ಪ್ರಧಾನ ಮಂತ್ರಿಯವರ ಕಛೇರಿ

ರೆವರೆಂಡ್ ಡಾ. ಜೋಸೆಫ್ ಮಾರ್ ಥೋಮಾ ಮೆಟ್ರೊಪಾಲಿಟನ್ ಅವರ 90ನೇ ಜನ್ಮವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನಿ ಭಾಷಣ


ಕೊರೊನಾ ಯೋಧರ ಶಕ್ತಿಯಿಂದ ಭಾರತ ಕೋವಿಡ್-19 ವಿರುದ್ಧ ಖಚಿತ ಹೋರಾಟ ನಡೆಸುತ್ತಿದೆ

ಆತ್ಮನಿರ್ಭರ ಭಾರತದಿಂದ ಪ್ರತಿಯೊಬ್ಬ ಭಾರತೀಯರ ಆರ್ಥಿಕ ಶಕ್ತಿ ಮತ್ತು ಏಳಿಗೆ ಖಾತ್ರಿ: ‘ಸ್ಥಳೀಯವಾಗಿ ಉತ್ಪಾದಿಸಿದ ಮತ್ತು ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಲು’ ಪ್ರಧಾನಮಂತ್ರಿ ಕರೆ

ಇದರಿಂದ ಹಲವು ಭಾರತೀಯ ಮನೆಗಳಲ್ಲಿ ಏಳಿಗೆಯ ದೀಪ ಬೆಳಗಲಿದೆ: ಪ್ರಧಾನಮಂತ್ರಿ

Posted On: 27 JUN 2020 12:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರೆವರೆಂಡ್ ಫಾದರ್ ಡಾ. ಜೋಸೆಫ್ ಮಾರ್ ಥೋಮಾ ಮೆಟ್ರೊಪಾಲಿಟನ್ ಅವರ 90ನೇ ಜನ್ಮದಿನೋತ್ಸವ ಉದ್ದೇಶಿಸಿ ಮಾತನಾಡಿದರು. ಅವರು ಶುಭಾಶಯಗಳನ್ನು ಕೋರಿ ಉತ್ತಮ ಆರೋಗ್ಯ ಮತ್ತು ಆಯಸ್ಸು ದೊರಕಲಿ ಎಂದು ಪ್ರಾರ್ಥಿಸಿದರು.

ವೇಳೆ ಮಾತನಾಡಿದ ಪ್ರಧಾನಮಂತ್ರಿ ಅವರು, ಡಾ. ಜೋಸೆಫ್ ಮಾರ್ ಥೋಮಾ ಅವರು, ತಮ್ಮ ಜೀವನವನ್ನು ರಾಷ್ಟ್ರ ಮತ್ತು ಸಮಾಜದ ಅಭ್ಯುದಯಕ್ಕಾಗಿ ಮುಡುಪಾಗಿಟ್ಟಿದ್ದಾರೆ ಎಂದರು. “ಡಾ. ಜೋಸೆಫ್ ಮಾರ್ ಥೋಮಾ ಅವರು, ವಿಶೇಷವಾಗಿ ಮಹಿಳಾ ಸಬಲೀಕರಣ ಮತ್ತು ಬಡತನ ನಿರ್ಮೂಲನೆಗೆ ವಿಶೇಷ ಆಸಕ್ತಿ ಹೊಂದಿದ್ದು, ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಮಾರ್ ಥೋಮಾ ಚರ್ಚ್, ಯೇಸು ಕ್ರಿಸ್ತನ ಅನುಯಾಯಿ ಸೈಂಟ್ ಥಾಮಸ್ ಅವರ ಆದರ್ಶ ಸಿದ್ಧಾಂತಗಳ ಜೊತೆ ನಿಕಟ ಬಾಂಧವ್ಯ ಹೊಂದಿದೆಎಂದು ಹೇಳಿದರು.

ಭಾರತ ಸದಾ ಹಲವು ಮೂಲಗಳ ಆಧ್ಯಾತ್ಮಿಕ ಪ್ರಭಾವಗಳಿಗೆ ಮುಕ್ತವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಡಾ. ಜೋಸೆಫ್ ಮಾರ್ ಥೋಮಾ ಅವರನ್ನು ಉಲ್ಲೇಖಿಸಿ ಪ್ರಧಾನಿ, “ಮಾನವೀಯತೆಯನ್ನು ಮೈಗೂಡಿಸಿರುವ ಕೊಂಡಿರುವ ಅವರ ಉತ್ತಮ ಕೆಲಸಗಳು ಸದಾ ಫಲಪ್ರದವಾಗಲಿವೆಎಂದು ಹೇಳಿದರು. ಮಾರ್ ಥೋಮಾ ಚರ್ಚ್ ಮಾನವೀಯ ಸ್ಫೂರ್ತಿ ನಮ್ಮ ಭಾರತೀಯರ ಜೀವನದಲ್ಲಿ ವಿಶೇಷವಾಗಿ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೆರವಾಗಿದೆ ಎಂದರು. ಮಾರ್ ಥೋಮಾ ಚರ್ಚ್, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವಹಿಸಿತ್ತು ಮತ್ತು ರಾಷ್ಟ್ರೀಯ ಐಕ್ಯತೆಯ ನಿಟ್ಟಿನಲ್ಲಿ ಅದು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿತು ಎಂದು ಪ್ರಧಾನಿ ಹೇಳಿದರು.

ಕೋವಿಡ್-19 ಕೇವಲ ಒಂದು ದೈಹಿಕ ಕಾಯಿಲೆಯಲ್ಲ, ಅದು ನಮ್ಮ ಜನರ ಜೀವನಕ್ಕೆ ಅಪಾಯ ತಂದೊಡ್ಡಿರುವುದಲ್ಲದೆ, ನಮ್ಮ ಗಮನವನ್ನು ಅನಾರೋಗ್ಯಕರ ಜೀವನ ಶೈಲಿಗಳತ್ತ ಹರಿಸುವಂತೆ ಮಾಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಾಗತಿಕ ಸಾಂಕ್ರಾಮಿಕ ಇಡೀ ಮನುಕುಲಕ್ಕೆ ಅನ್ವಯಿಸುತ್ತಿದ್ದು, ಅದಕ್ಕೆ ಚಿಕಿತ್ಸೆ ಕಂಡುಕೊಳ್ಳಬೇಕಿದೆ. ಭೂಮಿಯ ಮೇಲೆ ಸಂತೋಷ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ನೆರೆದಿದ್ದವರನ್ನು ಕೋರಿದರು. ಕೊರೊನಾ ವಾರಿಯರ್ಸ್ ಶಕ್ತಿಯಿಂದಾಗಿ ಭಾರತ ಕೋವಿಡ್-19 ವಿರುದ್ಧ ಖಚಿತ ಹೋರಾಟ ನಡೆಸುತ್ತಿದೆ ಎಂದು ಅವರು ಹೇಳಿದರು.

ಲಾಕ್ ಡೌನ್ ಸೇರಿದಂತೆ ಸರ್ಕಾರ ಕೈಗೊಂಡ ಹಲವು ಕ್ರಮಗಳ ಕಾರಣದಿಂದ ಹಾಗೂ ಜನರೇ ಹೋರಾಟವನ್ನು ಬೆಂಬಲಿಸಿದ್ದರಿಂದ ಭಾರತ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಇಂದು ಸೋಂಕು ನಿಯಂತ್ರಣದಲ್ಲಿ ಉತ್ತಮ ಸ್ಥಿತಿಯಲ್ಲಿದೆ ಮತ್ತು ಭಾರತದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸೋಂಕಿನ ತೀವ್ರತೆ ನಿರೀಕ್ಷಿಸಿದ್ದಕ್ಕಿಂತಲೂ ಕಡಿಮೆ ಇದೆ. ಭಾರತದಲ್ಲಿ ಕೋವಿಡ್ ನಿಂದ ಆಗುತ್ತಿರುವ ಸಾವಿನ ಪ್ರಮಾಣ ಪ್ರತಿ ಮಿಲಿಯನ್ ಗೆ 12ಕ್ಕಿಂತಲೂ ಕಡಿಮೆ ಇದೆ. ಆದರೆ ಇಟಲಿಯಲ್ಲಿ ಪ್ರಮಾಣ ಪ್ರತಿ ಮಿಲಿಯನ್ ಗೆ 574 ಇದೆ ಎಂದು ಹೇಳಿದರು. ಅಮೆರಿಕ, ಬ್ರಿಟನ್, ಸ್ಪೇನ್ ಮತ್ತು ಫ್ರಾನ್ಸ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತಕ್ಕಿಂತಲೂ ರಾಷ್ಟ್ರಗಳಲ್ಲಿ ಅಧಿಕ ಸಾವಿನ ಪ್ರಮಾಣಗಳಿವೆ ಎಂದು ಹೇಳಿದ ಅವರು, ಲಕ್ಷಾಂತರ ಗ್ರಾಮಗಳಲ್ಲಿ ಮತ್ತು ಮನೆಗಳಲ್ಲಿರುವ ಸುಮಾರು 85 ಕೋಟಿ ಜನರಿಗೆ ಈವರೆಗೂ ಕೊರೊನಾ ಸೋಂಕು ತಟ್ಟಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು.

ಕೋವಿಡ್-19 ವಿರುದ್ಧ ಹೋರಾಟವನ್ನು ಜನರೇ ಬೆಂಬಲಿಸಿದ್ದಾರೆ. ಅದರಿಂದಾಗಿ ಈವರೆಗೆ ಉತ್ತಮ ಫಲಿತಾಂಶಗಳು ದೊರಕಿವೆ. ಇದೀಗ ನಾವು ನಮ್ಮ ಹೋರಾಟವನ್ನು ನಿಲ್ಲಿಸಬಾರದು ಎಂದು ಅವರು ಹೇಳಿದರು. ಮಾಸ್ಕ್ ಗಳನ್ನು ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಎರಡು ಗಜ ದೂರ ಜನದಟ್ಟಣೆ ಪ್ರದೇಶಗಳಲ್ಲಿ ಓಡಾಡುವುದನ್ನು ತಪ್ಪಿಸಿಕೊಳ್ಳುವುದು ಸೇರಿದಂತೆ ನಾವು ಇನ್ನೂ ಹೆಚ್ಚಿನ ಎಚ್ಚರಿಕೆ ಅಥವಾ ಜಾಗ್ರತೆಯಿಂದ ಇರಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಕಳೆದ ಕೆಲವು ವಾರಗಳಿಂದೀಚೆಗೆ ಆರ್ಥಿಕತೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಪ್ರಕಟಿಸಿದೆ ಎಂದು ಪ್ರಧಾನಿ ಹೇಳಿದರು. ಸಮುದ್ರದಿಂದ ಹಿಡಿದು ಬಾಹ್ಯಾಕಾಶದವರೆಗೆ, ಕೃಷಿಯಿಂದ ಹಿಡಿದು ಕಾರ್ಖಾನೆಯವರೆಗೆ ಹಲವು ವಲಯಗಳಲ್ಲಿ ಅಭಿವೃದ್ಧಿ ಸ್ನೇಹಿ ಮತ್ತು ಜನಸ್ನೇಹಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ಆತ್ಮನಿರ್ಭರ ಭಾರತ, ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ನೀಡಿರುವ ಕರೆಯಿಂದಾಗಿ ದೇಶ ಆರ್ಥಿಕವಾಗಿ ಬಲಾಢ್ಯವಾಗುವುದಲ್ಲದೆ, ಪ್ರತಿಯೊಬ್ಬ ಭಾರತೀಯರೂ ಏಳಿಗೆ ಹೊಂದಲಿದ್ದಾರೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

  • ಆರಂಭಿಸಿದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಕುರಿತಂತೆ ಮಾತನಾಡಿದ ಅವರು, ಯೋಜನೆಯಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದ್ದು, ಇದು ಮೀನುಗಾರಿಕೆ ವಲಯದಲ್ಲಿ ಭಾರೀ ಕ್ರಾಂತಿಯನ್ನು ಉಂಟುಮಾಡಲಿದೆ. ರಫ್ತು ಆದಾಯವನ್ನು ಹೆಚ್ಚಿಸಲಿದೆ ಮತ್ತು ಸುಮಾರು 50 ಲಕ್ಷ ಜನರಿಗೆ ಉದ್ಯೋಗಾವಕಾಶವನ್ನು ಒದಗಿಸಿ ಕೊಡಲಿದೆ ಎಂದು ಹೇಳಿದರು. ಉತ್ತಮ ತಂತ್ರಜ್ಞಾನ ಮತ್ತು ಮೂಲಸೌಕರ್ಯದಿಂದಾಗಿ ನಮ್ಮ ಪೂರೈಕೆ ಸರಣಿ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಅವರು ಹೇಳಿದರು. ನಾನಾ ಯೋಜನೆಗಳ ಲಾಭವನ್ನು ಕೇರಳದ ಮೀನುಗಾರರು ಪಡೆದುಕೊಳ್ಳಲಿದ್ದಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಬಾಹ್ಯಾಕಾಶ ವಲಯದಲ್ಲಿ ಕೈಗೊಂಡ ಐತಿಹಾಸಿಕ ಸುಧಾರಣಾ ಕ್ರಮಗಳಿಂದಾಗಿ ಬಾಹ್ಯಾಕಾಶ ಸ್ವತ್ತು ಮತ್ತು ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದತ್ತಾಂಶ ಮತ್ತು ತಂತ್ರಜ್ಞಾನದ ಲಭ್ಯತೆ ಹೆಚ್ಚಾಗಲಿದೆ ಎಂದು ಅವರು ಹೇಳಿದರು. ಕೇರಳದಲ್ಲಿನ ಹಲವು ಯುವಕರು ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ದಕ್ಷಿಣ ಭಾರತದವರು, ಸುಧಾರಣೆಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳಲಿದ್ದಾರೆ ಎಂದರು.

ಭವಿಷ್ಯದಲ್ಲಿ ಭಾರತವನ್ನು ಅಭಿವೃದ್ಧಿಯ ಇಂಜಿನ್ ಆಗಿ ಪರಿವರ್ತಿಸಲು ಅತ್ಯಂತ ಸೂಕ್ಷ್ಮ ಹಾಗೂ ದೀರ್ಘಾವಧಿಯ ದೂರದೃಷ್ಟಿಯೊಂದಿಗೆ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೆಹಲಿಯ ಸರ್ಕಾರಿ ಕಚೇರಿಗಳಲ್ಲಿ ಆರಾಮಾಗಿ ಕುಳಿತಿರುವ ಅಧಿಕಾರಿಗಳು ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ, ಆದರೆ ತಳಮಟ್ಟದಲ್ಲಿ ಜನರು ನೀಡಿರುವ ಪ್ರತಿಕ್ರಿಯೆಗಳನ್ನು ಆಧರಿಸಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ದೇಶದ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಲಾಗಿದೆ, ಸುಮಾರು 8 ಕೋಟಿ ಕುಟುಂಬಗಳೂ ಹೊಗೆರಹಿತ ಅಡುಗೆ ಕೋಣೆಗಳನ್ನು ಹೊಂದಿದ್ದಾರೆ. ಸುಮಾರು 1.5 ಕೋಟಿ ಕುಟುಂಬಗಳಿಗೆ ವಸತಿ ಕಲ್ಪಿಸಲಾಗಿದೆ. ಅಲ್ಲದೆ ಆಯುಷ್ಮಾನ್ ಭಾರತ್ ಯೋಜನೆ ಅಡಿ ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆಯನ್ನು ಭಾರತದಲ್ಲಿ ಜಾರಿಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಅವರು, ಒಂದು ರಾಷ್ಟ್ರ-ಒಂದು ಕಾರ್ಡ್ ವ್ಯವಸ್ಥೆಯಿಂದಾಗಿ ದೇಶದ ಬಡಜನರು ರಾಷ್ಟ್ರದ ಎಲ್ಲಿ ಬೇಕಾದರೂ ಪಡಿತರ ಪಡೆಯಲು ಅನುಕೂಲವಾಗಿದೆ ಎಂದು ಹೇಳಿದರು. ಮಧ್ಯಮ ವರ್ಗದವರಿಗಾಗಿ ಹಾಗೂ ಅವರ ಜೀವನ ಸುಗಮಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರಿಗೆ, ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಹೆಚ್ಚಳ ಮಾಡಲಾಗಿದೆ ಮತ್ತು ಅವರಿಗೆ ಸೂಕ್ತ ಬೆಲೆ ಸಿಗುವಂತೆ ಮಾಡಲಾಗಿದೆ. ಮಹಿಳೆಯರ ಆರೋಗ್ಯ ರಕ್ಷಣೆಗೆ ಹಲವು ಯೋಜನೆಗಳ ಮೂಲಕ ಹೆಚ್ಚಿನ ಗಮನಹರಿಸಲಾಗಿದ್ದು, ಹೆರಿಗೆ ರಜೆಯನ್ನು ವಿಸ್ತರಣೆ ಮಾಡುವ ಮೂಲಕ ಅವರು ವೃತ್ತಿಬದುಕಿನಲ್ಲಿ ರಾಜೀಯಾಗದಂತೆ ನೋಡಿಕೊಳ್ಳಲಾಗಿದೆ ಎಂದರು.

ಭಾರತ ಸರ್ಕಾರ ಧರ್ಮ,ಲಿಂಗ, ಜಾತಿ, ವರ್ಣ ಅಥವಾ ಭಾಷೆ ಆಧಾರದ ಮೇಲೆ ಯಾವುದೇ ತಾರತಮ್ಯ ಎಸಗುತ್ತಿಲ್ಲ ಮತ್ತು ಭಾರತದ ಸಂವಿಧಾನ ನಮ್ಮ ಮಾರ್ಗದರ್ಶಿ ಸೂತ್ರವಾಗಿದ್ದು, ಅದರಂತೆ ದೇಶದ 130 ಕೋಟಿ ಭಾರತೀಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು.

ನಮ್ಮ ಎಲ್ಲ ಕ್ರಿಯೆಗಳು ರಾಷ್ಟ್ರದ ಅಭ್ಯುದಯಕ್ಕೆ ಕೊಡುಗೆಯನ್ನು ನೀಡಲಿವೆ ಎಂದವರು ಹೇಳಿದರು. ಇಂದು ಭಾರತ, ನಾವು ಸ್ಥಳೀಯವಾಗಿಯೇ ಉತ್ಪತ್ತಿ ಮಾಡುತ್ತೇವೆ ಮತ್ತು ಸ್ಥಳೀಯ ವಸ್ತುಗಳನ್ನೇ ಖರೀದಿಸುತ್ತೇವೆ ಎಂದು ಹೇಳುತ್ತಿದೆ. ಇದು ಹಲವು ಮನೆಗಳ ಏಳಿಗೆಗೆ ಜ್ಯೋತಿಯಾಗಿ ಬೆಳೆಗಲಿದೆ ಎಂದು ಅವರು ಹೇಳಿದರು.

ಹಿನ್ನೆಲೆ:

ಮಲಂಕರ ಮಾರ್ ಥೋಮಾ ಸಿರಿಯನ್ ಚರ್ಚ್ ಅನ್ನು ಮಾರ್ ಥೋಮಾ ಚರ್ಚ್ ಎಂದು ಕರೆಯಲಾಗುತ್ತಿದ್ದು, ಇದು ಕೇರಳದ ಪುರಾತನ ಮತ್ತು ಸ್ವದೇಶಿ ಚರ್ಚ್ ಆಗಿದೆ. 52ನೇ .ಡಿಯಲ್ಲಿ ಜೀಸಸ್ ಕ್ರೈಸ್ತನ ಅನುಯಾಯಿ ಸೆಂಟ್ ಥಾಮಸ್ ಭಾರತಕ್ಕೆ ಬಂದಾಗ ಚರ್ಚ್ ಅನ್ನು ಸ್ಥಾಪಿಸಿದರು ಎಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ. ಚರ್ಚ್ ನೇತೃತ್ವವನ್ನು ಪ್ರಸ್ತುತ 21ನೇ ಮಲಂಕರ ಮೆಟ್ರೊಪಾಲಿಟನ್, ರೆವರೆಂಡ್. ಜೊಸೆಫ್ ಮಾರ್ ಥೋಮಾ ಅವರು ವಹಿಸಿದ್ದಾರೆ, 13 ವರ್ಷಗಳ ಹಿಂದೆ ಅವರ ಚರ್ಚ್ ನೇತೃತ್ವವನ್ನು ವಹಿಸಿಕೊಂಡಿದ್ದರು. ಮಾರ್ ಥೋಮಾ ಚರ್ಚ್, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಜೊತೆಗೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮತ್ತು ಆನಂತರ ತುರ್ತು ಪರಿಸ್ಥಿತಿ ವೇಳೆ ರಾಷ್ಟ್ರೀಯತೆಯ ಭಾವನೆಗಳನ್ನು ಉತ್ತೇಜಿಸಿತು. ಮಾನವೀಯ ಸೇವೆಗೆ ಬದ್ಧವಾಗಿರುವ ಚರ್ಚ್, ಹಲವು ಸಾಮಾಜಿಕ ಕಲ್ಯಾಣ ಸಂಸ್ಥೆಗಳು, ನಿರಾಶ್ರಿತರ ಕೇಂದ್ರಗಳು, ಆಸ್ಪತ್ರೆಗಳು, ಕಾಲೇಜುಗಳು, ಶಾಲೆಗಳು ಮತ್ತು ತಾಂತ್ರಿಕ ಸಂಸ್ಥೆಗಳನ್ನು ನಡೆಸುತ್ತಿದೆ. ಭೂಕಂಪ, ಪ್ರವಾಹ, ಸುನಾಮಿ ಮತ್ತಿತರ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಚರ್ಚ್ ಹಲವು ರಾಜ್ಯಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಚಟುವಟಿಕೆಗಳಲ್ಲಿ ಭಾಗಿಯಾಗಿದೆ.

***


(Release ID: 1655055) Visitor Counter : 244