ಪ್ರಧಾನ ಮಂತ್ರಿಯವರ ಕಛೇರಿ

‘ರಾಷ್ಟ್ರೀಯ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣದಲ್ಲಿ ಪರಿವರ್ತನಾ ಸುಧಾರಣೆಗಳ ಕುರಿತ ಸಮಾವೇಶ’ದ ಉದ್ಘಾಟನಾ ಭಾಷಣ ಮಾಡಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ

Posted On: 06 AUG 2020 1:30PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2020ರ ಆಗಸ್ಟ್ 7ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ “ರಾಷ್ಟ್ರೀಯ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣದಲ್ಲಿ ಪರಿವರ್ತನಾ ಸುಧಾರಣೆಗಳ ಕುರಿತ ಸಮಾವೇಶ’ದ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಶಿಕ್ಷಣ ಸಚಿವಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ ಈ ಸಮಾವೇಶವನ್ನು ಆಯೋಜಿಸಿವೆ.

ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರಡಿ ಸಮಗ್ರ, ಬಹುಶಿಸ್ತೀಯ ಮತ್ತು ಭವಿಷ್ಯದ ಶಿಕ್ಷಣ, ಗುಣಮಟ್ಟದ ಸಂಶೋಧನೆ ಮತ್ತು ಶಿಕ್ಷಣ ಎಲ್ಲರಿಗೂ ತಲುಪಲು ತಂತ್ರಜ್ಞಾನದ ಸಮಾನ ಬಳಕೆ ಸೇರಿದಂತೆ ಶಿಕ್ಷಣದ ನಾನಾ ಆಯಾಮಗಳ ಬಗ್ಗೆ ಸಮಾವೇಶದ ನಿರ್ದಿಷ್ಠ ಗೋಷ್ಠಿಗಳಲ್ಲಿ ಚರ್ಚೆ ನಡೆಯಲಿದೆ.

ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್, ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಖ್ಯಾತ ಶಿಕ್ಷಣ ತಜ್ಞರು, ವಿಜ್ಞಾನಿಗಳು ಸೇರಿದಂತೆ ಹಲವು ಗಣ್ಯರು ರಾಷ್ಟ್ರೀಯ ಶಿಕ್ಷಣ ನೀತಿಯ ನಾನಾ ಅಂಶಗಳ ಕುರಿತು ಮಾತನಾಡಲಿದ್ದಾರೆ.

ವಿಶ್ವವಿದ್ಯಾಲಯಗಳ ಕುಲಪತಿಗಳು, ಶಿಕ್ಷಣ ಸಂಸ್ಥೆಗಳ ನಿರ್ದೇಶಕರುಗಳು ಮತ್ತು ಕಾಲೇಜುಗಳ ಪ್ರಾಂಶುಪಾಲರು ಹಾಗೂ ಇನ್ನಿತರರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ಲೈವ್ ಸ್ಟ್ರೀಮ್ ಮೂಲಕ ವೀಕ್ಷಿಸಬಹುದು.

ಶಿಕ್ಷಣ ಸಚಿವಾಲಯದ ಫೇಸ್ ಬುಕ್ ಪುಟ:: https://www.facebook.com/HRDMinistry/

ಯುಜಿಸಿ ಯೂಟ್ಯೂಬ್ ಚಾನಲ್, ಪಿಐಬಿ ಯೂಟ್ಯೂಬ್ ಚಾನಲ್

ಯುಜಿಸಿ ಟ್ವೀಟ್ಟರ್ ಹ್ಯಾಂಡಲ್ (@ugc_india) : https://twitter.com/ugc_india?s=12

ಡಿಡಿ ನ್ಯೂಸ್ ನಲ್ಲೂ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.
 

***



(Release ID: 1644700) Visitor Counter : 202