ಪ್ರಧಾನ ಮಂತ್ರಿಯವರ ಕಛೇರಿ

ದೇಶದಾದ್ಯಂತದ ಫಿಟ್‌ನೆಸ್‌ ಉತ್ಸಾಹಿಗಳೊಡನೆ ಪ್ರಧಾನಿ ಸಂವಾದ


‘ಫಿಟ್‌ ಇಂಡಿಯಾ’ ಚಳವಳಿಯ ಮೊದಲ ವಾರ್ಷಿಕ ಸಂಭ್ರಮಕ್ಕಾಗಿ ‘ಫಿಟ್‌ ಇಂಡಿಯಾ’ ಸಂವಾದ ಆಯೋಜನೆ

Posted On: 22 SEP 2020 12:23PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು,   ಸೆ.24 2020ರಂದು ಫಿಟ್‌ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಸಮಾರಂಭಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಸಂದರ್ಭದಲ್ಲಿ ಭಾರತದ ಫಿಟ್‌ನೆಸ್‌ ಪ್ರಭಾವಿಗಳೊಡನೆ ಹಾಗೂ ನಾಗರೀಕರೊಡನೆ ಆನ್‌ಲೈನ್‌ ಸಂವಾದವನ್ನು ಏರ್ಪಡಿಸಲಾಗಿದೆ

ಸಂವಾದದಲ್ಲಿ ಪಾಲ್ಗೊಳ್ಳುವ ಪ್ರಮುಖ ಫಿಟ್‌ನೆಸ್‌ ಪ್ರಭಾವಿ ವ್ಯಕ್ತಿಗಳು ತಮ್ಮ ಫಿಟ್‌ನೆಸ್‌ ಬದುಕನ್ನು ವ್ಯಾಖ್ಯಾನಿಸಲಿದ್ದಾರೆ. ಹಾಗೂ ಕೆಲವು ಸಲಹೆಗಳನ್ನೂ ಹಂಚಿಕೊಳ್ಳಲಿದ್ದಾರೆ. ಸದೃಢ ಮತ್ತು ಸ್ವಾಸ್ಥ್ಯಮಯ ಬದುಕಿಗಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲಿದ್ದಾರೆ. ಸಂವಾದದಲ್ಲಿ ವಿರಾಟ್‌ ಕೊಹ್ಲಿ, ಮಿಲಿಂದ್‌ ಸೋಮನ್‌, ರುಜುತಾ ದಿವೇಕರ್‌ ಮುಂತಾದವರೂ ಪಾಲ್ಗೊಳ್ಳಲಿದ್ದಾರೆ.

ಕೋವಿಡ್19 ದುರಿತ ಸಮಯದಲ್ಲಿ ಸದೃಢರಾಗುವುದು ಜೀವನದ ಅತ್ಯಗತ್ಯ ಅಂಶವಾಗಿ ಮಾರ್ಪಟ್ಟಿದೆ. ಸಂದರ್ಭದಲ್ಲಿ ಫಿಟ್‌ ಇಂಡಿಯಾ ಚಳವಳಿಯು ತನ್ನ ಪ್ರಸ್ತುತತೆಯನ್ನು ಎತ್ತಿಹಿಡಿಯುತ್ತದೆ. ಪೌಷ್ಠಿಕಾಂಶ, ಸ್ವಾಸ್ಥ್ಯ, ಸದೃಢತೆಗಾಗಿ ಅಗತ್ಯವಿರುವ ಇನ್ನಿತರ ಆಯಾಮಗಳನ್ನೂ ಸಂವಾದದಲ್ಲಿ ಚರ್ಚಿಸಲಾಗುವುದು.

ಘನತೆವೆತ್ತ ಪ್ರಧಾನಮಂತ್ರಿಯವರ ದೂರದೃಷ್ಟಿತ್ವದ ಚಳವಳಿಯು ಜನರನ್ನು ತನ್ನತ್ತ ಸೆಳೆಯಿತು. ಈಗ ಇನ್ನೊಂದು ಹಂತಕ್ಕೆ ಮುನ್ನಡೆಯುವ ಕಾಲ ಸನ್ನಿಹಿತವಾಗಿದೆ. ಸದೃಢ, ಸ್ವಾಸ್ಥ್ಯಮಯ ರಾಷ್ಟ್ರಕ್ಕಾಗಿ ನಾಗರಿಕರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಿದೆ.

ಫಿಟ್‌ ಇಂಡಿಯಾ ಚಳವಳಿಯ ಮೂಲ ಉದ್ದೇಶವೆಂದರೆ ಭಾರತೀಯರೆಲ್ಲರೂ ದುಬಾರಿಯಲ್ಲದ, ಸರಳ ಮತ್ತು ಸಹಜವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸದೃಢರಾಗಿರಬಹುದು ಮತ್ತು ಮೂಲಕ ವರ್ತನೆಯಲ್ಲಿನ, ನಡಾವಳಿಯಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸುವುದೂ ಆಗಿತ್ತು. ಕಸರತ್ತು, ವ್ಯಾಯಾಮದೊಂದಿಗೆ ಸದೃಢ ದೇಹ, ಸುವಿಚಾರದ ಮನಸನ್ನು ಗಟ್ಟಿಗೊಳಿಸಲೆಂದೇ ಚಳವಳಿಯನ್ನು ಆರಂಭಿಸಲಾಗಿತ್ತು. ಇದು ಎಲ್ಲ ಭಾರತೀಯರ ಜೀವನದ ಒಂದು ಭಾಗವಾಗಲಿ ಎಂಬುದು ಅಭಿಯಾನದ ಆಶಯವಾಗಿತ್ತು.

ಅಭಿಯಾನ ಆರಂಭವಾದಾಗಿನಿಂದಲೂ ಹಲವಾರು ಚಟುವಟಿಕೆಗಳನ್ನು ಫಿಟ್ ಇಂಡಿಯಾ ಚಳವಳಿಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ದೇಶದ ವಿವಿಧ ಸ್ತರದ, ವಯೋಮಾನದ ಎಲ್ಲ ನಾಗರಿಕರೂ ಉತ್ಸಾಹದಿಂದ ಪಾಲ್ಗೊಂಡು ಅಭಿಯಾನವನ್ನು ಬೆಂಬಲಿಸಿದರು. ಫಿಟ್‌ ಇಂಡಿಯಾ ಸ್ವಾತಂತ್ರ್ಯ ಓಟ, ಸೈಕಲಾಥಾನ್‌, ಪ್ಲಾಗ್‌ ರನ್‌ ನಂಥ ಹಲವಾರು ಕ್ರೀಡೆಗಳಲ್ಲಿ ಭಾರತದ 3.5 ಕೋಟಿ ಜನರು ಪಾಲ್ಗೊಂಡು ಇದನ್ನು ಜನರ ಅಭಿಯಾನವಾಗಿ ರೂಪುಗೊಳ್ಳುವಲ್ಲಿ  ಕೈಜೋಡಿಸಿದರು.

ಈಗ ಫಿಟ್‌ ಇಂಡಿಯಾ ಸಂವಾದವು, ಎಲ್ಲ ಫಿಟ್‌ನೆಸ್‌ ಮಂತ್ರ ಹೇಳುವ ಪ್ರಭಾವಿ ಜನರೊಂದಿಗಿನ ಸಂವಾದವು ಚಳವಳಿಯ ಮೂಲ ಆಶಯದೆಡೆಗೆ ಎಲ್ಲರನ್ನೂ ಗಮನ ಸೆಳೆಯುವಂತೆ ಮಾಡುತ್ತದೆ. ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು, ರಾಷ್ಟ್ರದಾದ್ಯಂತ ಚಳವಳಿಯು ರೂಪುಗೊಳ್ಳುವಂತೆ ಮಾಡುತ್ತದೆ.

ಸೆ.24 ಬೆಳಗಿನ 11.30ಯಿಂದ ಲಿಂಕ್‌ ಬಳಸಿ  https://pmindiawebcast.nic.in  ಸಂವಾದದಲ್ಲಿ ಯಾರಾದರೂ ಪಾಲ್ಗೊಳ್ಳಬಹುದಾಗಿದೆ.

***



(Release ID: 1657735) Visitor Counter : 206