ಪ್ರಧಾನ ಮಂತ್ರಿಯವರ ಕಛೇರಿ

ಶ್ರೀಲಂಕಾದ ಅಧ್ಯಕ್ಷರು ಹಾಗು ಶ್ರೀಲಂಕಾದ ಪ್ರಧಾನಮಂತ್ರಿಯವರೊಂದಿಗೆ ಪ್ರಧಾನಿ ದೂರವಾಣಿ ಮಾತುಕತೆ

प्रविष्टि तिथि: 17 SEP 2020 11:19PM by PIB Bengaluru

ಶ್ರೀಲಂಕಾದ ಅಧ್ಯಕ್ಷ ಘನತೆವೆತ್ತ ಶ್ರೀ ಗೊತಾಬಾಯ ರಾಜಪಕ್ಸೆ ಮತ್ತು ಶ್ರೀಲಂಕಾದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಮಹಿಂದ ರಾಜಪಕ್ಸ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಬೆಳಗ್ಗೆ ಕರೆ ಮಾಡಿ ಪ್ರಧಾನಿಯವರ ಜನ್ಮ ದಿನದ ಸಂದರ್ಭದಲ್ಲಿ ಶುಭ ಕೋರಿದರು.

ಶ್ರೀಲಂಕಾದ ಇಬ್ಬರೂ ನಾಯಕರು ನೆರೆಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಬದ್ಧತೆ ಮತ್ತು ಬಲವಾದ ಆಶಯವನ್ನು ವ್ಯಕ್ತಪಡಿಸಿದರು. ಕೋವಿಡ್ ಮಹಾಮಾರಿಯ ವಿರುದ್ಧದ ಜಂಟಿ ಹೋರಾಟ ಸೇರಿದಂತೆ ಮುಂದುವರಿದ ದ್ವಿಪಕ್ಷೀಯ ಬಾಂಧವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಿಯವರು ಶುಭಾಶಯಕ್ಕಾಗಿ ಇಬ್ಬರೂ ನಾಯಕರಿಗೆ ಧನ್ಯವಾದ ಅರ್ಪಿಸಿ, ಭಾರತದ ನೆರೆ ಮೊದಲು ನೀತಿಯ ನಿಟ್ಟಿನಲ್ಲಿ ಎರಡೂ ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಶ್ರಮಿಸುವ ಕುರಿತಂತೆ ಎದಿರು ನೋಡುತ್ತಿರುವುದಾಗಿ ತಿಳಿಸಿದರು.

***


(रिलीज़ आईडी: 1656056) आगंतुक पटल : 249
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam