ಹಣಕಾಸು ಸಚಿವಾಲಯ

ಆಗಸ್ಟ್ 2020ರ ಜಿ ಎಸ್ ಟಿ ಆದಾಯ ಸಂಗ್ರಹಣೆ


ಆಗಸ್ಟ್ ತಿಂಗಳಲ್ಲಿ ₹ 86,449 ಕೋಟಿ ಒಟ್ಟು ಜಿ ಎಸ್ ಟಿ ಆದಾಯ ಸಂಗ್ರಹಣೆ

Posted On: 01 SEP 2020 6:04PM by PIB Bengaluru

ಆಗಸ್ಟ್ 2020ರಲ್ಲಿ ಸಂಗ್ರಹಿಸಲಾದ ಒಟ್ಟು ಜಿ ಎಸ್ ಟಿ ಆದಾಯ ₹ 86,449 ಕೋಟಿಗಳಾಗಿದ್ದು, ಇದರಲ್ಲಿ ಸಿಜಿ ಎಸ್ ಟಿ ₹ 15,906 ಕೋಟಿ, ಎಸ್.ಜಿ.ಎಸ್.ಟಿ ₹ 21,064 ಕೋಟಿ, ಐಜಿ ಎಸ್ ಟಿ ₹ 42,264 ಕೋಟಿಗಳಾಗಿದೆ. (ಇದರಲ್ಲಿ ₹ 19,179 ಕೋಟಿ ಸರಕುಗಳ ಆಮದಿನ ಮೇಲೆ ಸಂಗ್ರಹ ಸೇರಿದೆ) ಮತ್ತು ಉಪ ಕರ ₹7,215 ಕೋಟಿ. (₹673 ಕೋಟಿ ಆಮದು ಸರಕಿನಿಂದ ಸಂಗ್ರಹಿಸಿದ್ದು ಸೇರಿದೆ)

ಸರ್ಕಾರ ನಿಗದಿತ ಪಾವತಿಯಂತೆ ₹ 18,216 ಕೋಟಿ ಸಿಜಿ ಎಸ್ ಟಿಗೆ ಮತ್ತು ₹ 14,650 ಕೋಟಿ ಎಸ್.ಜಿ.ಎಸ್ಟಿಗೆ ನೀಡಿದೆ. ಆಗಸ್ಟ್ 2020ರಲ್ಲಿ ನಿಗದಿತ ಪಾವತಿಯ ಬಳಿಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಆದಾಯ ಸಿಜಿ ಎಸ್ ಟಿಗೆ ₹ 34,122 ಕೋಟಿಗಳಾಗಿದ್ದರೆ, ಎಸ್.ಜಿ.ಎಸ್ಟಿ ₹ 35,714 ಕೋಟಿ ರೂಪಾಯಿಗಳಾಗಿವೆ.

ಕಳೆದ ವರ್ಷ ಇದೇ ವರ್ಷಕ್ಕೆ ಹೋಲಿಸಿದರೆ ತಿಂಗಳ ಜಿ ಎಸ್ ಟಿ ಆದಾಯ ಶೇ.88ರಷ್ಟು ಮಾತ್ರ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದಲ್ಲಿ ತಿಂಗಳಲ್ಲಿ, ಆಮದು ಸರಕುಗಳಿಂದ ಬಂದ ಆದಾಯ ಶೇ.77 ಮತ್ತು ದೇಶೀಯ ವಹಿವಾಟಿನಿಂದ ಬಂದಿದ್ದ (ಆಮದು ಸೇವೆಯೂ ಸೇರಿ) ಶೇ.92ರಷ್ಟು. ₹ 5 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ತೆರಿಗೆದಾರರು ಸೆಪ್ಟೆಂಬರ್ ವರೆಗೆ ತೆರಿಗೆ ನಿರ್ಧರಣೆ ಸಲ್ಲಿಕೆಯಿಂದ ವಿನಾಯಿತಿ ಪಡೆದಿದ್ದಾರೆ ಎಂಬುದೂ ಇಲ್ಲಿ ಉಲ್ಲೇಖಾರ್ಹ.

ನಕಾಶೆಯು ಪ್ರಸಕ್ತ ವರ್ಷದಲ್ಲಿ ಮಾಸಿಕ ಒಟ್ಟು ಜಿ ಎಸ್ ಟಿ ಆದಾಯದ ಪ್ರವೃತ್ತಿಯನ್ನು ತೋರಿಸುತ್ತದೆ. ಆಗಸ್ಟ್ 2019 ಕ್ಕೆ ಮತ್ತು ಪೂರ್ಣ ವರ್ಷಕ್ಕೆ ಹೋಲಿಸಿದರೆ 2020 ಆಗಸ್ಟ್ ತಿಂಗಳಲ್ಲಿ ಪ್ರತಿ ರಾಜ್ಯದಲ್ಲಿ ಸಂಗ್ರಹಿಸಲಾದ ಜಿ ಎಸ್ ಟಿಯ ರಾಜ್ಯವಾರು ಅಂಕಿ ಅಂಶಗಳನ್ನು ಕೋಷ್ಟಕ ತೋರಿಸುತ್ತದೆ.

https://static.pib.gov.in/WriteReadData/userfiles/image/image0013RYO.png

 

ಕೋಷ್ಟಕ: ಆಗಸ್ಟ್ ವರೆಗಿನ ರಾಜ್ಯವಾರು ಸಂಗ್ರಹಣೆ[1]

ಕ್ರ.ಸಂ

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಆಗಸ್ಟ್-19

ಆಗಸ್ಟ್ -20

ವೃದ್ಧಿ

1

ಜಮ್ಮು ಮತ್ತು ಕಾಶ್ಮೀರ

302

326

8%

2

ಹಿಮಾಚಲ ಪ್ರದೇಶ

676

597

-12%

3

ಪಂಜಾಬ್

1,255

1,139

-9%

4

ಚಂಡೀಗಢ

160

139

-13%

5

ಉತ್ತರಾಖಂಡ

941

1,006

7%

6

ಹರಿಯಾಣ

4,474

4,373

-2%

7

ದೆಹಲಿ

3,517

2,880

-18%

8

ರಾಜಾಸ್ಥಾನ

2,550

2,582

1%

9

ಉತ್ತರ ಪ್ರದೇಶ

4,975

5,098

2%

10

ಬಿಹಾರ

981

967

-1%

11

ಸಿಕ್ಕಿಂ

163

147

-10%

12

ಅರುಣಾಚಲ ಪ್ರದೇಶ

45

35

-22%

13

ನಾಗಾಲ್ಯಾಂಡ್

27

31

17%

14

ಮಣಿಪುರ

37

26

-29%

15

ಮಿಜೋರಾಂ

28

12

-56%

16

ತ್ರಿಪುರ

58

43

-26%

17

ಮೇಘಾಲಯ

117

108

-7%

18

ಅಸ್ಸಾಂ

768

709

-8%

19

ಪಶ್ಚಿಮ ಬಂಗಾಳ

3,503

3,053

-13%

20

ಜಾರ್ಖಂಡ್

1,770

1,498

-15%

21

ಒಡಿಶಾ

2,497

2,348

-6%

22

ಛತ್ತೀಸಗಢ

1,873

1,994

6%

23

ಮಧ್ಯಪ್ರದೇಶ

2,255

2,209

-2%

24

ಗುಜರಾತ್

6,185

6,030

-3%

25

ಡಮನ್ ಡಿಯು

103

70

-32%

26

ದಾದ್ರಾ ಮತ್ತು ನಗರ್ ಹವೇಲಿ

159

145

-9%

27

ಮಹಾರಾಷ್ಟ್ರ

13,407

11,602

-13%

29

ಕರ್ನಾಟಕ

6,201

5,502

-11%

30

ಗೋವಾ

325

213

-34%

31

ಲಕ್ಷದ್ವೀಪ

1

0

-72%

32

ಕೇರಳ

1,582

1,229

-22%

33

ತಮಿಳುನಾಡು

5,973

5,243

-12%

34

ಪುದುಚೇರಿ

161

137

-15%

35

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

30

13

-59%

36

ತೆಲಂಗಾಣ

3,059

2,793

-9%

37

ಆಂಧ್ರಪ್ರದೇಶ

2,115

1,955

-8%

38

ಲಡಾಖ್

0

5

 

97

ಇತರ ಪ್ರದೇಶಗಳು

170

180

6%

99

ಕೇಂದ್ರ ವ್ಯಾಪ್ತಿ

100

161

61%

 

ಒಟ್ಟು ಮೊತ್ತ

72,543

66,598

-8%

 


[1] ಆಮದು ಸರಕುಗಳ ಮೇಲಿನ ಜಿ ಎಸ್ ಟಿ ಸೇರಿಲ್ಲ

***



(Release ID: 1650444) Visitor Counter : 285