ಗೃಹ ವ್ಯವಹಾರಗಳ ಸಚಿವಾಲಯ
ಶ್ರೀ ಹರ್ಮಂದೀರ್ ಸಾಹಿಬ್‌ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ (ಎಫ್‌ಸಿಆರ್‌ಎ) ಅನುಮತಿ ಮಹತ್ವದ ಮತ್ತು ಐತಿಹಾಸಿಕ ನಿರ್ಧಾರವಾಗಿದೆ: ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ
"ಶ್ರೀ ಹರ್ಮಂದಿರ್ ಸಾಹಿಬ್ ಗೆ ಎಫ್‌ಸಿಆರ್‌ಎ ಗೆ ಅವಕಾಶ ನೀಡುವ ಮೋದಿ ಸರ್ಕಾರದ ನಿರ್ಧಾರವು ಜಾಗತಿಕವಾಗಿ ಸಂಘಟನೆ ಮತ್ತು ಶ್ರೀ ದರ್ಬಾರ್ ಸಾಹಿಬ್ ನಡುವಿನ ಸೇವಾ ಸಂಪರ್ಕವನ್ನು ಗಾಢವಾಗಿಸುತ್ತದೆ"
"ವಾಹೆ ಗುರೂಜಿ ಅವರು ಸೇವೆಯನ್ನು ಸ್ವೀಕರಿಸಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಆಶೀರ್ವದಿಸಿದ್ದಾರೆ"
"ಶ್ರೀ ಹರ್ಮಂದಿರ್ ಸಾಹಿಬ್‌ಗೆ ಎಫ್‌ಸಿಆರ್‌ಎ ಒಂದು ಮಹತ್ವದ ನಿರ್ಧಾರವಾಗಿದ್ದು, ಇದು ನಮ್ಮ ಸಿಖ್ ಸೋದರ, ಸೋದರಿಯಯರ ಅತ್ಯುತ್ತಮ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ"
Posted On:
10 SEP 2020 2:37PM by PIB Bengaluru
ಶ್ರೀ ಹರ್ಮಂದೀರ್ ಸಾಹಿಬ್‌ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ (ಎಫ್‌ಸಿಆರ್‌ಎ) ಅನುಮತಿ ನೀಡಿರುವುದು ಒಂದು ಮಹತ್ವದ ಮತ್ತು ಐತಿಹಾಸಿಕ ನಿರ್ಧಾರ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದ್ದಾರೆ.
“ಶ್ರೀ ದರ್ಬಾರ್ ಸಾಹಿಬ್ ಅವರ ದೈವತ್ವವು ನಮಗೆ ಬಲವನ್ನು ನೀಡುತ್ತದೆ. ದಶಕಗಳಿಂದ, ವಿಶ್ವಾದ್ಯಂತ ಇರುವ ಸಂಘಟನೆಗೆ ಅಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಶ್ರೀ ಹರ್ಮಂದಿರ್ ಸಾಹಿಬ್‌ಗೆ ಎಫ್‌ಸಿಆರ್‌ಎಗೆ ಅವಕಾಶ ನೀಡುವ ಮೋದಿ ಸರ್ಕಾರದ ನಿರ್ಧಾರವು ಜಾಗತಿಕವಾಗಿ ಸಂಗತ್ ಮತ್ತು ಶ್ರೀ ದರ್ಬಾರ್ ಸಾಹಿಬ್ ನಡುವಿನ ಸೇವಾ ಸಂಪರ್ಕವನ್ನು ಗಾಢವಾಗಿಸುತ್ತದೆ. ಇದೊಂದು ಧನ್ಯತೆಯ ಕ್ಷಣ” ಎಂದು ಶ್ರೀ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
“ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ ವಾಹೆ ಗುರೂಜಿಯವರು ಸೇವೆಯನ್ನು ತೆಗೆದುಕೊಂಡಿದ್ದಾರೆ. ಇದರಿಂದ ಪ್ರಧಾನಿಯವರು ಆಶೀರ್ವದಿಸಲ್ಪಟ್ಟಿದ್ದಾರೆ. ಶ್ರೀ ಹರ್ಮಂದಿರ್ ಸಾಹಿಬ್‌ಗೆ ಎಫ್‌ಸಿಆರ್‌ಎ ಅನುಮತಿ ಕುರಿತ ನಿರ್ಧಾರವು ಮಹತ್ವದ್ದಾಗಿದೆ, ಇದು ಮತ್ತೊಮ್ಮೆ ನಮ್ಮ ಸಿಖ್ ಸೋದರಿ, ಸೋದರರ ಸೇವೆಯ ಅತ್ಯುತ್ತಮ ಮನೋಭಾವವನ್ನು ತೋರಿಸುತ್ತದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು 2020 ರ ಸೆಪ್ಟೆಂಬರ್ 9 ರ ಬುಧವಾರ ಪಂಜಾಬ್‌ನ ಸಚ್‌ಖಂಡ್ ಶ್ರೀ ಹರ್ಮಂದಿರ್ ಸಾಹಿಬ್, ಶ್ರೀ ದರ್ಬಾರ್ ಸಾಹಿಬ್ ಗೆ ನೋಂದಣಿಗೆ ಅನುಮತಿ ನೀಡಿತು. ಈ ಸಂಘವು 27.05.2020 ರಂದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) 2010 ರ ಅಡಿಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಿತ್ತು. ನೋಂದಣಿಯು 5 ವರ್ಷಗಳವರೆಗೆ ಮಾನ್ಯತೆ ಪಡೆದಿರುತ್ತದೆ.
ಪಂಜಾಬ್‌ನ ಶ್ರೀ ದರ್ಬಾರ್ ಸಾಹಿಬ್, ಸಚ್‌ಖಂಡ್ ಶ್ರೀ ಹರ್ಮಂದೀರ್ ಸಾಹಿಬ್‌ಗೆ ನೋಂದಣಿಗೆ ಅನುಮತಿ ನೀಡುವ ಮೊದಲು, ಈ ಸಂಘದ ಅರ್ಜಿಯನ್ನು ಎಫ್‌ಸಿಆರ್‌ಎ, 2010 ಮತ್ತು ವಿದೇಶಿ ಕೊಡುಗೆ (ನಿಯಂತ್ರಣ) ನಿಯಮಗಳು (ಎಫ್‌ಸಿಆರ್ಆರ್), 2011 ರ ನಿಬಂಧನೆಗಳ ಪ್ರಕಾರ ಪರಿಶೀಲಿಸಲಾಯಿತು.
ಅರ್ಜಿಯೊಂದಿಗೆ ಸಂಘವು ಸಲ್ಲಿಸಿದ ಸಂಬಂಧಿತ ದಾಖಲೆಗಳು, ಸಂಘವು ಎಫ್‌ಸಿಆರ್‌ಎ, 2010 ರ ಅಡಿಯಲ್ಲಿ ನಿಗದಿಪಡಿಸಿದ ಮಾನದಂಡಗಳು ಮತ್ತು ನಿಯಮಗಳನ್ನು ಪೂರೈಸುತ್ತದೆ ಎಂದು ದೃಢಪಡಿಸಿಕೊಳ್ಳಲಾಯಿತು.
ಪಂಜಾಬ್‌ನ ಅಮೃತಸರದ ಸ್ವರ್ಣ ಮಂದಿರ ಎಂದು ಜನಪ್ರಿಯವಾಗಿರುವ ಸಚ್‌ಖಂಡ್ ಶ್ರೀ ಹರ್ಮಂದೀರ್ ಸಾಹಿಬ್, ಶ್ರೀ ದರ್ಬಾರ್ ಸಾಹಿಬ್ ಎಂಬ ಹೆಸರಿನ ಸಂಘವನ್ನು 1925 ರಲ್ಲಿ ಸಿಖ್ ಗುರುದ್ವಾರ ಕಾಯ್ದೆ 1925 ರ ಅಡಿಯಲ್ಲಿ ಸ್ಥಾಪಿಸಲಾಯಿತು. ಸಾರ್ವಜನಿಕರಿಗೆ / ಭಕ್ತರಿಗೆ ದಿನದ 24 ಗಂಟೆಯೂ ಉಚಿತ ಅನ್ನದಾನ, ಬಡವರು ಮತ್ತು ನಿರ್ಗತಿಕರಿಗೆ ಆರ್ಥಿಕ ಸಹಾಯ, ವಿದ್ಯಾರ್ಥಿಗಳು, ನಿರ್ಗತಿಕರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಹಣಕಾಸಿನ ನೆರವು ಮತ್ತು ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸೇವೆಗಳನ್ನು ಒದಗಿಸುವುದು ಈ ಸಂಘದ ಉದ್ದೇಶವಾಗಿದೆ. ಈ ಉದ್ದೇಶಗಳನ್ನು ಪೂರೈಸಲು ಸಂಘವು ದೇಶೀಯವಾಗಿ ದೇಣಿಗೆ ಪಡೆಯುತ್ತಿದೆ. ಈಗ, ಗೃಹ ಸಚಿವಾಲಯದ ಅನುಮತಿಯೊಂದಿಗೆ, ಎಫ್‌ಸಿಆರ್‌ಎ, 2010 ರ ನಿಬಂಧನೆಗಳಿಗೆ ಅನುಸಾರವಾಗಿ ವಿದೇಶಿ ಕೊಡುಗೆಯನ್ನು ಸ್ವೀಕರಿಸಲು ಮತ್ತು ಈ ದೇಣಿಗೆಗಳನ್ನು ನಿಗದಿತ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಸಂಘಕ್ಕೆ ಅನುಮತಿ ದೊರೆತಿದೆ.
(Release ID: 1653151)