ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಅಸ್ಸಾಂ - 24/7 ದೂರದರ್ಶನ ವಾಹಿನಿಗೆ ಚಾಲನೆ

Posted On: 04 AUG 2020 2:52PM by PIB Bengaluru

ಅಸ್ಸಾಂ ಜನತೆಗೆ ವಾಹಿನಿಯ ಕೊಡುಗೆ: ಶ್ರೀ ಪ್ರಕಾಶ್ ಜಾವಡೇಕರ್

ಡಿಡಿ ಅಸ್ಸಾಂ ರಾಜ್ಯದ ಶೈಕ್ಷಣಿಕ ಪ್ರಗತಿಯಲ್ಲಿ ದೊಡ್ಡ ರೀತಿಯಲ್ಲಿ ಕೊಡುಗೆ ನೀಡಲಿದೆ: ಶ್ರೀ ಅಮಿತ್ ಖರೆ

 

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರಿಂದು ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ದಿನದ 24 ಗಂಟೆ ಪ್ರಸಾರದ ಅಸ್ಸಾಂ ರಾಜ್ಯಕ್ಕೆ ಸಮರ್ಪಿತವಾದ ದೂರದರ್ಶನ ವಾಹಿನಿಯನ್ನು ಉದ್ಘಾಟಿಸಿದರು. ಸಂದರ್ಭದಲ್ಲಿ ಮಾತನಾಡಿದ ಸಚಿವರು, ಅಸ್ಸಾಂ ಜನರಿಗೆ ಕೊಡುಗೆಯಾಗಿ, ಎಲ್ಲ ವರ್ಗಕ್ಕೂ ದೊರಕುವ ವಾಹಿನಿಯ ಸೇವೆಯಿಂದ 24/7 ದೂರದರ್ಶನ ತುಂಬಾ ಜನಪ್ರಿಯವಾಗಲಿದೆ.ಎಂದರು.

ತಮ್ಮದೇ ಸ್ವಂತ ದೂರದರ್ಶನ ವಾಹಿನಿ ಎಲ್ಲ ರಾಜ್ಯಗಳಿಗು ಮಹತ್ವದ್ದಾಗಿದೆ ಎಂದು ಸಚಿವರು ಹೇಳಿದರು. ದೂರದರ್ಶನದ ಆರು ರಾಷ್ಟ್ರೀಯ ವಾಹಿನಿಗಳ ಕಾರ್ಯಕ್ರಮವನ್ನು ಪ್ರಶಂಸಿಸಿ, ಇತರ ರಾಜ್ಯಗಳಲ್ಲಿ ವಾಹಿನಿಗಳು ಡಿಡಿ ಫ್ರೀಡಿಷ್ ನಲ್ಲಿ ಲಭ್ಯ ಎಂದರು. ಈಶಾನ್ಯ ಪ್ರದೇಶವನ್ನು ಭಾರತದ ಅಭಿವೃದ್ಧಿಯ ಚಾಲಕ ಶಕ್ತಿಯನ್ನಾಗಿ ಮಾಡಬೇಕು ಎನ್ನುವ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಪುನರುಚ್ಚರಿಸಿದ ಶ್ರೀ ಜಾವಡೇಕರ್, ವಲಯದಲ್ಲಿ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲ ಹೇರಳವಾಗಿದ್ದು, ಸಂಪರ್ಕವೂ ಸ್ಥಿರವಾಗಿ ಸುಧಾರಿಸುತ್ತಿದೆ ಎಂದರು. ಅಸ್ಸಾಂನ ದೂರದರ್ಶನ ವಾಹಿನಿ ಪ್ರಸಕ್ತ ಸರ್ಕಾರದ ಅಡಿಯಲ್ಲಿ ಈಶಾನ್ಯಕ್ಕೆ ಹಿಂದೆಂದಿಗಿಂತ ಹೆಚ್ಚಿನ ಗಮನ ಹರಿಸಿದೆ ಎಂದರು.

ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ್ ಸೋನೋವಾಲ್, ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಇದು ಅಸ್ಸಾಂ ಜನರಿಗೆ ಮಹತ್ವದ ದಿನವೆಂದು ಬಣ್ಣಿಸಿದರು, " ವಾಹಿನಿ ಮಾನವ ಚಟುವಟಿಕೆಗಳ ಎಲ್ಲಾ ಕ್ಷೇತ್ರಗಳಲ್ಲಿ ಅಸ್ಸಾಂನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಅದೇ ವೇಳೆ ಸರ್ಕಾರದ ಉಪಕ್ರಮಗಳು ಮತ್ತು ಕಾರ್ಯಕ್ರಮಗಳನ್ನು ಬೇರುಮಟ್ಟಕ್ಕೆ ತಲುಪಿಸಲು ಸಹಾಯ ಮಾಡುತ್ತದೆ." ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬದ್ಧತೆಯನ್ನು ಉಲ್ಲೇಖಿಸಿದ ಶ್ರೀ ಸೋನೋವಾಲ್, "ಪ್ರಧಾನಿ ಮೋದಿ, ಮೊದಲ ದಿನದಿಂದ, ಈಶಾನ್ಯದ ನೈಜ ಸಾಮರ್ಥ್ಯ ಮತ್ತು ಸಾಧ್ಯತೆಗಳ ಮೇಲೆ ಕೇಂದ್ರೀಕರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ." ಎಂದರು.

ಅಸ್ಸಾಂ ರಾಜ್ಯಪಾಲ ಪ್ರೊ. ಜಗದೀಶ್ ಮುಖಿ ವಿಡಿಯೋ ಸಂವಾದದ ಮೂಲಕ ಮಾತನಾಡಿ, "ಅಸ್ಸಾಂನಲ್ಲಿ ನಮಗೆಲ್ಲರಿಗೂ ಇದು ಸಂತೋಷದ ಕ್ಷಣವಾಗಿದೆ ಏಕೆಂದರೆ ಡಿಡಿ ಅಸ್ಸಾಂ ಅನ್ನು ಪ್ರಾರಂಭಿಸುವುದರೊಂದಿಗೆ ರಾಷ್ಟ್ರೀಯ ಮಾಧ್ಯಮ ತನ್ನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದೆ ಎಂದರು." ಗುವಾಹಟಿ ದೂರದರ್ಶನ ಕೇಂದ್ರವನ್ನು ಪ್ರಶಂಸಿಸಿದ ಪ್ರೊ. ಮುಖಿ, ಅದರ ಅವಿಶ್ರಾಂತ ಪಾತ್ರದಿಂದಾಗಿ, ಅನನ್ಯ, ಶ್ರೀಮಂತ ಮತ್ತು ವರ್ಣರಂಜಿತ ಅಸ್ಸಾಂ ಸಂಸ್ಕೃತಿ ದೇಶದಾದ್ಯಂತ ಮನ್ನಣೆ ಪಡೆಯಿತು ಎಂದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ ನವದೆಹಲಿಯ ದೂರದರ್ಶನ ಕೇಂದ್ರದಲ್ಲಿ ಉಪಸ್ಥಿತರಿದ್ದು ಮಾತನಾಡಿ, ಕಳೆದ ವರ್ಷ ಪ್ರಧಾನಿಯವರಿಂದ ಡಿಡಿ ಅರುಣಪ್ರಭಾ ಆರಂಭವಾದ ಬಳಿಕ, ಸಚಿವಾಲಯವು ಡಿಡಿ ಈಶಾನ್ಯವನ್ನು ಅಸ್ಸಾಂಗೆ ಸಮರ್ಪಿತವಾದ ಹೊಸ ವಾಹಿನಿಯಾಗಿ ಪರಿವರ್ತಿಸಲು ಯೋಜಿಸಲಾಗಿತ್ತು ಎಂದರು. ಅಸ್ಸಾಂ ಈಶಾನ್ಯದ ಹೆಬ್ಬಾಗಿಲಾಗಿದ್ದರೆ, ಈಶಾನ್ಯ ಆಸಿಯಾನ್ ರಾಷ್ಟ್ರಗಳಿಗೆ ಹೆಬ್ಬಾಗಿಲಾಗಿದೆ. ಅಸ್ಸಾಂ ರಾಜ್ಯ ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವೆ ಶ್ರೇಷ್ಠ ಸಂಪರ್ಕವಾಗಿದೆ ಎಂದರು. ಡಿಡಿ ಅಸ್ಸಾಂ ವಲಯದಲ್ಲಿನ ಹೊರಹೊಮ್ಮುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಿದೆ ಎಂದ ಕಾರ್ಯದರ್ಶಿಯವರು, ಇದು ದೇಶದ ಉಳಿದ ಭಾಗಗಳನ್ನು ಈಶಾನ್ಯದ ಬಳಿ ತರಲಿದೆ ಮತ್ತು ಈಶಾನ್ಯದ ಪ್ರತಿಭೆಗಳನ್ನು ಇಡೀ ಭಾರತದ ಪ್ರತಿಭೆ ಮಾಡುತ್ತದೆ ಎಂದರು.

ಡಿಡಿ ಅಸ್ಸಾಂ ಇತರ ಪ್ರಾದೇಶಿಕ ವಾಹಿನಿಗಳ ರೀತಿಯಲ್ಲೇ ರಾಜ್ಯದ ಶೈಕ್ಷಣಿಕ ಅಭಿವೃದ್ಧಿಗೆ ದೊಡ್ಡ ರೀತಿಯಲ್ಲಿ ಕೊಡುಗೆ ನೀಡಲಿದೆಎಂದೂ ಹೇಳಿದರು. ಡಿಡಿ ಅಸ್ಸಾಂ ರಾಜ್ಯದಾದ್ಯಂತ ಆನ್ ಲೈನ್ ಶಿಕ್ಷಣವನ್ನು ಪ್ರಾದೇಶಿಕ ಭಾಷೆಯಲ್ಲಿ ನೀಡುವ ನಮ್ಮ ಪ್ರಯತ್ನದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ಅಮಿತ್ ಖರೆ ತಿಳಿಸಿದರು.

ಪ್ರಸಾರ ಭಾರತಿಯ ಸಿಇಓ, ಶ್ರೀ ಶಶಿ ಶೇಖರ ವೆಂಪತಿ, ಡಿಡಿ ಅಸ್ಸಾಂ ವಾಹಿನಿಯ ಆರಂಭದೊಂದಿಗೆ, ಈಶಾನ್ಯದ ಎಲ್ಲ ರಾಜ್ಯಗಳೂ ರಾಜ್ಯ ನಿರ್ದಿಷ್ಟ ವಾಹಿನಿ ಹೊಂದಿದಂತಾಗಿದೆ ಮತ್ತು ಇದೇ ಮೊದಲ ಬಾರಿಗೆ ಈಶಾನ್ಯದ ಶ್ರೀಮಂತ ವೈವಿಧ್ಯತೆ ಬಾಹ್ಯಾಕಾಶದ ಹೆಜ್ಜೆಗುರುತು ಹೊಂದಿದೆ, ಇದನ್ನು ಡಿಡಿ ಫ್ರೀ ಡಿಷ್ ಮೂಲಕ ದೇಶದ ಯಾವುದೇ ಭಾಗದಲ್ಲಿ ವೀಕ್ಷಿಸಬಹುದು ಎಂದರು.

ಹಿನ್ನೆಲೆ:

ಈಶಾನ್ಯ ಡಿಡಿ ವಾಹಿನಿ 24x7 ಎಲ್ಲ 8 ರಾಜ್ಯಗಳಿಗೆ ಸಂಯುಕ್ತವಾಗಿ ರೂಪುಗೊಂಡು 01.11.1990ರಂದು ಕಾರ್ಯಾರಂಭ ಮಾಡಿತು; 15.08.1994ರಂದು ಉದ್ಘಾಟನೆಗೊಂಡ ವಾಹಿನಿ 27.12.2000ರಿಂದ 24 ಗಂಟೆಯ ವಾಹಿನಿಯಾಗಿ ಪರಿವರ್ತಿತವಾಯಿತು.

ಡಿಡಿ ಅರುಣಪ್ರಭಾ ವಾಹಿನಿಯನ್ನು ನಂತರ ಅರುಣಾಚಲ ಪ್ರದೇಶಕ್ಕಾಗಿ ಪರಿಚಯಿಸಲಾಯಿತು, ಇದು ಇಟಾನಗರದಿಂದ ಕಾರ್ಯನಿರ್ವಹಿಸುತ್ತಿದೆ. ಡಿಡಿ ಅರುಣಪ್ರಭಾ ವಾಹನಿಯನ್ನು 09.02.2019ರಂದು ಪ್ರಧಾನಮಂತ್ರಿ ಉದ್ಘಾಟಿಸಿದ್ದರು.

ಆನಂತರ, ಪ್ರಸಾರ ಭಾರತಿ, ವಿವಿಧ ಈಶಾನ್ಯ ರಾಜ್ಯಗಳ ರಾಜಧಾನಿಗಳಲ್ಲಿನ ಎಲ್ಲ ಇತರ ಸೀಮಿತ ಗಂಟೆಗಳ ವಾಹಿನಿಗಳಿಗೆ ರಾಷ್ಟ್ರೀಯ ಸಂಪರ್ಕ ಒದಗಿಸಲು ಡಿಡಿ ಫ್ರೀ ಡಿಷ್ ನಲ್ಲಿ ಅಳವಡಿಸಲು ನಿರ್ಧರಿಸಿತು. ಈಶಾನ್ಯ ವಲಯದ ರಾಜ್ಯಗಳ ಐದು ವಾಹಿನಿಗಳು ಅನುಕ್ರಮವಾಗಿ ಶಿಲ್ಲಾಂಗ್, ಐಸ್ವಾಲ್, ಅಗರ್ತಲಾ, ಇಂಪಾಲ, ಕೋಹಿಮಾದಿಂದ ಪ್ರಸಾರವಾಗುತ್ತಿದ್ದ ಡಿಡಿ ಮೇಘಾಲಯ, ಡಿಡಿ ಮಿಜೋರಾಂ, ಡಿಡಿ ತ್ರಿಪುರಾ, ಡಿಡಿ ಮಣಿಪುರ ಮತ್ತು ಡಿಡಿ ನಾಗಾಲ್ಯಾಂಡ್ ಅನ್ನು ಡಿಡಿ ಫ್ರೀ ಡಿಷ್ (ಡಿಟಿಎಚ್) ವೇದಿಕೆಯಲ್ಲಿ 2019 ಮಾರ್ಚ್ 9ರಿಂದ ಅನ್ವಯವಾಗುವಂತೆ ಅಳವಡಿಸಲಾಯಿತು.

ತರುವಾಯ ಡಿಡಿ ಈಶಾನ್ಯ ವಾಹಿನಿಯನ್ನು ಅಸ್ಸಾಂಗೆ ವಿಶೇಷ ಚಾನಲ್ ಆಗಿ ಮರು ರೂಪಿಸುವುದು ಸೂಕ್ತವೆಂದು ಭಾವಿಸಲಾಯಿತು. ಗುವಾಹಟಿಯ ದೂರದರ್ಶನ ಕೇಂದ್ರದಿಂದ ಪ್ರಸಾರವಾಗುತ್ತಿರುವ 24 X 7 ವಾಹಿನಿ ಅಸ್ಸಾಂ ರಾಜ್ಯದ ಜನರು ಮತ್ತು ಸಂಸ್ಕೃತಿಗೆ ಸಮರ್ಪಿತವಾಗಿದೆ ಮತ್ತು ಬೋಡೋನಂತಹ ಭಾಷೆಗಳಿಗೆ ನಿರ್ದಿಷ್ಟ ವೇಳಾಪಟ್ಟಿಯೊಂದಿಗೆ ಸುಮಾರು 6 ಗಂಟೆಗಳ ಅಸ್ಸಾಮೀ ಕಾರ್ಯಕ್ರಮಗಳನ್ನು ಹೊಂದಿರುತ್ತದೆ. ಡಿಡಿ ಅಸ್ಸಾಂನ ಪರೀಕ್ಷಾ ಪ್ರಸಾರ ಡಿಸೆಂಬರ್ 1, 2019 ರಿಂದ ಪ್ರಾರಂಭವಾಗಿತ್ತು.

ಪ್ರಸಕ್ತ ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ, ಮಧ್ಯಂತರ ಕ್ರಮವಾಗಿ ಈಶಾನ್ಯ ರಾಜ್ಯಗಳ ಮೂಲದ ವಾಹಿನಿಗಳ ಅಪ್ ಲಿಂಕಿಂಗ್ ಅನ್ನು ದಿನವಿಡೀ ಮಾಡಲಾಗುವುದು. ಡಿಡಿ ನ್ಯೂಸ್/ಡಿಡಿ ಇಂಡಿಯಾ ಸ್ಟ್ರೀಮ್ಸ್ ಬಳಸಿಕೊಂಡು, ಲಭ್ಯವಿರುವ ಸೀಮಿತ ಸಂಪನ್ಮೂಲದೊಂದಿಗೆ ಆಯಾ ಕೇಂದ್ರಗಳನ್ನು ಅಂದರೆ ಏಪ್ರಿಲ್ 2020ರಿಂದ ಡಿಡಿ ನಾಗಾಲ್ಯಾಂಡ್, ಡಿಡಿ ತ್ರಿಪುರಾ, ಡಿಡಿ ಮಣಿಪುರ, ಡಿಡಿ ಮೇಘಾಲಯ, ಡಿಡಿ ಮಿಜೋರಾಂ ವಾಹಿನಿಗಳನ್ನು ಸೀಮಿತ ಗಂಟೆಗಳ ವಾಹಿನಿಗಳಿಂದ 27x7 ವಾಹಿನಿಗಳಾಗಿ ತಾತ್ಕಾಲಿಕವಾಗಿ ಪರಿವರ್ತಿಸಲಾಗಿದೆ. ಇದು ಯಾವುದೇ ವಾಹಿನಿ ಬ್ಲಾಂಕ್ ಆಗಿರುವುದಿಲ್ಲ ಎಂಬುದನ್ನು ಖಾತ್ರಿಪಡಿಸುತ್ತದೆ ಮತ್ತು ಎಲ್ಲ ಡಿಡಿ ವಾಹಿನಿಗಳೂ 24x7 ಸ್ಥಳೀಯ ಸುದ್ದಿ/ವಿಷಯಗಳ ಸಮ್ಮಿಶ್ರಣದಲ್ಲಿ ನಿರ್ದಿಷ್ಟ ಅವಧಿಯಲ್ಲಿ ಮತ್ತು ರಾಷ್ಟ್ರೀಯ ಸುದ್ದಿಯನ್ನು ಇತರ ಸಮಯದಲ್ಲಿ ಪ್ರಸಾರ ಮಾಡಲಿವೆ.

ಡಿಡಿ ಅಸ್ಸಾಂನಲ್ಲಿ ಆಕರ್ಷಕವಾದ ವಿಷಯ ಪ್ರಸಾರ ಮಾಡುವ ಬಗ್ಗೆ ಪ್ರಯತ್ನಗಳು ಮುಂದುವರಿದಿದ್ದು, ಇದರಲ್ಲಿ ದೀರ್ಘಾವದಿ ಧಾರಾವಾಹಿಗಳು, ಸಂಗೀತ ಕಾರ್ಯಕ್ರಮಗಳು, ಪ್ರವಾಸ ಕಥನಗಳು, ರಿಯಾಲಿಟಿ ಪ್ರದರ್ಶನಗಳು, ಚಲನಚಿತ್ರಗಳು ಇತ್ಯಾದಿ ಒಳಗೊಂಡಿರುತ್ತವೆ. ಕಾರ್ಯಕ್ರಮಗಳಲ್ಲಿ ಪಾಕಪದ್ಧತಿ, ಜವಳಿ, ಜಾನಪದ ಸಂಸ್ಕೃತಿ ಮತ್ತು ಪ್ರದೇಶದ ಬುಡಕಟ್ಟು ಜೀವನವನ್ನು ಬಿಂಬಿಸಲು ಜನಾಂಗೀಯ ಸ್ಪರ್ಶವನ್ನೂ ಹೊಂದಿರುತ್ತವೆ.

***



(Release ID: 1643317) Visitor Counter : 213