ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ನೇಪಾಳ ಪ್ರಧಾನಮಂತ್ರಿ ನಡುವೆ ದೂರವಾಣಿ ಸಂಭಾಷಣೆ

प्रविष्टि तिथि: 15 AUG 2020 2:33PM by PIB Bengaluru

ಪ್ರಧಾನಮಂತ್ರಿ ಅವರು ಇಂದು ನೇಪಾಳದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ಕೆ.ಪಿ. ಶರ್ಮಾ ಓಲಿ ಅವರ ದೂರವಾಣಿ ಕರೆಯನ್ನು ಸ್ವೀಕರಿಸಿದರು.

74ನೇ ಸ್ವಾತಂತ್ರೋಯತ್ಸವದ ಸಂದರ್ಭದಲ್ಲಿ ನೇಪಾಳದ ಪ್ರಧಾನಮಂತ್ರಿಯವರು ಭಾರತ ಸರ್ಕಾರಕ್ಕೆ ಮತ್ತು ದೇಶದ ಜನತೆಗೆ ಶುಭ ಕೋರಿದರು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತವಲ್ಲದ ಸದಸ್ಯತ್ವಕ್ಕೆ ಭಾರತ ಇತ್ತೀಚೆಗೆ ಆಯ್ಕೆ ಆಗಿರುವುದಕ್ಕೂ ಅಭಿನಂದನೆ ಸಲ್ಲಿಸಿದರು.

ಇಬ್ಬರೂ ನಾಯಕರು, ಕೋವಿಡ್ -19 ಮಹಾಮಾರಿಯ ಪರಿಣಾಮ ತಗ್ಗಿಸಲು ಎರಡೂ ದೇಶಗಳು ಕೈಗೊಂಡಿರುವ ಕ್ರಮಗಳ ನಿಟ್ಟಿನಲ್ಲಿ ಪರಸ್ಪರ ಏಕಮತ್ಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ನೇಪಾಳಕ್ಕೆ ಭಾರತದ ನಿರಂತರ ಬೆಂಬಲದ ಭರವಸೆಯನ್ನು ಪ್ರಧಾನಮಂತ್ರಿ ನೀಡಿದರು.

ಪ್ರಧಾನಮಂತ್ರಿಯವರು ನೇಪಾಳದ ಪ್ರಧಾನಮಂತ್ರಿಯವರಿಗೆ ಕರೆ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು ಮತ್ತು ಭಾರತ ಮತ್ತು ನೇಪಾಳ ಹಂಚಿಕೊಂಡಿರುವ ಸಾಂಸ್ಕೃತಿಕ ಮತ್ತು ನಾಗರಿಕತೆಯ ಸಂಪರ್ಕಗಳನ್ನು ಸ್ಮರಿಸಿದರು.  

***


(रिलीज़ आईडी: 1646379) आगंतुक पटल : 251
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam