ಸಂಪುಟ
ಭಾರತೀಯ ಪ್ರಾಣಿವಿಜ್ಞಾನ ಸರ್ವೇಕ್ಷಣೆ ಮತ್ತು ಕೆನಡಾದ ಲಾಭದ ಉದ್ದೇಶವಿಲ್ಲದ ಸಂಸ್ಥೆಯಾದ ಅಂತಾರಾಷ್ಟ್ರೀಯ ಬಾರ್ ಕೋಡ್ ಆಫ್ ಲೈಫ್ ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅನುಮೋದನೆ
Posted On:
07 OCT 2020 4:32PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಪರಿಸರ , ಅರಣ್ಯ ಮತ್ತು ವಾತಾವರಣ ಬದಲಾವಣೆ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾದ ಭಾರತೀಯ ಪ್ರಾಣಿ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆ (ಝಡ್ .ಎಸ್.ಐ.) ಮತ್ತು ಕೆನಡಾದ ಲಾಭೋದ್ದೇಶರಹಿತ ಸಂಸ್ಥೆಯಾದ ಅಂತಾರಾಷ್ಟ್ರೀಯ ಬಾರ್ ಕೋಡ್ ಆಫ್ ಲೈಫ್ (ಐ.ಬಿ.ಒ.ಎಲ್.) ನಡುವೆ 2020 ರ ಜೂನ್ ತಿಂಗಳಲ್ಲಿ ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆಯನ್ನು ಪರಾಮರ್ಶಿಸಿತು.
ಝಡ್. ಎಸ್.ಐ. ಮತ್ತು ಐ.ಬಿ.ಒ.ಎಲ್. ಗಳು ನಿರ್ದಿಷ್ಟಪಡಿಸಿದ ಜೀನ್ ವಲಯಗಳಲ್ಲಿ ಸಣ್ಣ ಸಣ್ಣ ವಿಭಾಗಗಳನ್ನು ಜೋಡಿಸಿಕೊಂಡು ಜೀವ ಜಾತಿಗಳನ್ನು ಖಚಿತವಾಗಿ ಮತ್ತು ತ್ವರಿತವಾಗಿ ಗುರುತಿಸುವ ಕಾರ್ಯ ವಿಧಾನವಾದ ಡಿ.ಎನ್.ಎ. ಬಾರ್ ಕೋಡಿಂಗ್ ನಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕೈಜೋಡಿಸಲು ಮುಂದೆ ಬಂದಿವೆ. ಜೊತೆಗೆ ವೈಯಕ್ತಿಕ ಅನುಕ್ರಮಣಿಕೆಗಳನ್ನು ಪರಾಮರ್ಶಾ ದತ್ತಾಂಶ ನೆಲೆಗಳ ಜೊತೆ ಹೋಲಿಸಿ ನೋಡಲು ಇದರಿಂದ ಅವಕಾಶವಾಗಲಿದೆ. ಐ.ಬಿ.ಒ.ಎಲ್. ಸಂಸ್ಥೆಯು ಜಾಗತಿಕ ಪರಾಮರ್ಶಾ ದತ್ತಾಂಶ ನೆಲೆಯನ್ನು ವಿಸ್ತರಿಸಲು ಅವಕಾಶವಾಗುವಂತೆ ಮಾನವ ಮತ್ತು ಹಣಕಾಸು ಸಂಪನ್ಮೂಲವನ್ನು ಒದಗಿಸಲು ಬದ್ದವಾಗಿರುವ ದೇಶಗಳ ಸಂಶೋಧನಾ ಮಿತ್ರಕೂಟವಾಗಿದೆ. ಮಾಹಿತಿ ವೇದಿಕೆಗಳ ಅಭಿವೃದ್ಧಿ, ಪರಾಮರ್ಶಾ ಗ್ರಂಥಾಲಯದಲ್ಲಿ ಬಳಕೆಗೆ ಅವಶ್ಯವಾದ ವಿಶ್ಲೇಷಣಾ ಶಿಷ್ಟಾಚಾರಗಳು, ಜೀವ ವೈವಿಧ್ಯದ ಮೌಲ್ಯಮಾಪನ ಮತ್ತು ವಿವರಣೆಗಳೂ ಇದರಲ್ಲಿ ಅಡಕವಾಗಿವೆ. ಈ ಎಂ.ಒ.ಯು. ಝಡ್. ಎಸ್.ಐ. ಗೆ ಬಯೋಸ್ಕಾನ್ ಮತು ಭೂಗ್ರಹ ಜೀವವೈವಿಧ್ಯ ಮಿಷನ್ ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಿದೆ.
***
(Release ID: 1662700)
Visitor Counter : 199
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam