ಸಂಪುಟ

ಭಾರತ ಮತ್ತು ಜಪಾನ್ ನಡುವೆ ಸೈಬರ್ ಭದ್ರತೆ ಕ್ಷೇತ್ರದಲ್ಲಿ ಸಹಕಾರ ಒಡಂಬಡಿಕೆಗೆ ಅಂಕಿತ

Posted On: 07 OCT 2020 4:33PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಜಪಾನ್ ನಡುವೆ ಸೈಬರ್ ಭದ್ರತೆ ಕುರಿತ ಸಹಕಾರ ಒಡಂಬಡಿಕೆ (ಎಂ..ಸಿ.) ಅಂಕಿತಕ್ಕೆ  ತನ್ನ ಅನುಮೋದನೆ ನೀಡಿತು.

ಸೈಬರ್ ಅವಕಾಶದ ಸಾಮರ್ಥ್ಯವರ್ಧನೆ; ಸಂಕೀರ್ಣ ಮೂಲಸೌಕರ್ಯಗಳ ರಕ್ಷಣೆ, ಉದಯಿಸುತ್ತಿರುವ ತಂತ್ರಜ್ಞಾನಗಳಲ್ಲಿ ಸಹಕಾರ; ಸೈಬರ್ ಭದ್ರತೆಯ ಅಪಾಯಗಳು/ ದುರುದ್ದೇಶದ ಸೈಬರ್ ಕಾರ್ಯಚಟುವಟಿಕೆಗಳ ಮಾಹಿತಿ ಹಂಚಿಕೊಳ್ಳುವಿಕೆ, ಮತ್ತು ಅವುಗಳ ತಡೆಗೆ ಉತ್ತಮ ಪದ್ದತಿಗಳ ಅಳವಡಿಕೆ, ಮಾಹಿತಿ ಸಂಪರ್ಕ ತಂತ್ರಜ್ಞಾನ (.ಸಿ.ಟಿ.) ಮೂಲಸೌಕರ್ಯ ಭದ್ರತೆಗೆ ಬಂದೊದಗಬಹುದಾದ ಸೈಬರ್ ಬೆದರಿಕೆಗಳನ್ನು ನಿವಾರಿಸಲು ಪ್ರಾಯೋಗಿಕ ಸಹಕಾರಕ್ಕಾಗಿ ಜಂಟಿ ವ್ಯವಸ್ಥೆಗಳ ಅಭಿವೃದ್ಧಿ ಸಹಿತ  ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಎಂ..ಸಿ.ಯು ಸಹಕಾರವನ್ನು ಹೆಚ್ಚಿಸಲಿದೆ.

ಭಾರತ ಮತ್ತು ಜಪಾನ್ ಗಳು ಆಯಾ ದೇಶೀಯ ಕಾನೂನುಗಳು ಮತ್ತು ಅಂತಾರಾಷ್ಟ್ರೀಯ ನಿಬಂಧನೆಗಳನ್ವಯ, ಅವುಗಳ ವಿಶಾಲ ವ್ಯಾಪ್ತಿಯ ವ್ಯೂಹಾತ್ಮಕ ಸಹಭಾಗಿತ್ವದ ಮುಕ್ತ, ಪರಸ್ಪರ ಕಾರ್ಯ ಸಾಧ್ಯವಾದ ಉಚಿತ, ನ್ಯಾಯೋಚಿತ, ಭದ್ರ ಮತ್ತು ವಿಶ್ವಾಸಾರ್ಹ ಸೈಬರ್ ಅವಕಾಶ ಪರಿಸರಕ್ಕೆ ಬದ್ದವಾಗಿದ್ದು, ಅಂತರ್ಜಾಲವನ್ನು ಅನ್ವೇಷಣೆ, ಆರ್ಥಿಕ ಪ್ರಗತಿ, ಮತ್ತು ವ್ಯಾಪಾರ ಹಾಗು ವಾಣಿಜ್ಯ ಉತ್ತೇಜನಕ್ಕೆ ಬಳಸಲು ಬದ್ದವಾಗಿವೆ.

ಉಭಯ ಕಡೆಯವರೂ ಎಂ..ಸಿ. ಮೂಲಕ ವಿಶ್ವ ಸಂಸ್ಥೆಗಳಲ್ಲಿ ಸಹಿತ ಅಂತಾರಾಷ್ಟ್ರೀಯ ವಲಯದಲ್ಲಿ ಸಹಕಾರವನ್ನು ದೃಢಪಡಿಸಿದ್ದಾರೆ. .ಸಿ.ಟಿ. ಉತ್ಪನ್ನಗಳ ಪೂರೈಕೆ ಸರಪಳಿಯಲ್ಲಿ ಸಮಗ್ರತೆ ಸಾಧಿಸುವುದು, ಸರಕಾರದಿಂದಸರಕಾರಕ್ಕೆ ವ್ಯವಸ್ಥೆಯ ಮೂಲಕ  .ಸಿ.ಟಿ.ಮೂಲಸೌಕರ್ಯಗಳ ಭದ್ರತೆಯ ಹೆಚ್ಚಳ ಮತ್ತು ವ್ಯಾಪಾರೋದ್ಯಮದಿಂದ ವ್ಯಾಪಾರೋದ್ಯಮಕ್ಕೆ ಸಹಕಾರ ; ಆಡಳಿತದಲ್ಲಿ ಮಾತುಕತೆ ಮುಂದುವರಿಕೆ ಹಾಗು ಅಂತರ್ಜಾಲದಲ್ಲಿ  ತೊಡಗಿಸಿಕೊಳ್ಳುವಿಕೆ, ಹಾಗು ಕ್ಷೇತ್ರದಲ್ಲಿ ಉಭಯ ದೇಶಗಳ ಎಲ್ಲಾ ಭಾಗೀದಾರರ ಸಕ್ರಿಯ ಭಾಗವಹಿಸುವಿಕೆಗೆ ಬೆಂಬಲ ಇದರಲ್ಲಿ ಸೇರಿವೆ.

***



(Release ID: 1662705) Visitor Counter : 184