ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮಾಧ್ಯಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 23, 2020 ರಂದು ಬಿಡುಗಡೆ ಮಾಡಿದ ಎಸ್‌ಒಪಿ ಕುರಿತು ಸ್ಪಷ್ಟೀಕರಣ

Posted On: 24 AUG 2020 5:02PM by PIB Bengaluru

 

ವಾರ್ತಾ ಮತ್ತು ಪ್ರಸಾರ ಸಚಿವಾಲಯವು 2020 ರ ಆಗಸ್ಟ್ 23 ರಂದು ಬಿಡುಗಡೆ ಮಾಡಿರುವ 'ಮಾಧ್ಯಮ ನಿರ್ಮಾಣ ಸಂದರ್ಭದಲ್ಲಿ ಕೋವಿಡ್-19 ತಡೆಗಟ್ಟುವ ಕ್ರಮಗಳ ಕುರಿತು ಮಾರ್ಗಸೂಚಿ ಮತ್ತು ಎಸ್‌ಒಪಿ' ಯ ಬಗ್ಗೆ ಸ್ಪಷ್ಟೀಕರಣ.
ಪ್ರಕಟಿತ ಮಾರ್ಗಸೂಚಿ ಮತ್ತು ಎಸ್‌ಒಪಿಯು ಚಲನಚಿತ್ರ, ಟೆಲಿವಿಷನ್, ವೆಬ್ ಸರಣಿಗಳ ಚಿತ್ರೀಕರಣ ಮತ್ತು ಎಲೆಕ್ಟ್ರಾನಿಕ್ ಹಾಗೂ ಚಲನಚಿತ್ರ ಸೇರಿದಂತೆ ಎಲ್ಲಾ ಮಾಧ್ಯಮ ನಿರ್ಮಾಣಕ್ಕೂ ಅನ್ವಯಿಸುತ್ತದೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.
ಎಸ್‌ಒಪಿಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಇರಿಸಲಾಗಿದೆ. ಅದನ್ನು ಈ ಲಿಂಕ್‌ನಲ್ಲಿ ಓದಬಹುದು: https://mib.gov.in/sites/default/files/SOP%20on%20Media%20Production%2021%20Aug%202020%20%281%29.pdf

***



(Release ID: 1648345) Visitor Counter : 134