ಪ್ರಧಾನ ಮಂತ್ರಿಯವರ ಕಛೇರಿ

ಕತೆ ಹೇಳುವ ಕಲೆಗಾರಿಕೆಯ ಪ್ರಾಮುಖ್ಯತೆಯನ್ನು ಪುನರುಚ್ಛರಿಸಿದ ಪ್ರಧಾನಮಂತ್ರಿ

Posted On: 27 SEP 2020 1:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದಿನ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಕತೆ ಹೇಳುವ ಕಲೆಗಾರಿಕೆಯ ಪ್ರಾಮುಖ್ಯತೆಯ ಬಗ್ಗೆ ಚರ್ಚಿಸಿದ್ದಾರೆ ಮತ್ತು ಪುನರುಚ್ಛರಿಸಿದ್ದಾರೆ.

ಪ್ರಧಾನಮಂತ್ರಿ ಅವರು, ಕತೆ ಹೇಳುವ ಇತಿಹಾಸ, ಮಾನವನ ನಾಗರಿಕತೆಯಷ್ಟೇ ಪುರಾತನವಾದುದು ಎಂದು ತಿಳಿಸಿದ್ದಾರೆ ಮತ್ತು ಅವರು ಎಲ್ಲಿ ಆತ್ಮವಿರುತ್ತದೋ ಅಲ್ಲಿ ಕತೆ ಇರುತ್ತದೆಎಂದು ಹೇಳಿದ್ದಾರೆ. ಅವರು ಕುಟುಂಬದ ಹಿರಿಯರು ಕತೆ ಹೇಳುವ ಸಂಪ್ರದಾಯದ ಮಹತ್ವದ ಕುರಿತು ಮಾತನಾಡಿದರು ಮತ್ತು ಅವರು ತಮ್ಮ ಪ್ರಯಾಣಗಳ ಅವಧಿಯಲ್ಲಿ ಮಕ್ಕಳೊಂದಿಗಿನ ಸಂವಾದ ಕುರಿತು ಚರ್ಚಿಸಿದ್ದಾರೆ ಮತ್ತು ಹಾಸ್ಯ ಚಟಾಕಿಗಳು ಬಹುತೇಕ ಜೀವನದಲ್ಲಿ ನಡೆದಿರುತ್ತವೆ ಮತ್ತು ಅವರಿಗೆ ಕತೆಗಳ ಬಗ್ಗೆ ಯಾವುದೇ ವಿಚಾರ ತಿಳಿದಿರುವುದಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ಕತೆ ಹೇಳುವ ಅಥವಾ ಕಿಸ್ಸಾಗೋಯ್ ಶ್ರೀಮಂತ ಪರಂಪರೆಯ ಕುರಿತು ಚರ್ಚಿಸುತ್ತಾ ಪ್ರಧಾನಮಂತ್ರಿ ಅವರು ಭಾರತದಲ್ಲಿ ಹಿತೋಪದೇಶ ಮತ್ತು ಪಂಚತಂತ್ರದ ಕತೆ ಹೇಳುವ ಸಂಪ್ರದಾಯವನ್ನು ಪೋಷಿಸಿಕೊಂಡು ಬರಲಾಗುತ್ತಿದೆ. ಮೂಲಕ ಪ್ರಾಣಿ, ಪಕ್ಷಿಗಳು ಮತ್ತು ಯಕ್ಷಣಿ ಲೋಕದ ಕಲ್ಪನೆಯ ವಿವೇಚನೆ ತೆರೆದಿಡಲಾಗುತ್ತಿತ್ತು. ಅವರು ಪುರಾತನ, ಧಾರ್ಮಿಕ ಕತೆಗಳನ್ನು ಹೇಳುವ ಕಥಾವನ್ನು ಉಲ್ಲೇಖಿಸಿದರು ಮತ್ತು ತಮಿಳುನಾಡು ಹಾಗೂ ಕೇರಳದಲ್ಲಿನ ವಿಲ್ಲುಪಾತ್ಅನ್ನು ಉದಾಹರಣೆ ನೀಡಿದರು. ಇದು ಕತೆ ಮತ್ತು ಸಂಗೀತದ ಪ್ರಭಾವವನ್ನು ತಿಳಿಸುತ್ತದೆ ಮತ್ತು ಕಥುಪುಟ್ಲಿಯ ಕ್ರಿಯಾಶೀಲ ಸಂಪ್ರದಾಯದ ಬಗ್ಗೆ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮತ್ತು ವಿಜ್ಞಾನಲೋಕದ ವಿಸ್ಮಯಗಳನ್ನು ಆಧರಿಸಿದ ಕತೆಗಳು ಜನಪ್ರಿಯವಾಗುತ್ತಿದೆ ಎಂದು ಉಲ್ಲೇಖಿಸಿದರು.

ಐಎಎಂನ ಮಾಜಿ ವಿದ್ಯಾರ್ಥಿ ಶ್ರೀ ಅಮರ್ ವ್ಯಾಸ ನಡೆಸುತ್ತಿರುವ, ಮರಾಠಿಯ ಶ್ರೀಮತಿ ವೈಶಾಲಿ ವ್ಯವಹಾರೆ ದೇಶಪಾಂಡೆ ಅವರ ಉಪಕ್ರಮ ಮತ್ತು ಚೆನ್ನೈನ ಶ್ರೀಮತಿ ಶ್ರೀವಿದ್ಯಾ ವೀರರಾಘವನ್ ಅವರು ಕಿಸ್ಸಾಗೋಯ್ ಸೇರಿದಂತೆ ‘Gathastory.in’ ಕಲಾಪ್ರಕಾರ ಉತ್ತೇಜನಕ್ಕೆ ಹಲವು ಕ್ರಮಗಳನ್ನು ಕೈಗೊಂಡಿರುವುದನ್ನು ಪ್ರಧಾನಿ ಶ್ಲಾಘಿಸಿದರು. ಅವರು ನಮ್ಮ ಸಂಸ್ಕೃತಿಗೆ ಸಂಬಂಧಿಸಿದ ಕತೆಗಳನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿದ್ದಾರೆ ಎಂದರು. ಗೀತಾ ರಾಮಾನುಜನ್ ಅವರುkathalaya.orgಮೂಲಕ ಭಾರತೀಯ ಕತೆ ಹೇಳುವ ಜಾಲವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಬೆಂಗಳೂರಿನ ಶ್ರೀ ವಿಕ್ರಮ್ ಶ್ರೀಧರ್ ಅವರು, ಅತ್ಯಂತ ಉತ್ಸಾಹದಿಂದ ಮಹಾತ್ಮ ಗಾಂಧೀಜಿ ಅವರ ಕತೆಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ ಎಂದರು. ಬೆಂಗಳೂರು ಕತೆ ಹೇಳುವ ಸೊಸೈಟಿಯ ಅಪರ್ಣಾ ಆತ್ರೇಯಾ ಮತ್ತು ಇತರ ಸದಸ್ಯರ ಜೊತೆ ಪ್ರಧಾನಿ ಅವರು ಸಂವಾದ ನಡೆಸಿದರು. ಸದಸ್ಯರು ಸಂವಾದದ ವೇಳೆ ದೊರೆ ಕೃಷ್ಣದೇವರಾಯ ಮತ್ತು ಆತನ ಮಂತ್ರಿ ತೆನಾಲಿರಾಮನ ಕತೆಗಳನ್ನು ವಿವರಿಸಿದರು.

ದೇಶದ ಶ್ರೇಷ್ಠ ಪುರುಷರು ಮತ್ತು ಮಹಿಳೆಯರ ಜೀವನವನ್ನು ಆಧರಿಸಿದ ಕತೆಗಳ ಮೂಲಕ ಹೊಸ ತಲೆಮಾರನ್ನು ತಲುಪಲು ಹೊಸ ಮಾರ್ಗೋಪಾಯಗಳನ್ನು ಕಂಡುಹಿಡಿಯುವಂತೆ ಪ್ರಧಾನಮಂತ್ರಿ ಅವರು ಕತೆ ಹೇಳುವವರಿಗೆ ಕರೆ ನೀಡಿದರು. ಅವರು ಪ್ರತಿಯೊಂದು ಮನೆಯಲ್ಲೂ ಕತೆ ಹೇಳುವ ಕಲೆಗಾರಿಕೆಯನ್ನು ಜನಪ್ರಿಯಗೊಳಿಸಬೇಕಾಗಿದೆ ಮತ್ತು ಮಕ್ಕಳಿಗೆ ಉತ್ತಮ ಕತೆಗಳನ್ನು ಹೇಳುವುದು ಸಾರ್ವಜನಿಕ ಜೀವನದ ಭಾಗವಾಗಬೇಕು ಎಂದು ಹೇಳಿದರು. ಪ್ರತಿ ವಾರ ಕುಟುಂಬದ ಎಲ್ಲ ಸದಸ್ಯರು ದಯೆ, ಸೂಕ್ಷ್ಮತೆ, ಮೌಲ್ಯ, ತ್ಯಾಗ, ಶೌರ್ಯ ಮತ್ತಿತರ ವಿಷಯಗಳನ್ನು ಆಯ್ದುಕೊಂಡು ಪ್ರತಿಯೊಬ್ಬ ಸದಸ್ಯರು ಆಯ್ಕೆ ಮಾಡಿಕೊಂಡಿರುವ ವಿಷಯದ ಕುರಿತು ಕತೆಗಳನ್ನು ಹೇಳಬೇಕು ಎಂದರು. ದೇಶ ಸದ್ಯದಲ್ಲೇ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ ಎಂದ ಅವರು, ಕತೆಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿದಾಯಕ ಕತೆಗಳನ್ನು ಜನಪ್ರಿಯಗೊಳಿಸಬೇಕು ಎಂದು ಕತೆಗಾರರಿಗೆ ತಿಳಿಸಿದರು. 1857 ರಿಂದ 1947 ವರೆಗಿನ ಪ್ರತಿಯೊಂದು ಪ್ರಮುಖ ಹಾಗೂ ಸಣ್ಣ ಘಟನೆಗಳನ್ನು ಹೊಸ ತಲೆಮಾರಿಗೆ ಕತೆಗಳ ಮೂಲಕ ತಿಳಿಸಿಕೊಡಬೇಕು ಎಂದು ಅವರು ಹೇಳಿದರು.

***


(Release ID: 1659654) Visitor Counter : 195