ಪ್ರಧಾನ ಮಂತ್ರಿಯವರ ಕಛೇರಿ
ವಿಡಿಯೋ ಕಾನ್ಫೆರೆನ್ಸ್ ಮೂಲಕ ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ ಗಾರ್ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಭಾಷಣ
Posted On:
20 JUN 2020 2:29PM by PIB Bengaluru
ಸ್ನೇಹಿತರೆ,
ನಮಸ್ಕಾರ! ನಿಮ್ಮೊಂದಿಗೆ ಮಾತನಾಡುವ ಅವಕಾಶ ನನಗೆ ಲಭಿಸದೆ. ನಮ್ಮ ಎಲ್ಲರ ವೈಯಕ್ತಿಕ ಜೀವನದಲ್ಲಿ ಅದೆಷ್ಟೋ ಏಳು ಬೀಳುಗಳಿವೆ. ನಮ್ಮ ಸಾಮಾಜಿಕ ಜೀವನದಲ್ಲೂ, ನಮ್ ಗ್ರಾಮ ಮತ್ತು ನಗರಗಳಲ್ಲಿ ವಿಭಿನ್ನ ಬಗೆಯ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನಿನ್ನೆ ಸಿಡಿಲು ಬಡಿದಿರುವುದು ನಿಮಗೆಲ್ಲ ತಿಳಿದಿರಬೇಕು. ಬಿಹಾರ ಮತ್ತು ಉತ್ತರ ಪ್ರದೇಸದಲ್ಲಿ ಬಹಳಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಯಾರೂ ಇಂಥ ದೊಡ್ಡ ಬಿಕ್ಕಟ್ಟು, ಎಂಥ ಬಿಕ್ಕಟ್ಟೆಂದರೆ ಯಾರೂ ಬಯಸಿಯೂ ಮತ್ತೊಬ್ಬರಿಗೆ ಮುಕ್ತವಾಗಿ ಸಹಾಯ ಮಾಡಲು ಆಗದಿರುವಂಥದ್ದು, ಮಾನವ ಕುಲಕ್ಕೆ ಬಂದೆರಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಈ ಕಾಲಘಟ್ಟದಲ್ಲಿ ಸಮಸ್ಯೆಗಳನ್ನೇ ಎದುರಿಸದವರು ಬಹುಶಃ ಯಾರೊಬ್ಬರೂ ಇಲ್ಲ.
ಅವರು ಮಕ್ಕಳೇ ಆಗಿರಲಿ, ಹಿರಿಯರೇ ಆಗಿರಲಿ, ಮಹಿಳೆ, ಪುರುಷರಾಗಿರಲಿ, ದೇಶ ಅಥವಾ ವಿಶ್ವವಾಗಲಿ ಎಲ್ಲರೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭವಿಷ್ಯದಲ್ಲಿ ಯಾವಾಗ ಈ ರೋಗದಿಂದ ಮುಕ್ತಿ ದೊರೆಯುವುದು ಎಂಬುದು ಇಲ್ಲಿವರೆಗೂ ನಮಗೆ ಗೊತ್ತಿಲ್ಲ. ಹೌದು, ನಾವು ಪರಿಹಾರದ ಬಗ್ಗೆ ಅರಿತಿದ್ದೇವೆ, ಅದು, 2 ಗಜ ಅಂತರ, ಅಥವಾ ಸಾಮಾಜಿಕ ದೂರ ಕಾಯ್ದುಕೊಳ್ಳುವುದು ಮತ್ತು ಮುಖಗವಸು ಧರಿಸುವುದು ಅಥವಾ ಬಟ್ಟೆಯಿಂದ ಮುಖ ಮುಚ್ಚಿಕೊಳ್ಳುವುದು. ಕೊರೊನಾ ವೈರಾಣುವಿಗೆ ಲಸಿಕೆ ಅಭಿವೃದ್ಧಿಪಡಿಸುವವರೆಗೆ ಈ ಪರಿಹಾರಗಳ ಮೂಲಕ ನಾವು ಹೋರಾಡಲು ಶಕ್ತರಾಗಿದ್ದೇವೆ.
ಸ್ನೇಹಿತರೆ,
ಇಂದು, ನೀವು ನನ್ನೊಂದಿಗೆ ಮಾತನಾಡುತ್ತಿರುವಾಗ ನಿಮ್ಮ ಮುಖದ ಮೇಲೆ ಆನಂದವನ್ನು ಕಾಣಬಹುದಾಗಿದೆ, ನಿಮ್ಮ ಕಣ್ಣುಗಳಲ್ಲಿನ ಭಾವನೆಗಳನ್ನು ಮತ್ತು ನಿಮ್ಮ ಪ್ರೀತಿಯನ್ನು ಕಾಣಬಹುದಾಗಿದೆ. ಜನಪ್ರೀಯ ಮತ್ತು ಉತ್ಸಾಹಭರಿತ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಸರ್ಕಾರದ ಸಚಿವರುಗಳು, ಆಡಳಿತದೊಂದಿಗೆ ಕೈಜೋಡಿಸಿರುವ ಅಧಿಕಾರಿಗಳು ಮತ್ತು ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ನಮ್ಮ ಸ್ನೇಹಿತರೂ ಕೂಡ ಇಲ್ಲಿ ಹಾಜರಿದ್ದಾರೆ.
ನಾವೆಲ್ಲರೂ ಕಾಯಕದ ಶಕ್ತಿಯನ್ನು ಮನಗಂಡಿದ್ದೇವೆ. ಭಾರತ ಸರ್ಕಾರ ಆರಂಭಿಸಿದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್ ಗಾರ್ ಅಭಿಯಾನ ಈ ಕಾಯಕದ ಶಕ್ತಿಗೆ ವೇದಿಕೆಯನ್ನು ಕಲ್ಪಿಸಿದೆ. ಇಂದು ಇದೇ ಶಕ್ತಿ ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ ಗಾರ್ ಅಭಿಯಾನಕ್ಕೂ ಪ್ರೇರಣೆ ನೀಡಿದೆ. ಅಂದರೆ ಯೋಗಿಯವರ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಯನ್ನು ಗುಣಮಟ್ಟದ ರೂಪದಲ್ಲಿ ಮತ್ತು ಪ್ರಮಾಣದ ರೂಪದಲ್ಲೂ ಯಶಸ್ವಿಯಾಗಿ ಅಳವಡಿಸಿಕೊಂಡಿದೆ.
ಈ ಯೋಜನೆಗೆ ಹಲವಾರು ಹೊಸ ಯೋಜನೆಗಳನ್ನೂ ಸೇರುವುದರ ಜೊತೆಗೆ ಉತ್ತರ ಪ್ರದೇಶ ಸರ್ಕಾರ ಫಲಾನುಭವಿಗಳ ಸಂಖ್ಯೆಯನ್ನೂ ಹೆಚ್ಚಿಸಿದೆ. ಆದರೆ ಸಂಪೂರ್ಣವಾಗಿ ಸ್ವಾವಲಂಬಿ ಭಾರತದ ಗುರಿಯನ್ನು ಸಾಧಿಸುವಲ್ಲಿ ಸಂಪೂರ್ಣ ತೊಡಗಿಕೊಂಡಿದೆ. ನಾನು ಯಾವಾಗಲೂ ಉಲ್ಲೇಖಿಸುವಂತಹ ಡಬಲ್ ಇಂಜಿನ್ ಗಳಿಗೆ ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ ಗಾರ್ ಅಭಿಯಾನ ಅತ್ಯುತ್ತಮ ಉದಾಹರಣೆಯಾಗಿದೆ. ಯೋಗಿಯವರ ನಾಯಕತ್ವದಲ್ಲಿ ಹೇಗೆ ಅವರ ತಂಡ ಸಂಪೂರ್ಣ ಶೃದ್ಧೆಯಿಂದ ಕೆಲಸ ಮಾಡಿ ಸಂಕಷ್ಟವನ್ನು ಅವಕಾಶವನ್ನಾಗಿ ಪರಿವರ್ತಿಸಿದೆಯೋ ಅದೇ ರೀತಿ ಈ ಯೋಜನೆಯಿಂದ ಇತರ ರಾಜ್ಯಗಳೂ ಬಹಳಷ್ಟು ಕಲಿಯಲಿವೆ ಎಂದು ನನಗೆ ವಿಶ್ವಾಸವಿದೆ. ಎಲ್ಲರೂ ಅದರಿಂದ ಪ್ರೇರಿತರೂ ಆಗಲಿದ್ದಾರೆ.
ಇಂಥ ಯೋಜನೆಗಳೊಂದಿಗೆ ಇತರ ರಾಜ್ಯಗಳೂ ಮುಂದೆ ಬರಲಿವೆ ಎಂದು ನಾನು ಆಶಿಸುತ್ತೇನೆ. ಅಲ್ಲದೆ ನಾನು ಉತ್ತರ ಪ್ರದೇಶದಿಂದ ಆಯ್ಕೆಯಾದ ಸಂಸತ್ ಸದಸ್ಯನೂ ಹೌದು. ಉತ್ತರ ಪ್ರದೇಶ ಇಂಥ ಉತ್ತಮ ಕೆಲಸಗಳನ್ನು ಮಾಡಿದಾಗ ನನಗೆ ಅತೀವ ಸಂತೋಷವಾಗುತ್ತದೆ ಮತ್ತು ತೃಪ್ತಿಯೆನಿಸುತ್ತದೆ. ಏಕೆಂದರೆ ನನ್ನ ಮೇಲೂ ಇಲ್ಲಿಯ ಜನತೆಯ ಜವಾಬ್ದಾರಿಯಿದೆ.
ಸ್ನೇಹಿತರೆ,
ಬಿಕ್ಕಟ್ಟಿನ ಸಮಯದಲ್ಲಿ ಯಾರು ಧೈರ್ಯ ಮತ್ತು ಬುದ್ಧಿಮತ್ತೆಯನ್ನು ಮೆರೆಯುತ್ತಾರೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇಂದು ಕೊರೊನಾ ವೈರಾಣುವಿನಿಂದಾಗಿ ವಿಶ್ವವೇ ಬಹುದೊಡ್ಡ ಬಿಕ್ಕಟ್ಟಿನ ಸ್ಥಿತಿಯಲ್ಲಿರುವಾಗ, ಉತ್ತರ ಪ್ರದೇಶ ಸರ್ಕಾರ ತೋರಿರುವ ಧೈರ್ಯ ಮತ್ತು ಬುದ್ಧಿಮತ್ತೆ ಹಾಗೂ ಯಶಸ್ವಿಯಾಗಿ ಪರಿಸ್ಥಿತಿಯನ್ನು ನಿಭಾಯಿಸಿರುವುದು ಖಂಡಿತ ಪ್ರಶಂಸನಾರ್ಹವಾದುದು.
ಇದಕ್ಕಾಗಿ, ಉತ್ತರ ಪ್ರದೇಶದ 24 ಕೋಟಿ ಜನತೆಗೆ ನಾನು ಅಭಿನಂದಿಸುತ್ತೇನೆ. ನಾನವರಿಗೆ ವಂದಿಸುತ್ತೇನೆ! ನೀವು ಮಾಡಿದ ಕೆಲಸ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಉತ್ತರ ಪ್ರದೇಶದ ಅಂಕಿ ಅಂಶಗಳು ವಿಶ್ವದ ಮೇಧಾವಿಗಳನ್ನೇ ಚಕಿತಗೊಳಿಸುವಂಥದ್ದು. ಅದು ಉತ್ತರ ಪ್ರದೇಶದ ವೈದ್ಯರಾಗಲಿ, ಅರೆ ವೈದ್ಯಕೀಯ ಸಿಬ್ಬಂದಿಯಾಗಲಿ, ಸ್ವಚ್ಛತಾ ಕರ್ಮಿಗಳಾಗಲಿ, ಪೋಲಿಸರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬ್ಯಾಂಕ್ ಮತ್ತು ಅಂಚೆ ಕಛೇರಿ ಸಿಬ್ಬಂದಿ, ಸಂಚಾರ ವಿಭಾಗದವರು ಅಥವಾ ನನ್ನ ಕೆಲಸಗಾರ ಸಿಬ್ಬಂದಿ ಪ್ರತಿಯೊಬ್ಬರೂ ಸಂಪೂರ್ಣ ಶೃದ್ಧೆಯಿಂದ ಪಾಲ್ಗೊಂಡಿದ್ದಾರೆ.
ಯೋಗಿಯವರು ಮತ್ತು ಸಂಪೂರ್ಣ ತಂಡ, ಅವರು ಜನಪ್ರತಿನಿಧಿಗಳಾಗಿರಲಿ ಅಥವಾ ಅಧಿಕಾರಿಗಳಾಗಿರಲಿ ಪ್ರತಿಯೊಬ್ಬರೂ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ನೀವೆಲ್ಲರೂ ಸೇರಿ ಉತ್ತರ ಪ್ರದೇಶದಲ್ಲಿ ಒಗ್ಗೂಡಿ ಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಪ್ರತಿ ಮಗುವೂ ಮತ್ತು ಉತ್ತರ ಪ್ರದೇಶದ ಪ್ರತಿ ಕುಟುಂಬ ಮುಂಬರುವ ಹಲವಾರು ವರ್ಷಗಳವರೆಗೆ ಅತ್ಯಂತ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತದೆ.
ಸ್ನೇಹಿತರೆ,
ಒಂದು ರಾಜ್ಯವಾಗಿ ಉತ್ತರ ಪ್ರದೇಶದ ಸಾಧನೆ ಅತ್ಯಂತ ದೊಡ್ಡದು ಮಾತ್ರವಲ್ಲ ಅದು ವಿಶ್ವದ ಬಹಳಷ್ಟು ರಾಷ್ಟ್ರಗಳಿಗಿಂತಲೂ ಬೃಹತ್ತಾಗಿ ಬೆಳೆದುನಿಂತಿದೆ. ಉತ್ತರ ಪ್ರದೇಶದ ಜನತೆ ಸ್ವತಃ ಸಾಧನೆಯನ್ನು ಅನುಭವಿಸುತ್ತಿದ್ದಾರೆ ಆದರೆ ನಿಮಗೆ ಅಂಕಿ ಅಂಶಗಳ ಬಗ್ಗೆ ತಿಳಿದರೆ ಇನ್ನೂ ಆಶ್ಚರ್ಯಪಡುತ್ತೀರಿ!
ಸ್ನೇಹಿತರೆ,
ನಾವು ಯುರೋಪ್ ನ ಬೃಹತ್ ರಾಷ್ಟ್ರಗಳಾದ, ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮತ್ತು ಸ್ಪೇನ್ ನೋಡಿದಾಗ 200- 250 ವರ್ಷಗಳವರೆಗೆ ಇವು ಸೂಪರ್ ಪವರ್ ದೇಶಗಳೆಂದು ಪರಿಗಣಿಸಲಾಗುತ್ತಿತ್ತು! ಇಂದಿಗೂ ಅವು ವಿಶ್ವದಲ್ಲಿ ಅಗ್ರಸ್ಥಾನದಲ್ಲಿವೆ! ಇಂದು ಈ ನಾಲ್ಕು ರಾಷ್ಟ್ರಗಳ ಒಟ್ಟು ಜನಸಂಖ್ಯೆಯನ್ನು ಒಗ್ಗೂಡಿಸಿದರೆ ಸುಮಾರ 24 ಕೋಟಿಯಿದೆ! ಕೇವಲ ಉತ್ತರ ಪ್ರದೇಶದ ಜನಸಂಖ್ಯೆ 24 ಕೋಟಿಯಷ್ಟಿದೆ! ಇದು ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮತ್ತು ಸ್ಪೇನ್ ಈ ನಾಲ್ಕು ರಾಷ್ಟ್ರಗಳ ಜನಸಂಖ್ಯೆ ಉತ್ತರ ಪ್ರದೇಶದ ಜನಸಂಖ್ಯೆಗೆ ಸಮ. ಆದರೆ ಈ ನಾಲ್ಕು ರಾಷ್ಟ್ರಗಳಲ್ಲಿ ಕೊರೊನಾ ವೈರಾಣುಗೆ ಬಲಿಯಾದವರ ಸಂಖ್ಯೆ 1 ಲಕ್ಷ 30 ಸಾವಿರ ಜನರು, ಆದರೆ ಉತ್ತರ ಪ್ರದೇಶದಲ್ಲಿ ಕೇವಲ 600 ಜನರು ಬಲಿಯಾಗಿದ್ದಾರೆ. ಕೇವಲ ಒಬ್ಬ ವ್ಯಕ್ತಿಯ ಮರಣವೂ ದುಖಃದಾಯಕ ಎಂದು ನಾನು ನಂಬುತ್ತೇನೆ.
ಆದರೆ ಈ ನಾಲ್ಕು ರಾಷ್ಟ್ರಗಳು ಒಗ್ಗೂಡಿ ಮಾಡಿದ ಪ್ರಯತ್ನದ ಹೊರತಾಗಿಯೂ ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಈ ನಾಲ್ಕು ರಾಷ್ಟ್ರಗಳಲ್ಲಿ ಮರಣ ಪ್ರಮಾಣ ಹಲವು ಪಟ್ಟು ಹೆಚ್ಚಾಗಿದೆ ಎಂಬುದನ್ನು ನಾವು ಒಪ್ಪಲೇಬೇಕು. ಈ ರಾಷ್ಟ್ರಗಳು ಸಾಕಷ್ಟು ಅಭಿವೃದ್ಧಿ ಹೊಂದಿದಂತಹವು: ಅವು ಹೆಚ್ಚು ಸಂಪನ್ಮೂಲಗಳನ್ನೂ ಹೊಂದಿವೆ ಮತ್ತು ಸರ್ಕಾರ ಸಂಪೂರ್ಣ ಪರಿಶ್ರಮವಹಸಿದೆ! ಆದರೂ ಜನರ ಜೀವ ಕಾಪಾಡುವಲ್ಲಿ ಉತ್ತರ ಪ್ರದೇಶ ಸಾಧಿಸಿರುವುದನ್ನು ಅವು ಸಾಧಿಸಲಾಗಿಲ್ಲ.
ಸ್ನೇಹಿತರೆ,
ನಿಮ್ಮಲ್ಲಿ ಹೆಚ್ಚಿನವರು ಅಮೇರಿಕದ ಪರಿಸ್ಥಿತಿ ಬಗ್ಗೆ ಕೇಳಿರಬಹುದು! ಅಮೇರಿಕದಲ್ಲಿ ಸಂಪನ್ಮೂಲಗಳು ಮತ್ತು ಆಧುನಿಕ ತಖತ್ರಜ್ಞಾನದ ಕೊರತೆಯೇನೂ ಇಲ್ಲ. ಆದರೂ, ಇಂದು ಕೊರೊನಾದಿಂದ ಅಮೇರಿಕ ಬಹುವಾಗಿ ಬಾಧಿತವಾಗಿದೆ! ಅಮೇರಿಕದ ಜನಸಂಖ್ಯೆ 33 ಕೋಟಿಯೆಂಬುದೂ ನಿಮಗೆ ನೆನಪಿರಬಹುದು, ಉತ್ತರ ಪ್ರದೇಶದ ಜನಸಂಖ್ಯೆ 24 ಕೋಟಿಯಷ್ಟಿದೆ! ಆದರೆ ಅಮೇರಿಕದಲ್ಲಿ, 1 ಲಕ್ಷ 25 ಸಾವಿರ ಜನರು ಇಲ್ಲಿವರೆಗೆ ಅಸುನೀಗಿದ್ದಾರೆ, ಆದರೆ ಉತ್ತರ ಪ್ರದೇಶದಲ್ಲಿ ಸುಮಾರು 600 ಜನರು ಮೃತಪಟ್ಟಿದ್ದಾರೆ.
ಅಮೇರಿಕದಂತೆ ಉತ್ತರ ಪ್ರದೇಶದಲ್ಲಿ ಆಘಾತಕಾರಿ ಪರಿಸ್ಥಿತಿಯಿದ್ದರೆ ಯೋಗಿಯವರ ಉತ್ತರ ಪ್ರದೇಶ ಸರ್ಕಾರ ಸೂಕ್ತ ಸಿದ್ಧತೆಗಳನ್ನು ಮಾಡಲಾಗುತ್ತಿರಲಿಲ್ಲ ಆಗ ಉತ್ತರ ಪ್ರದೇಶ 600 ರ ಬದಲಾಗಿ 85,000 ಜನರನ್ನು ಕಳೆದುಕೊಳ್ಳಬೇಕಾಗುತ್ತಿತ್ತು. ಆದರೆ ಉತ್ತರ ಪ್ರದೇಶ ಸರ್ಕಾರ ಮಾಡಿದ ಅವಿರತ ಶ್ರಮ ಒಂದು ರೀತಿಯಲ್ಲಿ 85,000 ಜನರ ಜೀವ ಉಳಿಸಿದೆ. ಇಂದು ನಾವು ನಮ್ಮ ನಾಗರಿಕರ ಜೀವ ಉಳಿಸಲು ಸಾಧ್ಯವಾಗಿದೆ ಎಂದರೆ ಅದು ನಿಜಕ್ಕೂ ಅತ್ಯಂತ ತೃಪ್ತಿದಾಯಕ ಕೆಲಸವಾಗಿದೆ. ಇದು ದೇಶದಲ್ಲಿ ಆತ್ಮವಿಶ್ವಾಸದ ಅಲೆ ಎಬ್ಬಿಸಿದೆ! ಇಲ್ಲದಿದ್ದಲ್ಲಿ ಅಂದು ಅಲಹಾಬದ್ ಎಂದು ಕರೆಯಲ್ಪಡುತ್ತಿದ್ದ ಪ್ರಯಾಗ್ ರಾಜ್ ನ ಒಬ್ಬ ಎಂ ಪಿ ದೇಶದ ಪ್ರಧಾನಿಯಾಗಿದ್ದಾಗ ಮತ್ತು ಕುಂಭ ಮೇಳ ಸಂದರ್ಭದಲ್ಲಿಯ ಕಾಲ್ತುಳಿತದಲ್ಲಿ ನೂನಾರು ಸಾವಿರಾರು ಜನರು ಸಾವನ್ನಪ್ಪಿದ್ದರು. ಆಗ ಸರ್ಕಾರದಲ್ಲಿದ್ದ ಜನರು ಸಾವಿನ ಸಂಖ್ಯೆಯನ್ನು ಬಚ್ಚಿಡುವುದರತ್ತಲ್ಲೇ ತಮ್ಮೆಲ್ಲ ಸಮಯವನ್ನು ಮತ್ತು ಗಮನವನ್ನು ಹರಿಸಿತ್ತು. ಈಗ ನಿಜಕ್ಕೂ ಉತ್ತರ ಪ್ರದೇಶದ ಜನತೆ ಸುರಕ್ಷಿತವಾಗಿದ್ದಾರೆ ಎಂದು ತಿಳಿಯಲು ಬಹಳ ಸುಖಕರವೆನಿಸುತ್ತದೆ.
ಸ್ನೇಹಿತರೆ,
ನಾವು ಇನ್ನೊಂದು ವಿಷಯವನ್ನು ಯಾವಾಗಲೂ ನೆನಪಿಡಬೇಕು. ಕಳೆದ ಕೆಲವು ವಾರಗಳಿಂದ ದೇಶಾದ್ಯಂತದಿಂದ ಉತ್ತರ ಪ್ರದೇಶದಲ್ಲಿ 30 – 35 ಲಕ್ಷಕ್ಕೂ ಹೆಚ್ಚು ವಲಸಿಗರು ಮತ್ತು ಕಾರ್ಮಿಕರು ತಂತಮ್ಮ ಗ್ರಾಮಗಳಿಗೆ ಮರಳುತ್ತಿರುವಾಗ ಇದನ್ನು ಕಾರ್ಯಗತಗೊಳಿಸಲಾಯಿತು. ನೂರಾರು ಶ್ರಮಿಕ್ ರೈಲುಗಳ ಸಂಚಾರದ ಮೂಲಕ ಸಂಕಷ್ಟದಲ್ಲಿ ಸಿಲುಕಿದ್ದ ಜನರನ್ನು ಉತ್ತರ ಪ್ರದೇಶ ಸರ್ಕಾರ ಮರಳಿ ಕರೆತಂದಿದೆ. ಬೇರೆ ರಾಜ್ಯಗಳಿಂದ ಹಿಂತಿರುಗುತ್ತಿದ್ದ ಈ ಸ್ನೇಹಿತರಿಂದ ಸೋಂಕು ಹರಡುವ ಸಂಭವ ಮತ್ತಷ್ಟು ಹೆಚ್ಚಾಗಿತ್ತು. ಆದರೆ ಉತ್ತರ ಪ್ರದೇಶ ಪರಿಸ್ಥಿತಿಯನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿದೆ, ರಾಜ್ಯವನ್ನು ಪ್ರಮುಖ ಬಿಕ್ಕಟ್ಟಿನಿಂದ ಹೊರತಂದಿದೆ.
ಸ್ನೇಹಿತರೆ,
2017 ಕ್ಕೂ ಮುಂಚೆ ಉತ್ತರ ಪ್ರದೇಶದಲ್ಲಿ ಸರ್ಕಾರವನ್ನು ನಡೆಸುತ್ತಿದ್ದ ರೀತಿ, ಆ ಪರಿಸ್ಥಿತಿಗಳಲ್ಲಿ ಇಂತಹ ಫಲಿತಾಂಶಗಳನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಸೀಮಿತ ಆಸ್ಪತ್ರೆಗಳು ಮತ್ತು ಸೀಮಿತ ಸಂಖ್ಯೆಯ ಹಾಸಿಗೆಗಳಿರುವ ನೆಪವೊಡ್ಡಿ ಹಿಂದಿನ ಸರ್ಕಾರ ಈ ಸವಾಲನ್ನು ಎದುರಿಸುವುದರಿಂದ ನುಣುಚಿಕೊಳ್ಳಬಹುದಿತ್ತು ಆದರೆ ಯೋಗಿಯವರು ಹಾಗೆ ಮಾಡಲಿಲ್ಲ. ಯೋಗಿಯವರು ಮತ್ತು ಅವರ ಸರ್ಕಾರ ಪರಿಸ್ಥಿತಿಯ ಗಂಭೀರತೆಯನ್ನು ಅರಿತಿತ್ತು. ವಿಶ್ವದ ಅತಿ ದೊಡ್ಡ ದೇಶಕ್ಕೆ ಏನಾಗುತ್ತಿದೆ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಅವರು ಮತ್ತು ಅವರ ಸರ್ಕಾರ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅದು ಕ್ವಾರೆಂಟೀನ್ ಕೇಂದ್ರಗಳಾಗಿರಲಿ ಅಥವಾ ಐಸೋಲೇಶನ್ ಸೌಲಭ್ಯವಾಗಿರಲಿ ಅವುಗಳ ಸಂಪೂರ್ಣ ನಿರ್ಮಾಣದತ್ತ ಸಂಪೂರ್ಣ ಗಮನ ಕೇಂದ್ರೀಕರಿಸಲಾಗಿತ್ತು. ತಮ್ಮ ತಂದೆಯವರ ಮರಣದ ಹೊರತಾಗಿಯೂ ಅವರ ಅಂತ್ಯಕ್ರಿಯೆಗೂ ತೆರಳದೇ ಯೋಗಿಯವರು ಕೊರೊನಾ ವೈರಾಣು ಸಾಂಕ್ರಾಮಿಕದಿಂದ ರಕ್ಷಿಸಲು ಉತ್ತರ ಪ್ರದೇಶದ ಜನತೆಯ ಜೊತೆಗಿದ್ದರು. ಹೊರಗಿನಿಂದ ಬರುವ ಕಾರ್ಮಿಕರಿಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ 60 ಸಾವಿರ ಗ್ರಾಮ ನಿಗಾವಣೆ ಸಮೀತಿಗಳನ್ನು ರಚಿಸಲಾಯಿತು. ಗ್ರಾಮಗಳಲ್ಲಿ ಕ್ವಾರೆಂಟೀನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಈ ಸಮೀತಿ ಸಹಾಯ ಮಾಡಿತು. ಎರಡೂವರೆ ತಿಂಗಳಿನಲ್ಲಿ ಉತ್ತರ ಪ್ರದೇಶದಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಒಂದು ಲಕ್ಷ ಹಾಸಿಗೆಗಳನ್ನು ಸಜ್ಜುಗೊಳಿಸಲಾಯಿತು.
ಸ್ನೇಹಿತರೆ,
ಲಾಕ್ ಡೌನ್ ಸಮಯದಲ್ಲಿ ಬಡವರಿಗೆ ಆಹಾರದ ಕೊರತೆಯಾಗದಂತೆ ಯೋಗಿಯವರ ಸರ್ಕಾರ ಕೆಲಸ ಮಾಡಿದ ರೀತಿಯೂ ಅಭೂತಪೂರ್ವವಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಉತ್ತರ ಪ್ರದೇಶ ಬಡವರಿಗೆ ಮತ್ತು ಮರಳಿ ಬಂದ ವಲಸೆ ಕಾರ್ಮಿಕರಿಗೆ ಅತೀ ಕಡಿಮೆ ಸಮಯದಲ್ಲಿ ಉಚಿತವಾಗಿ ಪಡಿತರ ವಿತರಿಸಿದೆ. ಇದರರ್ಥ ಯಾರೂ ಉಪವಾಸ ಮಲಗದಂತೆ 15 ಕೋಟಿ ಬಡವರು ಆಹಾರದ ಕೊರತೆಯನ್ನು ಎದುರಿಸದಂತೆ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಈ ಅವಧಿಯಲ್ಲಿ, ಉತ್ತರ ಪ್ರದೇಶದಲ್ಲಿ ಬಡವರಿಗೆ 42 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ವಿತರಣೆ ಮಾಡಲಾಯಿತು. ಪಡಿತರ ಚೀಟಿ ಇಲ್ಲದವರಿಗೂ ಸರ್ಕಾರದ ಪಡಿತರ ಅಂಗಡಿಗಳ ಬಾಗಿಲುಗಳನ್ನು ಸರ್ಕಾರ ಮುಕ್ತವಾಗಿರಿಸಿತ್ತು. ಇಷ್ಟೇ ಅಲ್ಲದೆ, ರೂ 5000 ಕೋಟಿಯನ್ನು ಉತ್ತರ ಪ್ರದೇಶದ 3.25 ಕೋಟಿ ಬಡ ಮಹಿಳೆಯರ ಜನ್ ಧನ್ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ. ಬಹುಶಃ ಭಾರತ ಸ್ವಾತಂತ್ರ್ಯಾ ನಂತರ ಯಾವುದೇ ಸರ್ಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಡವರಿಗೆ ಸಹಾಯ ಮಾಡಿರಲಿಕ್ಕಿಲ್ಲ.
ಭಾರತವನ್ನು ಸ್ವಾವಲಂಬನೆಯ ಹಾದಿಯಲ್ಲಿ ವೇಗವಾಗಿ ಕೊಂಡೊಯ್ಯುವ ಅಭಿಯಾನವಾಗಲಿ ಅಥವಾ ಗರೀಬ್ ಕಲ್ಯಾಣ್ ರೋಜ್ ಗಾರ್ ಅಭಿಯಾನವೇ ಆಗಿರಲಿ, ಈ ನಿಯತಾಂಕಗಳಲ್ಲೂ ಉತ್ತರ ಪ್ರದೇಶ ವೇಗವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಗರೀಬ್ ಕಲ್ಯಾಣ್ ರೋಜ್ ಗಾರ್ ಅಭಿಯಾನದ ಅಡಿಯಲ್ಲಿ, ಕಾರ್ಮಿಕರ ಆದಾಯವನ್ನು ಹೆಚ್ಚಿಸಲು ಗ್ರಾಮಗಳಲ್ಲಿ ಅನೇಕ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಪಕ್ಕಾ ಮನೆಗಳ ನಿರ್ಮಾಣ, ಸಮುದಾಯ ಸೌಚಾಲಯಗಳ ನಿರ್ಮಾಣ, ಪಂಚಾಯತ್ ಕಟ್ಟಡಗಳ ಕಾಮಗಾರಿ, ಬಾವಿಗಳು ಮತ್ತು ಹೊಂಡಗಳ ನಿರ್ಮಾಣ, ಅಂತರ್ಜಾಲ ಮಾರ್ಗಗಳು ಇತ್ಯಾದಿಯಂತಹ, 25 ಕಾರ್ಯಗಳ ಪಟ್ಟಿಯನ್ನು ಬಡವರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಸಿದ್ಧಪಡಿಸಿದೆ.
ಇಂದು, ಸ್ವಾವಲಂಬಿ ಭಾರತ ಅಭಿಯಾನ ಸೇರಿದಂತೆ, ಈ ಕಾರ್ಯವನ್ನು ಮುಂದೆ ಕೊಂಡೊಯ್ಯಲು, ಸುಮಾರು 1.25 ಕೋಟಿ ಕಾರ್ಮಿಕರು ಉದ್ಯೋಗ ಒದಗಿಸಲು ಉತ್ತರ ಪ್ರದೇಶ ಸರ್ಕಾರ ನೇರವಾಗಿ ಪ್ರಯತ್ನಿಸುತ್ತಿದೆ. ಇವುಗಳ ಪೈಕಿ, ಸುಮಾರು 60 ಲಕ್ಷ ಕಾರ್ಮಿಕರಿಗೆ ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಉದ್ಯೋಗ ನೀಡಲಾಗಿದ್ದರೆ, ಸುಮಾರು 40 ಲಕ್ಷ ಜನರಿಗೆ, ಎಂ ಎಸ್ ಎಂ ಇ ಗಳಂತಹ ಸಣ್ಣ ಕೈಗಾರಿಕೆಗಳಲ್ಲಿ ಉದ್ಯೋಗ ನೀಡಲಾಗುತ್ತಿದೆ. ಇದರ ಜೊತೆಗೆ, ಸಾವಿರಾರು ಉದ್ಯಮಿಗಳ ಸ್ವಯಂ ಉದ್ಯೋಗಕ್ಕಾಗಿ ಮುದ್ರಾ ಯೋಜನೆಯಡಿಯಲ್ಲಿ, 10 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ನಿಗದಿಪಡಿಸಲಾಗಿದೆ. ಅಲ್ಲದೇ, ಇಂದು, ಸಾವಿರಾರು ಕುಶಲಕರ್ಮಿಗಳಿಗೆ ಆಧುನಿಕ ಯಂತ್ರಗಳು ಮತ್ತು ಉಪಕರಣಗಳ ಕಿಟ್ ಗಳನ್ನು ಒದಗಿಸಲಾಗಿದೆ. ಇದು ಅವರ ಕೆಲಸವನ್ನು ಹೆಚ್ಚಿಸಲು ಮತ್ತು ಸುಗಮವಾಗಿಸಲು ಸಹಕಾರಿಯಾಗುತ್ತದೆ. ಎಲ್ಲಾ ಫಲಾನುಭವಿಗಳನ್ನು ಮತ್ತು ಉದ್ಯೋಗ ಪಡೆದವರನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ.
ಸ್ನೇಹಿತರೇ,
ಉತ್ತರ ಪ್ರದೇಶದ ಸಂಸತ್ ಸದಸ್ಯರಾಗಿರುವ ನಾನು, ಯೋಗಿ ಜೀ ಅವರೊಂದಿಗೂ ಸತತ ಸಂಪರ್ಕದಲ್ಲಿದ್ದೇನೆ. ಇದು ಉದ್ಯೋಗಿಗಳನ್ನು ಗುರುತಿಸಲು, 30 ಲಕ್ಕಷಕ್ಕೂ ಹೆಚ್ಚು ಕಾರ್ಮಿಕರ ಕೌಶಲ್ಯವನ್ನು ಗುರುತಿಸಲು, ಅವರ ಕೌಶಲ್ಯ ಮತ್ತು ಅನುಭವದ ದತ್ತಾಂಶವನ್ನು ಸಿದ್ಧಪಡಿಸಲು ಮತ್ತು ಅವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸರಿಯಾದ ವ್ಯವಸ್ಥೆ ಮಾಡಲು, ಉತ್ತರ ಪ್ರದೇಶದ ಸರ್ಕಾರ ಎಷ್ಟು ತೀವ್ರವಾದ ಸಿದ್ಧತೆಗಳನ್ನು ಕೈಗೊಂಡಿದೆ ಎಂಬುದನ್ನು ತೋರುತ್ತದೆ. ಉತ್ತರ ಪ್ರದೇಶದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ದ ಯೋಜನೆ ಈಗಾಗಲೇ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುತ್ತಿದೆ ಮತ್ತು ಮಾರಾಟ ಮಾಡಲು ಹೆಚ್ಚು ಸಹಕಾರಿಯಾಗಿದೆ.
ಈಗ, ‘ಸ್ವಾವಲಂಬಿ ಭಾರತ ಅಭಿಯಾನ’ ದಡಿಯಲ್ಲಿ ದೇಶಾದ್ಯಂತ ಇಂತಹ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡಲು ಕೈಗಾರಿಕೆಗಳ ಸಮೂಹಗಳನ್ನು ರಚಿಸುವುದರಿಂದ ಉತ್ತರ ಪ್ರದೇಶ ಅಪಾರ ಪ್ರಯೋಜನೆಯನ್ನು ಪಡೆಯುತ್ತದೆ. ಬಟ್ಟೆ, ರೇಷ್ಮೆಮ ಚರ್ಮದ ಉತ್ಪನ್ನಗಳು, ತಾಮ್ರ ಇತ್ಯಾದಿ., ತಯಾರಿಸುವ ಹಲವಾರು ಕೈಗಾರಿಕಾ ಸಮೂಹಗಳು ಉತ್ತೇಜನ ಪಡೆಯುತ್ತವೆ. ಈ ಉತ್ಪನ್ನಗಳಿಗೆ ಹೊಸ ಬೇಡಿಕೆ ದೊರೆಯಲಿದೆ.
ಗೆಳೆಯರೇ,
‘ಸ್ವಾವಲಂಬಿ ಭಾರತ ಅಭಿಯಾನ’ ದಿಂದ ಉತ್ತರ ಪ್ರದೇಶದ ರೈತರು ಹೆಚ್ಚಿನ ಲಾಭ ಪಡೆಯಲಿದ್ದಾರೆ. ದಶಕಗಳಿಂದ ರೈತರ ಮತ್ತು ಸಣ್ಣ ವ್ಯಾಪಾರಸ್ಥರ 3 ಪ್ರಮುಖ ಸುಧಾರಣೆಗಳಿಗೆ ನಿರಂತರ ಬೇಡಿಕೆಯಿದೆ. ಈಗ ಕೇಂದ್ರ ಸರ್ಕಾರ ಜಾರಿಗೆ ತಂದ 3 ಕಾನೂನುಗಳು ರೈತರು ತಮ್ಮ ಉತ್ಪನ್ನಗಳನ್ನು ಮುಕ್ತವಾಗಿ ನೇರಮಾರಾಟ ಮಾಡುವ ಹಕ್ಕನ್ನು ನೀಡಿವೆ. ಅಂದರೆ, ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುವ ಸ್ಥಳದಲ್ಲಿ ಮಾರಾಟ ಮಾಡಬಹುದು. ಎರಡನೆಯದಾಗಿ, ರೈತರು ಬಯಸಿದರೆ, ಬಿತ್ತನೆಯ ಸಮಯದಲ್ಲೇ ತಮ್ಮ ಬೆಳೆಯ ದರ ನಿರ್ಧರಿಸಬಹುದು.
ಈಗ ಆಲೂಗಡ್ಡೆ ಬೆಳೆಯುವ ರೈತ, ಚಿಪ್ಸ್ ತಯಾರಿಸುವ ಕಾರ್ಖಾನೆಯ ಜೊತೆ, ಮಾವು ಬೆಳೆಯುವ ರೈತ ಮಾವಿನ ರಸ ತಯಾರಿಸುವ ಕಾರ್ಖಾನೆಯೊಂದಿಗೆ, ಟೊಮೆಟೊ ಬೆಳೆಯುವ ರೈತ ಸಾಸ್ ತಯಾರಿಸುವ ಕಾರ್ಖಾನೆಯೊಂದಿಗೆ, ತನ್ನ ಬೆಳೆಗಳ ಬಿತ್ತನೆಯ ಸಮಯದಲ್ಲೇ ಒಪ್ಪಂದ ಮಾಡಿಕೊಳ್ಳಬಹುದು. ಇದು ಭವಿಷ್ಯದಲ್ಲಿ ಬೆಲೆಕುಸಿಯುವ ಆತಂಕದಿಂದ ಅವರಿಗೆ ನೆಮ್ಮದಿಯನ್ನು ನೀಡುತ್ತದೆ.
ಸ್ನೇಹಿತರೇ,
ಇದಲ್ಲದೇ, ನಮ್ಮ ಜಾನುವಾರು ಸಾಕಾಣೆದಾರರಿಗಾಗಿಯೂ, ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡು ದಿನಗಳ ಹಿಂದೆ, ಪಶು ಮತ್ತು ಡೈರಿ ಕ್ಷೇತ್ರಗಳಿಗಾಗಿ ರೂ. 15 ಸಾವಿರ ಕೋಟಿಯ ವಿಶೇಷ ಮೂಲಸೌಕರ್ಯ ನಿಧಿಯನ್ನು ರಚಿಸಲಾಗಿದೆ. ಇದರೊಂದಿಗೆ, 1 ಕೋಟಿ ಹೆಚ್ಚಿನ ಪಶು ಪಾಲಕರುಡೈರಿ ಕ್ಷೇತ್ರದೊಂದಿಗೆ ಸಂಪರ್ಕ ಹೊಂದಲಿದ್ದಾರೆ ಮತ್ತು ಡೈರಿ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಸೌಲಭ್ಯಗಳನ್ನು ರಚಿಸಲಾಗುವುದು. ಮುಂಬರುವ ದಿನಗಳಲ್ಲಿ ಸುಮಾರು 35 ಲಕ್ಷ ಹೊಸ ಉದ್ಯೋಗಾವಕಾಶಗಳು ಗ್ರಾಮಗಳಲ್ಲಿ ಸೃಷ್ಠಿಯಾಗಲಿವೆ ಎಂದು ಅಂದಾಜಿಸಲಾಗಿದೆ. ಉತ್ತರ ಪ್ರದೇಶದಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು, ಮೊನ್ನೆ, ಕೇಂದ್ರ ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಬೌದ್ಧ ಸರ್ಕ್ಯೂಟ್ ನ ದೃಷ್ಟಿಯಲ್ಲಿ ಒಂದು ಪ್ರಮುಖ ವಿಮಾನ ನಿಲ್ದಾಣವಾಗಿದ್ದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲಾಗಿದೆ. ಇದು ಪೂರ್ವಾಂಚಲದ ವಾಯು ಸಂಚಾರಕ್ಕೆ ಪುಷ್ಠಿನೀಡುತ್ತದೆ ಜೊತೆಗೆ, ದೇಶ ಮತ್ತು ವಿದೇಶಗಳಲ್ಲಿರುವ ಕೋಟ್ಯಾಂತರ ಬೌದ್ಧ ಅನುಯಾಯಿಗಳಿಗೆ ಈಗ ಸುಲಭವಾಗಿ ಉತ್ತರ ಪ್ರದೇಶಕ್ಕೆ ಬರಲು ಸಾಧ್ಯವಾಗುತ್ತದೆ. ಇದು ಸ್ಥಳೀಯ ಯುವಕರಿಗೆ ಅನೇಕ ಉದ್ಯೋಗ ಮತ್ತು ಸ್ವಯಂ-ಉದ್ಯೋಗಾವಕಾಶಗಳನ್ನು ಸೃಷ್ಠಿಸುತ್ತದೆ. ಪ್ರವಾಸೋದ್ಯಮ ಕ್ಷೇತ್ರದ ಒಂದು ವಿಶೇಷ ಲಕ್ಷಣದ ಬಗ್ಗೆ ನಿಮಗೆ ತಿಳಿದಿರಬಹುದು. ಈ ವಲಯ ಲಭ್ಯವಿರುವ ಕನಿಷ್ಠ ಬಂಡವಾಳದಲ್ಲಿ ಗರಿಷ್ಠ ಸಂಖ್ಯೆಯ ಹನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.
ಸ್ನೇಹಿತರೆ,
ಉತ್ತರ ಪ್ರದೇಶ ಭಾರತದ ಅಭಿವೃದ್ಧಿ ಪಥದ ಅತ್ಯಂತ ಮಹತ್ವಪೂರ್ಣ ಭಾಗವಾಗಿದೆ. ಇಲ್ಲಿ ಬಿಜೆಪಿ ಸರ್ಕಾರ ರೂಪುಗೊಂಡ ನಂತರ ಗ್ರಾಮಗಳನ್ನು, ಬಡವರನ್ನು ಮತ್ತು ದೇಶವನ್ನು ಸಬಲಗೊಳಿಸುವ ಯೋಜನೆಯಲ್ಲಿ ಉತ್ತರ ಪ್ರದೇಶದ ಪಾಲುದಾರಿಕೆ ಗಣನೀಯವಾಗಿದೆ. ಕಳೆದ ಮೂರುವರೆ ವರ್ಷಗಳಲ್ಲಿ ಪ್ರತಿಯೊಂದು ಪ್ರಮುಖ ಯೋಜನೆಗಳ ಉರಿತು ಉತ್ತರ ಪ್ರದೇಶ ಬಹಳ ಶೀಘ್ರಗತಿಯಲ್ಲಿ ಕೆಲಸ ಮಾಡಿದೆ. ಕೇವಲ 3 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಬಡವರಿಗಾಗಿ 30 ಲಕ್ಷಕ್ಕೂ ಹೆಚ್ಚು ಪಕ್ಕಾ ಮನೆಗಳ ನಿರ್ಮಾಣವಾಗಿದೆ. ಕೇವಲ 3 ವರ್ಷಗಳ ಕಠಿಣ ಪರಿಶ್ರಮದಿಂದ ಉತ್ತರ ಪ್ರದೇಶಬಯಲು ಶೌಚ ಮುಕ್ತವೆಂದು ತನ್ನನ್ನು ತಾನು ಘೋಷಿಸಿಕೊಂಡಿದೆ. ಕೇವಲ 3 ವರ್ಷಗಳಲ್ಲಿ 3 ಲಕ್ಷ ಯುವಕರಿಗೆ ಉತ್ತರ ಪ್ರದೇಶ ಸರ್ಕಾರ ಪಾರದರ್ಶಕ ರೀತಿಯಲ್ಲಿ ಸರ್ಕಾರೀ ಉದ್ಯೋಗ ಒದಗಿಸಿದೆ. ಕೇವಲ 3 ವರ್ಷಗಳ ಪರಿಶ್ರಮದಿಂದ ಉತ್ತರ ಪ್ರದೇಶದಲ್ಲಿ ಮರಣ ಪ್ರಮಾಣ ಶೇಕಡಾ 30 ರಷ್ಟು ತಗ್ಗಿದೆ.
ಸ್ನೇಹಿತರೆ,
ಹಲವು ವರ್ಷಗಳಿಂದ ಪೂರ್ವಾಂಚಲದ ಪೂರ್ವ ಭಾಗದಲ್ಲಿ ಮೆದುಳಿನ ಉರಿಯೂತ ಹಾಹಾಕಾರವೆಬ್ಬಿಸಿತ್ತು. ಈ ರೋಗದಿಂದ ಹಲವಾರು ಪುಟ್ಟ ಮಕ್ಕಳು ಭೀಕರ ಸಾವನ್ನಪ್ಪಿವೆ. ಉತ್ತರ ಪ್ರದೇಶ ಸರ್ಕಾರದ ಪ್ರಯತ್ನಗಳಿಂದಾಗಿ ಈ ರೋಗದಿಂದ ಸೋಂಕಿತರಾದವರ ಸಂಖ್ಯೆ ಇಳಿಮುಖವಾಗಿದೆ; ಶೇ 90 ರಷ್ಟು ಮರಣ ಪ್ರಮಾಣವೂ ತಗ್ಗಿದೆ. ಆಯುಷ್ಮಾನ್ ಭಾರತ್ ಅಭಿಯಾನದಡಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಅಥವಾ ಇತರ ಸೌಲಭ್ಯಗಳನ್ನು ಒದಗಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ಪ್ರಶಂಸನೀಯ ಕೆಲಸ ಮಾಡಿದೆ.
ಮೂಲಭೂತ ಸೌಕರ್ಯಗಳಾದ ವಿದ್ಯುತ್, ನೀರು ಮತ್ತು ರಸ್ತೆಗಳ ನಿರ್ಮಾಣದಲ್ಲೂ ಅಭೂತಪೂರ್ವ ಕೆಲಸಗಳಾಗಿವೆ. ಹೊಸ ರಸ್ತೆಗಳ ನಿರ್ಮಾಣದಲ್ಲಿ ಮತ್ತು ಎಕ್ಸ್ ಪ್ರೆಸ್ ವೇ ಗಳ ನಿರ್ಮಾಣದಲ್ಲಿ ಉತ್ತರ ಪ್ರದೇಶ ವೇಗವಾಗಿ ಮುನ್ನಡೆಯುತ್ತದೆ. ಬಹಳ ಮುಖ್ಯವಾಗಿ, ಇಂದು, ಉತ್ತರ ಪ್ರದೇಶದಲ್ಲಿ ಶಾಂತಿ ನೆಲೆಸಿದೆ; ಕಾನೂನು ನಿಯಮಗಳನ್ನು ಪಾಲಿಸಲಾಗುತ್ತಿದೆ. ಈ ಕಾರಣದಿಂದಲೇ ವಿಶ್ವಾದ್ಯಂತದ ಹೂಡಿಕೆದಾರರು ಉತ್ತರ ಪ್ರದೇಶದೆಡೆಗೆ ಮುಖ ಮಾಡಿದ್ದಾರೆ. ಸ್ಥಳೀಯ ಮತ್ತು ವಿದೇಶೀ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ಎಲ್ಲ ಕ್ರಮಗಳ ಲಾಭವನ್ನು ಉತ್ತರ ಪ್ರದೇಶ ಪಡೆಯುತ್ತಿದೆ ಮತ್ತು ಇಂದಿಗೂ ಇತರ ರಾಜ್ಯಗಳು ಕೊರೊನಾದೊಂದಿಗೆ ಹೋರಾಡುತ್ತಿರುವಾಗ ತನ್ನ ಅಭಿವೃದ್ಧಿಗಾಗಿ ಉತ್ತರ ಪ್ರದೇಶ ಇಂತಹ ಪ್ರಮುಖ ಯೋಜನೆಯನ್ನಾರಂಭಿಸಿದೆ. ಒಂದು ರೀತಿಯಲ್ಲಿ ಬಿಕ್ಕಟ್ಟಿನಿಂದ ಉದ್ಭವಿಸಿದ ಪ್ರತಿಯೊಂದು ಅವಕಾಶವನ್ನೂ ಉತ್ತರ ಪ್ರದೇಶ ಬಳಸಿಕೊಳ್ಳುತ್ತಿದೆ. ಈ ಉದ್ಯೋಗಾವಕಾಶಗಳಿಗಾಗಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳು !!
ನೆನಪಿಡಿ ಕೊರೊನಾ ವಿರುದ್ಧದ ನಮ್ಮ ಹೋರಾಟ ಈಗಲೂ ಮುಂದುವರಿದಿದೆ. ಕೆಲಸಕ್ಕೆ ಹೋಗಿ, ಆದರೆ “ 2 ಗಜಗಳ ಅಂತರ” ಕಾಪಾಡಿಕೊಳ್ಳಿ. ನಿಮ್ಮ ಬಾಯಿಯನ್ನು ಮತ್ತು ಮೂಗನ್ನು ಮುಖಗವಸುಗಳಿಂದ ಮುಚ್ಚಿಕೊಳ್ಳಿ ಮತ್ತು ಸತತವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಉತ್ತರ ಪ್ರದೇಶ ಜೀವ ಮತ್ತು ಜೀವನೋಪಾಯ ಎರಡರ ಸಮರಗಳಲ್ಲೂ ಜಯ ಸಾಧಿಸಲಿದೆ ಮತ್ತು ಭಾರತವೂ ಸಹ ಗೆಲ್ಲಲಿದೆ.
ಅನಂತ ಧನ್ಯವಾದಗಳು!!
***
(Release ID: 1655012)
Visitor Counter : 250
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam