ಹಣಕಾಸು ಸಚಿವಾಲಯ

ಮುದ್ರಣ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಸೂಚನೆಗಳು


ಸಚಿವಾಲಯಗಳು/ಇಲಾಖೆಗಳು/ಪಿಎಸ್ ಯುಗಳು/ಪಿಎಸ್ ಬಿಗಳು ಈ ಮೊದಲು ಭೌತಿಕವಾಗಿ ಮುದ್ರಿಸುತ್ತಿದ್ದ ಕ್ಯಾಲೆಂಡರ್, ಡೈರಿಗಳು, ಶೆಡ್ಯೂಲರ್ ಗಳು ಮತ್ತು ಇತರ ಸಾಮಗ್ರಿಗಳಿಗೆ ಇನ್ನು ಮುಂದೆ ಡಿಜಿಟಲ್ ರೂಪ

ಎಲ್ಲ ಸಚಿವಾಲಯಗಳು/ಇಲಾಖೆಗಳು/ಪಿಎಸ್ ಯುಗಳು/ಪಿಎಸ್ ಬಿಗಳು ಮತ್ತು ಸರ್ಕಾರದ ಎಲ್ಲಾ ಸಂಸ್ಥೆಗಳು ಡಿಜಿಟಲ್ ಅಥವಾ ಆನ್ ಲೈನ್ ವಿಧಾನಗಳನ್ನು ಬಳಸಿಕೊಳ್ಳಲು ವಿನೂತನ ಕ್ರಮ ಕೈಗೊಳ್ಳುವುದು

Posted On: 02 SEP 2020 3:56PM by PIB Bengaluru

ಪ್ರಸಕ್ತ ಸಂದರ್ಭದಲ್ಲಿ ಇಡೀ ವಿಶ್ವ ಡಿಜಿಟಲ್ ಮೂಲಕ ಉತ್ಪಾದನೆಯನ್ನು ಹಲವು ಪಟ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಉತ್ತಮ ಪದ್ಧತಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. 

ಮುಂದಿನ ವರ್ಷದಿಂದ ಎಲ್ಲ ಸಚಿವಾಲಯಗಳು/ಇಲಾಖೆಗಳು/ಪಿಎಸ್ ಯುಗಳು/ಪಿಎಸ್ ಬಿಗಳು ಮತ್ತು ಸರ್ಕಾರದ ಎಲ್ಲಾ ಸಂಸ್ಥೆಗಳು ಗೋಡೆ ಕ್ಯಾಲೆಂಡರ್, ಡೆಸ್ಕ್ ಟಾಪ್ ಕ್ಯಾಲೆಂಡರ್, ಡೈರಿ ಮತ್ತು ಇತರ ಯಾವುದೇ ಉತ್ಪನ್ನಗಳ ಮುದ್ರಣ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ.

ಅಂತಹ ಎಲ್ಲ ಚಟುವಟಿಕೆಗಳು ಡಿಜಿಟಲ್ ಮತ್ತು ಆನ್ ಲೈನ್ ರೂಪದಲ್ಲಿರಬೇಕು.

ಇಂತಹ ವಿಷಯಗಳಲ್ಲಿ ವಿನೂತನ ವಿಧಾನಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯಬೇಕು. ತಾಂತ್ರಿಕ ಅನ್ವೇಷಣೆಗಳನ್ನು ಬಳಸಿಕೊಂಡು ಯೋಜನೆಗಳನ್ನು ರೂಪಿಸುವುದು, ಕೆಲಸ-ಕಾರ್ಯಗಳನ್ನು ನಿಗದಿಪಡಿಸುವುದು ಮತ್ತು ಅಂದಾಜು ಮಾಡುವುದು, ಆರ್ಥಿಕವಾಗಿ ಮಿತವ್ಯಯಕಾರಿಯಾಗಿರುವುದಲ್ಲದೆ, ಪರಿಣಾಮಕಾರಿ ಮತ್ತು ಸಮರ್ಥವಾಗಿರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅವರ ಸರ್ಕಾರ, ತಂತ್ರಜ್ಞಾನವನ್ನು ಒಂದು ಸಾಧನವಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಸದಾ ಮಾದರಿಯಾಗಿದ್ದಾರೆ. ನಮ್ಮ ಕೆಲಸದ ಜೊತೆಗೆ ತಂತ್ರಜ್ಞಾನವನ್ನು ಸಂಯೋಜಿಸಿಕೊಳ್ಳುವುದು ಪ್ರಧಾನಿ ಅವರ ದೂರದೃಷ್ಟಿಗೆ ಪೂರಕವಾಗಿದೆ. 

 ಆದ್ದರಿಂದ ಈವರೆಗೆ ಭೌತಿಕ ರೂಪದಲ್ಲಿ ಮುದ್ರಿಸಲ್ಪಡುತ್ತಿದ್ದ ಎಲ್ಲ ಕ್ಯಾಲೆಂಡರ್, ಡೈರಿ, ಶೆಡ್ಯೂಲರ್ ಮತ್ತು ಇತರೆ ಸಾಮಗ್ರಿಗಳನ್ನು ಇನ್ನು ಮುಂದೆ ಡಿಜಿಟಲ್ ರೂಪಕ್ಕೆ ಪರಿವರ್ತಿಸಲಾಗುವುದು. ಕಾಫಿ ಟೇಬಲ್ ಪುಸ್ತಕಗಳ ಪ್ರಕಟಣೆಯನ್ನು ಸ್ಥಗಿತಗೊಳಿಸಲಾಗುವುದು ಮತ್ತು ಸೂಕ್ತ ರೀತಿಯಲ್ಲಿ ಇ-ಪುಸ್ತಕಗಳ ಬಳಕೆ ಉತ್ತೇಜಿಸಲಾಗುವುದು. ಎಲ್ಲ ಸಚಿವಾಲಯಗಳು/ಇಲಾಖೆಗಳು/ಪಿಎಸ್ ಯುಗಳು/ಪಿಎಸ್ ಬಿಗಳು ಮತ್ತು ಸರ್ಕಾರದ ಎಲ್ಲಾ ಸಂಸ್ಥೆಗಳು ಅದಕ್ಕಾಗಿ ಡಿಜಿಟಲ್ ಅಥವಾ ಆನ್ ಲೈನ್ ವಿಧಾನಗಳನ್ನು ಬಳಸಿಕೊಳ್ಳಲು ವಿನೂತನ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಆವಿಷ್ಕಾರಿ ಡಿಜಿಟಲ್ ಮತ್ತು ಆನ್ ಲೈನ್ ಪರಿಹಾರಗಳಿಂದ ಭೌತಿಕ ಕ್ಯಾಲೆಂಡರ್ ಅಥವಾ ಡೈರಿಗಳಿಂದ ಸಿಗುತ್ತಿದ್ದ ರೀತಿಯಲ್ಲೇ ಸಮಾನ ಫಲಿತಾಂಶ ದೊರಕಲಿದೆ, ಹಾಗಾಗಿ ಅವುಗಳಿಗೆ ಆದ್ಯತೆ ನೀಡಿ ಅವುಗಳ ಬಳಕೆ ಪದ್ಧತಿಯನ್ನು ಉತ್ತೇಜಿಸಬೇಕಿದೆ. 

ಸಂಬಂಧಿಸಿದ ಎಲ್ಲರಿಗೂ ಅಗತ್ಯ ಆದೇಶವನ್ನು ಹೊರಡಿಸಲಾಗಿದೆ. ಅದರ ವಿವರಗಳಿಗೆ ಇಲ್ಲಿ ನೋಡಿ 

***



(Release ID: 1650652) Visitor Counter : 193