ಗೃಹ ವ್ಯವಹಾರಗಳ ಸಚಿವಾಲಯ

ಅನ್ ಲಾಕ್ 4.0 ಮಾರ್ಗಸೂಚಿಗಳು


ಅನ್ ಲಾಕ್ 4.0: ಗೃಹ ವ್ಯವಹಾರಗಳ ಸಚಿವಾಲಯದಿಂದ ಹೊಸ ಮಾರ್ಗಸೂಚಿಗಳ ಬಿಡುಗಡೆ

ಕಂಟೈನ್‌ಮೆಂಟ್ ವಲಯಗಳ ಹೊರಗೆ ಮತ್ತಷ್ಟು ಚಟುವಟಿಕೆಗಳಿಗೆ ಅವಕಾಶ

ಸೆಪ್ಟೆಂಬರ್ 30, 2020 ರವರೆಗೆ ಕಂಟೈನ್‌ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್

Posted On: 29 AUG 2020 8:05PM by PIB Bengaluru

ಕಂಟೈನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ನೀಡುವ ಹೊಸ ಮಾರ್ಗಸೂಚಿಗಳನ್ನು ಗೃಹ ವ್ಯವಹಾರಗಳ ಸಚಿವಾಲಯವು ಇಂದು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಅನ್ಲಾಕ್ 4 ರಲ್ಲಿ ಸೆಪ್ಟೆಂಬರ್ 1, 2020 ರಿಂದ ಜಾರಿಗೆ ಬರುತ್ತವೆ, ಹಂತಹಂತವಾಗಿ ಚಟುವಟಿಕೆಗಳನ್ನು ಪುನರಾರಂಭಿಸುವ ಪ್ರಕ್ರಿಯೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಇಂದು ಹೊರಡಿಸಲಾದ ಹೊಸ ಮಾರ್ಗಸೂಚಿಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಅಭಿಪ್ರಾಯಗಳು ಮತ್ತು ಸಂಬಂಧಿತ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ನಡೆಸಿದ ವ್ಯಾಪಕ ಸಮಾಲೋಚನೆಗಳನ್ನು ಆಧರಿಸಿವೆ.

ಹೊಸ ಮಾರ್ಗಸೂಚಿಗಳ ಮುಖ್ಯಾಂಶಗಳು

  • 2020 ರ ಸೆಪ್ಟೆಂಬರ್ 7 ರಿಂದ ಶ್ರೇಣೀಕೃತ ರೀತಿಯಲ್ಲಿ ಮೆಟ್ರೊ ರೈಲುಗಳ ಸಂಚಾರ ಆರಂಭವಾಗುತ್ತದೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ / ರೈಲ್ವೆ ಸಚಿವಾಲಯ ಹಾಗೂ ಗೃಹ ಸಚಿವಾಲಯದೊಂದಿಗೆ ಸಮಾಲೋಚಿಸಿ ಈ ಸಂಚಾರಗಳನ್ನು ಪುನಾರಂಭಿಸಬಹುದು. ಇದಕ್ಕಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸಾಮಾನ್ಯ ಕಾರ್ಯವಿಧಾನ ಶಿಷ್ಟಾಚಾರಗಳನ್ನು (ಎಸ್ಒಪಿ) ಹೊರಡಿಸುತ್ತದೆ.
  • ಸಾಮಾಜಿಕ / ಶೈಕ್ಷಣಿಕ / ಕ್ರೀಡೆ / ಮನರಂಜನೆ / ಸಾಂಸ್ಕೃತಿಕ / ಧಾರ್ಮಿಕ / ರಾಜಕೀಯ ಕಾರ್ಯಕ್ರಮಗಳು ಮತ್ತು ಇತರ ಸಭೆಗಳಿಗೆ 100 ವ್ಯಕ್ತಿಗಳ ಮಿತಿಯೊಂದಿಗೆ ಅನುಮತಿ ನೀಡಲಾಗುವುದು, ಇದು ಸೆಪ್ಟೆಂಬರ್ 21, 2020 ರಿಂದ ಜಾರಿಗೆ ಬರಲಿದೆ. ಆದಾಗ್ಯೂ, ಅಂತಹ ಸೀಮಿತ ಸಭೆ, ಸಮಾರಂಭಗಳನ್ನು ಕಡ್ಡಾಯವಾಗಿ ಮುಖಗವಸುಗಳನ್ನು ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ತಾಪಮಾನ ತಪಾಸಣೆ ಮತ್ತು ಹ್ಯಾಂಡ್ ವಾಶ್ ಅಥವಾ ಸ್ಯಾನಿಟೈಜರ್ ವ್ಯವಸ್ಥೆ ಕಲ್ಪಿಸುವ ಮೂಲಕ ನಡೆಸಬೇಕು.
  • ಸೆಪ್ಟೆಂಬರ್ 21, 2020 ರಿಂದ ಬಯಲು ರಂಗಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುವುದು.
  • ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು ಸೆಪ್ಟೆಂಬರ್ 30, 2020 ರವರೆಗೂ ಮುಚ್ಚಿರುತ್ತವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಡೆಸಿದ ವ್ಯಾಪಕ ಸಮಾಲೋಚನೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ, ಆನ್ಲೈನ್ / ದೂರ ಶಿಕ್ಷಣಕ್ಕೆ ಅನುಮತಿ ಮುಂದುವರೆಯುತ್ತದೆ. ಆದಾಗ್ಯೂ, ಕಂಟೈನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ, ಸೆಪ್ಟೆಂಬರ್ 21, 2020 ರಿಂದ ಈ ಕೆಳಗಿನ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು. ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಸ್ಒಪಿ ನೀಡುತ್ತದೆ:

.        ಆನ್ಲೈನ್ ಬೋಧನೆ / ಟೆಲಿ-ಕೌನ್ಸೆಲಿಂಗ್ ಮತ್ತು ಸಂಬಂಧಿತ ಕೆಲಸಗಳಿಗಾಗಿ ಶೇ.50 ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಶಾಲೆಗಳಿಗೆ ಕರೆಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಅನುಮತಿ ನೀಡಬಹುದು.

ಬಿ.        ಕಂಟೈನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ಸ್ವಯಂಪ್ರೇರಿತರಾಗಿ ಅವರ ಶಾಲೆಗಳಿಗೆ ಭೇಟಿ ನೀಡಲು ಅನುಮತಿ ನೀಡಬಹುದು. ಇದಕ್ಕೆ ಅವರ ಪೋಷಕರು / ಪಾಲಕರ ಲಿಖಿತ ಒಪ್ಪಿಗೆ ಬೇಕು.

ಸಿ.        ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಅಥವಾ ರಾಜ್ಯ ಕೌಶಲ್ಯ ಅಭಿವೃದ್ಧಿ ಮಿಷನ್ ಅಥವಾ ಭಾರತ ಸರ್ಕಾರದ ರಾಜ್ಯ ಸಚಿವಾಲಯಗಳು ಅಥವಾ ರಾಜ್ಯ ಸರ್ಕಾರಗಳಲ್ಲಿ ನೋಂದಾಯಿತ ಅಲ್ಪಾವಧಿಯ ತರಬೇತಿ ಕೇಂದ್ರಗಳಲ್ಲಿ ಕೌಶಲ್ಯ ಅಥವಾ ಉದ್ಯಮಶೀಲತೆ ತರಬೇತಿಗೆ ಅನುಮತಿ ನೀಡಲಾಗುವುದು.

ಭಾರತೀಯ ಉದ್ಯಮಶೀಲತೆ ಮತ್ತು ಸಣ್ಣ ವ್ಯವಹಾರಗಳ ಅಭಿವೃದ್ಧಿ ಸಂಸ್ಥೆ(ಎನ್ಐಇಎಸ್ಬಿಯುಡಿ), ಭಾರತೀಯ ಉದ್ಯಮಶೀಲತಾ ಸಂಸ್ಥೆ (ಐಐಇ) ಮತ್ತು ಅವರ ತರಬೇತುದಾರರಿಗೆ ನೀಡುಗರಿಗೆ ಸಹ ಅನುಮತಿ ನೀಡಲಾಗುವುದು

  • ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳು (ಪಿಎಚ್ಡಿ) ಮತ್ತು ಪ್ರಯೋಗಾಲಯ / ಪ್ರಾಯೋಗಿಕ ಕೆಲಸಗಳ ಅಗತ್ಯವಿರುವ ತಾಂತ್ರಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಗೃಹ ಸಚಿವಾಲಯದೊಂದಿಗೆ ಸಮಾಲೋಚಿಸಿ ಉನ್ನತ ಶಿಕ್ಷಣ ಇಲಾಖೆಯು (DHE) ಇವುಗಳಿಗೆ ಅನುಮತಿ ನೀಡುತ್ತದೆ.
  • ಈ ಕೆಳಗಿನ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿಂದಂತೆ ಎಲ್ಲಾ ಚಟುವಟಿಕೆಗಳಿಗೂ ಕಂಟೈನ್ಮೆಂಟ್ ವಲಯಗಳ ಹೊರಗೆ ಅನುಮತಿ ನೀಡಲಾಗುವುದು:

i.          ಚಿತ್ರಮಂದಿರಗಳು, ಈಜುಕೊಳಗಳು, ಮನರಂಜನಾ ಪಾರ್ಕ್ ಗಳು, ರಂಗಮಂದಿರಗಳು (ಬಯಲು ರಂಗಮಂದಿರಗಳನ್ನು ಹೊರತುಪಡಿಸಿ) ಮತ್ತು ಅಂತಹ ಸ್ಥಳಗಳು.

ii.          ಗೃಹ ಸಚಿವಾಲಯವು ಅನುಮತಿ ನೀಡಿದ ಪ್ರಯಾಣಿಕರನ್ನು ಹೊರತುಪಡಿಸಿ ಪ್ರಯಾಣಿಕರ ಅಂತರರಾಷ್ಟ್ರೀಯ ವಿಮಾನ ಪ್ರಯಾಣ.

  • ಸೆಪ್ಟೆಂಬರ್ 30, 2020 ರವರೆಗೆ ಕಂಟೈನ್ಮೆಂಟ್ ವಲಯಗಳಲ್ಲಿ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು.
  • ರೋಗ ಪ್ರಸರಣ ಸರಪಳಿಯನ್ನು ಪರಿಣಾಮಕಾರಿಯಾಗಿ ಕಡಿದು ಹಾಕಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ  ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಂಟೈನ್ಮೆಂಟ್ ವಲಯಗಳನ್ನು ಜಿಲ್ಲಾ ಅಧಿಕಾರಿಗಳು ಗುರುತಿಸುತ್ತಾರೆ. ಈ ಕಂಟೈನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಾದ ನಿಗ್ರಹ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಮತ್ತು ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
  • ಕಂಟೇನ್ಮೆಂಟ್ ವಲಯಗಳಲ್ಲಿ, ಕಟ್ಟುನಿಟ್ಟಾದ ನಿಯಂತ್ರಣವನ್ನು ಕಾಪಾಡಿಕೊಳ್ಳಲಾಗುವುದು ಮತ್ತು ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿಸ ನೀಡಲಾಗುವುದು.
  • ಈ ಕಂಟೈನ್ಮೆಂಟ್ ವಲಯಗಳನ್ನು ಆಯಾ ಜಿಲ್ಲಾಧಿಕಾರಿಗಳ ವೆಬ್ಸೈಟ್ಗಳಲ್ಲಿ ಪ್ರಕಟಿಸಲಾಗುವುದು. ಈ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುವುದು.

ರಾಜ್ಯಗಳು ಕಂಟೈನ್ಮೆಂಟ್ ವಲಯಗಳ ಹೊರಗೆ ಸ್ಥಳೀಯವಾಗಿ ಯಾವುದೇ ಲಾಕ್ಡೌನ್ ವಿಧಿಸಬಾರದು

ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಪೂರ್ವ ಸಮಾಲೋಚನೆ ಮಾಡದೆ, ಕಂಟೈನ್ಮೆಂಟ್ ವಲಯಗಳ ಹೊರಗೆ ಯಾವುದೇ ಸ್ಥಳೀಯ ಲಾಕ್ಡೌನ್ (ರಾಜ್ಯ / ಜಿಲ್ಲೆ / ಉಪವಿಭಾಗ / ನಗರ / ಗ್ರಾಮ ಮಟ್ಟ) ವಿಧಿಸಬಾರದು.

ಅಂತರ-ರಾಜ್ಯ ಮತ್ತು ಅಂತರ್-ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ

  • ವ್ಯಕ್ತಿಗಳು ಮತ್ತು ಸರಕುಗಳ ಅಂತರ-ರಾಜ್ಯ ಮತ್ತು ಅಂತರ್-ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈ ಸಂಚಾರಕ್ಕೆ ಯಾವುದೇ ಪ್ರತ್ಯೇಕ ಅನುಮತಿ / ಅನುಮೋದನೆ / -ಪರ್ಮಿಟ್ ಅಗತ್ಯವಿಲ್ಲ.

ಕೋವಿಡ್-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು

  • ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಕೋವಿಡ್-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳನ್ನು ದೇಶಾದ್ಯಂತ ಅನುಸರಿಸಲಾಗುವುದು. ಅಂಗಡಿಗಳು ಗ್ರಾಹಕರ ನಡುವೆ ಸಾಕಷ್ಟು ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಅಗತ್ಯವಿದೆಖಚಿತಪಡಿಸಿಕೊಳ್ಳಬೇಕು. ರಾಷ್ಟ್ರೀಯ ನಿರ್ದೇಶನಗಳ ಪರಿಣಾಮಕಾರಿ ಅನುಷ್ಠಾನವನ್ನು ಗೃಹ ಸಚಿವಾಲಯವು ಮೇಲ್ವಿಚಾರಣೆ ಮಾಡುತ್ತದೆ.

ಹೆಚ್ಚು ಅಪಾಯವಿರುವವರಿಗೆ  ರಕ್ಷಣೆ

  • ಹೆಚ್ಚು ಅಪಾಯವಿರುವವರು ಅಂದರೆ, 65 ವರ್ಷಕ್ಕಿಂತ ಮೇಲ್ಪಟ್ಟವರು, ಸಹ-ಅಸ್ವಸ್ಥತೆ ಹೊಂದಿರುವವರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಅಗತ್ಯ ಅವಶ್ಯಕತೆಗಳು ಮತ್ತು ಆರೋಗ್ಯ ಕಾರಣಗಳನ್ನು ಹೊರತುಪಡಿಸಿ ಉಳಿದಂತೆ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ.

ಆರೋಗ್ಯ ಸೇತು ಬಳಕೆ

  • ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ನ ಬಳಕೆಯನ್ನು ಪ್ರೋತ್ಸಾಹಿಸಲಾಗುವುದು.

Click here to see MHA Guidelines

Click here to see D.O Letter

 



(Release ID: 1649669) Visitor Counter : 393