೆಗೆ ದೇಶಾದ್ಯಂತ 69,48,497 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣ ಮತ್ತು ಚೇತರಿಕೆ ಪ್ರಕರಣಗಳ ನಡುವಿನ ವ್ಯತ್ಯಾಸ ಸ್ಥಿರವಾಗಿ ಹೆಚ್ಚುತ್ತಿದ್ದು, ಅದೀಗ 62,52,988 ದಾಖಲಾಗಿದೆ. ಚೇತರಿಕೆ ಪ್ರಕರಣಗಳ ಪ್ರಮಾಣವು ಸಕ್ರಿಯ ಪ್ರಕರಣಗಳಿಗಿಂತ 10 ಪಟ್ಟು ಹೆಚ್ಚಾಗಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 73,979 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಒಂದೇ ದಿನ 54,366 ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಷ್ಟ್ರೀಯ ಚೇತರಿಕೆ ದರ 89.53%ಗೆ ಸುಧಾರಣೆ ಕಂಡಿದೆ.

ದೇಶಾದ್ಯಂತ ಹೆಚ್ಚಸಿರುವ ವೈದ್ಯಕೀಯ ಮೂಲಸೌಕರ್ಯ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಕೇಂದ್ರ ಸರಕಾರದ ಪ್ರಮಾಣಿತ ಚಿಕಿತ್ಸಾ ವಿಧಾನ ಜಾರಿ, ವೈದ್ಯ ಮತ್ತು ಅರೆವೈದ್ಯ ಸಮುದಾಯದ ಸೇವಾ ಸಮರ್ಪಣೆ ಮತ್ತು ಬದ್ಧತೆ, ಆರೋಗ್ಯ ಕಾರ್ಯಕರ್ತರು ಮತ್ತು ವಾರಿಯರ್ ಗಳ ನಿಸ್ವಾರ್ಥ ಸೇವೆಯಿಂದಾಗಿ, ರೋಗದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಜತೆಗೆ, ಮರಣ ಪ್ರಮಾಣವೂ ತಗ್ಗುತ್ತಿದೆ. ಸಾವಿನ ದರ ಇಂದು 1.51ಕ್ಕೆ ತಗ್ಗಿದೆ. ಸಕ್ರಿಯ ಪ್ರಕರಣಗಳು ಇಳಿಕೆ ಕಾಣುತ್ತಿರುವುದೇ ಇದಕ್ಕೆ ಕಾರಣ.

24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 20,000ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ವರದಿಯಾಗಿವೆ.

http://static.pib.gov.in/WriteReadData/userfiles/image/image002V7YZ.jpg

ಶೇಕಡ 81 ಸಕ್ರಿಯ ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿದೆ.

ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಒಂದೇ ದಿ 16 ಸಾವಿರಕ್ಕಿಂತ ಹೆಚ್ಚಿನ ರೋಗಿಗಳು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಒಂದೇ ದಿನ 13,000ಕ್ಕಿಂತ ಹೆಚ್ಚಿನ ಚೇತರಿಕೆ ಪ್ರಕರಣಗಳು ವರದಿಯಾಗಿವೆ.

http://static.pib.gov.in/WriteReadData/userfiles/image/image003ZGRO.jpg

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 54,366 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

ಅದರಲ್ಲಿ 78% ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ತಲಾ 7 ಸಾವಿರಕ್ಕಿಂತ ಹೆಚ್ಚಿನ ಹೊಸ ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ 5 ಸಾವಿರಕ್ಕಿಂತ ಹೆಚ್ಚಿನ ಹೊಸ ಪ್ರಕರಣಗಳು ದಾಖಲಾಗಿವೆ.

http://static.pib.gov.in/WriteReadData/userfiles/image/image004KUP1.jpg

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 690 ಸಾವುಗಳು ಸಂಭವಿಸಿವೆ. ಅದರಲ್ಲಿ 81% ಸಾವುಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ ಸಂಭವಿಸಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ ಗರಿಷ್ಠ ಅಂದರೆ 198 ಸಾವುಗಳು ವರದಿಯಾಗಿವೆ.

http://static.pib.gov.in/WriteReadData/userfiles/image/image005D5K2.jpg

***



(Release ID: 1667016) Visitor Counter : 170