ಹಣಕಾಸು ಸಚಿವಾಲಯ

ಬ್ಯಾಂಕ್ ಸಾಲಗಾರರ ಪರಿಹಾರಕ್ಕೆ ಸಲಹೆ ನೀಡಲು ಸರ್ಕಾರದಿಂದ ತಜ್ಞರ ಸಮಿತಿ ರಚನೆ

प्रविष्टि तिथि: 10 SEP 2020 7:27PM by PIB Bengaluru


ಬಡ್ಡಿ ಮನ್ನಾ ಮತ್ತು ಬಡ್ಡಿ ಮೇಲಿನ ಬಡ್ಡಿ ಮನ್ನಾ ಮತ್ತು ಇತರ ಸಂಬಂಧಿತ ವಿಷಯಗಳಲ್ಲಿ  ಪರಿಹಾರ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ಗಜೇಂದ್ರ ಶರ್ಮಾ Vs ಕೇಂದ್ರ ಸರ್ಕಾರ ಮತ್ತು ಇತರರು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ವಿವಿಧ ಕಳವಳಗಳು ವ್ಯಕ್ತವಾಗಿವೆ. 
ಈ ವಿಷಯದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಒಟ್ಟಾರೆ ಮೌಲ್ಯಮಾಪನ ಮಾಡಲು ಸರ್ಕಾರವು ಮೂವರು ತಜ್ಞರ ಸಮಿತಿಯನ್ನು ರಚಿಸಿದೆ.
ಭಾರತದ ಮಾಜಿ ಮಹಾಲೇಖಪಾಲರಾದ ಶ್ರೀ ರಾಜೀವ್ ಮಹರ್ಷಿ ಸಮಿತಿಯ  ಅಧ್ಯಕ್ಷರಾಗಿರುತ್ತಾರೆ. ಐಐಎಂ ಅಹಮದಾಬಾದ್ ಮಾಜಿ ಪ್ರಾಧ್ಯಾಪಕ ಮತ್ತು ರಿಸರ್ವ್ ಬ್ಯಾಂಕ್ ನ  ವಿತ್ತೀಯ ನೀತಿ ಸಮಿತಿಯ ಮಾಜಿ ಸದಸ್ಯ ಡಾ.ರವೀಂದ್ರ ಹೆಚ್. ಧೋಲಾಕಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಡಿಬಿಐ ಬ್ಯಾಂಕ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಬಿ. ಶ್ರೀರಾಮ್ ಸಮಿತಿಯ ಸದಸ್ಯರಾಗಿದ್ದಾರೆ.
ಕೋವಿಡ್-19 ಕಾರಣದಿಂದಾಗಿ ಸಾಲ ಪಾವತಿಯ ಮೇಲೆ ನೀಡಲಾಗಿದ್ದ ಕಂತು ಪಾವತಿ ನಿಷೇಧ ಅವಧಿಯ ಬಡ್ಡಿ ಮನ್ನಾ ಮತ್ತು ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡಿದರೆ ದೇಶದ ಆರ್ಥಿಕತೆ ಮತ್ತು ಆರ್ಥಿಕ ಸ್ಥಿರತೆಯ ಮೇಲಿನ ಪರಿಣಾಮವನ್ನು ಮೌಲ್ಯಮಾಪನ ಮಾಡುವುದು. ಈ ನಿಟ್ಟಿನಲ್ಲಿ ಸಮಾಜದ ವಿವಿಧ ವರ್ಗಗಳ ಆರ್ಥಿಕ ತೊಂದರೆಗಳನ್ನು ತಗ್ಗಿಸುವ ಕುರಿತು ಸಲಹೆಗಳು ಮತ್ತು ಅನುಸರಿಸಬೇಕಾದ ಕ್ರಮಗಳನ್ನು ಸೂಚಿಸುವುದು. ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಿರುವ ಯಾವುದೇ ಸಲಹೆಗಳು / ಸೂಚನೆಗಳನ್ನು ನೀಡುವುದು ಈ ಸಮಿತಿಯ ಜವಾಬ್ದಾರಿಯಾಗಿದೆ.

ಸಮಿತಿ ಒಂದು ವಾರದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಮಿತಿಗೆ ಕಾರ್ಯದರ್ಶಿಯ ಬೆಂಬಲವನ್ನು ನೀಡಲಿದೆ. ಈ ವಿಷಯ ಕುರಿತಂತೆ ಸಮಿತಿಯು ಬ್ಯಾಂಕುಗಳು ಅಥವಾ ಇತರ ಪಾಲುದಾರರೊಂದಿಗೆ ಸಮಾಲೋಚಿಸಬಹುದು.


(रिलीज़ आईडी: 1653148) आगंतुक पटल : 384
इस विज्ञप्ति को इन भाषाओं में पढ़ें: Punjabi , English , Urdu , Marathi , Bengali , Assamese , Manipuri , Gujarati , Tamil , Telugu , Malayalam