ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೋವಿಡ್ -19 ಮುಂಜಾಗ್ರತಾ ಜನಾಂದೋಲನಕ್ಕೆ ಪ್ರಧಾನಮಂತ್ರಿ ಅವರಿಂದ ಚಾಲನೆ

Posted On: 07 OCT 2020 7:26PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020 ಅಕ್ಟೋಬರ್ 8 ರಂದು ಜನಾಂದೋಲನಕ್ಕೆ ಟ್ವೀಟ್ ಮಾಡುವ ಮೂಲಕ ಕೋವಿಡ್ -19 ಮುಂಜಾಗ್ರತಾ ಜನಾಂದೋಲನಕ್ಕೆ ಚಾಲನೆ ನೀಡಲಿದ್ದಾರೆ.

ಮುಂಬರುವ ಹಬ್ಬಗಳು ಮತ್ತು ಚಳಿಗಾಲದ ಹಿನ್ನೆಲೆಯ ಜೊತೆಗೆ ಆರ್ಥಿಕತೆಗೆ ಅವಕಾಶಗಳನ್ನು ತೆರೆಯಲಾದ ಹಿನ್ನೆಲೆಯಲ್ಲಿ ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿದೆ.

ಜನರ ಸಹಭಾಗಿತ್ವವನ್ನು ಉತ್ತೇಜಿಸುವ ಧ್ಯೆಯೋದ್ದೇಶದಿಂದ ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿದೆ. ಇದು ಕಡಿಮೆ ಖರ್ಚಿನ ಹೆಚ್ಚು ತೀವ್ರತೆಯ ಆಂದೋಲನವಾಗಿರುತ್ತದೆ. “ಮುಖಗವಸು ಧರಿಸಿ, ದೈಹಿಕ ಅಂತರ ಪಾಲಿಸಿ, ಕೈಗಳ ಸ್ವಚ್ಚತೆ ಕಾಪಾಡಿಎಂಬ ಪ್ರಮುಖ ಸಂದೇಶಗಳನ್ನು ಇದು ಒಳಗೊಂಡಿರುತ್ತದೆ.

ಎಲ್ಲರೂ ಕೋವಿಡ್ -19 ಪ್ರತಿಜ್ಞೆಯನ್ನು ಕೈಗೊಳ್ಳುತ್ತಾರೆ. ಇದಕ್ಕಾಗಿ ಕೇಂದ್ರ ಸರಕಾರದ ಸಚಿವಾಲಯಗಳು/ ಇಲಾಖೆಗಳು ಮತ್ತು ರಾಜ್ಯ ಸರಕಾರಗಳು/ ಕೇಂದ್ರಾಡಳಿತ ಪ್ರದೇಶಗಳು ಕೆಳಗಿನ ಪ್ರಮುಖಾಂಶಗಳನ್ನು ಒಳಗೊಂಡ ಕ್ರಿಯಾ ಯೋಜನೆಯನ್ನು ಜಾರಿಗೆ ತರಲಿವೆ.

  • ಹೆಚ್ಚು ಪ್ರಕರಣಗಳ ಒತ್ತಡ ಇರುವ ಜಿಲ್ಲೆಗಳಲ್ಲಿ ಪ್ರದೇಶವಾರು ನಿರ್ದಿಷ್ಟ, ಗುರಿ ಕೇಂದ್ರಿತ ಮಾಹಿತಿ ನೀಡಿಕೆ
  • ಪ್ರತೀ ನಾಗರಿಕರನ್ನು ತಲುಪುವಂತಹ ಸರಳ ಸಂದೇಶಗಳು
  • ಎಲ್ಲಾ ಮಾದ್ಯಮಗಳ ವೇದಿಕೆಗಳನ್ನು ಬಳಸಿ ದೇಶಾದ್ಯಂತ ಮಾಹಿತಿ ಪ್ರಸಾರ
  • ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಮತ್ತು ಪೋಸ್ಟರ್ ಅಳವಡಿಕೆ, ಮುಂಚೂಣಿ ಕಾರ್ಯಕರ್ತರನ್ನು ಒಳಗೊಂಡು ಸರಕಾರಿ ಯೋಜನೆಗಳ ಫಲಾನುಭವಿಗಳನ್ನು ಕೇಂದ್ರೀಕರಿಸಿಕೊಂಡು ಕಾರ್ಯಚಟುವಟಿಕೆ.
  • ಸರಕಾರಿ ಆವರಣಗಳಲ್ಲಿ ಹೋರ್ಡಿಂಗ್ ಮತ್ತು ಗೋಡೆ ಬರಹ/ ಇಲೆಕ್ಟ್ರಾನಿಕ್ ಡಿಸ್ ಪ್ಲೇ ಬೋರ್ಡುಗಳ ಅಳವಡಿಕೆ.
  • ಸಂದೇಶಗಳನ್ನು ಮನೆ ಮನೆಗೆ ತಲುಪಿಸಲು ಸ್ಥಳೀಯ ಮತ್ತು ರಾಷ್ಟ್ರೀಯ ಪ್ರಭಾವಿಗಳನ್ನು ಸೇರಿಸಿಕೊಳ್ಳುವಿಕೆ.
  • ನಿರಂತರ ಜಾಗೃತಿ ಮೂಡಿಸುವುದಕ್ಕಾಗಿ ಮೊಬೈಲ್ ವ್ಯಾನ್ ಗಳ ಸಂಚಾರ.
  • ಜಾಗೃತಿ ಮೂಡಿಸುವುದಕ್ಕಾಗಿ ಧ್ವನಿ ಸಂದೇಶಗಳು; ಕರ ಪತ್ರಗಳು/ ಬ್ರೋಷರ್ ಗಳು
  • ಕೋವಿಡ್ ಸಂದೇಶಗಳ ಪ್ರಸಾರಕ್ಕಾಗಿ ಸ್ಥಳೀಯ ಕೇಬಲ್ ಆಪರೇಟರ್ ಗಳ ಬೆಂಬಲ ಕೋರಿಕೆ
  • ಸಮರ್ಪಕ ಪರಿಣಾಮಕ್ಕಾಗಿ ಮತ್ತು ಜನರನ್ನು ತಲುಪುವುದಕ್ಕಾಗಿ ವಿವಿಧ ವೇದಿಕೆಗಳ ಮೂಲಕ ಸಮನ್ವಯದ ಮಾಧ್ಯಮ ಪ್ರಚಾರ ಆಂದೋಲನ


(Release ID: 1662726) Visitor Counter : 219