ಸಂಪುಟ
ಶಾಂತಿಯುತ ಉದ್ದೇಶಗಳಿಗೆ ಹೊರ ಬಾಹ್ಯಾಕಾಶ ಬಳಕೆ ಮತ್ತು ಶೋಧ ಕಾರ್ಯಕ್ಕಾಗಿ ಭಾರತ ಮತ್ತು ನೈಜೀರಿಯಾ ನಡುವೆ ಸಹಕಾರ ಕುರಿತ ಒಡಂಬಡಿಕೆಗೆ ಕೇಂದ್ರ ಸಂಪುಟದ ಅನುಮೋದನೆ
Posted On:
21 OCT 2020 3:27PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಶಾಂತಿಯುತ ಉದ್ದೇಶಗಳಿಗೆ ಹೊರ ಬಾಹ್ಯಾಕಾಶ ಬಳಕೆ ಮತ್ತು ಶೋಧ ಕಾರ್ಯಕ್ಕಾಗಿ ಭಾರತ ಮತ್ತು ನೈಜೀರಿಯಾ ನಡುವೆ ಸಹಕಾರ ಕುರಿತ ಒಡಂಬಡಿಕೆಗೆ ಅನುಮೋದನೆ ನೀಡಿದೆ. ಈ ಒಡಂಬಡಿಕೆಗೆ ಭಾರತದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಜೂನ್ 2020ರಲ್ಲಿ ಮತ್ತು ನೈಜೀರಿಯಾದ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಎನ್ಎಎಸ್ಆರ್ ಡಿಇ) ನಡುವೆ 2020ರ ಆಗಸ್ಟ್ 13ರಂದು ಸಹಿ ಹಾಕಲಾಯಿತು.
ವಿವರಗಳು:
- ಈ ಒಡಂಬಡಿಕೆಯಿಂದಾಗಿ ಭೂಮಿಯ ದೂರಸಂವೇದಿ; ಉಪಗ್ರಹ ಸಂವಹನ ಮತ್ತು ಉಪಗ್ರಹ ಆಧಾರಿತ ನೌಕೆ; ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಗಳ ಅನ್ವೇಷಣೆ; ಬಾಹ್ಯಾಕಾಶ ನೆಲೆ ಬಳಕೆ; ವಾಹಕಗಳ ಉಡಾವಣೆ; ಬಾಹ್ಯಾಕಾಶ ವ್ಯವಸ್ಥೆ ಮತ್ತು ಖಭೌತಿಕ ಸಾಧನಗಳು ಮತ್ತು ತಂತ್ರಜ್ಞಾನವನ್ನು ಒಳಗೊಂಡಂತೆ ಬಾಹ್ಯಾಕಾಶ ತಂತ್ರಜ್ಞಾನದ ಪ್ರಾಯೋಗಿಕ ಬಳಕೆ ಮತ್ತು ಸಹಿ ಹಾಕಲಾದ ಸಂಸ್ಥೆಗಳು ನಿಗದಿಪಡಿಸಿದ ಇತರೆ ವಲಯಗಳಲ್ಲಿ ಪರಸ್ಪರ ಹಿತಾಸಕ್ತಿಯ ಸಹಕಾರ ಸಂಬಂಧ ಬಲವರ್ಧನೆಗೆ ಸಹಕಾರಿಯಾಗಲಿದೆ.
- ಈ ಒಡಂಬಡಿಕೆಯಿಂದಾಗಿ ಉಭಯ ದೇಶಗಳು ಜಂಟಿ ಕಾರ್ಯಕಾರಿ ತಂಡವನ್ನು ರಚಿಸಲಿದ್ದು, ಅದಕ್ಕೆ ಇಸ್ರೊ/ ಬಾಹ್ಯಾಕಾಶ ಇಲಾಖೆ (ಡಿಒಎಸ್)ಯಿಂದ ಮತ್ತು ನೈಜೀರಿಯಾದ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಎನ್ಎಎಸ್ಆರ್ ಡಿಇ)ಯ ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಅಲ್ಲದೆ ತಂಡ ಒಪ್ಪಂದವನ್ನು ಅರ್ಥಪೂರ್ಣವಾಗಿ ಮತ್ತು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಕಾರ್ಯಯೋಜನೆಯನ್ನು ಸಿದ್ಧಪಡಿಸಲು ಇದು ನೆರವಾಗಲಿದೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿ
ಈ ಒಡಂಬಡಿಕೆಯಿಂದಾಗಿ ಉಭಯ ದೇಶಗಳು ಜಂಟಿ ಕಾರ್ಯಕಾರಿ ತಂಡವನ್ನು ರಚಿಸಲಿದ್ದು, ಅದಕ್ಕೆ ಇಸ್ರೊ/ ಬಾಹ್ಯಾಕಾಶ ಇಲಾಖೆ (ಡಿಒಎಸ್)ಯಿಂದ ಸದಸ್ಯರನ್ನು ಮತ್ತು ನೈಜೀರಿಯಾದ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಎನ್ಎಎಸ್ಆರ್ ಡಿಇ)ಯ ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಅಲ್ಲದೆ ಇದು ಒಪ್ಪಂದವನ್ನು ಅರ್ಥಪೂರ್ಣವಾಗಿ ಮತ್ತು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಕಾರ್ಯಯೋಜನೆಯನ್ನು ಸಿದ್ಧಪಡಿಸಲು ಇದು ನೆರವಾಗಲಿದೆ.
ಪರಿಣಾಮ:
ಈ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಹೊಸದಾಗಿ ಸಂಶೋಧನಾ ಚಟುವಟಿಕೆಗಳನ್ನು ಅನ್ವೇಷಿಸಲು ಉತ್ತೇಜನ ಸಿಗುವುದಲ್ಲದೆ, ಭೂಮಿಯ ದೂರ ಸಂವೇದಿ, ಉಪಗ್ರಹ ಸಂವಹನ, ಉಪಗ್ರಹ ನೌಕೆ, ಹೊರ ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಅನ್ವೇಷಣೆ ವಲಯಗಳಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಲು ನೆರವಾಗಲಿದೆ.
ಒಳಗೊಂಡಿರುವ ವೆಚ್ಚ:
ಸಹಿ ಹಾಕಿರುವ ಸಂಸ್ಥೆಗಳು ಸಹಕಾರದ ಆಧಾರದ ಮೇಲೆ ಪರಸ್ಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿವೆ. ಪ್ರತಿಯೊಂದು ಪ್ರಕರಣದಲ್ಲೂ ಪರಸ್ಪರ ಸಹಿ ಹಾಕಿರುವ ಸಂಸ್ಥೆಗಳು ಹಣಕಾಸು ವ್ಯವಸ್ಥೆಗಳನ್ನು ನಿರ್ಧರಿಸಲಿವೆ. ಸಹಿ ಹಾಕಿರುವ ಎರಡು ಸಂಸ್ಥೆಗಳು ತಮ್ಮ ಕಾನೂನು ಮತ್ತು ನಿಯಮಗಳಿಗೆ ಅನುಗುಣವಾಗಿ ಒಡಂಬಡಿಕೆಯಂತೆ ಜಂಟಿ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಕ್ರಮಗಳನ್ನು ಕೈಗೊಳ್ಳಲಿವೆ ಹಾಗೂ ಲಭ್ಯ ನಿಧಿಗೆ ಅನುಗುಣವಾಗಿ ಆ ಉದ್ದೇಶಗಳಿಗೆ ನಿಗದಿಪಡಿಸಿಕೊಳ್ಳಬಹುದು.
ಫಲಾನುಭವಿಗಳು:
ಈ ಒಡಂಬಡಿಕೆಯಿಂದಾಗಿ ನೈಜೀರಿಯಾ ಸರ್ಕಾರದೊಂದಿಗೆ ಸಹಕಾರ ಸಾಧಿಸಲಾಗುವುದು ಮತ್ತು ಮಾನವ ಸಮುದಾಯದ ಒಳಿತಿಗೆ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಬಳಕೆ ಮಾಡುವ ವಲಯದಲ್ಲಿ ಜಂಟಿ ಚಟುವಟಿಕೆಗಳನ್ನು ಕೈಗೊಳ್ಳಲು ನೆರವಾಗಲಿದೆ. ಇದರಿಂದ ದೇಶದ ಎಲ್ಲ ವಿಭಾಗದ ಮತ್ತು ಪ್ರಾಂತ್ಯದವರಿಗೆ ಅನುಕೂಲವಾಗಲಿದೆ.
ಹಿನ್ನೆಲೆ:
ಕಳೆದ ಒಂದು ದಶಕಕ್ಕಿಂತಲೂ ಮೊದಲಿನಿಂದ ಭಾರತ ಮತ್ತು ನೈಜೀರಿಯಾ ಅಧಿಕೃತ ಬಾಹ್ಯಾಕಾಶ ಸಹಕಾರಕ್ಕಾಗಿ ಪ್ರಯತ್ನಿಸುತ್ತಿವೆ. ನೈಜೀರಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಈ ಉಪಕ್ರಮದಿಂದಾಗಿ ಬಾಹ್ಯಾಕಾಶ ಸಹಕಾರ ಕುರಿತ ಅಂತರ ಸರ್ಕಾರದ ಈ ಒಡಂಬಡಿಕೆಯ ಕರಡನ್ನು ಎಂಇಎ ಮೂಲಕ ನೈಜೀರಿಯಾದ ಸಂಬಂಧಿಸಿದ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿತ್ತು. ರಾಜತಾಂತ್ರಿಕ ಮಾರ್ಗಗಳ ಮೂಲಕ ಕೆಲವು ಬಾರಿ ಸಮಾಲೋಚನೆಗಳನ್ನು ನಡೆಸಿದ ನಂತರ ಉಭಯ ದೇಶಗಳು ಕಾರ್ಯಸಾಧುವಾದ ಒಡಂಬಡಿಕೆಯ ಕರಡಿಗೆ ಸಮ್ಮತಿ ಸೂಚಿಸಿದವು ಮತ್ತು ಆ ಕರಡನ್ನು ಆಂತರಿಕ ಅನುಮೋದನೆಗಾಗಿ ಪ್ರಕ್ರಿಯೆಯನ್ನು ಕೈಗೊಳ್ಳಲಾಯಿತು. ಸಕಾಲದಲ್ಲಿ ಆ ಅನುಮೋದನೆಗಳನ್ನು ಪಡೆದ ಬಳಿಕ 2019ರ ಅಂತ್ಯದಲ್ಲಿ ಮತ್ತು 2020ರ ಆರಂಭದಲ್ಲಿ ಹಾಗೂ ಆನಂತರ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಒಡಂಬಡಿಕೆಗೆ ಸಹಿ ಹಾಕುವಂತಹ ಸಂದರ್ಭ ಅಥವಾ ಸೂಕ್ತ ಅವಕಾಶ ದೊರೆತಿರಲಿಲ್ಲ.
***
(Release ID: 1666483)
Visitor Counter : 230
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam