ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಸ್ವಚ್ಛತಂ ಭಾರತ, ಸ್ವಾಸ್ಥ್ಯಂ ಭಾರತ - ಸ್ವಚ್ಛ, ಆರೋಗ್ಯಕರ ಭಾರತ ನಿರ್ಮಾಣ ಸಂಕಲ್ಪ ಪುನರುಚ್ಚಾರಕ್ಕೆ ಸಕಾಲ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ


ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಸ್ವಚ್ಛ ಭಾರತ್ ಮಿಷನ್-ನಗರದ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ “ಸ್ಚಚ್ಛತಾ ಕೆ 6 ಸಾಲ್, ಬೆಮಿಸಾಲ್’ ವೆಬಿನಾರ್

ಪ್ರಮುಖ ಕಲಿಕೆಗಳ ದಾಖಲೀಕರಣ ಮಾಡುವ ಎಸ್ ಬಿಎಂ-ಯು ಸಂವಾದಾತ್ಮಕ ಪೋರ್ಟಲ್ ಗೆ ಚಾಲನೆ ನೀಡಿದ ಹರ್ದೀಪ್ ಸಿಂಗ್ ಪುರಿ

ಶೇ.97ರಷ್ಟು ನಮ್ಮ ನಗರಗಳು ಬಯಲು ಬಹಿರ್ದೆಸೆ ಮುಕ್ತ ಪ್ರದೇಶ: ದುರ್ಗಾ ಶಂಕರ್ ಮಿಶ್ರಾ

ನೈರ್ಮಲ್ಯ ಕಾರ್ಯಕರ್ತರ ಸುರಕ್ಷತೆ ಕುರಿತ ಸಿದ್ಧ ಮಾಹಿತಿ ಬಿಡುಗಡೆ

ನಗರ ಸ್ಥಳೀಯ ಸಂಸ್ಥೆಗಳನ್ನು ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯ (ಪಿಟಿ/ಸಿಟಿ) ಬಯಲು ಬಹಿರ್ದೆಸೆ ಮುಕ್ತ ಪ್ಲಸ್ ಪ್ರದೇಶಗಳನ್ನಾಗಿ ಮಾಡಲು ನೈಮರ್ಲೀಕರಣ ಗುರುತಿಸುವಿಕೆ ಸಾಧನಕ್ಕೆ ಚಾಲನೆ

ಶೇ.77ರಷ್ಟು ವಾರ್ಡ್ ಗಳಲ್ಲಿ ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ, ಒಟ್ಟು ಉತ್ಪತ್ತಿಯಾದ ತ್ಯಾಜ್ಯದ ಶೇ.67ರಷ್ಟು ಸಂಸ್ಕರಣೆ- 2014ರಲ್ಲಿ ಸಂಸ್ಕರಣೆ ಶೇ.18ರಷ್ಟಿತ್ತು, ಅದಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಳ

ಸ್ವಚ್ಛ ಭಾರತ್ ಸರ್ವೇಕ್ಷಣಾ 2020ಯಲ್ಲಿ 12 ಕೋಟಿ ಸಾರ್ವಜನಿಕರು ಭಾಗಿ

ರಾಜ್ಯಗಳು/ನಗರಗಳ ಹಿಂದಿನ ಆರು ವರ್ಷದ ಅನುಭವ ಆಧರಿಸಿ ಸ್ವಚ್ಛತಂ ಭಾರತ ನಿಟ್ಟಿನಲ್ಲಿ ರೂಪುರೇಷೆ ಸಿದ್ದಪಡಿಸಲು ಕಾರ್ಯೋನ್ಮುಖ

Posted On: 02 OCT 2020 3:26PM by PIB Bengaluru

ಸ್ವಚ್ಛಭಾರತ್ ಮಿಷನ್ ನಗರ ಆರು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಸ್ವಚ್ಛ, ಆರೋಗ್ಯಕರ ಭಾರತ, ಸ್ವಚ್ಛತಂ ಭಾರತ ನಿರ್ಮಾಣ ನಿಟ್ಟಿನಲ್ಲಿ ನಾವು ಸಂಕಲ್ಪವನ್ನು ಪುನರುಚ್ಛಾರ ಮಾಡಲು ಇದು ಸಕಾಲ ಮತ್ತು ಜನಾಂದೋಲನಕ್ಕೆ ಎಲ್ಲ ಭಾರತೀಯ ನಗರವಾಸಿಗಳನ್ನು ಒಗ್ಗೂಡಿಸಿ ಅವರೂ ಭಾಗಿಯಾಗುವಂತೆ ಮಾಡಬೇಕಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ (ಸ್ವತಂತ್ರ ಹೊಣೆಗಾರಿಕೆ) ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಅವರು, ಸ್ವಚ್ಛ ಭಾರತ್ ಮಿಷನ್ ನಗರ(ಎಸ್ ಬಿ ಎಂ ಯು) ಆರನೇ ವಾರ್ಷಿಕೋತ್ಸವದ ಅಂಗವಾಗಿ ಸ್ವಚ್ಛತಾ ಕೆ 6 ಸಾಲ್, ಬೆಮಿಸಾಲ್ಶೀರ್ಷಿಕೆಯಡಿ ನಡೆದ ವೆಬಿನಾರ್ ಉದ್ದೇಶಿಸಿ ಮಾತನಾಡಿ, ಜನಾಂದೋಲನ ಮತ್ತು ಜನಭಾಗೀದಾರಿ ಸ್ಫೂರ್ತಿ, ಸಮಗ್ರ ಕ್ರಿಯೆಗೆ ಶಕ್ತಿ ತಂದುಕೊಟ್ಟಿದೆ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಿದೆ. ಇದು ಎಂಒಎಚ್ ಯುಎ ನಡೆಸುವ ವಾರ್ಷಿಕ ಸ್ವಚ್ಛತಾ ಸಮೀಕ್ಷೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ಅಭಿವ್ಯಕ್ತಗೊಂಡಿದೆ ಎಂದರು. 2020ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಸುಮಾರು 12 ಕೋಟಿ ಪ್ರಜೆಗಳು ಭಾಗವಹಿಸಿದ್ದರು.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಯೋಜನೆ ಆರು ವರ್ಷ ಪೂರೈಸಿದ ಸಾಧನೆಗಳನ್ನು ಮೆಲುಕು ಹಾಕಲು ಆಯೋಜಿಸಿದ್ದ ವೆಬಿನಾರ್ ನಲ್ಲಿ ರಾಜ್ಯಗಳು ಮತ್ತು ನಗರಗಳು ತಮ್ಮ ಅನುಭವಗಳನ್ನು ಹಂಚಿಕೊಂಡವು. ಅಲ್ಲದೆ ಇದು ಮಹಾತ್ಮ ಗಾಂಧೀಜಿ ಅವರ ಜನ್ಮ ವಾರ್ಷಿಕೋತ್ಸವದ 151ನೇ ವರ್ಷವೂ ಆಗಿದ್ದು ವಿಶೇಷವಾಗಿತ್ತು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತು ಎಂಒಎಚ್ ಯುಎ ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರ ಹಾಗೂ ಎಂಒಎಚ್ ಯುಎನ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಕಮ್ರಾನ್ ರಿಜ್ವಿ ಭಾಗವಹಿಸಿದ್ದರು.

ಸಂದರ್ಭದಲ್ಲಿ ಮಾತನಾಡಿದ ಸಚಿವರು, 2014ರಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಗಳು ಎಸ್ ಬಿಎಂ-ಯುಗೆ ಚಾಲನೆ ನೀಡಿದಾಗ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ವೇಳೆಗೆ ಅಂದರೆ 2019 ಅಕ್ಟೋಬರ್ 2 ವೇಳೆಗೆ ಸ್ವಚ್ಛ ಭಾರತಸಾಧನೆಯ ಗುರಿಯನ್ನು ಹೊಂದಲಾಗಿತ್ತು. ಇಂದು ನಗರ ಭಾರತದ ಪ್ರತಿಯೊಬ್ಬ ಪ್ರಜೆಯೂ ಯೋಜನೆಗೆ ಕೈಜೋಡಿಸಿರುವುದು ಮತ್ತು ಕನಸು ಸಾಕಾರಕ್ಕೆ ಗುಣಾತ್ಮಕವಾಗಿ ನೆರವು ನೀಡಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ. ಇದು ಸಾಮೂಹಿಕ ಪ್ರಯತ್ನಗಳ ಫಲವಾಗಿದೆ ಹಾಗೂ ಅಸಂಖ್ಯಾತ ಪ್ರಜೆಗಳ ಪಾಲ್ಗೊಳ್ಳುವಿಕೆ, ಸಹಸ್ರಾರು ಸ್ವಚ್ಛ ಭಾರತ ರಾಯಭಾರಿಗಳು, ಲಕ್ಷಾಂತರ ಸ್ವಚ್ಛಾಗ್ರಹಿಗಳು ಹಲವು ಸಮೂಹ ಮಾಧ್ಯಮ ಅಭಿಯಾನಗಳು, ನೇರ ಜನಸಂಪರ್ಕ ಕಾರ್ಯಕ್ರಮಗಳಿಂದಾಗಿ ಎಸ್ ಬಿ ಎಂ-ಯು ಅತ್ಯುತ್ತಮ ಯಶಸ್ಸುಗಳಿಸಲು ಸಾಧ್ಯವಾಗಿದೆಎಂದರು. ನಾವು ನಮ್ಮ ಕಟ್ಟಡ ಮತ್ತು ಇತರೆ ನಿರ್ಮಾಣ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಜೊತೆಗೆ ನಮ್ಮ ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಹಾಗೂ ನಮ್ಮ ತ್ಯಾಜ್ಯ ಭೂಭರ್ತಿ ಘಟಕಗಳಲ್ಲಿ ಜೈವಿಕ ರೀತಿಯಲ್ಲಿ ಸಂಸ್ಕರಣೆಗೆ ಕ್ರಮ ಕೈಗೊಳ್ಳಬೇಕಿದೆ. ಇಂದು ನಾನು ಸಂವಾದಾತ್ಮಕ ಪೋರ್ಟಲ್ ಮತ್ತು ತ್ಯಾಜ್ಯ ನಿರ್ವಹಣಾ ಪದ್ಧತಿಯ ಕೈಪೀಡಿಯನ್ನು ಬಿಡುಗಡೆ ಮಾಡಿದ್ದೇನೆ. ಇದರಲ್ಲಿ ವಲಯದಲ್ಲಿ ನಗರಗಳು ಅಳವಡಿಸಿಕೊಂಡಿರುವ ನಾನಾ ಬಗೆಯ ವಿನೂತನ ಪದ್ಧತಿಗಳ ಚಿತ್ರಣವಿದೆ ಮತ್ತು ಎಂಒಎಚ್ ಯುಎ ಮೂಲಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾಮರ್ಥ್ಯವೃದ್ಧಿ ಪ್ರಯತ್ನಗಳಿಗೆ ಎಲ್ಲ ಅಗತ್ಯ ನೆರವು ದೊರಕಲಿದೆ ಎಂಬ ವಿಶ್ವಾಸ ನನಗಿದೆಎಂದು ಹೇಳಿದರು.

ಎಂಒಎಚ್ ಯುಎ ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ, ಯೋಜನೆಯಡಿ ಇದುವರೆಗೆ ಮಾಡಿರುವ ಸಾಧನೆಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು. ಎಸ್ ಬಿ ಎಂ ಯು ಅನ್ನು 2014 ಅಕ್ಟೋಬರ್ 2 ರಂದು ಚಾಲನೆ ನೀಡಿದಾಗ ನಗರ ಭಾರತವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ(ಒಡಿಎಫ್) ಮಾಡುವುದು ಹಾಗೂ ದೇಶದ ಎಲ್ಲ ನಗರಗಳಲ್ಲಿ ಸಂಪೂರ್ಣ ಘನತ್ಯಾಜ್ಯ ನಿರ್ವಹಣೆ(ಎಸ್ ಡಬ್ಲ್ಯೂ ಎಂ) ಕೈಗೊಳ್ಳುವ ಗುರಿ ಹೊಂದಲಾಗಿತ್ತು. ಇಂದು ನಾವು ಕೇವಲ ನಮ್ಮ ಗುರಿಗಳನ್ನಷ್ಟೇ ಸಾಧಿಸಿಲ್ಲ. ಸುಸ್ಥಿರ ನೈರ್ಮಲೀಕರಣ ನಿಟ್ಟಿನಲ್ಲಿ ದೇಶವನ್ನು ಮುಂದೆ ಕೊಂಡೊಯ್ದಿದ್ದೇವೆ ಮತ್ತು ಒಡಿಎಫ್+ ಮತ್ತು ಒಡಿಎಫ್ ++ ಮತ್ತಿತರ ಸಮಗ್ರ ಮಾರ್ಗಸೂಚಿ ಮೂಲಕ ತ್ಯಾಜ್ಯಮುಕ್ತ ನಗರಗಳಿಗೆ ಶ್ರೇಯಾಂಕವನ್ನು ನೀಡಲಾಗುತ್ತಿದೆ ಹಾಗೂ ನಮ್ಮ ವಾರ್ಷಿಕ ಸ್ವಚ್ಛತಾ ಸಮೀಕ್ಷೆ ಸ್ವಚ್ಛ ಸರ್ವೇಕ್ಷಣೆ ಬಗ್ಗೆ ಹೆಚ್ಚಿನ ವಿವರಣೆ ಏನು ನೀಡಬೇಕಾಗಿಲ್ಲ. 2014ರಲ್ಲಿ ನಮ್ಮಲ್ಲಿ ಒಡಿಎಫ್ ಸಾಧಿಸಿದ್ದ ರಾಜ್ಯಗಳು ಮತ್ತು ನಗರಗಳ ಪ್ರಮಾಣ ಶೂನ್ಯವಿತ್ತು. ಇಂದು ಪ್ರಮಾಣ ಶೇ.97ಕ್ಕೆ ಏರಿಕೆಯಾಗಿದೆ. ಘನತ್ಯಾಜ್ಯ ವಿಲೇವಾರಿಯಲ್ಲಿ 2014ರಲ್ಲಿ ಕೇವಲ ಶೇ.18ರಷ್ಟು ಘನತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿತ್ತು. ಇದೀಗ ಪ್ರಮಾಣ ಶೇ.67ಕ್ಕೆ ಏರಿಕೆಯಾಗಿದೆ ಮತ್ತು ಶೇ.77ಕ್ಕೂ ಅಧಿಕ ವಾರ್ಡ್ ಗಳಲ್ಲಿ ಮೂಲದಲ್ಲೇ ತ್ಯಾಜ್ಯವನ್ನು ವಿಂಗಡಿಸಲಾಗುತ್ತಿದೆ. ನಾವು ಮುಂದಿನ ಕೆಲವು ವರ್ಷಗಳಲ್ಲಿ ಪ್ರಮಾಣ ಗಣನೀಯವಾಗಿ ಸುಧಾರಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮುಂದುವರಿಸಲು ಬಯಸಿದ್ದೇವೆ’’ ಎಂದು ಹೇಳಿದರು.

ಉದ್ಘಾಟನಾ ಗೋಷ್ಠಿಯಲ್ಲಿಸ್ಚಚ್ಛತಾ ಕೆ 6 ಸಾಲ್, ಬೆಮಿಸಾಲ್ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಇದರಲ್ಲಿ 2014ರಲ್ಲಿ ಎಸ್ ಬಿ ಎಂ-ಯು ಆರಂಭವಾದ ನಂತರ ಆಗಿರುವ ಪರಿಣಾಮಗಳು ಮತ್ತು ಪಯಣವನ್ನು ಚಿತ್ರಿಸಲಾಗಿದೆ. ಕಳೆದ ಆರು ವರ್ಷಗಳಿಂದೀಚೆಗೆ ಯೋಜನೆಯಡಿ ಹಲವು ಡಿಜಿಟಲ್ ನಾವಿನ್ಯಗಳನ್ನು ಕಾಣಲಾಗಿದೆ. ಕೆಲವು ಮಹತ್ವದ ಬದಲಾವಣೆಗಳು ಕಂಡುಬಂದಿದ್ದು, ಸ್ವಚ್ಛತೆಗೆ ಸಂಬಂಧಿಸಿದ ಸೇವೆಗಳಲ್ಲಿ ಸಾಕಷ್ಟು ಸುಧಾರಣೆಯಾಗಿವೆ. ಅವುಗಳಲ್ಲಿ ಸ್ವಚ್ಛತಾ ಆಪ್, ಇದರ ಮೂಲಕ ಸ್ವಚ್ಛತೆಗೆ ಸಂಬಂಧಿಸಿದ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲಾಗುತ್ತಿದೆ. ಗೂಗಲ್ ಮ್ಯಾಪ್ ಬಳಸಿ, ಸ್ವಚ್ಛ ಭಾರತ್ ಮಿಷನ್ ಶೌಚಾಲಯಗಳನ್ನು ಗುರುತಿಸಲಾಗುತ್ತಿದ್ದು, ಬಳಕೆದಾರರು ಗೂಗಲ್ ಮ್ಯಾಪ್ ಆಧರಿಸಿ ಸಮೀಪದ ಸಾರ್ವಜನಿಕ ಶೌಚಾಲಯಗಳನ್ನು ಗುರುತಿಸುತ್ತಿದ್ದಾರೆ ಮತ್ತು ಸ್ವಚ್ಛತಾ ಮಂಚ್, ಇದು ಸ್ವಚ್ಛತೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಸಾರ್ವಜನಿಕರನ್ನು ಒಳಗೊಳ್ಳುವ ಡಿಜಿಟಲ್ ವೇದಿಕೆಯಾಗಿದೆ. ಎಲ್ಲ ಡಿಜಿಟಲ್ ಕಾರ್ಯಕ್ರಮಗಳಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಶೌಚಾಲಯಗಳ ಬಳಕೆ, ಮೂಲದಲ್ಲೇ ತ್ಯಾಜ್ಯ ವಿಂಗಡಣೆ, ಮನೆಗಳಲ್ಲೇ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಮತ್ತಿತರ ಅಂಶಗಳ ಬಗ್ಗೆ ಬಹು ಮಾಧ್ಯಮ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಎಲ್ಲ ಪ್ರಯತ್ನಗಳಿಂದಾಗಿ ನಾಗರಿಕರನ್ನು ಯೋಜನೆಯ ಜೊತೆ ಬೆರೆಯುವಂತೆ ಮಾಡಲಾಗಿದ್ದು, ಅದರ ಪರಿಣಾಮ ಕೋಟ್ಯಾಂತರ ಪ್ರಜೆಗಳು ನೇರವಾಗಿ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ. ಸ್ವಚ್ಛ ಸರ್ವೇಕ್ಷಣದ ಕಳೆದ ಆವೃತ್ತಿಯಲ್ಲಿ ಸುಮಾರು 12 ಕೋಟಿಗೂ ಅಧಿಕ ಮಂದಿ ಭಾಗವಹಿಸಿದ್ದರು. ಗೌರವಾನ್ವಿತ ಪ್ರಧಾನಮಂತ್ರಿಗಳ ಭಾರತವನ್ನು ಬಿಡಿ ಪ್ಲಾಸ್ಟಿಕ್ ಬಳಕೆ ಮುಕ್ತಗೊಳಿಸುವ ದೂರದೃಷ್ಟಿಯ ಕನಸು ನನಸು ಮಾಡಲು 2019ರಲ್ಲಿ ನಡೆಸಿದ ಸ್ವಚ್ಛತೆಯೇ ಸೇವೆಅಭಿಯಾನದಲ್ಲಿ 7 ಕೋಟಿಗೂ ಅಧಿಕ ಜನ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಆಯ್ದ ನಗರಗಳು ಮತ್ತು ರಾಜ್ಯಗಳಾದ ಉತ್ತರಾಖಂಡ, ಕೇರಳ, ಇಂಪಾಲ, ದುಂಗರ್ ಪುರ್, ಖಾರ್ಗೋನ್ ಮತ್ತಿತರ ಪ್ರದೇಶಗಳಲ್ಲಿನ ಕಳೆದ ಆರು ವರ್ಷಗಳ ಅನುಭವವನ್ನು ಹಂಚಿಕೊಳ್ಳಲಾಯಿತು ಮತ್ತು ಸ್ವಚ್ಛತಂ ಭಾರತ ನಿಟ್ಟಿನಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಎಸ್ ಬಿ ಎಂ ಯು ಅಭಿವೃದ್ಧಿ ಪಾಲುದಾರರಾದ ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ(ಯುಎಸ್ಎಐಡಿ), ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್(ಬಿಎಂಜಿಎಫ್), ಜಿಐಝಡ್, ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ(ಯುಎನ್ಐಡಿಒ) ಮತ್ತಿತರ ಸಂಸ್ಥೆಗಳ ಅನುಭವಗಳನ್ನು ಕೇಳಲೂ ಸಹ ಅವಕಾಶ ದೊರಕಿತ್ತು. ಸಚಿವಾಲಯದಿಂದ ಹಲವು ಸರಣಿ ಪ್ರಕಾಶನಗಳನ್ನು ಹೊರತರಲಾಯಿತು. ರಾಷ್ಟ್ರೀಯ ಮಲ ತ್ಯಾಜ್ಯ ನಿರ್ವಹಣಾ ಸಂಸ್ಥೆ(ಎನ್ಎಫ್ಎಸ್ಎಸ್ಎಂ) ಸಂಪಾದಿಸಿರುವ ಮರುಸ್ಥಿತಿ ಸ್ಥಾಪಕತ್ವದ ಮುಂಚೂಣಿ ಕತೆಗಳು; ಭಾರತದ ನೈರ್ಮಲೀಕರಣ ಚಾಂಪಿಯನ್ಕೃತಿಯನ್ನು ಹೊರತರಲಾಯಿತು. ಇದರಡಿ ದೇಶಾದ್ಯಂತ ನೈರ್ಮಲೀಕರಣ ಕಾರ್ಯಕರ್ತರ ಸ್ಫೂರ್ತಿದಾಯಕ ಕತೆಗಳು ಇವೆ. ಜೊತೆಗೆ ಕೋವಿಡ್ ಡೈರಿಗಳು; ಕೋವಿಡ್-19ಗೆ ಭಾರತೀಯ ನಗರಗಳ ಪ್ರತಿಕ್ರಿಯೆಕೃತಿಗಳನ್ನು ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ(ಎನ್ ಯುಎ) ಹೊರತಂದಿದ್ದು, ಇದರಲ್ಲಿ ಕೋವಿಡ್-19 ಸಮಯದ ಮೊದಲ ನಾಲ್ಕು ತಿಂಗಳಲ್ಲಿ ಭಾರತೀಯ ನಗರಗಳು ಕೈಗೊಂಡ ಕ್ರಮಗಳು ಹಾಗೂ ಉಪಕ್ರಮಗಳು ಒಳಗೊಂಡಿವೆ ಮತ್ತು ಸ್ಥಿತಿ ಸ್ಥಾಪಕತ್ವ ನಗರ ನೈರ್ಮಲೀಕರಣ ನಿರ್ವಹಣೆ(ಆರ್ ಎಸ್ ಯು ಆರ್) ನೀತಿಯನ್ನು ಒದಗಿಸುತ್ತದೆ. ಇದನ್ನು ಸಾಂಕ್ರಾಮಿಕ ಸ್ಥಿತಿ ಸಂದರ್ಭದಲ್ಲಿ ನಗರಗಳಿಗೆ ಅನ್ವಯಿಸಲಾಗುವುದು.

ಇದಲ್ಲದೆ ಸಚಿವಾಲಯ, ಘನತ್ಯಾಜ್ಯ ನಿರ್ವಹಣಾ ಕುರಿತ ವಿನೂತನ ಅಧ್ಯಯನ ಪ್ರಕರಣಗಳು ಮತ್ತು ಉತ್ತಮ ಪದ್ಧತಿಗಳನ್ನು ಒಳಗೊಂಡತ್ಯಾಜ್ಯ ನಿರ್ವಹಣಾ ಪದ್ಧತಿಗಳ ಕುರಿತ ಕೈಪೀಡಿ ಬಿಡುಗಡೆ ಮಾಡಲಾಯಿತು. ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಮತ್ತು ಅಧಿಕಾರಿಗಳ ಸಾಮರ್ಥ್ಯ ಬಲವರ್ಧನೆ ಯೋಜನೆಯ ಅವಿಭಾಜ್ಯ ಅಂಗವಾಗಿದೆ. ನಿಟ್ಟಿನಲ್ಲಿ ಸಚಿವಾಲಯ ರಾಷ್ಟ್ರೀಯ ನಗರ ವ್ಯವಹಾರಗಳ ಕೇಂದ್ರ(ಎನ್ಐಯುಎ) ನೆರವಿನಿಂದ ದೇಶಾದ್ಯಂತ 2016ರಿಂದೀಚೆಗೆ 150ಕ್ಕೂ ಅಧಿಕ ಕಾರ್ಯಾಗಾರಗಳನ್ನು ನಡೆಸಲಾಗಿದ್ದು, ಸುಮಾರು 3200 ನಗರ ಸ್ಥಳೀಯ ಸಂಸ್ಥೆಗಳ 6000ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

ಕಾರ್ಯಾಗಾರಗಳಿಂದ ಕಲಿತ ದಾಖಲೆಗಳನ್ನು ಆಧರಿಸಿ ಎನ್ಐಯುಎ, ಎಸ್ ಬಿ ಎಂ-ಯು ಸಂವಾದಾತ್ಮಕ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಅದರಲ್ಲಿ ಪೌರಕಾರ್ಮಿಕರ ಸುರಕ್ಷತೆ, ಸ್ವಚ್ಛತಾ ಮುಂಚೂಣಿ ಯೋಧರ ಕುರಿತು ಒತ್ತು ನೀಡುವ ಅಂಶಗಳಿವೆ. ನೈರ್ಮಲ್ಯ ಕಾರ್ಯಕರ್ತರ ಸುರಕ್ಷತೆ ಹಾಗೂ ಹಕ್ಕುಗಳನ್ನು ರಕ್ಷಿಸಲು ನಗರ ಸ್ಥಳೀಯ ಸಂಸ್ಥೆಗಳು ತಕ್ಷಣಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆಯೂ ತಿಳಿಸಲಾಗಿದೆ. ಅಲ್ಲದೆ ಸಚಿವಾಲಯ, ನಗರ ನಿರ್ವಹಣಾ ಕೇಂದ್ರ(ಯುಎಂಸಿ) ಸಿದ್ಧಪಡಿಸಿರುವ ನೈರ್ಮಲ್ಯ ಕಾರ್ಯಕರ್ತರ ಸುರಕ್ಷತೆ ಕುರಿತ ಸಿದ್ಧ ಮಾಹಿತಿಯನ್ನೂ ಸಹ ಬಿಡುಗಡೆ ಮಾಡಿತು. ಯುಎಂಸಿ ಅಭಿವೃದ್ಧಿಪಡಿಸಿರುವ ನೈರ್ಮಲ್ಯ ಗುರುತಿಸುವಿಕೆ ಸಾಧನ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳು(ಪಿಟಿ/ಸಿಟಿ) ಒಡಿಎಫ್+ ಸಾಧನೆಗೆ ನೆರವಾಗಲಿವೆ.

ಯೋಜನೆ ಮುಂದುವರಿಸಿಕೊಂಡು ಹೋಗುವ ಕಾರ್ಯತಂತ್ರಗಳ ಕುರಿತು ಸ್ಥೂಲವಾಗಿ ವಿವರಿಸಿದ ಸಚಿವರು, “ಕಳೆದ ಕೆಲವು ವರ್ಷಗಳ ಹಿಂದಷ್ಟೇ ಆರಂಭವಾದ ಪಯಣದ ಸಾಧನೆಯಿಂದ ನಾವು ಖಂಡಿತ ಹೆಮ್ಮೆಪಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಸುಸ್ಥಿರ ನೈರ್ಮಲೀಕರಣ ಒದಗಿಸುವ ಕೇಂದ್ರ ಸರ್ಕಾರದ ಕನಸಿಗೆ ಅನುಗುಣವಾಗಿ ನಮ್ಮ ಜಲಮೂಲಗಳನ್ನು ರಕ್ಷಿಸಿಕೊಳ್ಳಲು ಪ್ರತಿಯೊಂದು ಹನಿ ನೀರನ್ನೂ ಸಹ ಸಂರಕ್ಷಿಸಿಕೊಳ್ಳಲು ಕ್ರಮ ಕೈಗೊಳ್ಳಲು ಇದು ಸಕಾಲವಾಗಿದೆ. ತ್ಯಾಜ್ಯ ನೀರು ಸಂಸ್ಕರಣೆ, ದ್ರವ ರೂಪದ ತ್ಯಾಜ್ಯ ನಿರ್ವಹಣೆ, ಸುರಕ್ಷಿತ ಮತ್ತು ಸುಸ್ಥಿರ ಕ್ರಮಗಳು ಮತ್ತು ಮರುಬಳಕೆಗೆ ಒತ್ತು ನೀಡಬೇಕಾಗಿದೆ. ಘನತ್ಯಾಜ್ಯ ನಿರ್ವಹಣಾ ವಲಯದಲ್ಲಿ ಸಾಧ್ಯವಾದಷ್ಟು ನಾವು ಒಮ್ಮೆ ಬಳಸಿ ಬಿಸಾಡುವಂತಹ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಾಗಿದೆ ಹಾಗೂ ನಾವು ನಮ್ಮ ಕಟ್ಟಡ ನಿರ್ಮಾಣ ಮತ್ತು ಇತರೆ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಂಸ್ಕರಿಸುವ ಸಾಮರ್ಥ್ಯವೃದ್ಧಿಗೆ ಒತ್ತು ನೀಡಬೇಕಾಗಿದೆ ಹಾಗೂ ಇತರೆ ತ್ಯಾಜ್ಯಗಳ ನಿರ್ವಹಣೆಗೂ ಕ್ರಮ ಕೈಗೊಳ್ಳಬೇಕಾಗಿದೆಎಂದು ಹೇಳಿದರು. ಕಳೆದ ಆರು ವರ್ಷಗಳಿಂದೀಚೆಗೆ ಮಾಡಿರುವ ಸಾಧನೆಗಳನ್ನು ಉಲ್ಲೇಖಿಸಿದ ಅವರು, ಯೋಜನೆ ಸ್ವಚ್ಛ’, ‘ಸ್ವಾಸ್ಥ’, ‘ಸಶಕ್ತ್ ‘, ‘ಸಮೃದ್ಧ’, ಮತ್ತು ಆತ್ಮನಿರ್ಭರಭಾರತ ನಿರ್ಮಾಣ ನಿಟ್ಟಿನ ಪಯಣದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ.

***


(Release ID: 1661057) Visitor Counter : 271