ಹಣಕಾಸು ಸಚಿವಾಲಯ

ಬ್ಯಾಂಕ್ ಸಾಲಗಳಲ್ಲಿ ಕೋವಿಡ್-19 ಸಂಬಂಧಿತ ಒತ್ತಡಗಳ ಪರಿಹಾರದ ಚೌಕಟ್ಟಿನ ಅನುಷ್ಠಾನ ಕುರಿತಂತೆ ಶೆಡ್ಯೂಲ್ ವಾಣಿಜ್ಯ ಬ್ಯಾಂಕುಗಳು ಮತ್ತು ಎನ್‌.ಬಿಎಫ್‌.ಸಿಗಳೊಂದಿಗೆ ಪರಾಮರ್ಶಿಸಲಿರುವ ಕೇಂದ್ರ ಹಣಕಾಸು ಸಚಿವರು

Posted On: 30 AUG 2020 11:37AM by PIB Bengaluru


ಬ್ಯಾಂಕ್ ಸಾಲಗಳಲ್ಲಿ ಕೋವಿಡ್ -19 ಸಂಬಂಧಿತ ಒತ್ತಡಗಳ ಪರಿಹಾರದ ಚೌಕಟ್ಟಿನ ಅನುಷ್ಠಾನ ಕುರಿತಂತೆ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಶೆಡ್ಯೂಲ್ ವಾಣಿಜ್ಯ ಬ್ಯಾಂಕ್ ಹಾಗೂ ಎನ್.ಬಿ.ಎಫ್.ಸಿ.ಗಳ ಉನ್ನತ ಆಡಳಿತದೊಂದಿಗೆ 2020ರ ಸೆಪ್ಟೆಂಬರ್ 3ರ, ಗುರುವಾರ ಪರಾಮರ್ಶೆ ನಡೆಸಲಿದ್ದಾರೆ.
ಈ ಪರಾಮರ್ಶೆಯು ವ್ಯಾಪಾರ ಮತ್ತು ಕುಟುಂಬಗಳಿಗೆ ಕಾರ್ಯಸಾಧ್ಯತೆಯ ಆಧಾರದ ಮೇಲೆ ಪುನರುಜ್ಜೀವನಗೊಳಿಸುವ ಚೌಕಟ್ಟನ್ನು ಪಡೆಯಲು ಅನುವು ಮಾಡಿಕೊಡಲು, ಸುಗಮ ಹಾಗೂ ತ್ವರಿತ ಅನುಷ್ಠಾನದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಅಗತ್ಯವಾದ ಬ್ಯಾಂಕ್ ನೀತಿಗಳನ್ನು ಆಖೈರುಗೊಳಿಸುವ ಮತ್ತು ಸಾಲಗಾರರನ್ನು ಗುರುತಿಸುವುದೇ ಮೊದಲಾದ ಅಗತ್ಯ ಕ್ರಮಗಳ ಬಗ್ಗೆ ಗಮನ ಹರಿಸಲಿದೆ.

​​​​​​***(Release ID: 1649769) Visitor Counter : 30