ವಾರ್ತಾ ಮತ್ತು ಪ್ರಸಾರ ಸಚಿವಾಲಯ
ದೇಶ ತನ್ನ ಮಹಾನ್ ಪುತ್ರನನ್ನು ಕಳೆದುಕೊಂಡಿದೆ: ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ನಿಧನಕ್ಕೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕಂಬನಿ
Posted On:
31 AUG 2020 7:59PM by PIB Bengaluru
ಭಾರತದ ಮಾಜೀ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಕಂಬನಿ ಮಿಡಿದಿದ್ದಾರೆ.
“ಭಾರತ ತನ್ನ ಒಬ್ಬ ಮಹಾನ್ ಪುತ್ರ, ಭಾರತರತ್ನ ಶ್ರೀ ಪ್ರಣಬ್ ಮುಖರ್ಜಿ ಅವರನ್ನು ಕಳೆದುಕೊಂಡಿದೆ. ಶ್ರೀ ಮುಖರ್ಜಿ ಅವರು ಮೇಧಾವಿಯಷ್ಟೇ ಅಲ್ಲ ಜೊತೆಗೆ ನಿರ್ಣಯ ಕೈಗೊಳ್ಳುವ, ರಣತಂತ್ರರೂಪಿಸುವವರಾಗಿದ್ದರು ಮತ್ತು ಅನೇಕ ವರ್ಷಗಳ ಕಾಲ ಸಂಸತ್ತಿನ ಬೆನ್ನೆಲುಬಾಗಿದ್ದರು. ಆಡಳಿತದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಭಾರತದ ರಾಷ್ಟ್ರಪತಿಗಳಾಗಿ ಅವರು ಸ್ಪಷ್ಟ ತಿಳಿವಳಿಕೆಯೊಂದಿಗೆ ಮತ್ತು ಘನತೆಯಿಂದ ಕರ್ತವ್ಯ ನಿರ್ವಹಿಸಿದ್ದರು.” ಎಂದು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.
ಶ್ರೀ ಮುಖರ್ಜಿ ಅವರ ಭಾಷಣಗಳನ್ನು ಪ್ರಕಟಿಸಲು ಅವರಿಂದ ಅನುಮತಿ ಕೋರಿದ ಸಮಯವನ್ನು ಮತ್ತು ಅವರು ಅದಕ್ಕೆ ಅನುಮತಿಸಿದ್ದನ್ನು ಶ್ರೀ ಜಾವಡೇಕರ್ ಸ್ಮರಿಸಿದರು.
***
(Release ID: 1650146)
Visitor Counter : 129
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu