ಪ್ರಧಾನ ಮಂತ್ರಿಯವರ ಕಛೇರಿ

ಬಿಹಾರದಲ್ಲಿ ಮೂಲಸೌಕರ್ಯ ಯೋಜನೆಗಳ ಆರಂಭ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 21 SEP 2020 3:53PM by PIB Bengaluru

ಬಿಹಾರ ರಾಜ್ಯಪಾಲ ಶ್ರೀ ಫಗು ಚೌಹಾಣ್ ಜೀ, ಬಿಹಾರ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜೀ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ರವಿಶಂಕರ ಪ್ರಸಾದ್ ಜೀ, ಶ್ರೀ ವಿ.ಕೆ.ಸಿಂಗ್ ಜೀ, ಶ್ರೀ ಆರ್.ಕೆ.ಸಿಂಗ್ ಜೀ, ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಜೀ, ಇತರ ಸಚಿವರೇ, ಸಂಸತ್ ಸದಸ್ಯರೇ ಮತ್ತು ಶಾಸಕರೇ, ಹಾಗು ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ !

ಬಿಹಾರದ ಅಭಿವೃದ್ಧಿಯ ಪ್ರಯಾಣದಲ್ಲಿ ಇಂದಿನದ್ದು ಇನ್ನೊಂದು ಪ್ರಮುಖ ದಿನವಾಗಿದೆ. ಸ್ವಲ್ಪ ಸಮಯದ ಹಿಂದೆ , ಬಿಹಾರದಲ್ಲಿ ಸಂಪರ್ಕ ಅಭಿವೃದ್ಧಿ ಮಾಡುವ ಒಂಭತ್ತು ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಯೋಜನೆಗಳಲ್ಲಿ ಚತುಷ್ಪಥ ಮತ್ತು ಷಟ್ಪಥ ಹೆದ್ದಾರಿಗಳ ನಿರ್ಮಾಣ ಜೊತೆಗೆ ನದಿಗಳ ಮೇಲೆ 3 ಬೃಹತ್ ಸೇತುವೆಗಳ ನಿರ್ಮಾಣವೂ ಸೇರಿದೆ. ಯೋಜನೆಗಳಿಗಾಗಿ ಬಿಹಾರದ ಜನತೆಗೆ ಹಾರ್ದಿಕ ಶುಭಾಶಯಗಳು

ಸ್ನೇಹಿತರೇ,

ದಿನ ಬಿಹಾರಕ್ಕೆ ಬಹಳ ಮಹತ್ವದ  ದಿನ ಮಾತ್ರವಲ್ಲ ಇಡೀ ದೇಶಕ್ಕೇ ಹಾಗು   ಯುವ ಭಾರತಕ್ಕೂ ಅಷ್ಟೇ ಮಹತ್ವದ ಮುಖ್ಯ  ದಿನವಾಗಿದೆಇಂದು ಭಾರತವು  ತನ್ನ ಗ್ರಾಮಗಳನ್ನು ಆತ್ಮನಿರ್ಭರ ಭಾರತದಡಿಯಲ್ಲಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ದಾಪುಗಾಲುಗಳನ್ನಿಡುತ್ತಿದೆ. ಕಾರ್ಯಕ್ರಮ ಇಡೀ ದೇಶದ್ದಾದರೂ ಅದು  ಅದು ಇಂದು ಬಿಹಾರದಿಂದ ಆರಂಭಗೊಳ್ಳುತ್ತಿದೆ ಎಂಬುದು ನನಗೆ ಸಂತೋಷ ತಂದಿದೆ. ಯೋಜನೆ ಅಡಿಯಲ್ಲಿ 1000 ದಿನಗಳಲ್ಲಿ ಆಪ್ಟಿಕಲ್ ಫೈಬರ್ ಮೂಲಕ ದೇಶದ 6 ಲಕ್ಷ ಗ್ರಾಮಗಳಿಗೆ ಅಂತರ್ಜಾಲ ಸೌಲಭ್ಯವನ್ನು ಒದಗಿಸಲಾಗುತ್ತದೆನಿತೀಶ್ ಜೀ ಅವರ ಉತ್ತಮ ಆಡಳಿತದಲ್ಲಿ, ದೃಢ ನಿರ್ಧಾರದಿಂದ ಮುಂದುವರೆದರೆ , ಯೋಜನೆಯು ಬಿಹಾರದಲ್ಲಿ ತ್ವರಿತಗತಿಯಲ್ಲಿ ಅನುಷ್ಟಾನವಾಗಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಕೆಲವು ವರ್ಷಗಳ ಹಿಂದಿನವರೆಗೂ ಅಂತರ್ಜಾಲ ಬಳಸುವವರಲ್ಲಿ ಭಾರತದ ಹಳ್ಳಿಗಳಲ್ಲಿಯ ಜನರ ಸಂಖ್ಯೆ ನಗರ ಜನತೆಗಿಂತ ಹೆಚ್ಚಾಗಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲಹಳ್ಳಿಗಳ ಯುವಜನತೆ, ರೈತರು, ಮಹಿಳೆಯರು ಸುಲಭದಲ್ಲಿ ಅಂತರ್ಜಾಲ ಬಳಸುವುದಕ್ಕೆ ಸಮರ್ಥರಾದಾರು ಎಂಬುದನ್ನು ಅಂದಾಜು ಮಾಡುವುದಕ್ಕೂ ಹಲವರಿಗೆ ಸಾಧ್ಯವಿರಲಿಲ್ಲ. ಈಗ ಇಂತಹ ಪರಿಸ್ಥಿತಿಯೇ ಬದಲಾಗಿದೆಇಂದು ಭಾರತವು ಡಿಜಿಟಲ್ ವರ್ಘಾವಣೆಯಲ್ಲಿ ವಿಶ್ವದಲ್ಲಿಯೇ ಮುಂಚೂಣಿ ದೇಶಗಳ ಸಾಲಿನಲ್ಲಿದೆ. ನೀವು ಆಗಸ್ಟ್ ಅಂಕಿ-ಅಂಶಗಳನ್ನು ಗಮನಿಸಿದರೆ ಅವಧಿಯಲ್ಲಿ ಮೊಬೈಲ್ ಫೋನ್ ಮತ್ತು ಯು.ಪಿ.. ಮೂಲಕ ಸುಮಾರು  3  ಲಕ್ಷ ಕೋ.ರೂ. ಗಳನ್ನು ವರ್ಗಾಯಿಸಲಾಗಿದೆ. ಕೊರೋನಾ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ, ಡಿಜಿಟಲ್ ಇಂಡಿಯಾ ಪ್ರಚಾರಾಂದೋಲನವು ದೇಶದ ಸಾಮಾನ್ಯ ಜನರಿಗೆ ಬಹಳ ದೊಡ್ಡ ಸಹಾಯವನ್ನು ಮಾಡಿದೆ.

ಸ್ನೇಹಿತರೇ,

ಅಂತರ್ಜಾಲ ಬಳಕೆ ಹೆಚ್ಚುತ್ತಿರುವಂತೆಯೇ , ಈಗ ದೇಶದ ಗ್ರಾಮಗಳಿಗೂ ಉತ್ತಮ ಗುಣಮಟ್ಟದ, ಹೆಚ್ಚಿನ ವೇಗದ ಅಂತರ್ಜಾಲ ಅವಶ್ಯವಾಗಿದೆ. ಸರಕಾರದ ಪ್ರಯತ್ನಗಳ ಫಲವಾಗಿ , ಈಗಾಗಲೇ ದೇಶದ ಸುಮಾರು 1.5 ಲಕ್ಷ ಪಂಚಾಯತ್ ಗಳಿಗೆ ಅಪ್ಟಿಕಲ್ ಫೈಬರ್ ತಲುಪಿದೆ. ಅದಕ್ಕಿಂತ ಹೆಚ್ಚಾಗಿ 3 ಲಕ್ಷಕ್ಕೂ ಅಧಿಕ ಸಾಮಾನ್ಯ ಸೇವಾ ಕೇಂದ್ರಗಳು ಕಳೆದ 6 ವರ್ಷಗಳಲ್ಲಿ ಆನ್ ಲೈನ್ ಆಗಿವೆ. ಈಗ ದೇಶವು ಸಂಪರ್ಕವನ್ನು ದೇಶದ ಪ್ರತೀ ಹಳ್ಳಿಗಳಿಗೆ ವಿಸ್ತರಿಸುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ವೇಗದ ಅಂತರ್ಜಾಲ ಪ್ರತೀ ಹಳ್ಳಿಗಳಿಗೆ ತಲುಪಿದಾಗ ಗ್ರಾಮಗಳಲ್ಲಿರುವ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವುದು ಸುಲಭ ಸಾಧ್ಯವಾಗಲಿದೆ. ಹಳ್ಳಿಗಳ ಮಕ್ಕಳು , ನಮ್ಮ ಗ್ರಾಮೀಣ ಯುವಕರು ವಿಶ್ವದ ಪುಸ್ತಕಗಳನ್ನು, ಮತ್ತು ತಂತ್ರಜ್ಞಾನವನ್ನು ಮೌಸ್ ಮೇಲೆ ಕ್ಲಿಕ್ ಮಾಡುವುದರಿಂದ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಇದಲ್ಲದೆ ಟೆಲಿ ವೈದ್ಯಕೀಯದ ಮೂಲಕ ಈಗ ಕೈಗೆಟಕುವ ದರದಲ್ಲಿ ಮತ್ತು ಅತ್ಯಂತ ದೂರ ಪ್ರದೇಶದಲ್ಲಿರುವ ಬಡವರಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸಲು ಸಾಧ್ಯವಾಗುತ್ತದೆ.

ನಿಮಗೆಲ್ಲಾ ಗೊತ್ತಿದೆ, ಹಿಂದೆ ರೈಲ್ವೇ ರಿಸರ್ವೇಶನ್ನಿಗಾಗಿ ನಾವು ಗ್ರಾಮಗಳಿಂದ ನಗರಗಳಿಗೆ ಹೋಗಬೇಕಿತ್ತು, ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಟಿಕೇಟ್ ಗಳನ್ನು ಕಾಯ್ದಿರಿಸಬೇಕಾಗಿತ್ತು. ಇಂದು ನೀವು ರೈಲ್ವೇ ರಿಸರ್ವೇಶನನ್ನು ನಿಮ್ಮ ಹಳ್ಳಿಗಳಲ್ಲಿಸಾಮಾನ್ಯ ಸೇವಾ ಕೇಂದ್ರಗಳಿಗೆ ಹೋಗಿ ಮಾಡಬಹುದಾಗಿದೆ. ನೀವು ಎಲ್ಲಿಗಾದರೂ ಹೋಗಬೇಕಾಗಿದ್ದರೆ , ಆಗ ರಿಸರ್ವೇಶನನ್ನು ಸುಲಭವಾಗಿ ಅಂತರ್ಜಾಲ ಸೌಲಭ್ಯದಿಂದ ಮಾಡಬಹುದು. ನಮ್ಮ ರೈತರೂ ಇದರಿಂದ ಭಾರೀ ಪ್ರಯೋಜನಗಳನ್ನು ಪಡೆಯುತ್ತಾರೆ. ಇದರೊಂದಿಗೆ ರೈತರು ಕೃಷಿಗೆ ಸಂಬಂಧಪಟ್ಟ ಆಧುನಿಕ ತಂತ್ರಜ್ಞಾನದ ಮಾಹಿತಿಯನ್ನು ಪಡೆಯಲು ಸಮರ್ಥರಾಗುತ್ತಾರೆ. ಹೊಸ ಬೆಳೆಗಳು, ಹೊಸ ಬೀಜಗಳು, ಹೊಸ ವಿಧಾನಗಳು, ಮತ್ತು ಬದಲಾಗುವ ಹವಾಮಾನದ ಬಗೆ ತಕ್ಷಣದ ಮಾಹಿತಿಯನ್ನು ಅವರು ಪಡೆಯಬಲ್ಲರು.ಇದರ ಜೊತೆಗೆ ಅವರು ತಮ್ಮ ಉತ್ಪಾದನೆಗಳನ್ನು ದೇಶದ ಯಾವ ಭಾಗದಲ್ಲಾದರೂ ಅಥವಾ ವಿಶ್ವದ ಯಾವ ಭಾಗದಲ್ಲಾದಲ್ಲಾದರೂ ಮಾರಾಟ ಮಾಡಲು ಸಮರ್ಥರಾಗುತ್ತಾರೆ. ಹಳ್ಳಿಗಳ ಜನರು ನಗರಗಳಲ್ಲಿರುವಂತಹ ಸವಲತ್ತುಗಳನ್ನು ಮನೆಯಲ್ಲಿಯೇ ಕುಳಿತು ಪಡೆಯುವುದನ್ನು ಖಾತ್ರಿಪಡಿಸುವ ರೀತಿಯಲ್ಲಿ ಅಗತ್ಯವಾದ ಮೂಲಸೌಕರ್ಯಗಳನ್ನು  ಅಭಿವೃದ್ಧಿ ಮಾಡಲಾಗುತ್ತಿದೆ.

ಸ್ನೇಹಿತರೇ,

ಮೂಲಸೌಕರ್ಯಗಳ ಮೇಲೆ ಗಂಭೀರವಾಗಿ ಹೂಡಿಕೆ ಮಾಡಿದ ದೇಶಗಳು ವಿಶ್ವವ್ಯಾಪ್ತಿಯಲ್ಲಿ ತ್ವರಿತಗತಿಯ ಅಭಿವೃದ್ಧಿ ಸಾಧಿಸಿರುವುದನ್ನು ಚರಿತ್ರೆ ಸಾಕ್ಷೀಕರಿಸಿದೆ. ಆದರೆ ದಶಕಗಳ ಕಾಲ ಅಂತಹ ಯೋಜನೆಗಳು , ಮೂಲಸೌಕರ್ಯಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಬಲ್ಲಂತಹವುಗಳಿಗೆ ಭಾರತದಲ್ಲಿ ಸಾಕಷ್ಟು ಗಮನ ಕೊಡಲಾಗಿಲ್ಲ. ಸ್ನೇಹಿತರೇ, ಅಟಲ್ ಜೀ ಸರಕಾರ ಮೂಲಸೌಕರ್ಯಗಳನ್ನು ಅಭಿವೃದ್ಧಿ ಯೋಜನೆಗಳಲ್ಲಿ ಮತ್ತು ರಾಜಕೀಯದಲ್ಲಿ  ಮುಖ್ಯವಾಹಿನಿಗೆ ತಂದಿತು. ನಿತೀಶ್ ಜೀ ಅವರು ಅಂದು ಅವರ ಸರಕಾರದಲ್ಲಿ  ರೈಲ್ವೇ ಸಚಿವರಾಗಿದ್ದರು. ಅವರಿಗೆ ಅದರ ಬಗೆಗೆ  ಹೆಚ್ಚಿನ  ಅನುಭವವಿದೆ. ಅವರು ಆಡಳಿತದಲ್ಲಿಯ ಬದಲಾವಣೆಯನ್ನು ಹೆಚ್ಚು ನಿಕಟವಾಗಿ ಗಮನಿಸಿದ್ದಾರೆ.

ಸ್ನೇಹಿತರೇ,

ಈಗ ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿರುವ ವೇಗ ಮತ್ತು ಪ್ರಮಾಣ ಅಭೂತಪೂರ್ವವಾದುದು. ಇಂದು ಹೆದ್ದಾರಿಗಳನ್ನು 2014 ಪೂರ್ವದಲ್ಲಿ ನಡೆಯುತ್ತಿದ್ದುದಕ್ಕಿಂತ ದುಪ್ಪಟ್ಟು ವೇಗದಲ್ಲಿ ನಿರ್ಮಿಸಲಾಗುತ್ತಿದೆ. ಹೆದ್ದಾರಿ ನಿರ್ಮಾಣದ ಮೇಲಣ ಖರ್ಚು ಕೂಡಾ 2014ಕ್ಕೆ ಪೂರ್ವದ ಅವಧಿಗೆ ಹೋಲಿಸಿದರೆ 5 ಪಟ್ಟು ಹೆಚ್ಚಾಗಿದೆ. ಬರಲಿರುವ 4-5 ವರ್ಷಗಳಲ್ಲಿ 110 ಲಕ್ಷ ಕೋ.ರೂ.ಗಳನ್ನು ಮೂಲಸೌಕರ್ಯಕ್ಕಾಗಿ ವ್ಯಯಿಸುವ ಗುರಿ ಹೊಂದಲಾಗಿದೆ. ಇದರಲ್ಲಿ , 19 ಲಕ್ಷ ಕೋ.ರೂ. ಗಳಿಗೂ ಅಧಿಕ ಮೊತ್ತದ ಯೋಜನೆಗಳು ಹೆದ್ದಾರಿಗೆ ಸಂಬಂಧಿಸಿದವು.

ಸ್ನೇಹಿತರೇ,

ರಸ್ತೆ ವಿಸ್ತರಣೆ ಮತ್ತು ಸಂಪರ್ಕ ಸಂಬಂಧಿ ಮೂಲಸೌಕರ್ಯ ಪ್ರಯತ್ನಗಳಿಂದಾಗಿ ಬಿಹಾರಕ್ಕೆ ಕೂಡಾ ಲಾಭವಾಗುತ್ತಿದೆ. ಪೂರ್ವ ಭಾರತದ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ. 2015 ರಲ್ಲಿ ಘೋಷಿಸಲಾದ ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ 3 ಸಾವಿರ ಕಿಲೋಮೀಟರ್ ಗಳಿಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಪ್ರಕಟಿಸಲಾಗಿದೆ. ಇದಲ್ಲದೆ ಭಾರತಮಾಲಾ ಯೋಜನೆ ಅಡಿಯಲ್ಲಿ ಸುಮಾರು 650 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಇಂದು ಬಿಹಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲದ ಕಾಮಗಾರಿಯನ್ನು ತ್ವರಿತಗೊಳಿಸಲಾಗಿದೆ. ಪೂರ್ವ ಬಿಹಾರ ಮತ್ತು ಪಶ್ಚಿಮ ಬಿಹಾರವನ್ನು ಜೋಡಿಸುವ ಚತುಷ್ಪಥದ ನಾಲ್ಕು ಯೋಜನೆಗಳು ಮತ್ತು ಉತ್ತರ ಭಾರತವನ್ನು ದಕ್ಷಿಣ ಭಾರತದ ಜೊತೆ ಜೋಡಿಸುವ 6 ಯೋಜನೆಗಳು ಪ್ರಗತಿಯಲ್ಲಿವೆ. ಇಂದು ಶಂಕುಸ್ಥಾಪನೆ ಮಾಡಲಾದ ಹೆದ್ದಾರಿ ಅಗಲೀಕರಣ ಯೋಜನೆಗಳು ಬಿಹಾರದ ಎಲ್ಲಾ ಪ್ರಮುಖ ನಗರಗಳ ಸಂಪರ್ಕ ಜಾಲವನ್ನು ಬಲಪಡಿಸಲಿವೆ.

ಸ್ನೇಹಿತರೇ,

ಬಿಹಾರವು ಪ್ರಮುಖ ನದಿಗಳಿಂದಾಗಿ ಸಂಪರ್ಕಕ್ಕೆ ಸಂಬಂಧಿಸಿ ಬಹಳ ದೊಡ್ಡ ಅಡೆ ತಡೆಗಳನ್ನು ಎದುರಿಸಬೇಕಾಗಿದೆ. ಇದರಿಂದಾಗಿಯೇ ಪ್ರಧಾನ ಮಂತ್ರಿ ಪ್ಯಾಕೇಜನ್ನು ಘೋಷಿಸಿದಾಗ ಸೇತುವೆಗಳ ನಿರ್ಮಾಣಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಯಿತು. ಪ್ರಧಾನ ಮಂತ್ರಿ ಪ್ಯಾಕೇಜಿನಡಿಯಲ್ಲಿ ಒಟ್ಟು 17 ಸೇತುವೆಗಳನ್ನು ಗಂಗಾ ಜೀ ಮೇಲೆ ನಿರ್ಮಿಸಲಾಯಿತು. ಸ್ವಲ್ಪ ಸಮಯದ ಹಿಂದೆ ಸುಶೀಲ್ ಜೀ ನಿಮ್ಮ ಮುಂದೆ ನೀಲ ನಕಾಶೆಯನ್ನು ವಿವರವಾಗಿ ಮಂಡಿಸಿದರು, ಅವುಗಳಲ್ಲಿ ಬಹುಪಾಲು ಪೂರ್ಣಗೊಂಡಿವೆ. ಅದೇ ರೀತಿ ಗಂಡಕ್ ಮತ್ತು ಕೋಸಿ ನದಿಗಳ ಮೇಲೂ ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದಕ್ಕನುಗುಣವಾಗಿ  ಇಂದು 3 ಹೊಸ ಚತುಷ್ಪಥ ಸೇತುವೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಇವುಗಳಲ್ಲಿ ಎರಡು ಸೇತುವೆಗಳನ್ನು ಗಂಗಾ ಜೀ ಮೇಲೆ ಮತ್ತು ಒಂದನ್ನು ಕೋಸಿ ನದಿಯ ಮೇಲೆ ನಿರ್ಮಿಸಲಾಗುತ್ತದೆ. ಸೇತುವೆಗಳ ನಿರ್ಮಾಣದ ಬಳಿಕ ಗಂಗಾ ಮತ್ತು ಕೋಸಿ ನದಿಗಳ ಮೇಲಣ ಚತುಷ್ಪಥ ಸೇತುವೆಗಳ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ.

ಸ್ನೇಹಿತರೇ,

ಬಿಹಾರದ ಜೀವನ ರೇಖೆಯಂತಿರುವ ಮಹಾತ್ಮಾ ಗಾಂಧಿ ಸೇತುವಿನ ದುಸ್ಥಿತಿಯನ್ನು ನಾವು ನೋಡಿದ್ದೆವು. ಆದರೆ ಇಂದು ಅದು ಹೊಸ ಮಾದರಿಯಲ್ಲಿ ಮತ್ತು ಹೊಸ ನೋಟದಲ್ಲಿ ಸೇವೆಗಳನ್ನು ನೀಡುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಭವಿಷ್ಯದ ಆವಶ್ಯಕತೆಗಳಿಗಾಗಿ , ಈಗ ಮಹಾತ್ಮಾ ಗಾಂಧಿ ಸೇತುಗೆ ಸಮಾನಾಂತರವಾಗಿ ಹೊಸ ಚತುಷ್ಪಥ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಹೊಸ ಸೇತುವೆಗೆ ಜೊತೆಯಾಗಿ 8 ಪಥಗಳ ಸಂಪರ್ಕ ರಸ್ತೆಯೂ ಬರಲಿದೆ. ಇದೇ ರೀತಿ ಬಿಹಾರದ ಸಂಪರ್ಕವು ಗಂಗಾ ನದಿಗೆ ವಿಕ್ರಮ ಶಿಲಾ ಸೇತುಗೆ ಸಮಾನಾಂತರವಾಗಿ ನಿರ್ಮಾಣವಾಗುವ ಹೊಸ ಸೇತುವೆ ಮತ್ತು ಕೋಸಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುವ ಸೇತುನಿಂದಾಗಿ ಸುಧಾರಿಸಲಿದೆ.

ಸ್ನೇಹಿತರೇ,

ಸಂಪರ್ಕ ವಿಷಯ ಇಡೀಯಾಗಿ ಬೋಧಿಸಬೇಕಾದ ವಿಷಯ . ಇಲ್ಲಿ ಸೇತುವೆಯನ್ನು ನಿರ್ಮಿಸಲಾಯಿತು , ಅಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲಾಯಿತು, ಇಲ್ಲೆ ರೈಲ್ವೇ ಮಾರ್ಗವಿದೆ, ಮತ್ತು ಅಲ್ಲಿ ರೈಲ್ವೇ ನಿಲ್ದಾಣವನ್ನು ನಿರ್ಮಿಸಲಾಗಿದೆ-ಇಂತಹ ಧೋರಣೆ ದೇಶಕ್ಕೆ ಬಹಳ ಹಾನಿಯನ್ನುಂಟು ಮಾಡಿದೆ. ಮೊದಲು ರಸ್ತೆಗಳು ಮತ್ತು ಹೆದ್ದಾರಿಗಳು ರೈಲ್ವೇ ಜಾಲದ ಜೊತೆ ಸಂಪರ್ಕಿತಗೊಂಡಿರಲಿಲ್ಲ. ಅದೇ ರೀತಿ ರೈಲು ಕೂಡಾ ಬಂದರುಗಳ ಜೊತೆ ಮತ್ತು ಬಂದರುಗಳು ವಿಮಾನ ನಿಲ್ದಾಣದ ಜೊತೆ ಸಂಪರ್ಕಗಳನ್ನು ಹೊಂದಿರಲಿಲ್ಲ. 21 ನೇ ಶತಮಾನದ ಭಾರತ ಮತ್ತು 21 ನೇ ಶತಮಾನದ ಬಿಹಾರ ಎಲ್ಲಾ ಕೊರತೆಗಳನ್ನು ದಾಟಿ ಮುಂದುವರೆಯುತ್ತಿವೆ. ಇಂದು ದೇಶದಲ್ಲಿ  ಬಹು ಮಾದರಿ ಸಂಪರ್ಕ ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ. ಇಂದು ರೈಲ್ವೇ ಮಾರ್ಗ ಮತ್ತು ವಾಯು ಮಾರ್ಗವನ್ನು ಜೋಡಿಸುವ , ಬೆಂಬಲಿಸುವ ರೀತಿಯಲ್ಲಿ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರೈಲ್ವೇ ಮಾರ್ಗಗಳನ್ನು ಅವುಗಳು ಬಂದರುಗಳ ಜೊತೆ ಬೆಸೆದಿರುವಂತೆ ನಿರ್ಮಾಣ ಮಾಡಲಾಗುತ್ತಿದೆ. ಅದೆಂದರೆ ಒಂದು ಮಾದರಿಯ ಸಾರಿಗೆ ಇನ್ನೊಂದು ಮಾದರಿಯ ಸಾರಿಗೆಯನ್ನು ಬೆಂಬಲಿಸುವುದನ್ನು ಖಾತ್ರಿಪಡಿಸುವುದು ಇದರ ಹಿಂದಿರುವ ಚಿಂತನೆ. ಇದರೊಂದಿಗೆ ಸಾಗಾಣಿಕೆಗೆ ಸಂಬಂಧಿಸಿ ಭಾರತದಲ್ಲಿರುವ ಸಮಸ್ಯೆ ಬಹುಪಾಲು ನಿವಾರಣೆಯಾಗಲಿದೆ.

ಸ್ನೇಹಿತರೇ,

ಸಮಾಜದ ಅತ್ಯಂತ ದುರ್ಬಲ ವಲಯಕ್ಕೆ, ಬಡವರಿಗೆ ಮೂಲಸೌಕರ್ಯದಿಂದ ಬಹಳ ಪ್ರಯೋಜನವಾಗಲಿದೆ. ನಮ್ಮ ರೈತರೂ ಇದರಿಂದ ಬಹಳ ಪ್ರಯೋಜನಗಳನ್ನು ಪಡೆಯುತ್ತಾರೆ. ರೈತರಿಗೆ ಉತ್ತಮ ರಸ್ತೆಗಳು ದೊರೆತರೆ  ಮತ್ತು ನದಿಗಳ ಮೇಲೆ ಸೇತುವೆಗಳು ನಿರ್ಮಾಣವಾದರೆ ಕೃಷಿ ಕ್ಷೇತ್ರಗಳು ಮತ್ತು ನಗರದ ಮಾರುಕಟ್ಟೆಗಳ ನಡುವಣ  ಅಂತರ ಬಹಳಷ್ಟು ಕಡಿಮೆಯಾಗುತ್ತದೆ. ಸ್ನೇಹಿತರೇ ದೇಶದ ಸಂಸತ್ತು ನಿನ್ನೆ ದೇಶದ ರೈತರಿಗೆ ಹೊಸ ಹಕ್ಕುಗಳನ್ನು ನೀಡುವ ಚಾರಿತ್ರಿಕ ಕಾನೂನುಗಳನ್ನು ಅಂಗೀಕರಿಸಿತು. ಇಂದು ಬಿಹಾರದ ಜನತೆಯೊಂದಿಗೆ ಮಾತನಾಡುವಾಗ , ನಾನು ದೇಶದ ರೈತರನ್ನು , ಭಾರತದ ಭವ್ಯ ಭವಿಷ್ಯಕ್ಕೆ ಕಾತರಿಸುವವರನ್ನು ಅಭಿನಂದಿಸುತ್ತೇನೆ. ಸುಧಾರಣೆಗಳು 21 ನೇ ಶತಮಾನದ ಅಗತ್ಯಗಳಾಗಿವೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಇದುವರೆಗೆ ಉತ್ಪಾದನೆ ವ್ಯವಸ್ಥೆ ಮತ್ತು ಮಾರಾಟದ ಕಾನೂನುಗಳು ರೈತರ ಕೈ-ಕಾಲುಗಳನ್ನು ಕಟ್ಟಿ ಹಾಕಿದ್ದವು. ಕಾನೂನುಗಳ ಆಧಾರದಲ್ಲಿ ದೇಶದಲ್ಲಿ ನಿಸ್ಸಹಾಯಕರಾದ ರೈತರಿಂದ ಲಾಭ ಹೊಡೆಯುವ ಬಲಿಷ್ಟ ಲಾಬಿಯೊಂದು ಹುಟ್ಟಿಕೊಂಡಿತು. ಅದೆಲ್ಲಾ ಎಷ್ಟು ಸಮಯ ನಡೆದೀತು ?. ಆದುದರಿಂದ , ವ್ಯವಸ್ಥೆಯನ್ನು ಬದಲಿಸುವುದು ಅವಶ್ಯವಿತ್ತು ಮತ್ತು ನಮ್ಮ ಸರಕಾರ ಬದಲಾವಣೆಗಳನ್ನು ತಂದಿತು. ಹೊಸ ಕೃಷಿ ಸುಧಾರಣೆಗಳು ದೇಶದ ಪ್ರತಿಯೊಬ್ಬ ರೈತರಿಗೂ ಅವರ ಬೆಳೆಯನ್ನು, ಹಣ್ಣುಗಳನ್ನು, ಮತ್ತು ತರಕಾರಿಗಳನ್ನು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ  ಮಾರಾಟ ಮಾಡಬಹುದಾದ ಅವಕಾಶವನ್ನು ನೀಡುತ್ತವೆ. ಈಗ ರೈತರಿಗೆ ಅವರ ಪ್ರದೇಶದಲ್ಲಿರುವ ಮಂಡಿ ಅಲ್ಲದೆ ಇತರ ಆಯ್ಕೆಯ ಅವಕಾಶಗಳು ಲಭಿಸುತ್ತವೆ. ಮಂಡಿಗಳಲ್ಲಿ ರೈತರಿಗೆ ಹೆಚ್ಚು ಲಾಭ ಸಿಗುತ್ತದೆಯಾದರೆ ಅವರಾಗ ಮಂಡಿಗಳಿಗೆ ಹೋಗುತ್ತಾರೆ ಮತ್ತು ತಮ್ಮ ಉತ್ಪಾದನೆಯನ್ನು ಮಾರಾಟ ಮಾಡುತ್ತಾರೆ. ಅವರಿಗೆ ಬೇರೆ ಕಡೆಗಳಲ್ಲಿ ಹೆಚ್ಚು ಹಣ ಸಿಗುತ್ತದೆ ಎಂದಾದರೆ , ಆಗ ಅವರಲ್ಲಿಗೆ ಹೋಗಿ ಮಾರಾಟ ಮಾಡುತ್ತಾರೆ. ಈಗ ಅವರು ಯಾವುದೇ ರೀತಿಯ ನಿರ್ಬಂಧಗಳಿಂದ ಮುಕ್ತರು. ಈಗಿರುವ ಪ್ರಶ್ನೆ ಎಂದರೆ , ಇದು ಯಾವ ಬದಲಾವಣೆಯನ್ನು ತರುತ್ತದೆ ?, ಎಂಬುದಾಗಿದೆ. ಇದರಿಂದ ರೈತರಿಗೆ ಲಾಭವೇನು?, ನಿರ್ಧಾರವು ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ರೈತರಿಗೆ ಲಾಭದಾಯಕವಾಗುವುದು ಹೇಗೆ ?. ಪ್ರಶ್ನೆಗಳಿಗೆ ತಳಮಟ್ಟದ ವರದಿಗಳಿಂದ  ಉತ್ತರವನ್ನು ಪಡೆಯಲಾಗಿದೆ.

ರೈತರಿಗೆ ಹೊಸ ಸ್ವಾತಂತ್ರ್ಯದ ಹಲವಾರು ಪ್ರಯೋಜನಗಳು ಈಗಾಗಲೇ ಗೋಚರಕ್ಕೆ ಬಂದಿವೆ. ಕೆಲವು ತಿಂಗಳ ಹಿಂದೆ ಸುಗ್ರೀವಾಜ್ಞೆಯನ್ನು ಹೊರಡಿಸಿದಾಗ ಬಟಾಟೆ ಬೆಳೆಯುವ ಪ್ರದೇಶದ ರೈತರಿಂದ ಬಂದಿರುವ ವರದಿಗಳು ಜೂನ್ಜುಲೈ ತಿಂಗಳಲ್ಲಿ ದೊಡ್ಡ ಪ್ರಮಾಣದ ಖರೀದಿದಾರರು ರೈತರಿಗೆ ಉತ್ತಮ ದರ ನೀಡಿ ಶೀತಲೀಕೃತ ದಾಸ್ತಾನುಗಾರಗಳಿಂದ ನೇರವಾಗಿ ಬಟಾಟೆಗಳನ್ನು ಖರೀದಿ ಮಾಡಿದ್ದಾರೆ. ಹೊರಗೆ ರೈತರಿಗೆ ಬಟಾಟೆಗೆ ಹೆಚ್ಚಿನ ಬೆಲೆ ದೊರೆತರೆ ಮಂಡಿಗೆ ಹೋಗಿ ಮಾರಾಟ ಮಾಡುವ ರೈತರಿಗೂ ಹೆಚ್ಚಿನ ಬೆಲೆ ದೊರೆಯಿತು. ಇದಕ್ಕೆ ಕಾರಣ ಹೊರಭಾಗದಲ್ಲಿ ಇದ್ದ ಹೆಚ್ಚಿನ ಬೆಲೆಯ ಒತ್ತಡ. ಅದೇ ರೀತಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿಯೂ ತೈಲ ಗಿರಣಿಗಳು ಸಾಸಿವೆಯನ್ನು 20 ರಿಂದ 30 ಶೇಖಡಾ ಹೆಚ್ಚು ದರ ನೀಡಿ ರೈತರಿಂದಲೇ ನೇರವಾಗಿ ಖರೀದಿಸಿದ ವರದಿಗಳಿವೆ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಬೇಳೆ ಕಾಳುಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರಾಜ್ಯಗಳಲ್ಲಿ , ರೈತರು ಕಳೆದ ವರ್ಷಗಳಿಗೆ ಹೋಲಿಸಿದಾಗ 15-25  ಶೇಖಡಾ ಹೆಚ್ಚಿನ ಬೆಲೆಯನ್ನು ನೇರವಾಗಿ ಗಳಿಸಿದ್ದಾರೆ. ಅಲ್ಲಿಯ ಬೇಳೆ ಕಾಳುಗಳ ಗಿರಣಿಗಳು ರೈತರಿಂದ ನೇರ ಖರೀದಿ ಮಾಡಿವೆ ಮತ್ತು ಅವರಿಗೆ ನೇರ ಪಾವತಿ ಮಾಡಿವೆ.

ಕೆಲವು ವ್ಯಕ್ತಿಗಳು ಅಸಂತುಷ್ಟರಾಗಿದ್ದಾರೆ ಯಾಕೆ ಎಂಬುದನ್ನು ಈಗ ದೇಶವು ಅಂದಾಜು ಮಾಡಬಹುದು. ಹಲವು ಕಡೆಗಳಲ್ಲಿ ಕೃಷಿ ಮಂಡಿಗಳಿಗೆ ಏನಾಗುತ್ತದೆ ಎಂಬ ಪ್ರಶ್ನೆಯನ್ನು ಎತ್ತಲಾಗುತ್ತಿದೆ. ಕೃಷಿ ಮಂಡಿಗಳನ್ನು ಮುಚ್ಚಲಾಗುತದೆಯೇ, ಅಲ್ಲಿ  ಖರೀದಿ ಸ್ಥಗಿತಗೊಳ್ಳುತ್ತದೆಯೇ ?. ಇಲ್ಲ , ಅಂತಹದ್ದು ಆಗುವುದೇ ಇಲ್ಲ. ಮತ್ತು ನಾನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ ಏನೆಂದರೆ , ಕಾನೂನುಗಳು , ಬದಲಾವಣೆಗಳು ಕೃಷಿ ಮಂಡಿಗಳ ವಿರುದ್ದ ಅಲ್ಲ. ಕೃಷಿ ಮಾರುಕಟ್ಟೆಗಳು ಹಿಂದೆ ಇದ್ದಂತೆಯೇ ಕಾರ್ಯ ನಿರ್ವಹಿಸುತ್ತವೆ. ಎನ್.ಡಿ.. ಸರಕಾರವು ದೇಶದಲ್ಲಿಯ ಕೃಷಿ ಮಂಡಿಗಳನ್ನು ಆಧುನೀಕರಿಸಲು ಸತತವಾಗಿ ಕೆಲಸ ಮಾಡಿದೆ . ಕಳೆದ 5-6 ವರ್ಷಗಳಲ್ಲಿ ಕೃಷಿ ಮಂಡಿಗಳ ಕಚೇರಿಗಳನ್ನು ನಿರ್ದಿಷ್ಟಪಡಿಸಿ ಅವುಗಳನ್ನು ಕಂಪ್ಯೂಟರೀಕರಣಗೊಳಿಸಲು ಬೃಹತ್ ಆಂದೋಲನವೇ ನಡೆದಿದೆ. ಆದುದರಿಂದ , ಹೊಸ ಕೃಷಿ ಸುಧಾರಣೆಗಳ ಬಳಿಕ , ಕೃಷಿ ಮಂಡಿಗಳು ಕೊನೆಯುಸಿರೆಳೆಯುತ್ತವೆ ಎಂದು ಯಾರೇ ಹೇಳುತ್ತಿದ್ದರೂ, ಅವರು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ.

ಸ್ನೇಹಿತರೇ,

ಏಕತೆಯಲ್ಲಿ ಬಲವಿದೆ ಎಂಬುದು ಬಹಳ ಹಳೆಯ ಮಾತು. ಕೃಷಿ ಸುಧಾರಣೆಗಳಿಗೆ ಸಂಬಂಧಿಸಿದ ಎರಡನೆ ಕಾನೂನು ಇದರಿಂದ ಪ್ರೇರಣೆ ಪಡೆದಂತಹದು. ಇಂದು  ನಮ್ಮಲ್ಲಿರುವ ಶೇಖಡಾ 85 ರಷ್ಟು ರೈತರು ಸಣ್ಣ ಪ್ರಮಾಣದ ಹಿಡುವಳಿದಾರರು. ಕೆಲವರಿಗೆ 1 ಎಕರೆ , ಕೆಲವರಿಗೆ 2 ಎಕರೆ , ಕೆಲವರಿಗೆ 1 ಹೆಕ್ಟೇರ್ , ಇನ್ನು ಕೆಲವರಿಗೆ 2 ಹೆಕ್ಟೇರ್ ಭೂಮಿ ಇರಬಹುದು. ಅವರೆಲ್ಲಾ ಸಣ್ಣ ರೈತರು. ಅವರು ಸಣ್ಣ ಪ್ರದೇಶದಲ್ಲಿ ಕೃಷಿ ಮಾಡುವ ಮೂಲಕ ಜೀವನೋಪಾಯ ಸಾಗಿಸುತ್ತಾರೆ. ಇದರಿಂದಾಗಿ ಅವರ ಖರ್ಚುಗಳು ಏರುತ್ತವೆ. ಅವರು ತಮ್ಮ ಉತ್ಪಾದನೆಗಳಲ್ಲಿ ಸ್ವಲ್ಪ ಪ್ರಮಾಣವನ್ನು ಮಾರಾಟ ಮಾಡಿದರೂ ಅದಕ್ಕೆ ಸರಿಯಾದ ಬೆಲೆ ಸಿಗುವುದಿಲ್ಲ. ಆದರೆ ವಲಯದ ರೈತರು ಗುಂಪಾಗಿ ಕೃಷಿ ಮಾಡಿದರೆ , ಆಗ ಅವರ ಖರ್ಚುಗಳು ಕಡಿಮೆಯಾಗುತ್ತವೆ ಮತ್ತು ಸರಿಯಾದ ದರವೂ ಖಾತ್ರಿಯಾಗುತ್ತದೆ. ಹೊರಗಿನ ಖರೀದಿದಾರರು ರೈತರ ಗುಂಪುಗಳ ಜೊತೆ ಚರ್ಚಿಸಬಹುದು ಮತ್ತು ಅವರ ಉತ್ಪಾದನೆಗಳನ್ನು ನೇರವಾಗಿ ಖರೀದಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಎರಡನೆ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಇದೊಂದು ವಿಶಿಷ್ಟ ಕಾಯ್ದೆಯಾಗಿದ್ದು, ಅಲ್ಲಿ ರೈತರಿಗೆ ಯಾವುದೇ ಬಂಧನದ ಸಂಕೋಲೆಗಳಿಲ್ಲ. ಇದು ರೈತರ ಕೃಷಿ ಭೂಮಿಯ ಭದ್ರತೆ ಮತ್ತು ಮಾಲಕತ್ವದ ಭದ್ರತೆಯನ್ನು ಖಾತ್ರಿಪಡಿಸುತ್ತದೆ. ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳ ಖರೀದಿ ಮತ್ತು ಗೊಬ್ಬರದ ಖರೀದಿ ಇತ್ಯಾದಿಗಳ ಜವಾಬ್ದಾರಿ ಗುತ್ತಿಗೆದಾರನದ್ದು ಅಂದರೆ ಅಂತಿಮ ಉತ್ಪಾದನೆಯನ್ನು ಖರೀದಿಸುವ ಗ್ರಾಹಕನದ್ದಾಗಿರುತ್ತದೆ.

ಸ್ನೇಹಿತರೇ,

ಸುಧಾರಣೆಗಳು ಕೃಷಿ  ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸಲಿವೆ ಮತ್ತು ರೈತರಿಗೆ ಆಧುನಿಕ ತಂತ್ರಜ್ಞಾನ ಲಭಿಸಲಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ರೈತರ ಉತ್ಪನ್ನಗಳು ಸುಲಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಇಲ್ಲಿ ಬಿಹಾರದಲ್ಲಿ ಇತ್ತೀಚೆಗೆ 5 ಕೃಷಿ ಉತ್ಪಾದಕರ ಸಂಘಟನೆಗಳು ಬಹಳ ಪ್ರಖ್ಯಾತವಾದ ಅಕ್ಕಿ ಮಾರಾಟ ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡಿವೆ ಎಂದು ನನಗೆ ತಿಳಿಸಲಾಗಿದೆ. ಒಪ್ಪಂದದಡಿಯಲ್ಲಿ , ಕಂಪೆನಿಯು ಬಿಹಾರದ ಎಫ್.ಪಿ.. ಗಳಿಂದ 4,000 ಟನ್ ಭತ್ತವನ್ನು ಖರೀದಿ ಮಾಡಲಿದೆ. ಈಗ ಎಫ್.ಪಿ.. ಗಳ ಜೊತೆ ಇರುವ ರೈತರು ಮಂಡಿಗಳಿಗೆ ಹೋಗಬೇಕಿಲ್ಲ. ಅವರ ಉತ್ಪನ್ನ ಈಗ ನೇರವಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ತಲುಪುತ್ತದೆ. ಸುಧಾರಣೆಗಳ ಬಳಿಕ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳಿಗೆ ಮತ್ತು ದೇಶಕ್ಕೆ ಗ್ರಾಮೀಣ ಕೈಗಾರಿಕೆಗಳತ್ತ ನೇರವಾಗಿ ಸಾಗುವ ಹಾದಿ ನಿರ್ಮಾಣವಾಗಲಿದೆ. ನಾನು ನಿಮಗೆ ಇನ್ನೊಂದು ಉದಾಹರಣೆ ಕೊಡುತ್ತೇನೆ. ಒಂದು ವೇಳೆ ಓರ್ವ ಯುವಕರು ಕೃಷಿ ವಲಯದಲ್ಲಿ ನವೋದ್ಯಮವನ್ನು ಆರಂಭಿಸಲು ಇಚ್ಚಿಸಿದರೆ ಆತ ಚಿಪ್ಸ್ ಕಾರ್ಖಾನೆ ಆರಂಭಿಸಬಹುದು. ಇದುವರೆಗೆ ಅವರು ಮಂಡಿಗೆ ಹೋಗಬೇಕು ಮತ್ತು ಬಟಾಟೆಗಳನ್ನು ಖರೀದಿಸಬೇಕು . ಬಳಿಕವಷ್ಟೇ ಅವರು ತನ್ನ ಕೆಲಸವನ್ನು ಆರಂಭಿಸಬಹುದು. ಆದರೆ ಈಗ ಯುವಕರು , ಹೊಸ ಕನಸುಗಳೊಂದಿಗೆ ನೇರವಾಗಿ ಗ್ರಾಮೀಣ ರೈತರಲ್ಲಿ ತೆರಳಿ , ಬಟಾಟೆಗಳಿಗಾಗಿ ಒಪ್ಪಂದ ಮಾಡಿಕೊಳ್ಳಲು ಸಮರ್ಥರಾಗುತ್ತಾರೆ. ಅವರು ಗುಣಮಟ್ಟದ ಬಗ್ಗೆ ರೈತರಿಗೆ ಹೇಳಬಹುದು ಮತ್ತು ತನಗೆ ಬೇಕಾದ ಪ್ರಮಾಣದ ಬಗ್ಗೆ ತಿಳಿಸಬಹುದು. ಅವರು ಅವಶ್ಯವಾದ ಎಲ್ಲಾ ತಾಂತ್ರಿಕ ಸಹಾಯವನ್ನು ಉತ್ತಮ ಗುಣಮಟ್ಟದ ಬಟಾಟೆ ಉತ್ಪಾದನೆಗಾಗಿ ರೈತರಿಗೆ  ನೀಡಬಹುದು.

ಸ್ನೇಹಿತರೇ,

ಇಂತಹ ಒಪ್ಪಂದಗಳಲ್ಲಿ ಇನ್ನೊಂದು ಮಗ್ಗುಲೂ  ಇರುತ್ತದೆ. ನೀವು ಗಮನಿಸಿರಬಹುದು, ಡೈರಿ ಇದ್ದಲ್ಲಿ ಸುತ್ತಲಿನ ಪಶುಪಾಲಕರಿಗೆ ಹಾಲು ಮಾರಾಟ ಸುಲಭ ಸಾಧ್ಯವಾಗುತ್ತದೆ. ಡೈರಿಗಳು ಪಶುಪಾಲಕರ ಮತ್ತು ಪಶುಗಳ ಆರೋಗ್ಯದ ಕಾಳಜಿಯನ್ನು ಮಾಡುತ್ತವೆ. ಜಾನುವಾರುಗಳಿಗೆ ಸೂಕ್ತ ಕಾಲದಲ್ಲಿ ಲಸಿಕೆ ಹಾಕ ಬೇಕಾಗುತ್ತದೆ. ಅವುಗಳಿಗಾಗಿ ಶೆಡ್ ಗಳನ್ನು, ಹಟ್ಟಿಗಳನ್ನು ತಯಾರು ಮಾಡಬೇಕಾಗುತ್ತದೆ. ಮತ್ತು ಜಾನುವಾರುಗಳಿಗೆ ಪೋಷಕಾಂಶಯುಕ್ತ ಆಹಾರ ದೊರೆಯಬೇಕಾಗುತ್ತದೆ. ಜಾನುವಾರುಗಳು ಅಸ್ವಸ್ಥಗೊಂಡರೆ , ಆಗ ವೈದ್ಯರುಗಳು ಸಕಾಲದಲ್ಲಿ ಆಗಮಿಸಬೇಕಾಗುತ್ತದೆ. ಮತ್ತು ನಾನು ಗುಜರಾತಿನಲ್ಲಿದ್ದೆ, ಡೈರಿಗಳು ಜಾನುವಾರುಗಳನ್ನು ಹೇಗೆ ನಿಭಾಯಿಸುತ್ತವೆ ಎಂಬುದನ್ನು ಬಲ್ಲೆ. ದೊಡ್ಡ ಡೈರಿಗಳು ಹಾಲು ಉತ್ಪಾದಕರಿಗೆ ಮತ್ತು ರೈತರಿಗೆ ಸಹಾಯ ಮಾಡುತ್ತವೆ. ಮತ್ತು ಇದೆಲ್ಲದರ ಬಳಿಕವೂ ಮುಖ್ಯವಾದ ಸಂಗತಿ ಎಂದರೆ ಡೈರಿಗಳು ಹಾಲನ್ನು ಖರೀದಿಸಿದರೂ, ಪಶು ಪಾಲಕರು ಅಥವಾ ರೈತರು ಜಾನುವಾರುಗಳ ಮಾಲಕರಾಗಿಯೇ ಉಳಿಯುತ್ತಾರೆ. ಜಾನುವಾರುಗಳಿಗೆ ಬೇರೆ ಯಾರೂ ಯಜಮಾನರಾಗುವುದಿಲ್ಲ. ಅದೇ ರೀತಿ ರೈತರು ಭೂಮಿಯ ಒಡೆಯರಾಗಿರುತ್ತಾರೆ. ಇಂತಹದೇ ಸುಧಾರಣೆಗಳು ಕೃಷಿ ವಲಯದಲ್ಲಿಯೂ ಈಗ ಆಗಬಲ್ಲವು.

ಸ್ನೇಹಿತರೇ,

ಅವಶ್ಯಕ ಸಾಮಗ್ರಿಗಳ ಕಾಯ್ದೆಯ ಕೆಲವು ಪ್ರಸ್ತಾವನೆಗಳು ಕೃಷಿ ವ್ಯಾಪಾರ ಕ್ಷೇತ್ರದಲ್ಲಿಯ ನಮ್ಮ ಸ್ನೇಹಿತರ ಹಾದಿಗೆ ಅಡ್ಡ ಬರುತ್ತಿದ್ದವು. ಬದಲಾದ ಕಾಲಘಟ್ಟದಲ್ಲಿ ಅವುಗಳನ್ನೂ ತಿದ್ದುಪಡಿ ಮಾಡಲಾಗಿದೆ. ಬೇಳೆ ಕಾಳುಗಳು, ಬಟಾಟೆ, ಖಾದ್ಯ ತೈಲ, ನೀರುಳ್ಳಿಗಳನ್ನು ಈಗ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದರಿಂದ  ದೇಶದ ರೈತರು ಅವುಗಳನ್ನು ಶೀತಲೀಕೃತ ದಾಸ್ತಾನುಗಾರಗಳಲ್ಲಿ ಸುಲಭದಲ್ಲಿ ದಾಸ್ತಾನು ಮಾಡಿಡಲು ಸಾಧ್ಯವಿದೆ. ದಾಸ್ತಾನಿಗೆ ಸಂಬಂಧಿಸಿದ ಕಾನೂನು ಸಮಸ್ಯೆ ನಿವಾರಿಸಿದ ಬಳಿಕ ಶೀತಲೀಕೃತ ದಾಸ್ತಾನು ಜಾಲವೂ ಅಭಿವೃದ್ದಿ ಹೊಂದುತ್ತದೆ ಮತ್ತು ವಿಸ್ತರಿಸುತ್ತದೆ.

ಸ್ನೇಹಿತರೇ,

ಕೃಷಿ ಕ್ಷೇತ್ರದಲ್ಲಿಯ ಮತ್ತು ವ್ಯವಸ್ಥೆಯಲ್ಲಿಯ ಚಾರಿತ್ರಿಕ ಸುಧಾರಣೆಗಳ ಬಳಿಕ , ಕೆಲವರು ತಮ್ಮ ನಿಯಂತ್ರಣದಿಂದ ಎಲ್ಲವೂ ಕೈ ಬಿಟ್ಟು ಹೋಗುತ್ತಿದೆ ಎಂಬ ಭಾವನೆಯನ್ನು ಹೊಂದಿದ್ದಾರೆ. ಆದುದರಿಂದ ಜನರು ಎಂ.ಎಸ್. ಪಿ. ಕುರಿತಂತೆ ರೈತರನ್ನು ದಾರಿ ತಪ್ಪಿಸಲು ಪ್ರಯತ್ನ ಆರಂಭಿಸಿದ್ದಾರೆ. ಎಂ.ಎಸ್.ಪಿ.ಗೆ ಸಂಬಂಧಿಸಿ ಸ್ವಾಮಿನಾಥನ್ ಶಿಫಾರಸುಗಳನ್ನು ಅನುಷ್ಟಾನಿಸದೇ ಅದನ್ನು ನೆನೆಗುದಿಗೆ ಹಾಕಿದವರು ಇದೇ ಜನರು. ನಾನು ದೇಶದ ಪ್ರತಿಯೊಬ್ಬ  ರೈತರಿಗೂ ಭರವಸೆ ನೀಡುತ್ತೇನೆ ಏನೆಂದರೆ  ಎಂ.ಎಸ್.ಪಿ. ವ್ಯವಸ್ಥೆಯು ಹಿಂದೆ ಇದ್ದಂತೆ ಮುಂದೆಯೂ ಕಾರ್ಯಾಚರಿಸುತ್ತಿರುತ್ತದೆ. ಅದೇ ರೀತಿ, ಪ್ರತೀ ಹಂಗಾಮಿನಲ್ಲಿಯೂ ಸರಕಾರಿ ಖರೀದಿ ನಡೆಯುತ್ತದೆ ಮತ್ತು ಅದು ಹಿಂದೆ ಇದ್ದಂತೆಯೇ ಇರುತ್ತದೆ.

ಸ್ನೇಹಿತರೇ,

ರೈತರಿಗಾಗಿ ಎಂ.ಎಸ್.ಪಿ.ಗೆ ಸಂಬಂಧಿಸಿ ಮತ್ತು ಸರಕಾರಿ ಖರೀದಿಗೆ ಸಂಬಂಧಿಸಿ ನಮ್ಮ ಸರಕಾರ ಮಾಡಿದಷ್ಟು ಕೆಲಸವನ್ನು ಹಿಂದೆಂದೂ ಮಾಡಲಾಗಿಲ್ಲ. ಯಾರು ಸತ್ಯ ಹೇಳುತ್ತಿದ್ದಾರೆ ಮತ್ತು ರೈತರ ಕಲ್ಯಾಣಕ್ಕಾಗಿ ಯಾರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೀವು ಕಳೆದ 5 ವರ್ಷಗಳಲ್ಲಿ ಸರಕಾರ ಮಾಡಿರುವ ಖರೀದಿಯನ್ನು 2014ಕ್ಕೆ ಮುಂಚಿನ 5 ವರ್ಷಗಳ ಖರೀದಿಗೆ ತುಲನೆ ಮಾಡುವ ಮೂಲಕ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ನಿಮಗೆ ಅಲ್ಲಿ ಸಾಕ್ಷಿ ಸಿಗುತ್ತದೆ. ಬೇಳೆ ಕಾಳುಗಳು ಮತ್ತು ಎಣ್ಣೆ ಬೀಜಗಳ ಸರಕಾರಿ ಖರೀದಿ ಹಿಂದೆಂದಿಗಿಂತಲೂ ಸುಮಾರು 24 ಪಟ್ಟು ಹೆಚ್ಚಳವಾಗಿದೆ. ವರ್ಷ ಕೊರೊನಾ ಅವಧಿಯಲ್ಲಿ ರಾಬಿ ಹಂಗಾಮಿನಲ್ಲಿ ರೈತರಿಂದ ದಾಖಲೆ ಪ್ರಮಾಣದ ಗೋಧಿಯನ್ನು ಖರೀದಿಸಲಾಗಿದೆ. ವರ್ಷ ರೈತರಿಗೆ 1 ಲಕ್ಷ 13 ಸಾವಿರ  ಕೋ.ರೂ. ಗಳನ್ನು ಗೋಧಿ, ಭತ್ತ, ಬೇಳೆ ಕಾಳುಗಳು, ಮತ್ತು ತೈಲ ಬೀಜಗಳ ಸಹಿತ ರಾಬಿ ಹಂಗಾಮಿನ ಬೆಳೆಗಳಿಗೆ ಎಂ.ಎಸ್.ಪಿ.ಯಾಗಿ ನೀಡಲಾಗಿದೆ. ಅಂಕಿ ಅಂಶಗಳು ಹಿಂದಿನ ವರ್ಷಕ್ಕಿಂತ 30 % ಅಧಿಕವಾಗಿವೆ. ಅಂದರೆ ಕೊರೋನಾ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಸರಕಾರಿ ಖರೀದಿಗಳನ್ನು ಮಾಡಲಾಗಿರುವುದು ಮಾತ್ರವಲ್ಲ ರೈತರಿಗೆ ದಾಖಲೆ ಪ್ರಮಾಣದ ಪಾವತಿಗಳನ್ನೂ ಮಾಡಲಾಗಿದೆ.

ಸ್ನೇಹಿತರೇ,

ಆಧುನಿಕ ಚಿಂತನೆಗಳೊಂದಿಗೆ ದೇಶದ ರೈತರಿಗಾಗಿ ಹೊಸ ವ್ಯವಸ್ಥೆಯನ್ನು ರೂಪಿಸುವುದು 21 ನೇ ಶತಮಾನದ ಭಾರತದ ಜವಾಬ್ದಾರಿ. ದೇಶದ ರೈತರನ್ನು ಸ್ವಾವಲಂಬಿಯಾಗಿಸುವುದಕ್ಕೆ ನಮ್ಮ ಪ್ರಯತ್ನಗಳು ಅಡೆ ತಡೆ ಇಲ್ಲದೆ ಸಾಗುತ್ತವೆ. ಮತ್ತು ಸ್ಪಷ್ಟವಾಗಿ ಸಂಪರ್ಕ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಂತಿಮವಾಗಿ ನಾನು ಮತ್ತೊಮ್ಮೆ ಸಂಪರ್ಕಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆಗಳಿಗಾಗಿ ಬಿಹಾರವನ್ನು ಮತ್ತು ಇಡೀಯ ದೇಶವನ್ನು ಅಭಿನಂದಿಸುತ್ತೇನೆ. ನಾನು ಮತ್ತೊಮ್ಮೆ ಆಗ್ರಹಪೂರ್ವಕವಾಗಿ ಹೇಳುವುದೇನೆಂದರೆ ನಾವು ಕೊರೋನಾವೈರಸ್ ವಿರುದ್ದ ಹೋರಾಡುತ್ತಲೇ ಇರಬೇಕು. ನಾವು ಕೊರೋನಾವನ್ನು ಸೋಲಿಸಬೇಕು. ನಾವು ನಮ್ಮ ಕುಟುಂಬದ ಸದಸ್ಯರನ್ನು ಕೊರೋನಾದಿಂದ ರಕ್ಷಿಸಬೇಕು ಮತ್ತು ಅದಕ್ಕಾಗಿ ರೂಪಿಸಲಾದ ಎಲ್ಲಾ ನಿಯಮಗಳನ್ನು ಅನುಸರಿಸಬೇಕು. ನಾವು ಯಾವುದೇ ಒಂದು ನಿಯಮವನ್ನು ಅನುಸರಿಸದೇ, ಅದನ್ನು ಕೈ ಬಿಟ್ಟರೂ , ಆಗ ಅದು ಅಪಾಯಕಾರಿಯಾಗಿರುತ್ತದೆ. ನಾವೆಲ್ಲರೂ ಅದನ್ನು ಅನುಸರಿಸಬೇಕು. ನಾನು ಮತ್ತೊಮ್ಮೆ ಬಿಹಾರದ ನನ್ನ ಪ್ರೀತಿಯ ಸಹೋದರರು ಮತ್ತು ಸಹೋದರಿಯರಿಗೆ ಧನ್ಯವಾದ ಹೇಳುತ್ತೇನೆ!

ನಮಸ್ಕಾರ !

***


(Release ID: 1658010) Visitor Counter : 251