ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಆತ್ಮ ನಿರ್ಭರ ಭಾರತ: ಅಗರಬತ್ತಿ  ತಯಾರಿಕೆಯ ಕುಶಲಕರ್ಮಿಗಳಿಗೆ ಬೆಂಬಲ ವಿಸ್ತರಿಸಿದ ಭಾರತ ಸರ್ಕಾರ


 200 ಸ್ವಯಂಚಾಲಿತ ಅಗರಬತ್ತಿ ತಯಾರಿಕಾ ಯಂತ್ರ ನೀಡಲು ಉದ್ದೇಶಿಸಲಾಗಿತ್ತು, ಈಗಪ್ರಸ್ತುತ 400 ಯಂತ್ರ ನೀಡಲಾಗುವುದು

5000 ಕುಶಲಕರ್ಮಿಗಳಿಗೆ ಅನುಕೂಲ ಕಲ್ಪಿಸಲು 50 ಕೋಟಿ ವೆಚ್ಚದಲ್ಲಿ ಸ್ಪೂರ್ತಿ ಅಡಿ 10 ಕ್ಲಸ್ಟರ್ ಗಳ ನಿರ್ಮಾಣ

ಯಂತ್ರಗಳನಅಭಿವೃದ್ಧಿ ಮತ್ತು ವಿನೂತನ ಉತ್ಪನ್ನಗಳ ಉತ್ತೇಜನಕ್ಕೆ ಖನೋಜ್ ನಲ್ಲಿಸೇರಿದಂತೆ ಎರಡು ಜೇಷ್ಠತಾ ಕೇಂದ್ರಗಳ ಸ್ಥಾಪನೆ

ಕರಕುಶಲಕರ್ಮಿಗಳಿಂದತಯಾರಿಸಲ್ಪಟ್ಟಅಗರಬತ್ತಿಗಳು ಮತ್ತು “ವಲಸೆ ಕಾರ್ಮಿಕರಿಗೆ” ಮೊದಲ ಪ್ರಾಶಸ್ತ್ಯ

ಮೊದಲು ಕೆವಿಐಸಿ 2.66 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲುಉದ್ದೇಶಿಸಿತ್ತು, ಇದೀಗ ಒಟ್ಟಾರೆ ಯೋಜನಾ ಗಾತ್ರ 55 ಕೋಟಿ ರೂ.ಗೆ ಹೆಚ್ಚಳ

Posted On: 06 SEP 2020 11:49AM by PIB Bengaluru

ಸಮಗ್ರ ಮನೋಭಾವ ಮತ್ತು ಪಾಲುದಾರರ ಆಸಕ್ತಿಯನ್ನುವೃದ್ಧಿಸುವ ಉದ್ದೇಶದಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ (ಎಂಎಸ್ಎಂಇ), ಅಗರಬತ್ತಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿರುವ ಕರಕುಶಲಕರ್ಮಿಗಳಿಗೆ ಬೆಂಬಲ ನೀಡಲು ಮತ್ತು ಅಗರಬತ್ತಿ ಉದ್ಯಮವನ್ನುಪ್ರೋತ್ಸಾಹಿಸಲು 2020ರ ಸೆಪ್ಟಂಬರ್ 4ರಂದು ಹೊಸ ಮಾರ್ಗಸೂಚಿಗಳನ್ನುಪ್ರಕಟಿಸಿದೆ. 2020ರ ಜು.30ರಂದು ಪ್ರಕಟಿಸಿದ್ದ ಬೆಂಬಲ ಕಾರ್ಯಕ್ರಮಗಳಿಗೆಪೂರಕವಾಗಿ ಸಚಿವಾಲಯ, ಅಗರಬತ್ತಿಗಳನ್ನುತಯಾರಿಸಲು ಯಂತ್ರಗಳನ್ನು ಪೂರೈಕೆ ಮಾಡುವುದಷ್ಟೇ ಅಲ್ಲದೆ, ಉದ್ಯಮದ ಎಲ್ಲ ಆಯಾಮಗಳನ್ನುಪರಿಗಣಿಸಿದೆ. ಅದರಲ್ಲಿ ಕಚ್ಚಾ ಸಾಮಗ್ರಿಗಳು ಹಾಗೂ ಇತರೆ ಸಾಮಗ್ರಿಗಳ ನಿರಂತರ ಪೂರೈಕೆ, ಕಳೆದ ಒಂದು ವರ್ಷದಲ್ಲಿ ಹೆಚ್ಚಾಗಿರುವ ಬೇಡಿಕೆ ಅಂಶಗಳನ್ನೂ ಸಹ ಪರಿಗಣಿಸಲಾಗಿದೆ. ಹೊಸ ಕಾರ್ಯಕ್ರಮದ ನಾಲ್ಕು ಪ್ರಮುಖ ಆಧಾರ ಸ್ಥಂಭಗಳು ಈ ಕೆಳಗಿನಂತಿವೆ.

i.       ಕರಕುಶಲಕರ್ಮಿಗಳಿಗೆ ತರಬೇತಿ, ಕಚ್ಚಾ ಸಾಮಗ್ರಿ ಪೂರೈಕೆ, ಮಾರುಕಟ್ಟೆ ಒದಗಿಸುವುದು ಮತ್ತು ಆರ್ಥಿಕ ನೆರವಿನ ಮೂಲಕ ನಿರಂತರ ಬೆಂಬಲ.

ii.       ಸುವಾಸನೆಯಲ್ಲಿ ಹೊಸ ಆವಿಷ್ಕಾರಗಳು, ಪ್ಯಾಕೇಂಜಿಂಗ್ ,  ಮರುಬಳಕೆ ಮಾಡಬಹುದಾದ ಹೂವುಗಳು, ನಾರಿನ ಕಡ್ಡಿ ಮತ್ತಿತರ ಪರ್ಯಾಯ ಮತ್ತು ಹೊಸ ಕಚ್ಚಾಸಾಮಗ್ರಿಗಳ ಬಳಕೆ ಸೇರಿ ಹೊಸ ಆಯಾಮಗಳಆನ್ವೇಷಣೆ,  ಕೃಷಿ ಸಚಿವಾಲಯದ ಜೊತೆ ಸೇರಿ ಬಿದಿರು ಕಡ್ಡಿಗಳ ಪೂರೈಕೆ ಮತ್ತಿತರ ಅಂಶಗಳೂ ಸಹ ಸೇರಿವೆ. ಕನ್ನೂಜ್ ನಲ್ಲಿ(ನಾನಾ ಬಗೆಯ ಫ್ಲೇವರ್ ಮತ್ತು ಸುವಾಸನೆ ಅಭಿವೃದ್ಧಿ ಕೇಂದ್ರ) ಎಫ್ಎಫ್ಡಿಸಿಯನ್ನುಸ್ಥಾಪಿಸಲಾಗಿದ್ದು, ಅದಕ್ಕೆ ಜೇಷ್ಠತಾ ಕೇಂದ್ರ ಎಂದು ಕರೆಯಲಾಗುತ್ತಿದೆ.

iii.      ಸಫೂರ್ತಿ(ಸಾಂಪ್ರದಾಯಿಕ ಕೈಗಾರಿಕೆಗಳ ಪುನರುಜ್ಜೀವನ ಯೋಜನಾ ನಿಧಿ) ಅಡಿಯಲ್ಲಿ ಹತ್ತು ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ಎಂಎಸ್ಎಂಇ ಸಚಿವಾಲಯ 50 ಕೋಟಿ ರೂಪಾಯಿಗಳ ಯೋಜನೆ ಸಿದ್ಧಪಡಿಸಿದೆ. ಇದು ಸುಮಾರು 5 ಸಾವಿರ ಕರಕುಶಲಕರ್ಮಿಗಳಿಗೆ ಸುಸ್ಥಿರ ಉದ್ಯೋಗ ಒದಗಿಸುವುದಲ್ಲದೆ, ಅವರ ಆದಾಯ ಗಳಿಕೆಗೆನೆರವಾಗಲಿದೆ.

iv.     ದೇಶದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಯಂತ್ರೋಪಕರಣ ಅಭಿವೃದ್ಧಿ ಸಾಮರ್ಥ್ಯ ಬಲವರ್ಧನೆಗೆ ಒತ್ತು ನೀಡಲಾಗಿದೆ ಮತ್ತು ಇತರೆ ಉತ್ಪನ್ನಗಳನ್ನುಅಭಿವೃದ್ಧಿಪಡಿಸಲು 2.20 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಐಐಟಿಗಳು/ಎನ್ಐಟಿಗಳ ಜೊತೆ ಸೇರಿ ಜೇಷ್ಠತಾಕೇಂದ್ರಗಳನ್ನುಸ್ಥಾಪಿಸಲಾಗಿದೆ. 

ಸೆಪ್ಟೆಂಬರ್ 4ರಂದು ಪ್ರಕಟಿಸಲಾದಕಾರ್ಯಕ್ರಮದ ವಿಸ್ತರಣೆ ಭಾಗವಾಗಿ ಮೊದಲು 200 ಸ್ವಯಂಚಾಲಿತ ಅಗರಬತ್ತಿ ಉತ್ಪಾದನಾ ಯಂತ್ರಗಳನ್ನು ವಿತರಿಸಲುಉದ್ದೇಶಿಸಲಾಗಿತ್ತು, ಅವುಗಳನ್ನು 400ಕ್ಕೆ ಹೆಚ್ಚಿಸಲಾಗಿದೆ ಮತ್ತು ಸ್ವಯಂ ಸೇವಾಸಂಘಗಳಿಗೆ ಹಾಗೂ ಸಾರ್ವಜನಿಕರಿಗೆ ದೇಶಾದ್ಯಂತ 20 ಪ್ರಾಯೋಗಿಕ ಯೋಜನೆಗಳಲ್ಲಿ 500 ಪೆಡಲ್ಆಧಾರಿತ ಯಂತ್ರಗಳನ್ನು ನೀಡಲಾಗುವುದು ಮತ್ತು ಅವರಿಗೆ ಮಾರುಕಟ್ಟೆ ಹಾಗೂ ಕಚ್ಚಾ ಸಾಮಗ್ರಿಗಳಪೂರೈಕೆಗೆಪಾಲುದಾರಿಕೆಒದಗಿಸಲಾಗುವುದು. ಈ ಕಾರ್ಯಕ್ರಮ ತಕ್ಷಣ 1500 ಕರಕುಶಲಕರ್ಮಿಗಳಿಗೆನೆರವಾಗಲಿದೆ ಮತ್ತು ಅವರಿಗೆ ಸುಸ್ಥಿರ ಉದ್ಯೋಗ ಒದಗಿಸಿ ಆದಾಯ ಹೆಚ್ಚಳಕ್ಕೆಸಹಕಾರಿಯಾಗಲಿದೆ. ಕರಕುಶಲಕರ್ಮಿಗಳು ತಾವೇ ಕೈಯಿಂದ ಅಗರಬತ್ತಿಗಳನ್ನು ತಯಾರಿಸುತ್ತಾರೆ ಮತ್ತು ಈ ಕಾರ್ಯಕ್ರಮದಭಾಗವಾಗಿ ವಲಸೆ ಕಾರ್ಮಿಕರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು.

ಇದೀಗ ಈ ವಲಯದಲ್ಲಿ ಆತ್ಮನಿರ್ಭರ ಭಾರತ ಗುರಿ ಸಾಧನೆಗೆ ಒಟ್ಟಾರೆ ಇಡೀ ಯೋಜನೆಯ ಗಾತ್ರವನ್ನು 55 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದರಲ್ಲಿ 1500 ಕರಕುಶಲಕರ್ಮಿಗಳಿಗೆತಕ್ಷಣಕ್ಕೆ ಸುಮಾರು 3.45 ಕೋಟಿ ನೆರವು ನೀಡುವುದು,  ಎಫ್ಎಫ್ಡಿಸಿಕನ್ನೂಜ್ ನಲ್ಲಿ ಮತ್ತು ಐಐಟಿ/ಎನ್ ಐಟಿಗಳಲ್ಲಿ 2.20 ಕೋಟಿ ರೂ. ವೆಚ್ಚದಲ್ಲಿ ಎರಡು ಜೇಷ್ಠತಾ ಕೇಂದ್ರಗಳ ಸ್ಥಾಪನೆ ಮಾಡುವುದು ಮತ್ತು 50 ಕೋಟಿ ರೂ. ವೆಚ್ಚದಲ್ಲಿ 10 ಹೊಸ ಸಫೂರ್ತಿಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸುವಕಾರ್ಯಕ್ರಮಗಳು ಸೇರಿದ್ದು, ಹೆಚ್ಚುವರಿಯಾಗಿ 5000 ಕರಕುಶಲಕರ್ಮಿಗಳಿಗೆ ಇದರಿಂದ ಅನುಕೂಲವಾಗಲಿದೆ. ಈ ಮೊದಲು ಯೋಜನೆಯ ಒಟ್ಟು ಗಾತ್ರ 2.66 ಕೋಟಿ ರೂ. ಇತ್ತು ಮತ್ತು 500 ಕರಕುಶಲಕರ್ಮಿಗಳಿಗೆಅನುಕೂಲವಾಗುತ್ತಿತ್ತು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ(ಕೆವಿಐಸಿ), ಎಂಎಸ್ಎಂಇಸಚಿವಾಲಯದಡಿ ಬರುವ ಒಂದು ಸಾಂಸ್ಥಿಕ ಸಂಸ್ಥೆಯಾಗಿದ್ದು, ಇದು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಿದೆ ಮತ್ತು ಅಗತ್ಯ ನೆರವು ಮತ್ತು ಬೆಂಬಲದೊಂದಿಗೆಸ್ವಸಹಾಯ ಗುಂಪುಗಳು ಹಾಗೂ ಕರಕುಶಲಕರ್ಮಿಗಳಿಗೆಸಹಾಯಹಸ್ತಚಾಚಲಿದೆ.

ಈ ಯೋಜನೆಗಳಿಂದ ಅಗರಬತ್ತಿ ಉದ್ಯಮಕ್ಕೆ ಸಾಕಷ್ಟು ಉತ್ತೇಜನ ದೊರಕುವುದಲ್ಲದೆ, ಅಗರಬತ್ತಿ ಉತ್ಪಾದನೆಯ ಎಲ್ಲ ವಲಯಗಳಲ್ಲಿ ದೇಶೀಯ ಸಾಮರ್ಥ್ಯ ಬಲವರ್ಧನೆಗೆಸಹಕಾರಿಯಾಗಲಿದೆ ಹಾಗೂ ರಫ್ತು ಹೆಚ್ಚಳವಾಗುವ ಜೊತೆಗೆ ಕರಕುಶಲಕರ್ಮಿಗಳು ಮತ್ತು ಉದ್ದಿಮೆದಾರರಿಗೆವಿಫುಲ ಉದ್ಯೋಗಾವಕಾಶಗಳುಸೃಷ್ಟಿಯಾಗಲಿವೆ.

***



(Release ID: 1651764) Visitor Counter : 208